Homeಅಂಕಣಗಳುಚಂದ್ರೇಗೌಡರ ಕಟ್ಟೆಪುರಾಣ: ವಾಟಿಸ್ಸೆ ಉವಾಚ - ಎಡೂರಪ್ಪ ರಿಯಲಿ ಗ್ರೇಟು!

ಚಂದ್ರೇಗೌಡರ ಕಟ್ಟೆಪುರಾಣ: ವಾಟಿಸ್ಸೆ ಉವಾಚ – ಎಡೂರಪ್ಪ ರಿಯಲಿ ಗ್ರೇಟು!

- Advertisement -
- Advertisement -

‘ಎಡೂರಪ್ಪನ್ನ ಇಳುಸ್ತರಂತೆ ನಿಜವೇನ್ಲ’ ಎಂದಳು ಜುಮ್ಮಿ.
‘ನಿನಿಗ್ಯಾರಕ್ಕ ಹೇಳಿದೊರು’ ಎಂದ ವಾಟಿಸ್ಸೆ.
‘ಯಲ್ಲ ಅಂಗಂತ ಮಾತಾಡತಿದ್ರು ಕಂಡ್ಳ’.
‘ಈ ಟೈಮಲ್ಲಿ ಎಡೂರಪ್ಪನ್ನ ಮುಟ್ಟಕ್ಕಾದತೆ ಯಾವೊ ಪೋಲಿ ಬಡ್ಡೆತ್ತವು ಅಂಗಂದವೆ’ ಎಂದ ಉಗ್ರಿ.
‘ಪೋಲಿ ಬಡ್ಡೆತ್ತವಲ್ಲ ಕಣೊ, ಎಡೂರಪ್ಪ ಮಂತ್ರಿ ಮಾಡ್ತನೆ ಅಂತ ಕಾಯ್ಕಂಡಿದ್ದವಲ್ಲಾ ಅವ್ಯಲ್ಲ ಸೇರಿ ಹಟ್ಟಿರೊ ಗುಲ್ಲು’.
‘ಈ ಟೈಮಲ್ಲಿ ಮಂತ್ರಿ ಮಾಡಿದ್ರೆ ಏನು ಮಾಡ್ಯವೂ’.
‘ಏನು ಮಾಡ್ತರೆ ಅಂತ ಕೇಳ್ತಿಯಾ, ಈಗಾಗ್ಲೆ ಕರೋನದ ಕತೆ ಮುಗುಸ್ತಿವಿ ಅಂತ ಕಿಟ್ಟಲ್ಲಿ ಮೆಡಿಸನ್ನಲಿ ಮಾಸಕಲ್ಲಿ ಮುಕ್ಕತ ಕುಂತಿದ್ದರಂತೆ ಕಣೊ ಉಗ್ರೀ’.
‘ಕೊರೋನಾದಲ್ಲೂ ದುಡ್ಡು ಹ್ವಡಿತರಾ’.
‘ವಾಜಪೇಯಿ ಪ್ರಧಾನಿಯಾಗಿದ್ದಾಗ, ಶವದ ಪೆಟಿಗಲೇ ಹಣ ವಡದಿದ್ರು, ಇನ್ನ ಇದರಲ್ಲಿ ಬುಡ್ತರೇನಕ್ಕ’.
‘ಓಹೊಹೊ, ಕೊರೋನಾದ್ರಲ್ಲಿ ತಿನ್ನದ ನೋಡಕ್ಕಾಗದೆ, ನಮ್ಮನ್ನ ಮಂತ್ರಿ ಮಾಡಿ ಅಂತ ಕೇಳ್ತಾಯಿದ್ದರೆ’.
‘ಊ ಕಣೊ ಉಗ್ರಿ, ಆ ಯತ್ನಾಳ್ ಕತ್ತಿ ಇಂತ ಘಟಾನು ಘಟಿ ನಾಯಕರು, ನಾವು ಮಂತ್ರಿಯಾಗದೆ ಇದ್ರೆ ಕರ್ನಾಟಕ ಉದ್ದಾರಾಗದಿಲ್ಲ ಅನ್ನಂಗೆ ಮಾತಾಡ್ತ ಅವುರೆ’.
