Homeಅಂಕಣಗಳುಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

ಪ್ರಭುತ್ವದ ಬೇಟೆಯಾಗುತ್ತಿರುವುದೇ ಪತ್ರಿಕೋದ್ಯಮ?

"ಪತ್ರಿಕೋದ್ಯಮ ಯಾವಾಗಲೂ ಪ್ರಭುತ್ವದ ಅಧಿಕಾರದ ಕೊಕ್ಕೆಗೆ ಬಿಗಿಯಾಗಿಲ್ಲದಿದ್ದರೂ ಬೆಸೆದುಕೊಂಡ ಕೊಂಡಿಯಾಗಿಯೇ ಇತ್ತು ಆದರೆ, ಇತ್ತೀಚಿನ ವರ್ಷಗಳಲ್ಲಿ ಮತ್ತೇನೋ ಬದಲಾಯಿತು. ನಾನು ಬ್ರಿಟನ್‌ನ ರಾಷ್ಟ್ರೀಯ ದಿನಪತ್ರಿಕೆಗೆ ಸೇರಿಕೊಂಡಾಗ ಸಹಿಸಿಕೊಳ್ಳಲಾಗುತ್ತಿದ್ದ ಭಿನ್ನಾಭಿಪ್ರಾಯ, ಉದಾರಿ ಬಂಡವಾಳಶಾಹಿ ಒಂದು ರೀತಿಯ ಬಂಡವಾಳಶಾಹಿ ಸರ್ವಾಧಿಕಾರದತ್ತ ಹೊರಳಿದ ಮೇಲೆ ರೂಪಕವಾದ ಭೂಗತಕ್ಕೆ ಸರಿದಿದೆ"

- Advertisement -
- Advertisement -

ಇತ್ತೀಚಿನ ವರ್ಷಗಳಲ್ಲಿ ಕಳೆದ ಒಂದೆರಡು ವಾರಗಳು ಅತಿ ಯಾತನಾಮಯ ದಿನಗಳು. ರೈತರ ಹೋರಾಟಕ್ಕೆ ಕಪ್ಪುಮಸಿ ಬಳಿಯುವ ಹುನ್ನಾರಕ್ಕೆ ಕಾರ್ಪೊರೆಟ್ ಹಿಡಿತದ ಒಂದು ವರ್ಗದ ಮಾಧ್ಯಮ ಹಗಲಿರುಳು ಪ್ರಯತ್ನಿಸುತ್ತಿದ್ದರೆ, ಮತ್ತೊಂದೆಡೆ ರೈತರ ಮತ್ತು ಜನಸಾಮಾನ್ಯರ ಪರ ನಿಂತು ಆಡಳಿತ ವ್ಯವಸ್ಥೆಯ ದೌರ್ಜನ್ಯವನ್ನು ವರದಿ ಮಾಡುತ್ತಿದ್ದ ಅಸಲಿ ಪತ್ರಕರ್ತರ ಮತ್ತು ಅವರು ಪ್ರತಿನಿಧಿಸಿದ ಸಂಸ್ಥೆಗಳ ಮೇಲೆ ಮುಗಿಬೀಳಲಾಗುತ್ತಿದೆ. ಅಲ್ಲಿ ನಡೆಯುತ್ತಿರುವ ಸಂಗತಿಗಳನ್ನು ಕಂಡಿದ್ದರೆ ಮತ್ತು ಕೇಳಿದ್ದರೆ, ’ಮುಗಿಬೀಳುವುದು’ ಎಂಬ ಪದ ಅತಿ ಮೃದುವಾಗಿ ಕೇಳಿಸಿರಬಹುದು. ವರದಿಗಾರರನ್ನು ಎಳೆದಾಡಿ ಎತ್ತುಕೊಂಡು ಹೋಗುವ ಆ ದೃಶ್ಯಾವಳಿಗಳು, ದೆಹಲಿ ಪೊಲೀಸರ ದುರ್ವರ್ತನೆಯನ್ನು ಚಿತ್ರಿಸುತ್ತಿದ್ದವರ ಮೇಲೆ ಹಲ್ಲೆ, ಪೊಲೀಸರ ಮತ್ತು ಆಡಳಿತ ವ್ಯವಸ್ಥೆಯ ವಿರುದ್ಧ ಮಾಡಿದ ಟ್ವೀಟ್‌ಗಳಿಗೆ ದೇಶದ ಹಲವೆಡೆ ಕಾಪಿ-ಪೇಸ್ಟ್ ಎಫ್‌ಐಆರ್‌ಗಳು ಹೀಗೆ, ಏನೇ ಬಂದೆರಗಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹತ್ತಿಕ್ಕೇ ತೀರುತ್ತೇವೆ ಎಂಬ ನಿರ್ಣಯಕ್ಕೆ ಈ ದೇಶದ ಆಡಳಿತ ವ್ಯವಸ್ಥೆ ಬಂದಿರುವಂತೆ ತೋರುತ್ತದೆ. ಈ ಎಲ್ಲಾ ಘಟನಾವಳಿಗಳು ಅದಕ್ಕೆ ಸಾಕ್ಷಿಯಾಗಿ ನಿಂತಿವೆ.

