Homeಅಂಕಣಗಳುಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

ಎಲೆಮರೆ-43: ಪರಿಸರ ಪ್ರಜ್ಞೆ, ಅತ್ಯಾಧುನಿಕ ತಾಂತ್ರಿಕತೆಯಿಂದ ದೇಶದ ಗಮನಸೆಳೆದ ಗೊಜನೂರು ಸರಕಾರಿ ಪ್ರೌಢಶಾಲೆ

‘ಬೆಸ್ಟ ಇಕೋ-ಕ್ಲಬ್’ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆಗೆ ಇದೆ.

- Advertisement -
- Advertisement -

ಶಾಲಾ ಆವರಣವನ್ನು ’ಪರಿಸರ’ಮಯಗೊಳಿಸುವುದಲ್ಲದೆ, ನಿಸರ್ಗಪ್ರೇರಿತ ಕಲಿಕೆಯ ಕಾರಣಕ್ಕೆ ಈ ಪ್ರೌಢಶಾಲೆ ಜಿಲ್ಲಾಮಟ್ಟದಲ್ಲಿ ಆಯ್ಕೆಯಾಗುತ್ತದೆ. ರಾಜ್ಯಮಟ್ಟದ ಸ್ಪರ್ಧೆಯಲ್ಲೂ `ರಾಷ್ಟ್ರಮಟ್ಟಕ್ಕೆ’ ಆರಿಸಲಾಗುತ್ತದೆ. 2019 ರ ಡಿಸೆಂಬರ್ 20 ರಂದು ಗುಜರಾತಿನ ಕೇವಡಿಯಾದಲ್ಲಿ ಕೇಂದ್ರ ಪರಿಸರ ಅರಣ್ಯ ಮತ್ತು ಹವಮಾನ ಬದಲಾವಣೆ ಸಚಿವಾಲಯವು ಆಯೋಜಿಸಿದ್ದ ವಾರ್ಷಿಕ ಸಮ್ಮೇಳನದಲ್ಲಿ ದೇಶದ ಆರು ಪ್ರೌಢಶಾಲೆಗಳು ‘ಬೆಸ್ಟ ಇಕೋ-ಕ್ಲಬ್ ಪ್ರಶಸ್ತಿ’ಪಡೆಯುತ್ತವೆ.

ಅದರಲ್ಲಿ ಈ ಶಾಲೆಯೂ ಆಯ್ಕೆಯಾಗುತ್ತದೆ. ಇದರೊಂದಿಗೆ ಈ ಪ್ರಶಸ್ತಿ ಪಡೆದ ಕರ್ನಾಟಕದ ಮೊದಲ ಶಾಲೆಯೆಂಬ ಗರಿ ಮೂಡುತ್ತದೆ. ಅದುವೆ ಗದಗ ಜಿಲ್ಲೆ, ಲಕ್ಷ್ಮೇಶ್ವರ ತಾಲೂಕಿನ ಗೊಜನೂರ ಸರಕಾರಿ ಪೌಢಶಾಲೆ. ಈ ಹಂತಕ್ಕೆ ಶಾಲೆಯನ್ನು ರೂಪಿಸಲು ಕಳೆದ ಹತ್ತು ವರ್ಷದಿಂದ ತನ್ನನ್ನು ತಾನು ತೇದುಕೊಂಡ ಮುಖ್ಯ ಶಿಕ್ಷಕ ರವಿ ಬಸವಣ್ಣೆಪ್ಪ ಬೆಂಚಳ್ಳಿಯವರು.

ಮೂಲತಃ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ವಾಸನ ಗ್ರಾಮದ ರವಿ ಬಿ. ಬೆಂಚಳ್ಳಿಯವರು 2009-10 ರಲ್ಲಿ ಆಯ್ಕೆಯಾಗಿ ಸರಕಾರಿ ಪ್ರೌಢಶಾಲೆ ಗೊಜನೂರದಲ್ಲಿ ಮುಖ್ಯ ಶಿಕ್ಷಕರಾಗಿ ಬರುತ್ತಾರೆ. ಕಳೆದ ಹತ್ತು ವರ್ಷದಲ್ಲಿ ರವಿಯವರು ಗೊಜನೂರು ಹೈಸ್ಕೂಲಿನ ಚಹರೆಯನ್ನೆ ಬದಲಿಸಿದರು. ಈ ಶಾಲೆಯ ಪರಿಸರವನ್ನು ಪುಟ್ಟ ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಂತೆ ಮೇಲ್ದರ್ಜೆಗೇರಿಸಿದರು. ಆರಂಭಕ್ಕೆ ಶಾಲೆಯನ್ನು ತಮ್ಮ ಗ್ರಾಮ ಪಂಚಾಯ್ತಿಯಲ್ಲಿ, ನಂತರ ತಾಲೂಕಿನಲ್ಲಿ, ಜಿಲ್ಲೆಯಲ್ಲಿ, ರಾಜ್ಯದಲ್ಲಿ ಕಡೆಯದಾಗಿ ದೇಶವೇ ಗಮನಿಸುವಂತೆ ರೂಪಿಸಿದರು.

