Homeಮುಖಪುಟಶೇ.0.04ರಷ್ಟಿರುವ ಕುಬೇರರಿಗೆ ಸಂಪತ್ತು ತೆರಿಗೆ ವಿಧಿಸುವ ಮೂಲಕ ಭಾರತದಲ್ಲಿ ಆರ್ಥಿಕ ಅಸಮಾನತೆ ನಿವಾರಿಸಬಹುದು: ವರದಿ

ಶೇ.0.04ರಷ್ಟಿರುವ ಕುಬೇರರಿಗೆ ಸಂಪತ್ತು ತೆರಿಗೆ ವಿಧಿಸುವ ಮೂಲಕ ಭಾರತದಲ್ಲಿ ಆರ್ಥಿಕ ಅಸಮಾನತೆ ನಿವಾರಿಸಬಹುದು: ವರದಿ

- Advertisement -
- Advertisement -

ಭಾರತದಲ್ಲಿ ಹೆಚ್ಚುತ್ತಿರುವ ಆದಾಯ ಮತ್ತು ಸಂಪತ್ತು ಅಸಮಾನತೆಯನ್ನು ಅತ್ಯಂತ ಶ್ರೀಮಂತರಿಗೆ ಸಮಗ್ರ ಮತ್ತು ಪ್ರಗತಿಪರ ಸಂಪತ್ತು ತೆರಿಗೆಯನ್ನು ವಿಧಿಸುವ ಮೂಲಕ ನಿವಾರಿಸಬಹುದು ಎಂದು ‘World Inequality Lab’ (ಡಬ್ಲ್ಯುಐಎಲ್) ಶುಕ್ರವಾರ ಪ್ರಕಟಿಸಿರುವ ವರದಿಯು ಸಲಹೆ ನೀಡಿದೆ.

ವರದಿಯು ಮಾ.19ರಂದು ಪ್ರಕಟಗೊಂಡಿದ್ದ ಡಬ್ಲ್ಯುಐಎಲ್‌ನ ‘ಭಾರತದಲ್ಲಿ ಆದಾಯ ಮತ್ತು ಸಂಪತ್ತಿನ ಅಸಮಾನತೆ 1922-2023: ಬಿಲಿಯನೇರ್ ರಾಜ್‌ನ ಹೆಚ್ಚಳ’ ಅಧ್ಯಯನದ ಮುಂದುವರೆದ ಭಾಗವಾಗಿದೆ.
ಅರ್ಥಶಾಸ್ತ್ರಜ್ಞರಾದ ನಿತಿನ್ ಕುಮಾರ್ ಭಾರ್ತಿ,‌ ಲುಕಾಸ್ ಚಾನ್ಸೆಲ್, ಥಾಮಸ್ ಪಿಕೆಟಿ ಮತ್ತು ಅನ್ಮೋಲ್ ಸೋಮಾಂಚಿ ಅವರು ಬರೆದಿದ್ದ ಅಧ್ಯಯನ ವರದಿಯು ಭಾರತದ ಜನಸಂಖ್ಯೆಯ ಶೇ.1ರಷ್ಟು ಅತ್ಯಂತ ಶ್ರೀಮಂತರ ಆದಾಯ ಮತ್ತು ಸಂಪತ್ತಿನ ಪಾಲು ದೇಶದ ಇತಿಹಾಸದಲ್ಲಿಯೇ ಅತ್ಯಧಿಕವಾಗಿದೆ ಎನ್ನುವುದನ್ನು ತೋರಿಸಿತ್ತು.

ಭಾರತದ ಜನಸಂಖ್ಯೆಯ ಶೇ. 1ರಷ್ಟಿರುವ ಅತೀ ಶ್ರೀಮಂತರು 2022-23ರಲ್ಲಿ ದೇಶದ ಆದಾಯದ ಶೇ. 22.6ರಷ್ಟು ಮತ್ತು ಸಂಪತ್ತಿನ ಶೇ. 40.1ರಷ್ಟು ಹೊಂದಿದ್ದಾರೆ ಎಂದಿದ್ದ ಅಧ್ಯಯನವು, 2014-15 ಮತ್ತು 2022-23ರ ನಡುವೆ ಉನ್ನತ ಮಟ್ಟದ ಅಸಮಾನತೆಯ ಏರಿಕೆಯು ಸಂಪತ್ತಿನ ಕೇಂದ್ರೀಕರಣದ ವಿಷಯದಲ್ಲಿ ಎದ್ದು ಕಾಣುತ್ತಿದೆ ಹೇಳಿದೆ.