’ಲೂಪಿನ್ ಎಂಬ ಫ್ರೆಂಚ್ ವೆಬ್ ಧಾರಾವಾಹಿ ಇತ್ತೀಚೆಗೆ ಬಹಳ ಜನಪ್ರಿಯವಾಗಿದೆ. ಉದ್ಯಮಿಯೊಬ್ಬ ಪೊಲೀಸರೊಂದಿಗೆ ಸೇರಿಕೊಂಡು ತನ್ನ ತಂದೆಯನ್ನು ಕೊಂದಿರುವ ಬಗ್ಗೆ ಧಾರಾವಾಹಿಯ ಪ್ರಮುಖ ಪಾತ್ರಧಾರಿ ಕಪ್ಪು ವ್ಯಕ್ತಿ ಅಸಾನ್ ಡಿಯೋಪ್, ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ತನಿಖೆ ಮಾಡುವ ಈ ಕಥೆಯಲ್ಲಿ, ದೊಡ್ಡ ಉದ್ಯಮಿಗಳ ಕ್ರೌರ್ಯ, ಜನಾಂಗೀಯ ದ್ವೇಷ, ಪೊಲೀಸರ ದುರ್ನಡತೆ-ದೌರ್ಜನ್ಯ ಎಲ್ಲವನ್ನೂ ಚಿತ್ರಿಸಲಾಗಿದೆ. ಧಾರಾವಾಹಿಯ ನಾಲ್ಕನೇ ಅಧ್ಯಾಯದಲ್ಲಿ ಮೂಡಿ ಬರುವ ಪತ್ರಕರ್ತೆಯ ಪಾತ್ರ ಇಂದಿನ ದಿನ ದಿಟ್ಟ ಪತ್ರಿಕೋದ್ಯಮ ಮತ್ತು ಪತ್ರಕರ್ತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಕನ್ನಡಿ ಹಿಡಿದಂತಿದೆ. ಈ ಕಥೆಯಲ್ಲಿನ ಉದ್ಯಮಿ ಪೆಲಿಗ್ರಿನಿ ವಿರುದ್ಧ ತನಿಖಾ ವರದಿ ಮಾಡಿದ ಕಾರಣಕ್ಕೆ, ಪತ್ರಕರ್ತೆ ಫ್ಯಾಬಿಯೇನ್ ಅವರನ್ನು ಮೂಲೆಗುಂಪು ಮಾಡಲಾಗಿದೆ. ಆಕೆಯ ವಿರುದ್ಧ ಅಪಪ್ರಚಾರ ಮಾಡಿ ಆಕೆಗೆ ಬೇರೆಲ್ಲೂ ಕೆಲಸ ಸಿಗದಂತೆ ನೋಡಿಕೊಂಡು, ತನ್ನ ನೆಚ್ಚಿನ ಕೆಲಸದಿಂದ ದೂರವುಳಿಯುವಂತೆ ಮಾಡಿ, ತನ್ನ ಮನೆಯಲ್ಲೇ ದೈಹಿಕವಾಗಿ ಮತ್ತು ಬೌದ್ಧಿಕವಾಗಿ ಕೊಳೆಯುವ ’ಅನಧಿಕೃತ’ ಶಿಕ್ಷೆ ನೀಡಲಾಗಿದೆ. ಆಕೆ ತನ್ನ ಸಾಕುನಾಯಿಗೆ ‘J’Accuse…!’ (ಫ್ರೆಂಚ್ ಪತ್ರಿಕೆಯೊಂದರ ಮುಖಪುಟದಲ್ಲಿ, ಎಮಿಲಿ ಝೋಲಾ ಅಂದಿನ ಸರ್ಕಾರದ ವಿರುದ್ಧ ಬರೆದ ಪತ್ರ) ಎಂದು ಹೆಸರಿಸಿರುತ್ತಾಳೆ. ಡಿಯೋಪ್, ಫ್ಯಾಬಿಯೇನ್‌ಳನ್ನು ಪತ್ತೆ ಹಚ್ಚಿ, ಆಕೆಗೆ ಉತ್ತೇಜನ ನೀಡಿ, ಉದ್ಯಮಿ ಪೆಲಿಗ್ರಿನಿ ಮಲೇಶಿಯಾದ ಉಗ್ರಗಾಮಿಗಳಿಗೆ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿರುವ ಸಾಕ್ಷ್ಯಗಳನ್ನು ಸಂಗ್ರಹಿಸಿ ಬಿಡುಗಡೆ ಮಾಡುತ್ತಾನೆ. ಆದರೆ, ಪೆಲಿಗ್ರಿನಿ ದೇಶಭಕ್ತಿಯ ನೆಪ ಒಡ್ಡಿ ರಾಷ್ಟ್ರೀಯತೆಯ ಚಿಪ್ಪಿನೊಳಗೆ ಅವಿತುಕೊಂಡು, ವಿಸಲ್ ಬ್ಲೋವರ್‌ಗಳನ್ನು ಡಿಫೇಮ್ ಮಾಡುತ್ತಾನೆ. ಹೀಗೆ ಮುಂದುವರೆಯುತ್ತದೆ…

ಬೇರೆ ಯಾವುದೋ ದೇಶದ ಒಂದು ಧಾರಾವಾಹಿಯನ್ನು ಇಲ್ಲಿ ಉದಾಹರಿಸುತ್ತಿರುವುದಕ್ಕೆ ಕಾರಣ ಇಲ್ಲದ್ದಿಲ್ಲ. ಪ್ರಭುತ್ವಗಳನ್ನು, ಲಾಭವನ್ನಷ್ಟೇ ಅರಸಿ ಉಳಿದೆಲ್ಲ ಕೇಡು ಮಾಡುವ ಬಂಡವಾಳಶಾಹಿಗಳನ್ನು ಪ್ರಶ್ನಿಸಿದ ಪತ್ರಕರ್ತರನ್ನು ತುಳಿಯುವ ಪ್ರವೃತ್ತಿ ದೇಶ ಕಾಲಗಳನ್ನು ಮೀರಿದ್ದು. ಆದರೆ ಭಾರತದಂತಹ ದೇಶಗಳಲ್ಲಿ ಅದು ವರ್ಷದಿಂದ ವರ್ಷಕ್ಕೆ ಎಗ್ಗಿಲ್ಲದೆ ಏರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಮೇಲೆ ಹೇಳಿದ ಧಾರಾವಾಹಿಯನ್ನು ನೋಡುತ್ತಿದ್ದಂತೆ, ಮುಖಕ್ಕೆ ಹೊಡೆಯುವಂತಹ ಇತ್ತೀಚಿನ ಉದಾಹರಣೆ ಸುಳಿದು ಹೋಯಿತು. ಅತ್ತ, ಸುಳ್ಳು ಸುಳ್ಳೇ ಟಿಆರ್‌ಪಿ ಹೆಚ್ಚಿಸಿಕೊಳ್ಳುವ ಸಲುವಾಗಿ, ದೇಶದ ಮಿಲಿಟರಿ ಸಂಗತಿಗಳನ್ನು ’ಕಾಂಪ್ರಮೈಸ್ ಮಾಡಿದ ಆರೋಪ ಹೊತ್ತ ರಿಪಬ್ಲಿಕ್ ಟಿವಿಯ ಅರ್ನಬ್ ಗೋಸ್ವಾಮಿ, ದೇಶಭಕ್ತಿಯ ನೆಪ ಹೇಳಿಕೊಂಡು, ’ನ್ಯಾಶನಲ್ ಕಲೆಕ್ಟಿವ್’ ಕಟ್ಟುತ್ತಾ ಸ್ವರಕ್ಷಣೆಯಲ್ಲಿ ತೊಡಗಿಕೊಂಡಿದ್ದರೆ, ಉದ್ಯಮಿ ಅದಾನಿ ಸಂಸ್ಥೆಯ ಭ್ರಷ್ಟಾಚಾರದ ಬಗ್ಗೆ ಆರೋಪಿಸಿ ಬರೆದಿದ್ದ ಪರಂಜೋಯ್ ಗುಹಾ ಠಾಕುರ್ತ ಅವರ ವಿರುದ್ಧ ಗುಜರಾತಿನ ನ್ಯಾಯಾಲಯವೊಂದು ಜಾಮೀನುರಹಿತ ಬಂಧನದ ವಾರೆಂಟ್ ಹೊರಡಿಸಿತ್ತು (ಗುಜರಾತ್ ಉಚ್ಚ ನ್ಯಾಯಾಲಯ ಈ ಆದೇಶವನ್ನು ಹಲವು ಷರತ್ತುಗಳ ಮೇಲೆ ತಾತ್ಕಾಲಿಕವಾಗಿ ರದ್ದುಪಡಿಸಿದೆ). ದ ವೈರ್ ವಿರುದ್ಧ ಕೂಡ ಪ್ರಕರಣ ದಾಖಲಿಸಿದ್ದರೂ ಮತ್ತು ವರದಿ ಪ್ರಕಟಿಸಿರುವುದರ ವಿರುದ್ಧದ ಪ್ರಕರಣದಲ್ಲಿ ತೀವ್ರ ಹಿನ್ನಡೆಯುಂಟಾಗಿದ್ದರೂ, ಅದಾನಿ ಒಡೆತನದ ಸಂಸ್ಥೆ ಪರಂಜೋಯ್ ಗುಹಾ ವಿರುದ್ಧ ತೀವ್ರ ದಾಳಿ ನಡೆಸುತ್ತಾ ಬರುತ್ತಿದೆ. ಅವರು ’ಗ್ಯಾಸ್ ವಾರ್‍ಸ್’ ಪುಸ್ತಕ ಬರೆದ ನಂತರ ಅನುಭವಿಸಿದ ತೊಂದರೆಗಳು, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಇಂದ ಹೊರಗೆ ಹಾಕಿಸಿಕೊಂಡ ಸಂಗತಿಗಳು ಇವೆಲ್ಲವೂ ನೆನಪಿಗೆ ಬಂದವು.