ಈ ಪಯಣದಲ್ಲಿ ಅವರೊಂದಿಗೆ ಗ್ರಾಮದ ಪಾಲಕ-ಪೋಷಕರು, ಗಣ್ಯರು, ಜನಪ್ರತಿನಿಧಿಗಳು, ಸಹಶಿಕ್ಷಕರು, ಸಿಬ್ಬಂದಿಯವರು, ಸಮುದಾಯ ಹಾಗೂ ವಿದ್ಯಾರ್ಥಿಗಳು, ಇದೆಲ್ಲಕ್ಕೂ ಸಹಕರಿಸಿ ಪ್ರೋತ್ಸಾಹಿಸಿದ ಇಲಾಖೆ ಅಧಿಕಾರಿಗಳು ಜೊತೆಯಾದರು. ಇದೆಲ್ಲದರ ಕೂಡುಶಕ್ತಿಯ ಫಲವಾಗಿ ನಾನಾ ವಿಭಾಗಗಳಲ್ಲಿ ಈ ತನಕ ಗೊಜನೂರು ಪ್ರೌಢಶಾಲೆಗೆ ಎಂಟು ಪ್ರಶಸ್ತಿಗಳು, ಮುಖ್ಯ ಶಿಕ್ಷಕರಾದ ರವಿ ಅವರಿಗೆ ಹನ್ನೆರಡು ಪ್ರಶಸ್ತಿಗಳು, ಇತರೆ ಶಿಕ್ಷಕ ವರ್ಗಕ್ಕೆ ಏಳು ಪ್ರಶಸ್ತಿಗಳು ಲಬಿಸಿವೆ.

ಹಾಗಾದರೆ ಈ ಪ್ರೌಢಶಾಲೆ ರೂಪಿಸಿದ ಮಾದರಿ ಯಾವುದು?

ಮುಖ್ಯವಾಗಿ ಶಾಲೆಯ ಶೈಕ್ಷಣಿಕ ವಾತಾವರಣವನ್ನು ಸಮುದಾಯ ಸಹಭಾಗಿತ್ವದಲ್ಲಿ ಕ್ರಿಯಾಶೀಲಗೊಳಿಸಲಾಗಿದೆ. ಶಾಲಾ ಆವರಣದಲ್ಲಿ ಸಾವಯವ ಕೃಷಿ, ಮಳೆಕೊಯ್ಲು, ವನಮಹೋತ್ಸವ, ಸಾಮಾಜಿಕ ಜಾಗೃತಿ, ಗ್ರಾಮ-ಮರ-ಕೆರೆ ದತ್ತು ಪಡೆಯುವಿಕೆ ಹಾಗೂ ಸ್ವಚ್ಚತೆ, ಪ್ಲಾಸ್ಟಿಕ್ ರದ್ದು ಜಾಗೃತಿ, ಶಾಲಾ ಕೈತೋಟ, ನೀರು-ಶಕ್ತಿ ಉಳಿತಾಯ, ಕಸ ವಿಲೇವಾರಿ, ಶ್ರಮದಾನ ಆರೋಗ್ಯ ರಕ್ಷಣೆ, ಪರಿಸರ ಹಾಗೂ ಆರೋಗ್ಯದ ಕುರಿತು ದಿನಾಚರಣೆಗಳಲ್ಲಿ ಊರನ್ನು ಒಳಗೊಳ್ಳುವಿಕೆ, ನವೀನ ಸೃಜನಾತ್ಮಕ ಕಲಿಕಾ ಚಟುವಟುಕೆಗಳು ಹಾಗೂ ಗುಣಾತ್ಮಕ ಕಲಿಕಾ ವಾತಾವರಣ ಹೀಗೆ ಇಡೀ ಶಾಲೆಯನ್ನು ಒಂದು ನಿರಂತರ ಪ್ರಯೋಗಶಾಲೆಯನ್ನಾಗಿ ರೂಪಿಸಲಾಗಿದೆ.