ತಮ್ಮ ಅಧ್ಯಯನದಲ್ಲಿ ಕಂಡು ಕೊಂಡಿದ್ದ ಅಂಶಗಳನ್ನು ಆಧರಿಸಿ ಅದೇ ಲೇಖಕರು ಈಗ ತಮ್ಮ ನೂತನ ವರದಿಯಲ್ಲಿ ‘ಕೋಟ್ಯಧಿಪತಿ ತೆರಿಗೆ’ಯನ್ನು ಪ್ರಸ್ತಾಪಿಸಿದ್ದಾರೆ. 2022-23ರಲ್ಲಿ 10 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಸಂಪತ್ತನ್ನು ಹೊಂದಿದವರಿಗೆ ಮಾತ್ರ ಈ ತೆರಿಗೆಯನ್ನು ವಿಧಿಸುವಂತೆಯೂ ಅವರು ಪ್ರಸ್ತಾಪಿಸಿದ್ದಾರೆ.

“ನಮ್ಮ ಇತ್ತೀಚಿನ ಅಂದಾಜಿನ ಪ್ರಕಾರ, ದೇಶದ ಜನಸಂಖ್ಯೆ ಕೇವಲ 0.04 ಶೇ. ವಯಸ್ಕರು ಮಾತ್ರ ಈ ಮಿತಿಗಿಂತ ಮೇಲೆ ಇದ್ದಾರೆ” ಎಂದು ವರದಿ ಹೇಳಿದೆ.

ಲೇಖಕರು ತೆರಿಗೆ ಪ್ಯಾಕೇಜ್‌ನ ಮೂರು ಪರ್ಯಾಯ ರೂಪಗಳನ್ನು ಪ್ರಸ್ತಾಪಿಸಿದ್ದಾರೆ

  • 10 ಕೋಟಿರೂ.ಗೂ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ಶೇ.2ರಷ್ಟು ವಾರ್ಷಿಕ ತೆರಿಗೆ ಮತ್ತು 10 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳ ಮೇಲೆ ಶೇ.33ರಷ್ಟು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದನ್ನು ಪ್ರಸ್ತಾವಿಸಲಾಗಿದೆ. ನಮ್ಮ ಅಂದಾಜಿನಂತೆ ಇದೊಂದೇ ಜಿಡಿಪಿಯ ಶೇ.2.7ರಷ್ಟು ಆದಾಯವನ್ನು ಸೃಷ್ಟಿಸುತ್ತದೆ ಎಂದು ವರದಿಯು ಹೇಳಿದೆ.
  • 100 ಕೋಟಿ ರೂ.ಗೂ ಹೆಚ್ಚಿನ ನಿವ್ವಳ ಮೌಲ್ಯವನ್ನು ಹೊಂದಿರುವ ವ್ಯಕ್ತಿಗಳಿಗೆ ತೆರಿಗೆ ಶೇ.4ಕ್ಕೆ ಏರಿಕೆ ಮತ್ತು 10 ಕೋಟಿ ರೂ.ಗಳಿಂದ 100 ಕೋಟಿ ರೂ.ವರೆಗಿನ ಮೌಲ್ಯದ ಆಸ್ತಿಗಳ ಮೇಲೆ ಶೇ.33ರಷ್ಟು ಪಿತ್ರಾರ್ಜಿತ ತೆರಿಗೆಯನ್ನು ವಿಧಿಸುವುದು. 100 ಕೋಟಿ ರೂ.ಗೂ ಅಧಿಕ ಮೌಲ್ಯದ ಆಸ್ತಿಗಳಿಗೆ ಪಿತ್ರಾರ್ಜಿತ ತೆರಿಗೆಯನ್ನು ಶೇ.45ಕ್ಕೆ ಹೆಚ್ಚಿಸುವುದು. ವರದಿಯ ಪ್ರಕಾರ ಈ ತೆರಿಗೆಯಿಂದ ಆದಾಯವು ಭಾರತದ ಜಿಡಿಪಿಯ ಶೇ.4.6ರಷ್ಟಾಗುತ್ತದೆ.
  • ಇಲ್ಲಿ ಸಂಪತ್ತಿನ ಮಿತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆದರೆ, ಸಂಪತ್ತು ತೆರಿಗೆಯನ್ನು ಶೇ.3ರಿಂದ ಶೇ.5ರವರೆಗೆ ಮತ್ತು ಪಿತ್ರಾರ್ಜಿತ ತೆರಿಗೆಯನ್ನು ಶೇ.45ರಿಂದ ಶೇ.55ರವರೆಗೆ ಹೆಚ್ಚಿಸುವುದನ್ನು ಪ್ರಸ್ತಾಪಿಸಲಾಗಿದೆ. ಇದರಿಂದ ತೆರಿಗೆ ಆದಾಯವು ಜಿಡಿಪಿಯ ಶೇ.6.1ಕ್ಕೆ ಹೆಚ್ಚಬಹುದು ಎಂದು ಲೇಖಕರು ವರದಿಯಲ್ಲಿ ಹೇಳಿದ್ದಾರೆ.

