Homeಮುಖಪುಟಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲು, ಬರ ಅಂದ್ರೆ ಇವರಿಗೆ ವರ. ವಿಜಯಪುರ ಜನರ ವಿಶೇಷ ಸ್ಟೋರಿ ಓದಿ

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

- Advertisement -
- Advertisement -

| ಶಿವಾ |

ವಿಜಯಪುರ ಬಿಸಿಲು ಎಂದರೆ ಸಾಕು ರಾಜ್ಯದ ಜನರು ನಲುಗಿ ಹೋಗಿ, ಬೇಡವೇ ಬೇಡ ವಿಜಯಪುರ ಸಹವಾಸ ಎಂದು ದೂರವೇ ಸರಿಯುತ್ತಾರೆ. ಆದರೆ ಇದೇ ಕೆಂಡದ ಮಳೆಯಂತಹ ಬಿಸಿಲು ಮತ್ತು ಬರ ಕೆಲವರಿಗೆ ವರದಾನವಾಗಿ ಪರಿಣಮಿಸಿದೆ.

ಬಿಸಿಲು ಮನುಷ್ಯನ ಜೀವನಕ್ಕೆ, ಅಂಗಾಗಕ್ಕೆ ಅನ್ನಾಂಗ (ವಿಟಮಿನ್) ನೀಡುವುದು. ವಿಜಯಪುರ ಜಿಲ್ಲೆಯಲ್ಲಿ ಬಿಸಿಲು ಹೆಚ್ಚಾದರೆ ಭೂಮಿಯೊಳಗಿನ ಅಂತರ್ಜಲ ಕಡಿಮೆಯಾಗುತ್ತದೆ. ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುವುದಿಲ್ಲ. ಬರಗಾಲ ಎದುರಿಸಲಾಗದವರು ಗುಳೆ ಹೋಗುತ್ತಾರೆ, ಮಳೆ ಇರುವ ಕಡೆಗೆ. ಆದರೆ, ಇದೇ ನಮ್ಮೂರು, ಇಲ್ಲೇ ನಮ್ಮ ಸೂರು, ಇಲ್ಲೆ ನಮ್ಮ ಬೇರು ಎಂದು ವಿಜಯಪುರದಲ್ಲಿ ಬಿಸಿಲು ಮತ್ತು ಬರದ ವಿರುದ್ಧ ಹೋರಾಡಿ, ಜೀವನದಲ್ಲಿ ಒಂದು ಹೊತ್ತಿನ ಗಂಜಿ ಸಂಪಾದಿಸುತ್ತ, ಕೃಷಿ ಸೇರಿದಂತೆ ಇತರೆ ಗುಡಿ ಕೈಗಾರಿಕೆ ಕಾರ್ಮಿಕರು ಇಲ್ಲಿದ್ದಾರೆ. ಬಿಸಿಲು ರೈತರ ಪಾಲಿಗೆ ಅತ್ಯಂತ ಆಪ್ತ ಮಿತ್ರವಾಗಿದೆ. ಅದರಲ್ಲೂ ರೈತ ಮಹಿಳೆಯರು ಈ ಬಿಸಿಲನ್ನು ಹೆಚ್ಚು ಉಪಯುಕ್ತವಾಗಿ ಬಳಸಿಕೊಳ್ಳುತ್ತಾರೆ. ರಾಶಿ ಮಾಡಿದ ಫಸಲನ್ನು ಸಂರಕ್ಷಿಸುವುದಕ್ಕೆ ಈ ಬಿಸಿಲು ನೆರವಾಗುವುದು.

ಹಗೆವುನಲ್ಲಿ ತುಂಬಿಟ್ಟ ದವಸ, ಧಾನ್ಯ, ಕಾಳು ಕಡ್ಡಿಗಳನ್ನು ಹೊರ ತೆಗೆದು, ಬಿಸಿಲಿಗೆ ಒಣ ಹಾಕುವರು. ಉಗ್ರಾಣದಲ್ಲಿರುವ ಆಹಾರ ಧಾನ್ಯಗಳಿಗೆ ಅಂಟಿರುವ ನುಶಿ ಪೀಡೆ, ಹೇನು ಪೀಡೆ, ಜಿಗಿ ಪೀಡೆ ಇತ್ಯಾದಿ ಹಾನಿಕಾರಕ ಕ್ರಿಮಿಕೀಟಗಳನ್ನು ನಾಶ ಮಾಡಲು ಈ ಬಿಸಿಲನ್ನೆ ರಾಮಬಾಣವಾಗಿ ಬಳಸುವರು.

ಗೋಣಿ ಚೀಲದಲ್ಲಿ ತುಂಬಿರುವ ಸಜ್ಜೆ, ಜೋಳ, ಶೇಂಗಾ, ಕಡಲೆ, ತೊಗರಿ ದ್ವಿದಳ ಧಾನ್ಯಗಳಿಗೆ ನುಶಿ ಪೀಡೆ ಅಂಟುವುದು ಬಲು ಬೇಗ. ಹಾಗೇ ಅವು ಕಾಳು ಕಡ್ಡಿಗಳನ್ನು ನಾಶ ಪಡಿಸುತ್ತವೆ. ಮುಂಬರುವ ಮಳೆಗಾಲದ ಹೊತ್ತಿಗೆ ಆಹಾರ ಧಾನ್ಯಕ್ಕೆ ಅಂಟುವ ಕ್ರಿಮಿಕೀಟಗಳು ಸಂಪೂರ್ಣವಾಗಿ ಎಲ್ಲ ಅನ್ನಸಂಪತ್ತನ್ನು ತಿಂದು ಹಾಕುತ್ತವೆ. ಆಗ ರೈತ ಕಂಗಾಲಾಗುತ್ತಾನೆ.
ಮುಂಬರುವ ಅಪಾಯವನ್ನು ಗಮನದಲ್ಲಿಟ್ಟುಕೊಂಡು, ಕ್ರಿಮಿಕೀಟಗಳ ನಾಶಕ್ಕಾಗಿ ದವಸ- ಧಾನ್ಯಗಳನ್ನು ಬಿಸಿಲಿಗೆ ಹಾಕುತ್ತಾರೆ. ತಿನ್ನುವ ಆಹಾರ ಧಾನ್ಯ ಸ್ವಚ್ಛವಾಗಿದ್ದರೆ, ಆರೋಗ್ಯವು ಸದೃಢವಾಗಿರುತ್ತದೆ.

ವಿಜಯಪುರದ ಬಿಸಿಲು ಕೇವಲ ಆಹಾರ ಧಾನ್ಯ ಸಂರಕ್ಷಿಸುವುದಕ್ಕೆ ಅಷ್ಟೆ ಅಲ್ಲ. ಅದು ಬರದಿಂದ ಗುಳೆ ಹೋಗುವವರ ಜನರಿಗೆ ಬದುಕಿನ ಪಾಠ ಹೇಳುವ ನೇಸರ ಗುರುವಾಗಿದೆ.

ಬಿಸಿಲು ದುಡುಮೆಯ ಟಿಸಿಲು:
ಬಹುತೇಕ ಜನ ಗೃಹಿಣಿಯರು ಈ ಬೇಸಿಗೆ ಕಾಲಕ್ಕೆ ಕಾಯ್ದು ಕುಳಿತಿರುತ್ತಾರೆ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು, ಹಾಗೇ ಅದರಿಂದ ದುಡಿಮೆಯ ದಾರಿಯನ್ನು ಕಂಡುಕೊಳ್ಳಲು.

ಶಾವಿಗೆ ಹೊಸೆದು, ಅದನ್ನು ಬಿಸಿಲಿಗೆ ಒಣ ಹಾಕಿ, ಸಂಜೆ ಹೊತ್ತಿಗೆ ಅದನ್ನು ಪ್ಯಾಕೇಟ್ ಮಾಡಿ, ಸ್ಥಳೀಯ ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಾರೆ. ಚಳಿಗಾಲ, ಮಳೆಗಾಲದಲ್ಲಿ ಬದುಕು ತಣ್ಣಗಿರಲೆಂದು ಬೇಸಿಗೆ ಬಿಸಿಲನ್ನು ಬಳಸಿಕೊಳ್ಳುತ್ತಾರೆ.

ಹಾಗೇ ಹಪ್ಪಳ, ಸಂಡಿಗೆ, ಉಪ್ಪಿನ ಕಾಯಿ ಸೇರಿದಂತೆ ಕುರುಕಲು ತಿಂಡಿ ಈ ಎಲ್ಲ ತಿನಿಸುಗಳು ಬಿಸಿಲಿನ ಬಿಸಿಗೆ ಸಿಲುಕಿ ಹದವಾಗಿ ತಿನ್ನುವುದಕ್ಕೆ ರೂಪುಗೊಂಡಿರುತ್ತವೆ. ಅದನ್ನು ರಾತ್ರಿ ಹೊತ್ತಿಗೆ ಕುಟುಂಬದವರೊಂದಿಗೆ ಊಟ ಮಾಡುವಾಗ, ಬಿಸಿಲನ್ನು ನೆನೆಯದೇ ಇರಲಾರರು.

