Homeಕರ್ನಾಟಕಎಲ್ಲಿಂದಲೋ ಬಂದವರು ಈ ಪ್ರೇತಮತಗಳು

ಎಲ್ಲಿಂದಲೋ ಬಂದವರು ಈ ಪ್ರೇತಮತಗಳು

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗದು. ಸರಿ ಒಪ್ಪೋಣ. ಆದರೆ ನಿರ್ದಿಷ್ಟ ಪಕ್ಷವೊಂದಕ್ಕೆ ಮೊದಲೇ ಮತ ಚಲಾಯಿಸಿದ ಮತಯಂತ್ರಗಳನ್ನು ತಂದು ತುರುಕಲು ಸಾಧ್ಯವೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ.

- Advertisement -
- Advertisement -

|ಜಿ.ಆರ್. ವಿದ್ಯಾರಣ್ಯ |

ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆ ಫಲಿತಾಂಶ ಹೊರಬಂದು ಗೆದ್ದವರು ಸಂಭ್ರಮಿಸಿದ್ದು ಮತ್ತು ಸೋತವರು ಅತ್ತಿದ್ದು ಮುಗಿದಿದೆ.ಎಲ್ಲರೂ ತಮ್ಮ ತಮ್ಮ ಬುದ್ಧಿಶಕ್ತಿಗನುಸಾರವಾಗಿ ಸೋಲಿನ ವಿಶ್ಲೇಷಣೆ ಮಾಡುತ್ತಿದ್ದಾರೆ. ನನಗೆ ಬುದ್ಧಿ ಸ್ವಲ್ಪ ಕಡಿಮೆ ಇರುವುದರಿಂದ ಸರಕಾರಿ ಅಂಕಿ-ಅಂಶಗಳತ್ತ ನನ್ನ ದೃಷ್ಟಿ ಹಾಯಿಸಿದೆ. ಅದರಲ್ಲಿ ಕಂಡಂತೆ, ನನಗೆ ತಿಳಿದುಬಂದ ಮಾಹಿತಿ ಏನೆಂದರೆ.

ಚುನಾವಣೆ ದಿನ 18.4.2019 ರಂದು ಮೈಸೂರು-ಕೊಡಗು ಕ್ಷೇತ್ರದಲ್ಲಿ ಇದ್ದ ಒಟ್ಟು ಮತದಾರರ ಸಂಖ್ಯೆ ಪುರುಷರು: 9,44,580, ಮಹಿಳೆಯರು: 9,49,649 ತೃತೀಯ ಲಿಂಗಿಯರು: 150 ಹಾಗೂ ಒಟ್ಟು ಮತದಾರರು: 18,94,379. ಇವರ ಪೈಕಿ ಮತ ಚಲಾಯಿಸಿದ ಪುರುಷರು: 6,61,278 ಮಹಿಳೆಯರು: 6,43,014 ಇತರರು: 0 ಹಾಗೂ ಒಟ್ಟು ಮತ ಹಾಕಿದವರು:13,04,297. ಅಂದರೆ ಮತದಾನ ನಡೆದದ್ದು 68.85%.

ಮತ ಎಣಿಕೆಯ ದಿನ 23.05.2019ರಂದು ಎಣಿಕೆಯಾದ ಮತಗಳು: 13,12,478. ಅಂಚೆ ಮತಗಳು: 5,625 ಮತ್ತು ಅಸ್ವೀಕೃತವಾದ ಮತಗಳು 62. ಓಟ್ಟು ಎಣಿಕೆಯಾದ ಮತಗಳು 13,18,103. ಇದಲ್ಲದೆ 7 ಮತಗಳು ಟೆಂಡರ್ಡ್ ಮತಗಳಾಗಿದ್ದು ಇವು ಎಣಿಕೆಯ ವ್ಯಾಪ್ತಿಗೆ ಬಂದಿಲ್ಲ.

13,04,297 ಜನರು ಮತಹಾಕಿದ್ದು ಮತ್ತು 5,625 ಅಂಚೆ ಮತಗಳನ್ನು ಸೇರಿಸಿದರೆ ಆಗುವುದು ಕೇವಲ 13,09,822. ಅಂದರೆ ಈ ಅಧಿಕ 8,200ಕ್ಕೂ ಹೆಚ್ಚು ಪ್ರೇತ ಮತಗಳು ಎಲ್ಲಿಂದ ಬಂದವು ಎಂಬುದು ನನಗೆ ಯಕ್ಷಪ್ರಶ್ನೆಯಾಗಿದೆ. ಈ ರೀತಿಯ ಅವಾಂತರ ಪ್ರತಿಯೊಂದು ಕ್ಷೇತ್ರದಲ್ಲೂ ನಡೆದಿದ್ದು, ಹಲವಾರು ಕಡೆ ಈ ಮತಗಳ ನಡುವಿನ ಅಂತರ ಸೋಲು-ಗೆಲುವಿನ ಅಂತರಕ್ಕಿಂತಲೂ ಹೆಚ್ಚಾಗಿದೆ ಎಂಬ ಕೂಗು ಕೇಳಿ ಬರುತ್ತಿದೆ.