ಹೀಗೆ, ಸಂಗ್ರಹವಾಗುವ ಆದಾಯವನ್ನು ಬಡವರಿಗೆ ನೇರ ನಗದು ವರ್ಗಾವಣೆ, ಆರೋಗ್ಯ, ಶಿಕ್ಷಣ ಮತ್ತು ಇತರ ಸಾಮಾಜಿಕ ಕ್ಷೇತ್ರಗಳಲ್ಲಿ “ಮರು-ವಿತರಣಾ ನೀತಿಗಳಲ್ಲಿ” ಹೂಡಿಕೆ ಮಾಡಬಹುದು.

ಸರ್ಕಾರಿ ವೆಚ್ಚಗಳ ಅಂದಾಜುಗಳೊಂದಿಗೆ ಸಂಭಾವ್ಯ ತೆರಿಗೆ ಆದಾಯದ ನಮ್ಮ ಅಂದಾಜುಗಳನ್ನು ಒಟ್ಟುಗೂಡಿಸಿ, ಇಲ್ಲಿ ಪ್ರಸ್ತಾಪಿಸಲಾದ ರೀತಿಯ ಸಂಪತ್ತು ತೆರಿಗೆ ಪ್ಯಾಕೇಜ್‌ಗಳು ಸಾಮಾಜಿಕ ವಲಯದ ವೆಚ್ಚವನ್ನು ವಿಸ್ತರಿಸಲು ಗಮನಾರ್ಹವಾದ ಹಣಕಾಸಿನ ಸ್ಥಳವನ್ನು ಸೃಷ್ಟಿಸುತ್ತವೆ ಎಂದು ನಾವು ಕಂಡುಕೊಂಡಿದ್ದೇವೆ ಎಂದು ವರದಿ ಹೇಳಿದೆ.

Courtesy: scroll.in

ಇದನ್ನೂ ಓದಿ : ಅದಾನಿ ಕಲ್ಲಿದ್ದಲು ವಿವಾದ: 21 ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಸಿಜೆಐ ಡಿವೈ ಚಂದ್ರಚೂಡ್‌ಗೆ ಪತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಆಪರೇಷನ್ ಡೆಮಾಲಿಶ್‌ಮೆಂಟ್ ಅಡಿಯಲ್ಲಿ 200ಕ್ಕೂ ಹೆಚ್ಚು ನಕ್ಸಲ್ ಸ್ಮಾರಕಗಳನ್ನು ನೆಲಸಮಗೊಳಿಸಿದ ಭದ್ರತಾ ಪಡೆಗಳು 

ನವದೆಹಲಿ: ನಕ್ಸಲ್ ಚಟುವಟಿಕೆಗಳ ವಿರುದ್ಧ ತೀವ್ರಗೊಂಡ ಕಾರ್ಯಾಚರಣೆ ನಿರ್ಣಾಯಕ ಹಂತವನ್ನು ಪ್ರವೇಶಿಸಿರುವುದಾಗಿ ಭದ್ರತಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.  ಆಪರೇಷನ್ ಡೆಮಾಲಿಶ್‌ಮೆಂಟ್ ಎಂದು ಕರೆಯಲ್ಪಡುವ ಇತ್ತೀಚಿನ ಕಾರ್ಯಾಚರಣೆಯ ಅಡಿಯಲ್ಲಿ ನಕ್ಸಲ್ ಕಾರ್ಯಕರ್ತರು ತಮ್ಮ ನಾಯಕರನ್ನು ಸ್ಮರಿಸಲು ಮತ್ತು...