‘ಯತ್ನಾಳ ಕತ್ತಿ ತಿರುಗುಸ್ತಯಿದನೆ’.
‘ಯತ್ನಾಳ ಅಂದ್ರೆ ಬಸವನಗೌಡ ಪಾಟೀಲ ಯತ್ನಾಳ ಅಂತ ಬಿಜಾಪುರದ ನಿಜಾಮಿದ್ದಂಗವುನೆ, ನೋಡಕ್ಕೆ ಸಾಬರಂಗವುನೆ ಆದ್ರೆ ಲಿಂಗಾಯಿತ್ರೊನು. ಅವುನಿಗೆ ಸಾಬರ ಕಂಡ್ರಾಗದಿಲ್ಲ’.
‘ಯಾಕೇ?’.
‘ಬಿಜಾಪುರದಲ್ಲಿ ಇಜಾರದೋರು ಹಜಾರಮಂದಿ ಅಂತ ಸಾಬರ ಜಾಸ್ತಿಯಲವೆ. ಅದಕ್ಕೆ ಅವುರ ಕಂಡ್ರೆ ಕ್ಯಂಡ ಕಾರತನೆ ಕಣಕ್ಕ’.
‘ಅದೆ ಯಾಕೆ ಅಂದೆ’.
‘ಯಾಕೆ ಅಂದ್ರೆ, ಈ ಬಿಜೆಪಿಲಿ ಯಾರು ಜಾಸ್ತಿ ಸಾಬರನ್ನ ಬೈತರೊ ಅವುರು ನಮ್ಮ ಪಾರ್ಟಿಗೆ ಲಗತ್ತಾದ ಲೀಡ್ರು ಅಂತ ತಿಳಕಂಡರಂತೆ, ಅದು ಗೊತ್ತಾಗಿ ಆ ಅನಂತಕುಮಾರ ಹೆಗಡೆ ಅನ್ನೊ ಮೂರ್ಖ, ರೇಣುಕಾಚಾರಿ ಅನ್ನೊ ಕಾಮುಕ, ಈ ಯತ್ನಾಳ್ ಅನ್ನೊ ಯಬಡ ಇವ್ರ್ಯಲ್ಲ ಸಾಬರನ ಬಾಯಿಗೆ ಬಂದಂತೆ ಬೈತರೆ ಕಣಕ್ಕ’.
‘ಅಂಗ್ಯಲ್ಲ ಬೈಬಾರ್ದು ಕಂಡ್ಳ. ಬೋದುದ್ದು ಬರ್ಲಾಯ್ತು. ಬೈಸಿಗಂಡೋನು ಬಸವಣ್ಣಾದ ಅಂತ ಗಾದೆ ಮಾತೆ ಅದೆ’.
‘ಅದಿವುನಿಗೆ ಗೊತ್ತಾಗಬೇಕಲ್ಲ ಹೇಳು. ಆ ಬಿಜಾಪುರದ ಸಾಬರು ಬ್ಯಾರೆ ಕಡೆ ಸಾಬರತರ ಅಲ್ಲ ಬಸವ ಜಯಂತಿ ಮ್ಯರವಣಿಗೆಗೊ ಬಂದರಂತೆ’.
‘ಮತ್ತೆ ಅಂತ ಜಾಗದ ಯಮ್ಮೆಲ್ಲೆ ಆಗಿ ಹಿಂಗೆ ಮಾತಾಡಕ್ಕೆ ನಾಚಗೆ ಆಗಬೇಕು ಕಣೊ ಅವುನಿಗೆ’ ಎಂದ ಉಗ್ರಿ.
‘ನಾಚಿಕೆ ಅನ್ನೊ ಪದ ಬಿಜೆಪಿ ಡಿಕ್ಸ್‍ನರಿಲೆ ಇಲ್ಲ ಕಣೊ ಉಗ್ರಿ. ಆ ಎ.ಕೆ.ಸುಬ್ಬಯ್ಯ, ಶಿವಪ್ಪ ಅವುರ್ಯಲ್ಲ ಅಧ್ಯಕ್ಷರಾಗಿದ್ದಾಗ ನಾಚಿಕೆ ಒಂದಿಷ್ಟು ಆ ಪಾರ್ಟಿಲಿತ್ತು. ಅಮ್ಯಾಲೆ ಇದ್ಯಾಕೊ ಸರಿಯಾಗದಿಲ್ಲ ಅಂತ ಅದ ಬುಟ್ರು. ಹಿಂಗಾದ್ರು’.
