Homeಮುಖಪುಟಇವು ದೆಹಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದರೆ ನೀವು ನಂಬುವುದಿಲ್ಲ

ಇವು ದೆಹಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಆಸ್ಪತ್ರೆಗಳು ಎಂದರೆ ನೀವು ನಂಬುವುದಿಲ್ಲ

ದೆಹಲಿಯ ಸರ್ಕಾರಿ ಶಾಲೆಗಳನ್ನು ಇಡೀ ಪ್ರಪಂಚ ಮಟ್ಟದಲ್ಲಿ ಹೆಸರಾಗುವಂತೆ ಮಾಡಿದ ಅತಿಶಿ ಮರ್ಲೀನಾ ತಿಂಗಳಿಗೆ ಪಡೆಯುವ ಸಂಬಳ ಕೇವಲ 1 ರೂ ಅಂದರೆ ನೀವು ನಂಬಲೇಬೇಕು

- Advertisement -
- Advertisement -

ದೆಹಲಿಯ ಸರ್ಕಾರಿ ಶಾಲೆಗಳನ್ನು ಇಡೀ ಪ್ರಪಂಚ ಮಟ್ಟದಲ್ಲಿ ಹೆಸರಾಗುವಂತೆ ಮಾಡಿದ ಅತಿಶಿ ಮರ್ಲೀನಾ ತಿಂಗಳಿಗೆ ಪಡೆಯುವ ಸಂಬಳ ಕೇವಲ 1 ರೂ ಅಂದರೆ ನೀವು ನಂಬಲೇಬೇಕು. ದೆಹಲಿಯ ಸರ್ಕಾರಿ ಶಾಲೆಗಳ ಅತ್ಯುತ್ತಮ ಶಿಕ್ಷಣ ನೀಡುತ್ತಿವೆ. ದೆಹಲಿಯ ಮೊಹಲ್ಲಾ ಕ್ಲಿನಕ್ ಗಳು ಬಡಜನರ ಆರೋಗ್ಯ ಸುಧಾರಿಸಿವೆ. ಜೊತೆಗೆ ಹೈ ಕ್ಲಾಸ್ ಸರ್ಕಾರಿ ಹಾಸ್ಪಿಟಲ್ ಗಳು ತಲೆಎತ್ತಿವೆ. ಇದರ ಹಿಂದಿನ ರೂವಾರಿ ಅಲ್ಲಿನ ಆಪ್ ಸರ್ಕಾರ.

ದೆಹಲಿಯ ಸರ್ಕಾರಿ ಶಾಲೆ

ಆಂದ್ರದ ರಿಷಿ ವ್ಯಾಲಿ ಶಾಲೆಯಲ್ಲಿ ಇತಿಹಾಸ ಪಾಠ ಮಾಡುತ್ತಿದ್ದ ಅತಿಶಿ ಶಾಲೆಯ ಕೆಲಸ ಬಿಟ್ಟು ಮಧ್ಯ ಪ್ರದೇಶದ ಹಳ್ಳಿಯೊಂದರಲ್ಲಿ ಸಾವಯವ ಕೃಷಿಯಲ್ಲಿ ತೊಡಗಿದ್ದರು. 2011ರಲ್ಲಿ ಭ್ರಷ್ಟಾಚಾರ ವಿರೋಧಿ ಚಳುವಳಿಯಿಂದ ಆಕರ್ಷಿತರಾಗಿ ಅರವಿಂದ ಕೇಜ್ರಿವಾಲ್ ತಂಡವನ್ನು ಸೇರಿದರು. ದೆಹಲಿಯಲ್ಲಿ AAP ಸರ್ಕಾರ ಬಂದಾಗ ಅದರ ನೀತಿ ನಿರೂಪಣಾ ತಂಡದಲ್ಲಿ ಅತಿಶಿ ಇದ್ದರು.