ಮುಸ್ಲಿಮರಿಗೆ ನೀಡಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಕ್ರಮ ಪ್ರಶ್ನಿಸಿ ಬಾಂಬೆ ಹೈಕೋರ್ಟ್ ಗೆ ಅರ್ಜಿ 

ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಮುಸ್ಲಿಮರಿಗೆ 5% ಮೀಸಲಾತಿಯನ್ನು ರದ್ದುಗೊಳಿಸಿದ ಮಹಾರಾಷ್ಟ್ರ ಸರ್ಕಾರದ ಇತ್ತೀಚಿನ ನಿರ್ಧಾರವನ್ನು ಮುಂಬೈ ಮೂಲದ ವಕೀಲರು ಬಾಂಬೆ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ. ವಕೀಲ ಸೈಯದ್ ಎಜಾಜ್ ಅಬ್ಬಾಸ್ ನಖ್ವಿ ಅವರು ವಕೀಲ...

ವಿಧಾನಸಭಾ ಚುನಾವಣೆಯಲ್ಲಿ ನೇಮಮ್ ನಿಂದ ಸ್ಪರ್ಧಿಸುವ ಬಯಕೆಯನ್ನು ಪುನರುಚ್ಚರಿಸಿದ ಬಿಜೆಪಿ ಕೇರಳ ಅಧ್ಯಕ್ಷ ರಾಜೀವ್ ಚಂದ್ರಶೇಖರ್ 

ತಿರುವನಂತಪುರಂ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಕೇರಳದ ನೇಮಮ್ ಕ್ಷೇತ್ರದಿಂದ ಸ್ಪರ್ಧಿಸುವ ತಮ್ಮ ಇಚ್ಛೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಭಾನುವಾರ ಪುನರುಚ್ಚರಿಸಿದ್ದಾರೆ. ನೇಮಮ್‌ನಲ್ಲಿ ಬಿಜೆಪಿಯ ಚುನಾವಣಾ ಗೋಡೆ ಬರಹ ಅಭಿಯಾನಕ್ಕೆ ಚಾಲನೆ ನೀಡಿದ ನಂತರ...

ಯುವತಿಯನ್ನು ಬಂಧಿಸಿಟ್ಟು ಚಿತ್ರಹಿಂಸೆ : ಆರೋಪಿಯ ಬಂಧನ

ಯುವಕನೋರ್ವ ತನ್ನ ಲಿವ್-ಇನ್ ಸಂಗಾತಿಯಾದ 19 ವರ್ಷದ ಯುವತಿಯನ್ನು ಕೊಠಡಿಯಲ್ಲಿ ಬಂಧಿಸಿಟ್ಟು ಚಿತ್ರಹಿಂಸೆ ನೀಡಿರುವ ಘಟನೆ ಗುರುಗಾಂವ್‌ನ ಸೆಕ್ಟರ್ 69ರಲ್ಲಿ ನಡೆದಿದೆ. ಆರೋಪಿಯನ್ನು ದೆಹಲಿಯ ನರೇಲಾ ನಿವಾಸಿ 19 ವರ್ಷದ ಶಿವಂ ಎಂದು ಗುರುತಿಸಲಾಗಿದೆ....

ಕೋಝಿಕ್ಕೋಡ್‌: ಆಹಾರ ಸೇವಿಸಿ, ಬಿಲ್ ಪಾವತಿಸಲು ನಿರಾಕರಿಸಿದ ಮೂವರ ತಂಡದಿಂದ ರೆಸ್ಟೋರೆಂಟ್ ಧ್ವಂಸ

ಕೋಝಿಕ್ಕೋಡ್ (ಕೇರಳ): ಆಹಾರ ಸೇವಿಸಿ, ಹಣ ನೀಡಲು ನಿರಾಕರಿಸಿದ ಮೂವರು ಸದಸ್ಯರ ಗುಂಪೊಂದು ಬಿಲ್ ಕೇಳಿದ್ದಕ್ಕೆ ರೆಸ್ಟೋರೆಂಟ್ ಅನ್ನು ಧ್ವಂಸಗೊಳಿಸಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಒಬ್ಬ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು,...

ಲೈಂಗಿಕ ದೌರ್ಜನ್ಯ ಆರೋಪ : ಸ್ವಾಮಿ ಅವಿಮುಕ್ತೇಶ್ವರಾನಂದ ವಿರುದ್ಧ ಎಫ್‌ಐಆರ್ ದಾಖಲಿಸಲು ಕೋರ್ಟ್ ಆದೇಶ

ಇಬ್ಬರು ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಜ್ಯೋತಿಷ್ ಪೀಠದ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಮತ್ತು ಅವರ ಶಿಷ್ಯ ಮುಕುಂದಾನಂದ ಬ್ರಹ್ಮಚಾರಿ ವಿರುದ್ಧ ಎಫ್‌ಐಆರ್ ದಾಖಲಿಸಲು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ವಿಶೇಷ ಪೋಕ್ಸೋ ನ್ಯಾಯಾಲಯ...

ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಶಿಕ್ಷಕಿಯಿಂದ ಹಲ್ಲೆ

ಶಾಲಾ ಶೌಚಾಲಯ ತೊಳೆಯಲು ನಿರಾಕರಿಸಿದ ದಲಿತ ಬಾಲಕಿ ಮೇಲೆ ಹಲ್ಲೆ ನಡೆಸಿದ ಶಿಕ್ಷಕಿ, ಆಕೆಯ ಹೆಸರನ್ನು ದಾಖಲಾತಿಯಿಂದ ತೆಗೆದು ಹಾಕುವುದಾಗಿ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಉತ್ತರ ಪ್ರದೇಶದ ಅಲೀಗಢ ಜಿಲ್ಲೆಯ...

ಚಿಕ್ಕಮಗಳೂರಿನಲ್ಲಿ ಒಂದೇ ವಾರದಲ್ಲಿ ಕಾಡಾನೆ ದಾಳಿಗೆ ಎರಡನೇ ಸಾವು; ಆನೆ ಸೆರೆ; ಸರ್ಕಾರದ ವಿರುದ್ಧ ಸ್ಥಳೀಯರ ಪ್ರತಿಭಟನೆ

ಚಿಕ್ಕಮಗಳೂರಿನ ವ್ಯಾಪ್ತಿಯಲ್ಲಿ ದಿನದಿಂದ ದಿನಕ್ಕೆ ಮಾನವ ಹಾಗೂ ಪ್ರಾಣಿಗಳ ಸಂಘರ್ಷ ಹೆಚ್ಚಾಗುತ್ತಿದ್ದು, ಒಂದೇ ವಾರದಲ್ಲಿ ಕಾಡಾನೆ ದಾಳಿಯಿಂದ ಇಬ್ಬರು ಮೃತಪಟ್ಟಿದ್ದಾರೆ. ಭಾನುವಾರ ಬೆಳಗ್ಗೆ ತೋಟದ ಕೆಲಸಕ್ಕೆ ತೆರಳಿದಾಗ ಹೊಸಪೇಟೆ ಮೂಲದ ಬೋರಮ್ಮ(34), ಕಾಡಾನೆ...

ಬಿಜೆಪಿ ಸೇರ್ಪಡೆಯಾದ ಅಸ್ಸಾಂ ಕಾಂಗ್ರೆಸ್ ಮಾಜಿ ಅಧ್ಯಕ್ಷ ಭೂಪೇನ್ ಬೋರಾ

ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿ ಅಸ್ಸಾಂ ಕಾಂಗ್ರೆಸ್‌ನ ಮಾಜಿ ರಾಜ್ಯಾಧ್ಯಕ್ಷ ಭೂಪೇನ್ ಬೋರಾ ಭಾನುವಾರ (ಫೆ.22) ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬೋರಾ ಫೆ. 16ರಂದು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಪಕ್ಷದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆ...

ದೆಹಲಿಯಲ್ಲಿ ಭಯೋತ್ಪಾದನಾ ಸಂಚು ಆರೋಪ: ಬಾಂಗ್ಲಾದೇಶಿ ಪ್ರಜೆಗಳು ಸೇರಿ ಎಂಟು ಮಂದಿ ಬಂಧನ

ನವದೆಹಲಿ: ಪಾಕಿಸ್ತಾನದ ಐಎಸ್‌ಐ ಮತ್ತು ಬಾಂಗ್ಲಾದೇಶ ಮೂಲದ ಉಗ್ರಗಾಮಿ ಸಂಘಟನೆಗಳ ಸೂಚನೆಯ ಮೇರೆಗೆ ದೆಹಲಿಯಲ್ಲಿ ಪ್ರಮುಖ ಭಯೋತ್ಪಾದಕ ಪಿತೂರಿ ನಡೆಸಲು ಸಂಚು ರೂಪಿಸಿದ್ದ ಆರೋಪದ ಮೇಲೆ ಎಂಟು ಶಂಕಿತರನ್ನು ಬಂಧಿಸಲಾಗಿದೆ ಎಂದು ಪೊಲೀಸ್...