ಬಿಸಿಲು ನಗರದಲ್ಲಿರುವ ಕ್ರಿಯಾಶೀಲ ಮಹಿಳೆಯರಿಗೆ ಇದು ಹೊಸ ಬೆಳದಿಂಗಳ ಬೆಳಕಾಗಿದೆ. ಮರದ ನೆರಳ ಕೆಳಗೆ ಕುಳಿತು ಕೌದಿಯನ್ನು ಹೊಲೆಯುವುದು, ಬಳೆ ತೊಡಿಸುವುದು, ಮದರಂಗಿ ಹಾಕುವುದು, ಬಟ್ಟೆಗಳ ಮೇಲೆ ಹೆಣಿಗೆ, ಸ್ವೇಟರ್ ಹೆಣೆಯುವುದು ಈ ಬಿಸಿಲು ಕಾಲದಲ್ಲಿಯೆ ರೂಪ ಪಡೆಯುತ್ತವೆ.

ಬಿಸಿಲು ಏಪ್ರಿಲ್, ಮೇ ತಿಂಗಳಲ್ಲಿ ಜನರನ್ನು ಕಂಗೆಡಿಸುವಂತಿರುತ್ತದೆ. ಈ ಎರಡು ತಿಂಗಳ ಬಿಸಿಲನ್ನು ಬಳಸಿಕೊಂಡು ಜಿಲ್ಲೆಯ ಬಹುತೇಕ ಮಹಿಳೆಯರು ತಮ್ಮಲ್ಲಿರುವ ಕೆಲಸ, ಕಾಯಕ, ಕಲೆಯ ಮೂಲಕ ಅನಾವರಣಗೊಳಿಸುತ್ತಾರೆ.

ಬಿಸಿಲೆಂಬುದು ಕೆಂಡದ ಮಳೆಯಾದರೂ ದುಡಿದು ತಿನ್ನುವವರ ಪಾಲಿಗೆ ಕೆಂಡ ಸಂಪಿಗೆಯಾಗಿದೆ. ಅದರೊಳಗೆ ಹಿತವಾದ ಆರೋಗ್ಯಪೂರ್ಣವಾದ ಬಿಸಿಯಿದೆ.

ಇನ್ನೇನು ಬೇಸಿಗೆ ಅಂತ್ಯಕ್ಕೆ ಬಂದಿದ್ದು, ಮಳೆಗಾಲ ಸನಿಹಗೊಂಡಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ವಿಜಯಪುರದಲ್ಲಿ ಜೋರಾದ ಗಾಳಿ, ಗುಡುಗು, ಸಿಡಿಲು ಮಿಶ್ರಿತ ಮಳೆಯಾಗಿದೆ. ಈ ಅಕಾಲಿಕ ಮಳೆ ಪ್ರತಿ ವರ್ಷ ಹೀಗೆ ಸುರಿಯುವುದು ವಾಡಿಕೆಯಾಗಿದೆ. ಪ್ರಸಕ್ತ ವರ್ಷದ ಬೇಸಿಗೆಯ ಮೇ ತಿಂಗಳಲ್ಲಿ 42.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾದರೆ, ಏಪ್ರಿಲ್‍ನಲ್ಲಿ 42.6 ರಷ್ಟು ಉಷ್ಣಾಂಶ ದಾಖಲಾಗಿತ್ತು. ಅಲ್ಲದೆ ರಾತ್ರಿಯಲ್ಲೂ 28 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲುಗೊಂಡು ಈ ಭಾಗದ ಜನರ ನಿದ್ರೆಗೆ ಕೊಳ್ಳಿಯಿಟ್ಟಂತಾಗಿ, ಸಾರ್ವಜನಿಕರು ನಿದ್ರೆಯಿಲ್ಲದೆ ಪರದಾಡಿರುವುದು ಸುಳ್ಳಲ್ಲ. ಹೀಗೆ ಸೂರ್ಯ ಪುತ್ರರು ಬಿಸಿಲು, ಬರವನ್ನು ತಮ್ಮ ವರವಾಗಿ ಬಳಸಿಕೊಂಡು, ಸುಡು ಬಿಸಿಲಿನಲ್ಲಿಯೇ ಗರಮ್ ಮರಮ್ ಚಹಾ, ಚೋಡಾ, ಮಿರ್ಚಿ ಭಜ್ಜಿ ತಿಂದು, ಬಿಸಿಲ ಬದುಕಿನ ಸುಖ ಅನುಭವಿಸುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...