ದೆಹಲಿಯ ಸರ್ಕಾರಿ ಹಾಸ್ಪಿಟಲ್

ಅಧಿಕಾರದ ವಿಕೇಂದ್ರಿಕರಣಕ್ಕಾಗಿ ಅವರು ರೂಪಿಸಿದ ಮೊಹಲ್ಲಾಸಭಾ ಪರಿಕಲ್ಪನೆಯನ್ನು ಲೆಫ್ಟಿನೆಂಟ್ ಗವರ್ನರ್ ತಿರಸ್ಕರಿಸಿದರೂ ಅತಿಶಿ ಗಮನಸೆಳೆದರು. ಶಿಕ್ಷಣ ಸಚಿವ ಸಿಸೋಡಿಯಾರ ಶೈಕ್ಷಣಿಕ ಸಲಹೆಗಾರಳಾಗಿ ಅತಿಶಿ ಅದ್ಭುತವನ್ನೇ ಸಾಧಿಸಿದರು. ದೆಹಲಿಯ ಸರ್ಕಾರಿ ಶಾಲೆಗಳಿಂದು ಗುಣಮಟ್ಟದ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಂಸ್ಥೆಗಳಾಗಿ ರೂಪುಗೊಂಡಿದ್ದರೆ ಅದರ ಶ್ರೇಯ ಅತಿಶಿಯವರಿಗೆ ಸಲ್ಲಬೇಕು ಎನ್ನುತ್ತಾರೆ ಮನಿಷ್ ಸಿಸೋಡಿಯಾ.

ಸರ್ಕಾರಿ ಶಾಲೆಯ ಸಭಾಂಗಣ

ಮರ್ಲೋನಾ ಎಂದರೆ ಮಾಕ್ರ್ಸ್ ಮತ್ತು ಲೆನಿನ್ ಎಂದರ್ಥ. ಎಡಪಂಥೀಯರಾದ ಇವರ ತಂದೆ ತಾಯಿ ಇಟ್ಟ ಹೆಸರು ಮಾಕ್ರ್ಸ್ ಮತ್ತು ಲೆನಿನ್ ಎರಡನ್ನೂ ಸೇರಿ ಮರ್ಲೀನಾ ಅಂತ. ಪೂರ್ವ ದೆಹಲಿಯಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಸೋಲುಂಡ ಆಮ್ ಆದ್ಮಿ ಪಕ್ಷದ ಅತಿಶಿ ಮರ್ಲೀನಾರವರು ತಮ್ಮ ಫೇಸ್ ಬುಕ್ ನಲ್ಲಿ ಅಲ್ಲಿನ ಅತ್ಯುತ್ತಮ ಸರ್ಕಾರಿ ಶಾಲೆಗಳ, ಲೈಬ್ರರಿಗಳ, ಸಭಾಂಗಣ, ಊಟದ ಆವರಣ, ಸೆಮಿನಾರ್ ಹಾಲ್ ಮುಂತಾದವುಗಳ ಚಿತ್ರಗಳನ್ನು ಅಪ್ ಲೋಡ್ ಮಾಡಿದ್ದಾರೆ.

ಸೋಲಿನ ನಂತರದ ಸಭೆಯಲ್ಲಿ ಅತಿಶಿ

ಜೊತೆಗೆ ಹೈ ಕ್ಲಾಸ್ ಹಾಸ್ಪಿಟಲ್ ಗಳ ಚಿತ್ರ, ಇನ್ನು ನಿರ್ಮಾಣ ಹಂತದಲ್ಲಿರುವ ಹಾಸ್ಪಿಟಲ್ ಗಳ ಚಿತ್ರಗಳನ್ನು ಹರಿಬಿಟ್ಟಿದ್ದಾರೆ. ಇದನ್ನು ನೋಡಿದರೆ ನಿಜಕ್ಕೂ ಅವರ ಮೇಲೆ ಅಭಿಮಾನ ಮೂಡುತ್ತದೆ. ಆ ಚಿತ್ರಗಳನ್ನು ನೀವೂ ನೋಡಿ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...