‘ಯತ್ನಾಳ ಮದ್ಲಂಗಿರಲಿಲ್ಲ ಅಲವೆ’ ಎಂದ ಉಗ್ರಿ.
‘ಇರಲಿಲ್ಲ ಎತ್ತರಕ್ಕೆ ಹ್ಯಾಂಡಸಮ್ಮಾಗಿದ್ದ. ಅದ ನೋಡಿ ವಾಜಪೇಯಿ ವಳ್ಳೆ ಮನ್ಸ ಅಂತ ತಿಳಕಂಡು ಮಂತ್ರಿನೂ ಮಾಡಿದ್ರು. ಆದ್ರಿವತ್ತು ಇವುನ್ಯಂಥಾ ಮಂತ್ರಿಯಾಗಿದ್ದ ಅಂತ ಅವುನೇ ಹೇಳಿ ಕಂಡು ತಿರುಗಂಗಾಗ್ಯದೆ’.
‘ಎಡೂರಪ್ಪ ಇವುನ್ನ ಮಂತ್ರಿ ಮಾಡ್ಯನೆ’.
‘ಡವುಟು ಕಣೊ ಉಗ್ರಿ. ಯಾಕಂದ್ರೆ ಈ ಯತ್ನಾಳ ಮದ್ಲಿಂದ ಎಡೂರಪ್ಪನ್ನ ವಿರೋದಿಸಿಕೊಂಡು ಬಂದೊನು. ಮದ್ಲು ಎಡೂರಪ್ಪ ಮುಖ್ಯಮಂತ್ರಿಯಾದಾಗ, ಇದೇ ಯತ್ನಾಳ ಶೋಭ ಕರಂದ್ಲಾಜೆಯಿಂದ ಎಡೂರಪ್ಪ ಹಾಳಾಯ್ತ ಅವುರೆ, ಮೊದ್ಲು ಅವುಳ ಸವಾಸ ಬುಡಬೇಕು ಅಂದಿದ್ದ’.
‘ನಿಜವೇನ್ಲ ನೀನೇಳದು’ ಎಂದಳು ಜುಮ್ಮಿ.
‘ನಾನ್ಯಾಕಕ್ಕ ಸುಳ್ಳೇಳ್ಳಿ, ಇನ್ನ ಒಂದು ಮಾತಂದಿದ್ದ ಅದು ಹೆಚ್ಚು ಪ್ರಚಾರ ತಗಳ್ಳಿಲ್ಲ. ಏನಪ್ಪ ಅಂದ್ರೆ ಈ ಬಿಜೆಪಿಯಿಂದ ಲಿಂಗಾಯಿತ ಧರ್ಮ ಹಾಳಾಯ್ತದೆ. ಅದರಿಂದ ಅಂದ್ರೆ ಬಿಜೆಪಿವಳಗಿಂದ ಲಿಂಗಾಯಿತ ಧರ್ಮ ಬ್ಯಾರೆ ಮಾಡಬೇಕು ಅಂದಿದ್ದ’.
‘ಮತ್ತೆ ಅಂಥೋನ್ಯಾಕೆ ಹಿಂಗಾಗ್ಯವುನೆ’.
‘ಪಾರ್ಟಿ ಅಂಗೆ ಮಾಡುಸ್ತವೆ ಕಣೊ. ಈಗವುನ್ನ ಬಿಜೆಪಿಯಿಂದ ತಗದಾಕ್ಲಿ ಪ್ಲೇಟ ಬದಲಾಸ್ತೆಯಿದ್ರು ಕೇಳು’.
‘ನೀನೇಳದು ನಿಜ ಕಣೊ. ಈಗಾಗ್ಲೆ ವಿಶ್ವನಾಥನ ಮಾತೇ ಬದಲಾಗ್ಯದೆ’.