ವೋಟ್ ಆಗಿದ್ದಕ್ಕಿಂತ ಕೌಂಟ್ ಆದ ಮತಗಳೇ ಹೆಚ್ಚು!

ಇವಿಎಂಗಳನ್ನು ಟ್ಯಾಂಪರಿಂಗ್ ಮಾಡಲಾಗದು. ಸರಿ ಒಪ್ಪೋಣ. ಆದರೆ ನಿರ್ದಿಷ್ಟ ಪಕ್ಷವೊಂದಕ್ಕೆ ಮೊದಲೇ ಮತ ಚಲಾಯಿಸಿದ ಮತಯಂತ್ರಗಳನ್ನು ತಂದು ತುರುಕಲು ಸಾಧ್ಯವೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುತ್ತಿದೆ. ಈಗ ನ್ಯೂಸ್‍ಕ್ಲಿಕ್ ಪೋರ್ಟಲ್ ಮಾಡಿರುವ ತನಿಖೆ ಈ ಪ್ರಶ್ನೆಗಳನ್ನು ಎತ್ತಿದೆ ಮತ್ತು ಈ ಕುರಿತು ಧ್ವನಿ ಎತ್ತಿರುವ ಮೂವರು ಮಾಜಿ ಚುನಾವಣಾ ಆಯುಕ್ತರು ಆಯೋಗ ಈ ಕುರಿತು ಗೊಂದಲಗಳನ್ನು ಕೂಡಲೇ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೌಂಟಿಂಗ್‍ನಲ್ಲಿ ಹೆಚ್ಚಾಗಿದ್ದು ಹೇಗೆ?

ಈ ಪ್ರಶ್ನೆಯನ್ನು ಪ್ರಜಾಪ್ರಭುತ್ವ ಗೌರವಿಸುವ ಎಲ್ಲರೂ ಕೇಳಲೇಬೇಕಾಗಿದೆ. ಉತ್ತರಪ್ರದೇಶ, ಬಿಹಾರ್, ದೆಹಲಿ ಮತ್ತು ಮಧ್ಯಪ್ರದೇಶದ ಹಲವಾರು ಕ್ಷೇತ್ರಗಳಲ್ಲಿ ಈ ವ್ಯತ್ಯಾಸ ಕಂಡು ಬಂದಿದೆ. ಅವುಗಳಲ್ಲಿ ಎಂಟು ಕ್ಷೇತ್ರಗಳ ತನಿಖೆ ಮಾಡಿದಾಗ ಇದು ಸತ್ಯ ಎಂಬುದು ಸಾಬೀತಾಗಿದೆ. ಅದರಲ್ಲಿ ಪ್ರತಿಷ್ಠಿತ ಎನಿಸಿದ್ದ ಪಾಟ್ನಾ ಸಾಹೀಬ್, ಜೆಹಲ್ನಾಬಾದ್ ಮತ್ತು ಬೇಗುಸರಾಯ್ ಕ್ಷೇತ್ರಗಳೂ ಸೇರಿವೆ. ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತಗಳು ಹೆಚ್ಚಿವೆ, ಒಂದು ಕಡೆ ವೋಟ್ ಆದ ಮತಗಳಿಗಿಂತ ಕೌಂಟ್ ಆದ ಮತ ಕಡಿಮೆಯೂ ಇದೆ. ಈ ವ್ಯತ್ಯಾಸವೇ ಗೋಲ್‍ಮಾಲ್ ನಡೆದಿರಬಹುದು ಎಂಬ ದಟ್ಟ ಸಂಶಯಕ್ಕೆ ಕಾರಣವಾಗಿದೆ.

ಈ ಎಂಟು ಕ್ಷೇತ್ರಗಳ ಪೈಕಿ ಕನಿಷ್ಠ ಒಂದರಲ್ಲಿ, ಗೆಲುವಿನ ಅಂತರಕ್ಕಿಂತ ಮತ ವ್ಯತ್ಯಾಸ (ಕೌಂಟ್ ಆದ ಮತಗಳು ಮೈನಸ್ ವೋಟ್ ಆದ ಮತಗಳು)ವೇ ದೊಡ್ಡದಿದ್ದು ಬಹುಪಾಲು ಕ್ಷೇತ್ರಗಳಲ್ಲಿ ಇದು ಸಂಭವಿಸಿರಬಹುದು ಎಂದು ತನಿಖೆ ಉಲ್ಲೇಖಿಸಿದೆ. ಮೇ 23ರ ಏಣಿಕೆಗೂ ಮೊದಲು ಅಕ್ರಮವಾಗಿ ಎವಿಎಂಗಳನ್ನು ಸಾಗಿಸಿದ ವರದಿ ಮತ್ತು ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ಇಲ್ಲೇನೋ ಮಸಲತ್ತು ನಡೆದಿದೆ ಎಂಬ ಸಂಶಯವನ್ನು ಈ ತನಿಖೆ ಇನ್ನಷ್ಟು ಗಟ್ಟಿಗೊಳಿಸಿದೆ.

