HomeದಿಟನಾಗರFACT CHECK : ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸಿದ ದೃಶ್ಯ ಕೇರಳದ್ದಲ್ಲ

FACT CHECK : ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸಿದ ದೃಶ್ಯ ಕೇರಳದ್ದಲ್ಲ

- Advertisement -
- Advertisement -

ರಸ್ತೆಯ ಮೇಲೆ ಭಾರತದ ತ್ರಿವರ್ಣ ಧ್ವಜದ ಚಿತ್ರವನ್ನು ರಚಿಸಿ ಅದರ ಮೇಲೆ ವಾಹನ ಚಲಾಯಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

“ವಾಹನ ಸಂಖ್ಯೆ. ಕೆಎಲ್‌-12 ವಯನಾಡ್ ಕೇರಳದಿಂದ ಈ ವೀಡಿಯೊವನ್ನು ವೀಕ್ಷಿಸಿ” ಎಂಬ ಬರಹದೊಂದಿಗೆ ವಿಡಿಯೋವನ್ನು ಫೇಸ್‌ಬುಕ್‌ ಮತ್ತು ವಾಟ್ಸಾಪ್‌ಗಳಲ್ಲಿ ಹಂಚಿಕೊಳ್ಳಲಾಗಿದೆ. ಇನ್ನು ಕೆಲವರು ತಮಿಳುನಾಡಿನ ತಂಜಾವೂರಿನಲ್ಲಿ ಈ ಘಟನೆ ನಡೆದಿದೆ ಎಂದೂ ಹೇಳಿಕೊಂಡಿದ್ದಾರೆ.

ಒಟ್ಟು 4 ನಿಮಿಷ 50 ಸೆಕೆಂಡ್ ಅವಧಿಯ ವೈರಲ್ ವಿಡಿಯೋದಲ್ಲಿ, 3 ನಿಮಿಷ 8 ಸೆಕೆಂಡ್‌ನಿಂದ ಕೆಲವರು ಕೈಯಲ್ಲಿ ಪಾಕಿಸ್ತಾನದ ಧ್ವಜ ಹಿಡಿದು ಘೋಷಣೆ ಕೂಗುವುದನ್ನು ನೋಡಬಹುದು.

ಫ್ಯಾಕ್ಟ್‌ಚೆಕ್ : ಕೇರಳದ ವಯನಾಡಿನಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಅವಮಾನಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ. ಅಂತಹ ಯಾವುದೇ ಘಟನೆ ನಿಜವಾಗಿಯೂ ನಡೆದಿದ್ದರೆ, ಮಾಧ್ಯಮಗಳಲ್ಲಿ ಅದು ಸುದ್ದಿಯಾಗುತ್ತಿತ್ತು. ಆದರೆ, ಅಂತಹ ಯಾವುದೇ ವರದಿಗಳು ನಮಗೆ ಕಂಡು ಬಂದಿಲ್ಲ.

ಅಲ್ಲದೆ, ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ದೃಶ್ಯಗಳು ಕೇರಳಕ್ಕೆ ಸಂಬಂಧಿಸಿದ್ದಲ್ಲ ಎಂದು ತಿಳಿದು ಬಂದಿದೆ. ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿ ಎಂಬ ಅನೇಕ ಸುಳಿವುಗಳನ್ನು ವಿಡಿಯೋದಲ್ಲೇ ನೋಡಬಹುದು.

ಇದು ಪಾಕಿಸ್ತಾನದ ಕರಾಚಿಗೆ ಸಂಬಂಧಿಸಿದ ವಿಡಿಯೋ ಎಂದು ‘ಇಂಡಿಯಾ ಟುಡೇ‘ ವರದಿ ಮಾಡಿದೆ.  ವಿಡಿಯೋದಲ್ಲಿ ಕಾಣುವ ವಾಹನವೊಂದರ ಮೇಲೆ ಬರೆಯಲಾಗಿರುವ ‘ಹುನಾರ್ ಫೌಂಡೇಷನ್’ ಎಂಬ ಹೆಸರು ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಘಟನೆಗೆ ಸಂಬಂಧಿಸಿದ್ದಾಗಿದೆ. ವಿಡಿಯೋದಲ್ಲಿ ಕಾಣಿಸುವ ಆಟೋ ರಿಕ್ಷಾಗಳು ತಮಿಳುನಾಡಿನ ರಿಕ್ಷಾಗಳಿಗೆ ಹೋಲಿಕೆಯಾಗುತ್ತಿಲ್ಲ. ವಿಡಿಯೋದಲ್ಲಿ ಕಾಣಿಸುವ ಬೀದಿ ಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುವುದು ದೃಢಪಟ್ಟಿದೆ ಎಂದು ಇಂಡಿಯಾ ಟುಡೇ ಹೇಳಿದೆ.