‘ಅದೋಗ್ಲಿ ಕಣೊ, ಇದೇ ಎಡೂರಪ್ಪ ಕೆಜೆಪಿ ಮಾಡಿದಾಗ ಇನ್ನ ಬಿಜೆಪಿ ಸವಾಸಕ್ಕೆ ಹೋಗದಿಲ್ಲ ಅಂದಿದ್ದ’.
‘ನೋಡು ಮತ್ತೆ’.
‘ಲ್ಯಕ್ಕ ಹಾಕು ಅದೇ ಇವತ್ತು ಬಿಜೆಪಿ ಲೀಡ್ರು ಮುಖ್ಯಮಂತ್ರಿ ಇದಕೇನೇಳನ’.
‘ಏನೇ ಅದ್ರು ಪಾಪ ಎಡೂರಪ್ಪ ಭಾಳ ಅನುಭವಿಸಿ ಬುಟ್ಟ ಕಂಡ್ಳ’.
‘ನಿಜ ಕಣಕ್ಕ ಮುಖ್ಯಮಂತ್ರಿ ಕುರ್ಚಿ ಮ್ಯಾಲೆ ಕುಂತಗಂಡು ಇವುನಷ್ಟು ಗೋಳಾಡಿದೋರೆ ಇಲ್ಲ. ಇವತ್ತಿಗೂ ಅವುನ ಮಕ ನೋಡಿದ್ರೆ ಯಾರಿಗೆ ಬೇಕಪ್ಪ ಆ ಸ್ಥಾನ ಅನ್ನಂಗೆ ಕಾಣ್ತನೆ’.
‘ಆದ್ರು ಅವುನ ಸಾಧನೆ ಯಾರೂ ಮಾಡಕ್ಕಾಗದಿಲ್ಲ ಕಣೋ ವಾಟಿಸ್ಸೆ’.
‘ಡೆವಲಪ್‍ಮೆಂಟ್ ವರಕಲ್ಲಾ’.
‘ವರಕಲ್ಲ ಕಣೊ ಅವುನು ಮದ್ಲಿಗೆ ಕುಮಾರಸ್ವಾಮಿಯ ಮುಖ್ಯಮಂತ್ರಿ ಮಾಡಿದ. ಅಮ್ಯಾಲೆ ತಾನಾದ. ಆ ಶೋಭ ಕರಂದ್ಲಾಜೆ ಕಾಟ ತಾಳಕ್ಕಾಗದೆ ಇಳಿಸಿ ಸದಾನಂದಗೌಡಾಗಂಗಾಯ್ತು. ಅಮ್ಯಾಲೆ ಜಗದೀಶ್ ಶೆಟ್ಟರ್‍ನ ಮಾಡಿದ. ಬಿಜೆಪಿ ಬುಟ್ಟೊಗಿ ಕೆಜೆಪಿ ಮಾಡಿ ಸಿದ್ದರಾಮಯ್ಯನ್ನ ಮುಖ್ಯಮಂತ್ರಿ ಮಾಡಿದ. ತಿರಗ ಬಿಜೆಪಿಗೆ ಬಂದು ತಾನು ಆದ. ಮೂರು ದಿನ ಬುಟಗಂಡು ಕುಮಾರಸ್ವಾಮಿ ಆದ. ಅವುನ್ನ ಅತ್ತಗೆ ಉಂಡಿಸಿ ತಿರುಗ ತಾನೇ ಮುಖ್ಯಮಂತ್ರಿಯಾದ. ಇಂತ ಸಾಧನೆಯ ಯಾವ ರಾಜಕಾರಣಿ ಮಾಡ್ಯವುನೆ ತೋರು’.
‘ಇಲ್ಲ ಕಣೊ ಉಗ್ರಿ, ಆ ವಿಷಯದಲ್ಲಿ ಎಡೂರಪ್ಪ ಗ್ರೇಟ್’.
‘ಈಗ್ಯಾರ್ನು ಮಾಡ್ತನೆ’.
‘ಬಿಜೆಪಿನೆ ಉಡಾಯಿಸ್ತನೆ’.
‘!?’


ಇದನ್ನು ಓದಿ: ಕವನ | ಅಂತಿಮ ವಲಸೆಯ ಮುನ್ನ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...