ಇವೆಲ್ಲಾ ಸಂಗತಿಗಳ ಜೊತೆಗೆ ಕೃಷಿ ಕಾಯ್ದೆಗಳ ಹಿನ್ನೆಲೆಯಲ್ಲಿ, ಕಳೆದ ಹದಿನೈದು ದಿನಗಳಲ್ಲಿ ನಡೆಯುತ್ತಿರುವ ಹಲವು ವಿದ್ಯಮಾನಗಳು ದಿಟ್ಟ ಪತ್ರಕರ್ತರ ಒಡಲಿನ ಸಂಕಟವನ್ನು ಹೆಚ್ಚಿಸುವಂತಿವೆ. ಜನವರಿ 30ರಂದು ದೆಹಲಿ ಗಡಿಯ ರೈತ ಹೋರಾಟದ ಸ್ಥಳದಲ್ಲಿ ವರದಿ ಮಾಡುತ್ತಿದ್ದ ಸ್ವತಂತ್ರ ಪತ್ರಕರ್ತ ಮಂದೀಪ್ ಪುನಿಯಾ ಅವರನ್ನು ಪೊಲೀಸರು ಎಳೆದುಕೊಂಡು ಹೋಗುವ ದೃಶ್ಯ ಆತಂಕಕಾರಿಯಾಗಿತ್ತು. ಅವರ ವಿರುದ್ಧ ಹಲವು ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದರು. ಫೆಬ್ರವರಿ 2 ರಂದು ದೆಹಲಿ ಹೈಕೋರ್ಟ್ ಅವರಿಗೆ ಜಾಮೀನು ನೀಡಿದೆಯಾದರೂ, ಕಾರ್ಪೊರೆಟ್ ಮತ್ತ ಆಡಳಿತ ವ್ಯವಸ್ಥೆಯ ನೆಕ್ಸಸ್ ಈಗ ಕೇವಲ ಜನಪ್ರಿಯ ಮತ್ತು ಮುಖ್ಯವಾಹಿನಿ ಮಾಧ್ಯಮಗಳನ್ನಷ್ಟೇ ಗುರಿಯಾಗಿಸಿಕೊಂಡಿಲ್ಲ ಬದಲಿಗೆ ಪರ್ಯಾಯ ಮಾಧ್ಯಮಗಳು ಮತ್ತು ಸ್ವತಂತ್ರ ಪತ್ರಕರ್ತರನ್ನೂ ಗುರಿಯಾಗಿಸಿಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

PC : The Quint

ಮಂದೀಪ್ ಪುನಿಯಾ ಅವರು ಕಾರವಾನ್ ಮಾಸ ಪತ್ರಿಕೆ ಮತ್ತು ಆನ್ಲೈನ್ ಸುದ್ದಿ ತಾಣಕ್ಕೆ ವರದಿ ಮಾಡುವ ಸ್ವತಂತ್ರ ಪತ್ರಕರ್ತ. ಮುಖ್ಯವಾಹಿನಿ ಮಾಧ್ಯಮಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಭುತ್ವಗಳು ಬೇರೆಯದೇ ವಾಮಮಾರ್ಗವನ್ನು ಅನುಸರಿಸಿದರೆ, ಇಂತಹ ಸ್ವತಂತ್ರ ಮಾಧ್ಯಮಗಳು ಮತ್ತು ಪತ್ರಕರ್ತರನ್ನು ಹಳಿಯಲು ಬಲಪ್ರಯೋಗಕ್ಕೆ ಮುಂದಾಗಿರುವುದು ಸ್ಪಷ್ಟವಾಗಿದೆ. ಆದರೆ ಸ್ವತಂತ್ರ ಮಾಧ್ಯಮಗಳು ಈ ಮುಖ್ಯವಾಹಿನಿ ಮಾಧ್ಯಮಗಳು ಸೃಷ್ಟಿಸುತ್ತಿರುವ ಆಡಳಿತ ವ್ಯವಸ್ಥೆಯ ಪರವಾದ ಪ್ರಪೋಗಾಂಡಕ್ಕೆ, ಬದಲಿ ಮತ್ತು ದಿಟ ನರೆಟಿವ್‌ಅನ್ನು ಸೃಷ್ಟಿ ಮಾಡಿ ಜನರನ್ನು ತಲುಪಲು ಸಾಧ್ಯವಾಗಿರುವುದು ಕೂಡ ಈ ದಮನ ಮಾಡುವ ಹುನ್ನಾರ ಮನನಮಾಡಿಕೊಡುತ್ತಿದೆ.