ಮಾಜಿ ಆಯುಕ್ತರ ಆಗ್ರಹ

ಮೂವರು ಮಾಜಿ ಆಯುಕ್ತರು ಇದರ ವಿರುದ್ಧ ಧ್ವನಿ ಎತ್ತಿ ಆಯೋಗ ಕೂಡಲೇ ಈ ಸಂಶಯಗಳನ್ನು ನಿವಾರಿಸಬೇಕು ಎಂದು ಒತ್ತಾಯಿಸಿದ್ದಾರೆ. 2011-12ರಲ್ಲಿ ಆಯುಕ್ತರಾಗಿದ್ದ ಖುರೇಶಿ, ಇದಕ್ಕೆ ಆಯೋಗದ ಬಳಿ ಕಾರಣಗಳಿರಬಹುದು. ಆದರೆ ಈ ವಿಷಯವಾಗಿ ಯಾರಾದರೂ ಕೋರ್ಟಿಗೆ ಹೋಗೋದು ಒಳ್ಳೆಯದು ಎಂದು ಹೇಳಿದ್ದಾರೆ.

2006-09ರಲ್ಲಿ ಆಯುಕ್ತರಾಗಿದ್ದ ಗೋಪಾಲಸ್ವಾಮಿ, 2015ರಲ್ಲಿ ಆಯುಕ್ತರಾಗಿದ್ದ ಎಚ್.ಎಸ್ ಬ್ರಹ್ಮ ಕೂಡ ಇದೇ ತರಹದ ಪ್ರಶ್ನೆ ಎತ್ತುವ ಮೂಲಕ ಆಯೋಗದ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ.

ಬೆಚ್ಚಿ ಬೀಳಿಸುವ ವ್ಯತ್ಯಾಸಗಳು!

ಪಾಟ್ನಾ ಸಾಹೀಬ್ ಕ್ಷೇತ್ರದಲ್ಲಿ ಬಿಜೆಪಿಯಿಂದ ರವಿಶಂಕರ ಪ್ರಸಾದ್ ಮತ್ತು ಕಾಂಗ್ರೆಸ್‍ನಿಂದ ಶತ್ರುಘ್ನ ಸಿನ್ಹಾ ಸ್ಪರ್ಧಿಸಿದ್ದರು. ಅಲ್ಲಿ 20, 51, 905 ಅರ್ಹ ಮತದಾರರಿದ್ದು, ಮೇ 18ರಂದು ಶೇ 46.34ರಷ್ಟು ಮತದಾನವಾಗಿತ್ತು.

ಆದರೆ ಮೇ 23ರಂದು ಏಣಿಕೆ ಮಾಡಿದಾಗ ಅಂಚೆಮತ ಸೇರಿ ರವಿಶಂಕರ ಪ್ರಸಾದ್‍ಗೆ 6,07,506, ಶತ್ರುಘ್ನ ಸಿನ್ಹಾಗೆ 3,22, 849 ಮತ್ತು ನೋಟಾ ಸೇರಿ ಇತರೆ 45,709 ಮತ ಲಭಿಸಿವೆ.

ಅಂದರೆ ಆಯೋಗದ ಪ್ರಕಾರ 9,82,285 ಮತಗಳು ದಾಖಲಾಗಿವೆ. ಶೇಕಡಾವಾರು ಮತದಾನದ ಪ್ರಕಾರ, 9,50,852 ಮತಗಳು ಹಾಕಲ್ಪಟ್ಟಿವೆ. ಈ ಹೆಚ್ಚುವರಿ 31,433 ಮತಗಳು ಎಲ್ಲಿಂದ ಬಂದವು?
ಕನ್ನಯ್ಯಕುಮಾರ್ ಸ್ಪರ್ಧಿಸಿದ್ದ ಬೇಗುಸ್‍ರಾಯ್, ಆಪ್‍ನ ಅತಿಶಿ ಸ್ಪರ್ಧಿಸಿದ್ದ ಪೂರ್ವ ದೆಹಲಿ ಕ್ಷೇತ್ರಗಳಲ್ಲೂ ಈ ಮತ ವ್ಯತ್ಯಾಸ ಕಂಡುಬರುತ್ತಿದೆ.