ವೈರಲ್ ವಿಡಿಯೋದಲ್ಲಿ 3 ನಿಮಿಷ 38 ಸೆಕೆಂಡ್ ಅವಧಿಯಲ್ಲಿ ‘ದಿ ಹುನಾರ್ ಫೌಂಡೇಶನ್’ ಎಂದು ಬರೆದಿರುವ ಬಿಳಿ ವ್ಯಾನ್ ಹಾದು ಹೋಗುವುದನ್ನು ಕಾಣಬಹುದು. ದಿ ಹುನಾರ್ ಫೌಂಡೇಶನ್‌ನ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಮಾಹಿತಿಯ ಪ್ರಕಾರ, ಸಂಸ್ಥೆಯು ಕರಾಚಿಯಲ್ಲಿದೆ ಮತ್ತು ಇದು ಪಾಕಿಸ್ತಾನದ ಯುವಕರಿಗೆ ಕೌಶಲ್ಯ ಅಭಿವೃದ್ಧಿ, ತಾಂತ್ರಿಕ ತರಬೇತಿಯನ್ನು ನೀಡುವ ಸಂಸ್ಥೆಯಾಗಿದೆ. ಇದು ಕರಾಚಿಯ ದೆಹಲಿ ಮರ್ಕೆಂಟೈಲ್ ಸೊಸೈಟಿ ಪ್ರದೇಶದಲ್ಲಿ ತನ್ನ ಮೊದಲ ಬ್ಯಾಚ್ ಅನ್ನು ಪ್ರಾರಂಭಿಸಿತು. ಕರಾಚಿ ಮೂಲದ ಪ್ರಿಂಟಿಂಗ್ ಅಂಗಡಿಯ ಫೇಸ್‌ಬುಕ್ ಪುಟದಲ್ಲಿ ಇದೇ ರೀತಿಯ ವಾಹನಗಳ ಚಿತ್ರಗಳನ್ನು ಕಾಣಬಹುದು.

ವಿಡಿಯೋದಲ್ಲಿ 3 ನಿಮಿಷ 44 ಸೆಕೆಂಡ್‌ಗಳಲ್ಲಿ ಹಳದಿ ಬಣ್ಣದ ನಂಬರ್ ಪ್ಲೇಟ್ ಹೊಂದಿರುವ ಕಾರನ್ನು ಗುರುತಿಸಬಹುದು. ಅದರ ಮೇಲೆ ‘BFK-625’ಎಂದು ಬರೆಯಲಾಗಿದೆ. ಗೂಗಲ್ ಮೂಲಕ ಸರ್ಚ್ ಮಾಡಿದಾಗ ಅಂತಹ ನಂಬರ್ ಪ್ಲೇಟ್‌ಗಳು ಪಾಕಿಸ್ತಾನದ ಸಿಂಧ್ ಪ್ರಾಂತ್ಯಕ್ಕೆ ಸಂಬಂಧಿಸಿವೆ ಎಂದು ಮಾಹಿತಿ ಲಭ್ಯವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಭಾರತದ ಧ್ವಜವನ್ನು ಅವಮಾನಿಸುವ ಪಾಕಿಸ್ತಾನದ ದೃಶ್ಯಗಳನ್ನು ಕೇರಳದ ವಯನಾಡ್‌ನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ವಿಡಿಯೋದಲ್ಲಿ ಕಾಣಿಸುವ ರಿಕ್ಷಾಗಳು ಕೇರಳ ಅಥವಾ ತಮಿಳುನಾಡಿನ ರಿಕ್ಷಾಗಳಿಗೆ ಹೋಲಿಕೆಯಾಗುವುದಿಲ್ಲ. ವಿಡಿಯೋದಲ್ಲಿ ಕಾಣಿಸುವ ಬೀದಿ ಬದಿಯ ಅಂಗಡಿಗಳ ಕೆಲವು ಹೆಸರುಗಳನ್ನು ಪರಿಶೀಲಿಸಿದಾಗ, ಅವು ಕರಾಚಿಯ ತಾರಿಕ್ ರಸ್ತೆಯಲ್ಲಿರುವ ಅಂಗಡಿಗಳು ಎಂಬುವುದು ದೃಢಪಟ್ಟಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಇದನ್ನೂ ಓದಿ : FACT CHECK : ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಗೆ ಸರ್ಕಾರಿ ರಜೆ ಇಲ್ಲ ಎಂಬ ಅಮಿತ್ ಶಾ ಹೇಳಿಕೆ ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಿಯಾಂಕ ಗಾಂಧಿ

ಗಾಜಾದಲ್ಲಿ ಇಸ್ರೇಲ್‌ನ ‘ಜನಾಂಗೀಯ ಕೃತ್ಯಗಳು’ ನಿಲ್ಲಬೇಕು: ಪ್ರಿಯಾಂಕಾ ಗಾಂಧಿ

0
ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ಮಿಲಿಟರಿ ದಾಳಿಯನ್ನು ಸ್ವೀಕಾರಾರ್ಹವಲ್ಲ ಮತ್ತು ಹತ್ಯಾಕಾಂಡ ಎಂದು ಹೇಳಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ಇದನ್ನು ಜಗತ್ತಿನ ಪ್ರತಿಯೊಂದು ಸರ್ಕಾರ ಖಂಡಿಸಬೇಕು ಎಂದು ಶುಕ್ರವಾರ ಕರೆ...