ಇಷ್ಟೇ ಅಲ್ಲದೆ, ಕಾರವಾನ್ ಸಂಪಾದಕ ವಿನೋದ್ ಜೋಸ್, ಅದೇ ಸಂಸ್ಥೆಯ ಜೊತೆ ಗುರುತಿಸಿಕೊಂಡಿರುವ ಪರೇಶ್ ನಾಥ್, ಅನಂತ ನಾಥ್, ಇಂಡಿಯಾ ಟುಡೆಯ ರಾಜದೀಪ್ ಸರ್ದೇಸಾಯಿ, ನ್ಯಾಶನಲ್ ಹೆರಾಲ್ಡ್‌ನ ಮೃನಾಲ್ ಪಾಂಡೆ, ಕ್ವಾಮಿ ಆವಾಜ್‌ನ ಝಫರ್ ಆಘ ಸೇರಿದಂತೆ ಆರು ಪತ್ರಕರ್ತರ ವಿರುದ್ಧ ಉತ್ತರಪ್ರದೇಶದಲ್ಲಿ ದೇಶದ್ರೋಹ ಪ್ರಕರಣ, ಕ್ರಿಮಿನಲ್ ಸಂಚು ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾರಣ, ಅವರು 26 ಜನವರಿಯಂದು ರೈತ ಹೋರಾಟದಲ್ಲಿ ಭಾಗಿಯಾಗಿದ್ದ ಕೃಷಿಕ ನವ್ರೀತ್ ಅವರು ಮೃತಪಟ್ಟಿದ್ದಕ್ಕೆ ಪೊಲೀಸ್ ಶೂಟಿಂಗ್ ಕಾರಣ ಎಂದು ಪ್ರತ್ಯಕ್ಷದರ್ಶಿಯ ಹೇಳಿಕೆಯನ್ನು ಆಧರಿಸಿ ಮಾಡಿದ ಟ್ವೀಟ್. ಶವಪರೀಕ್ಷೆ ಮುಗಿದ ನಂತರವೂ, ಮೃತರ ಸಂಬಂಧಿಕರು ಪೊಲೀಸ್ ಶೂಟಿಂಗ್ ಬಗ್ಗೆ ಆರೋಪಿಸಿದ್ದಾರೆ. ಅದನ್ನು ವರದಿ ಮಾಡಿದ್ದಕ್ಕೆ ಈಗ ದಿ ವೈರ್‌ನ ಸಿದ್ಧಾರ್ಥ್ ವರದರಾಜನ್ ಅವರ ಮೇಲೆಯೂ ಪ್ರಕರಣ ದಾಖಲಿಸಲಾಗಿದೆ. ಹೆಚ್ಚಿನ ತನಿಖೆಯಿಂದ ಇದು ನಿಜವಲ್ಲ ಎಂದು ಸಾಬೀತಾಗಬಹುದು ಅಥವಾ ಇಲ್ಲದಿರಬಹುದು, ಆದರೆ ಪ್ರತ್ಯಕ್ಷದರ್ಶಿಯ ಹೇಳಿಕೆ ಮೇರೆಗೆ ಪತ್ರಕರ್ತರು ಸಂಶಯ ವ್ಯಕ್ತಪಡಿಸಿ ವರದಿ-ಟ್ವೀಟ್ ಮಾಡುವುದು ಯಾವ ರೀತಿಯಲ್ಲಿ ದೇಶದ್ರೋಹ ಅಥವಾ ಕ್ರಿಮಿನಲ್ ಸಂಚು? ಅದೂ ಸಾಲದು ಎಂಬಂತೆ ಉತ್ತರಪ್ರದೇಶದಲ್ಲಿ ಹಾಕಿಕೊಡುವ ಮಾರ್ಗವನ್ನು ಕರ್ನಾಟಕವೂ ಸೇರಿದಂತೆ, ಹಲವು ರಾಜ್ಯಗಳ ಪೊಲೀಸರು ಶಿರಸಾವಹಿಸಿ ಒಂದೇ ರೀತಿಯ ಎಫ್‌ಐಆರ್‌ಗಳನ್ನು ಹಾಕುತ್ತಿದ್ದಾರೆ! ಬಿಜೆಪಿ ಪಕ್ಷದ ಐಟಿ ಸೆಲ್‌ನ ಭಾಗವಾಗಿದ್ದಾರೇನೋ ಇವರೆಲ್ಲರೂ ಎಂಬ ಸಂಶಯ ಮೂಡುವುದಿಲ್ಲವೇ?