ಇದು ಕೇವಲ ಅಂಕಗಣಿತದ ತಪ್ಪಾಗಿರಲಾರದು. ಏಕೆಂದರೆ ದೇಶದ ನಾನಾ ಕಡೆಯಿಂದ ಈ ಸಂಶಯಗಳು ಕೇಳಿ ಬಂದಿವೆ. ರಾಜ್ಯದ ಪ್ರತಿಷ್ಠಿತ ಕಲಬುರ್ಗಿ ಕ್ಷೇತ್ರದಲ್ಲೂ ಅಪರಾ ತಪರಾ ಕಂಡುಬಂದಿದೆ.

ವಿರೋಧ ಪಕ್ಷಗಳು ಮತಯಂತ್ರಗಳ ಬಗ್ಗೆ ತಮ್ಮ ಅಪನಂಬಿಕೆ ಮೊದಲಿನಿಂದಲೂ ವ್ಯಕ್ತ ಪಡಿಸುತ್ತಲೇ ಇದ್ದಾರೆ. ಅದನ್ನು ಚುನಾವಣಾ ಆಯೋಗವಾಗಲೀ ಸರ್ವೊಚ್ಚ ನ್ಯಾಯಾಲಯವಾಗಲಿ ಗಂಭೀರವಾಗಿ ಪರಿಗಣಿಸಿಲ್ಲ. 2009ರಲ್ಲಿ ಯುಪಿಎ ಸರಕಾರ ಮತ್ತೊಮ್ಮೆ ಅಸ್ತಿತ್ವಕ್ಕೆ ಬಂದನಂತರ ಚುನಾವಣಾ ಮತಯಂತ್ರಗಳ ಬಗ್ಗೆ ಬಿಜೆಪಿ ನಾಯಕರಾದ ಜಿ.ವಿ.ಎಲ್. ನರಸಿಂಹ ರಾವ್ ಒಂದು ಪುಸ್ತಕವನ್ನೇ ಬರೆದರು; ಅದಕ್ಕೆ ಮುನ್ನುಡಿ ಶ್ರೀ ಅಡ್ವಾನಿಯವರದಾಗಿತ್ತು. ಇನ್ನೋರ್ವ ನಾಯಕ ಸುಬ್ರಹ್ಮಣ್ಯ ಸ್ವಾಮಿಯವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿ ಮತಯಂತ್ರದ ಜೊತೆಗೆ ವಿವಿಪ್ಯಾಟ್ ಅಳವಡಿಸಬೇಕು ಎಂಬ ಆದೇಶವನ್ನೂ ಪಡೆದರು. ಆದರೆ ಅವೆರಡನ್ನೂ ಸಂಪೂರ್ಣವಾಗಿ ಹೋಲಿಕೆ ಮಾಡಿ ಅಥವಾ 50% ಆದರೂ ಹೋಲಿಸಿ ಎಂಬ ಕೂಗು ಸರ್ವೋಚ್ಚ ನ್ಯಾಯಾಲಯಕ್ಕೆ ಕೇಳಿಸಲಿಲ್ಲವೆಂಬುದು ನಮ್ಮ ದೌರ್ಭಾಗ್ಯವೇ ಸರಿ.

ಈಗಲಾದರೂ ಚುನಾವಣಾ ಆಯೋಗ ಈ ವ್ಯತ್ಯಾಸಗಳಿಗೆ ಕಾರಣ ನೀಡಲೇಬೇಕು. ಹೆಚ್ಚುವರಿ ಮತಗಳು ಹೇಗೆ ಬಂದವು ಎಂಬುದನ್ನೂ ವಿವರಿಸಬೇಕು.

ಜನರ ಮತವನ್ನು ಅನ್ಯಾಯವಾಗಿ ಯಾರೋ ಕದ್ದು ಗೆದ್ದಿರಬಹುದು ಆದರೆ ದೇಶಕ್ಕೆ ಬೇಕಾದ ಆಡಳಿತ ನೀಡುವಲ್ಲಿ ವಿಫಲವಾಗಿ, ಕೇವಲ ಜನರನ್ನು ವಿಂಗಡಿಸುವ ಪ್ರಯತ್ನ ಮುಂದುವರೆದರೆ ಗೆದ್ದು ಸೋತವರು ಯಾರೇ ಆಗಿರಬಹುದು ಆದರೆ ಇದಕ್ಕೆ ನಮ್ಮ ದೇಶ ಬಹು ದೊಡ್ಡ ಬೆಲೆ ಮುಂಬರುವ ದಿನಗಳಲ್ಲಿ ತೆರಬೇಕಾಗುತ್ತದೆ. ಹಾಗಾಗದಿರಲಿ ಎಂದು ಆಶಿಸೋಣವೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...