ಇದು ಕಾಲ ದೇಶವನ್ನು ಮೀರಿದ ಸಮಸ್ಯೆಯಾಗಿ ಬೆಳೆದಿದೆ ಎಂದಿದ್ದಕ್ಕೆ ಇದೇ ಅಂಕಣದಲ್ಲಿ ಕೆಲವು ವಾರಗಳ ಹಿಂದೆ ಮಾಲ್ಟಾ ಎಂಬ ಯುರೋಪಿನ ಪುಟ್ಟ ದೇಶದಲ್ಲಿ ಗೌರಿ ಲಂಕೇಶ್ ಅವರು ಕೊಲೆಯಾದ ಸಮಯದಲ್ಲಿಯೇ, ಮಾಲ್ಟಾ ದೇಶದ ಪ್ರಧಾನಿಯ ಭ್ರಷ್ಟಾಚಾರವನ್ನು ಬಯಲು ಮಾಡಿದ್ದಕ್ಕೆ ಕೊಲೆಯಾದ ದಾಫ್ನೆ ಕರುವಾನ ಗಲಿಝಿಯಾ ಅವರನ್ನು ನೆನಪಿಸಿಕೊಳ್ಳಬಹುದು. ಎಡ್ವರ್ಡ್ ಸ್ನೋಡೆನ್, ಜೂಲಿಯನ್ ಅಸಾಂಜ್ ಅವರುಗಳಿಗೆ ನೀಡಿದ ಕಿರುಕುಳ ಇನ್ನೂ ತಾಜಾ ಆಗಿಯೇ ಉಳಿದಿದೆ. 1960ರ ದಶಕದಿಂದಲೂ ಪತ್ರಕರ್ತನಾಗಿ ಅಮೆರಿಕಾದ ಯುದ್ಧನೀತಿಗಳನ್ನು ಟೀಕಿಸಿ, ಅವರು ಯುದ್ಧಮಾಡಿದ ಕಡೆಯಲ್ಲೆಲ್ಲ ನಡೆಸಿದ ದೌರ್ಜನ್ಯಗಳನ್ನು ಬಯಲಿಗೆಳೆದು, ಪ್ಯಾಲೆಸ್ಟೇನಿಯನ್ನರ ಮೇಲೆ ಇಸ್ರೇಲ್ ನಡೆಸಿದ ಕ್ರೌರ್ಯವನ್ನು ದಾಖಲಿಸಿ, ತನ್ನದೇ ಸ್ವಂತ ದೇಶವಾದ ಆಸ್ಟ್ರೇಲಿಯಾದಲ್ಲಿ ಅಲ್ಲಿನ ಸರ್ಕಾರ ವರ್ಷವರ್ಷಗಳಿಂದ ಮೂಲನಿವಾಸಿಗಳ ಮೇಲೆ ನಡೆಸಿಕೊಂಡು ಬರುತ್ತಿರುವ ಜನಾಂಗೀಯ ತಾರತಮ್ಯದ ಬಗ್ಗೆ ಬರೆದು ಸಾಕ್ಷ್ಯಚಿತ್ರಗಳನ್ನು ಮಾಡಿದ ಪತ್ರಕರ್ತ ಜಾನ್ ಪಿಲ್ಜರ್. ಅವರು ಒಂದು ಕಡೆ ದಾಖಲಿಸುವಂತೆ “ಪತ್ರಿಕೋದ್ಯಮ ಯಾವಾಗಲೂ ಪ್ರಭುತ್ವದ ಅಧಿಕಾರದ ಕೊಕ್ಕೆಗೆ ಬಿಗಿಯಾಗಿಲ್ಲದಿದ್ದರೂ ಬೆಸೆದುಕೊಂಡ ಕೊಂಡಿಯಾಗಿಯೇ ಇತ್ತು ಆದರೆ, ಇತ್ತೀಚಿನ ವರ್ಷಗಳಲ್ಲಿ ಮತ್ತೇನೋ ಬದಲಾಯಿತು. ನಾನು ಬ್ರಿಟನ್‌ನ ರಾಷ್ಟ್ರೀಯ ದಿನಪತ್ರಿಕೆಗೆ ಸೇರಿಕೊಂಡಾಗ ಸಹಿಸಿಕೊಳ್ಳಲಾಗುತ್ತಿದ್ದ ಭಿನ್ನಾಭಿಪ್ರಾಯ, ಉದಾರಿ ಬಂಡವಾಳಶಾಹಿ ಒಂದು ರೀತಿಯ ಬಂಡವಾಳಶಾಹಿ ಸರ್ವಾಧಿಕಾರದತ್ತ ಹೊರಳಿದ ಮೇಲೆ ರೂಪಕವಾದ ಭೂಗತಕ್ಕೆ ಸರಿದಿದೆ” ಎನ್ನುತ್ತಾರೆ. ಹಲವಾರು ಪ್ರಶಸ್ತಿಗಳನ್ನು ಪಡೆದ, ಇಂತಹ ದಿಟ್ಟ ಪತ್ರಿಕೋದ್ಯಮ ಮಾಡಿದ ಈ ಧೀಮಂತ ಪತ್ರಕರ್ತನನ್ನು ಪ್ರತ್ಯೇಕಗೊಳಿಸಲಾಯಿತು. ಅವರ ಲೇಖನಗಳು, ಸಾಕ್ಷ್ಯಚಿತ್ರಗಳಿಗೆ ಮುಖ್ಯವಾಹಿನಿ ಮಾಧ್ಯಮಗಳಲ್ಲಿ ವೇದಿಕೆ ಸಿಗದಂತೆ ನೋಡಿಕೊಳ್ಳಲಾಯಿತು. ಆದರೂ ಪಿಲ್ಜರ್ ಅವರ ಸಾಕ್ಷ್ಯಚಿತ್ರಗಳು ಯುಟ್ಯೂಬ್ ನಂತಹ ವೇದಿಕೆಗಳಲ್ಲಿ ಲಕ್ಷಾಂತರ ಬಾರಿ ವೀಕ್ಷಿಸಲ್ಪಟ್ಟಿವೆ. ಟ್ವಿಟ್ಟರ್‌ನಲ್ಲಿ ಇಂದಿಗೂ ಪಿಲ್ಜರ್ ಬಹಳ ಕ್ರಿಯಾಶೀಲರಾಗಿ ವಿಶ್ವದ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿರುವುದು ವಿಶೇಷವಾದದ್ದೇ.

ಈ ಎಲ್ಲವೂ ಕರ್ನಾಟಕದ ಬಗಲಿಗೂ ಬಂದು ನಿಂತಿವೆ. ನ್ಯೂಸ್14 ಯುಟ್ಯೂಬ್ ಚಾನೆಲ್‌ನ ಮುಖ್ಯಸ್ಥರಾದ ಭಾಸ್ಕರ್ ಪ್ರಸಾದ್ ಅವರ ಮೇಲೆ ಹಲ್ಲೆಗೆ ನಡೆದ ಪ್ರಯತ್ನ, ಹನುಮಂತ ಹಾಲಗೇರಿಯವರು ಬರೆದ ನಾಟಕ ’ಅಲೈದೇವ್ರು ಪ್ರದರ್ಶನಕ್ಕೆ ಮುಂಚೆ ಅವರ ವೈಯಕ್ತಿಕ ಸಂಗತಿಗಳನ್ನು ಎಳೆದು ತಂದು ಸಾಮಾಜಿಕ ಜಾಲತಾಣಗಳಲ್ಲಿ ಅವರ ಮೇಲೆ ನಡೆಸಿದ ದಾಳಿ ಹೀಗೆ ಪಟ್ಟಿ ಬೆಳೆಯುತ್ತಲೇ ಇವೆ. ಆರೋಗ್ಯಕರ ಮನಸ್ಸುಗಳು ಒಗ್ಗೂಡಿ ಹೋರಾಡಬೇಕಾದ ಕಾಲ ಇದು!


ಇದನ್ನೂ ಓದಿ: ಜಗತ್ತಿನ ಸರ್ವಾಧಿಕರಗಳ ಹೆಸರು ‘M’ ಅಕ್ಷರದಿಂದಲೇ ಏಕೆ ಆರಂಭವಾಗುತ್ತದೆ: ರಾಹುಲ್ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...