ಶಾಲೆಯಲ್ಲಿ ಸಾವಯವ ಕೃಷಿ ಪದ್ಧತಿಯ ಎರೆಹುಳು ಗೊಬ್ಬರ ಘಟಕ, ಎರೆಜಲ, ಜೀವಾಮೃತ, ಜೀವಸಾರ ಘಟಕ, ಪಂಚಗವ್ಯ, ಪೈಪ್ ಕಾಂಪೋಸ್ಟ್ ಇತ್ಯಾದಿಗಳನ್ನು ನೆಲೆಗೊಳಿಸಲಾಗಿದೆ. ಶಾಲಾ ಅಂಗಳದಲ್ಲಿ ಅಂತರ್ಜಲ ಬಳಕೆ ಸಹಕಾರಿಗೆ ಇಂಗುಗುಂಡಿ, ನೀರಿನ ಸಂಗ್ರಹಕ್ಕೆ ಮಳೆನೀರು ಸಂಗ್ರಹ ತೊಟ್ಟಿ, ಶುದ್ಧ ಕುಡಿಯುವ ನೀರಿಗೆ ಮಳೆನೀರು ಕೊಯ್ಲು ನೀರಿನ ಪುನರ್ಬಳಕೆ ಮಾಡಿ ಸಸ್ಯಪಾಲನೆ ಮಾಡಲಾಗುತ್ತದೆ. ಶಕ್ತಿ ಹಾಗೂ ಇಂಧನ ಉಳಿತಾಯಕ್ಕಾಗಿ ಸೋಲಾರ್ ವ್ಯವಸ್ಥೆ, ಎಲ್.ಇ.ಡಿ. ಬಲ್ಬ್ ಬಳಕೆ ಮಾಡಲಾಗಿದೆ. ಜೈವಿಕ ಸಸ್ಯಗಳಾದ ಹೊಂಗೆ, ಸುಬಾಬುಲ್, ಬೇವು, ನೀಲಗಿರಿ ಇತ್ಯಾದಿ ಸಸ್ಯಗಳನ್ನು ಬೆಳೆಸಲಾಗಿದೆ.

ತಾಂತ್ರಿಕವಾಗಿ ಅತ್ಯುತ್ತಮ ಗುಣಮಟ್ಟದ ಸೌಲಭ್ಯವಿರುವ ‘ಗಣಕಯಂತ್ರ ಮಾಹಿತಿ ತಂತ್ರಜ್ಞಾನ ಕೊಠಡಿ’ಯನ್ನು ‘ರಾಜೀವಶೆಟ್ಟಿ ಚಾರಿಟೆಲ್ ಸೋಸೈಟಿ (ರಿ)’ ಬೆಂಗಳೂರು ಇವರ 5 ಲಕ್ಷ ದೇಣಿಗೆಯಿಂದ ಸ್ಥಾಪಿಸಲಾಗಿದೆ, ಹೀಗಾಗಿ ಮಕ್ಕಳಿಗೆ ‘ಗಣಕಯಂತ್ರ ಶಿಕ್ಷಣ’ ನೀಡಲಾಗುತ್ತಿದೆ. ಶಾಲೆಯ ಆಕರ್ಷಕ ತರಗತಿ ಕೋಣೆ, ಸಿ.ಸಿ ಕ್ಯಾಮರಾ ಹಾಗೂ ಧ್ವನಿವರ್ಧಕ, ಎಜ್ಯುಸ್ಯಾಟ್, ರೇಡಿಯೋ ಪಾಠ, ಸ್ಮಾರ್ಟ್ ಕ್ಲಾಸ್ ಹಾಗೂ ದೂರದರ್ಶನ, ಗ್ರೀನ್-ಬ್ಲ್ಯಾಕ್-ಪ್ಯಾನಲ್-ನೋಟಿಸ್ ಬೋರ್ಡ್, ಆಡಿಯೋ-ವಿಡಿಯೋ ವ್ಯವಸ್ಥೆ, ನವೀನ ಸಾಫ್ಟ್ವೇರ್ ಆಧಾರಿತ ಗುಣಾತ್ಮಕ ಶಿಕ್ಷಣವನ್ನು ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ.

ಎಲ್ಲಾ ಕಲಿಕಾ ಪ್ರಕ್ರಿಯೆಗಳನ್ನು ಮುಖ್ಯ ಶಿಕ್ಷಕರ ಕೊಠಡಿಯಿಂದಲೇ ವೀಕ್ಷಿಸಿ ಚರ್ಚಿಸಬಹುದಾಗಿದೆ. ಈ ಬಗೆಯ ತಾಂತ್ರಿಕತೆಯು ಯಾವುದೇ ಖಾಸಗಿ ಶಾಲೆಯನ್ನು ಮೀರಿಸುವಂತಿದೆ. ಹೀಗಾಗಿ ಸುತ್ತಮುತ್ತಲ ಹಳ್ಳಿಗಳ ಪೋಷಕರು ತಮ್ಮ ಮಕ್ಕಳನ್ನು ಗೊಜನೂರು ಪ್ರೌಢಶಾಲೆಗೆ ಸೇರಿಸಲು ಧಾವಿಸುತ್ತಾರೆ, ಶಾಲೆಯಲ್ಲಿ 277 ಮಕ್ಕಳ ತನಕ ದಾಖಲಾತಿಯಾಗಿದೆ. ಹೀಗಾಗಿ ಹೆಚ್ಚುವರಿ ದಾಖಲಾತಿಯನ್ನು ನಿಲ್ಲಿಸಿದ್ದೂ ಇದೆ.

2010 ರಿಂದ 2020 ರ ತನಕ ಪ್ರತಿ ವರ್ಷವೂ ಶಾಲಾ ಸಾಧನೆ, ಮಕ್ಕಳ ಮತ್ತು ಮೇಷ್ಟ್ರುಗಳ ಬರಹಗಳನ್ನೊಳಗೊಂಡ ವಾರ್ಷಿಕ ಸಂಚಿಕೆಗಳನ್ನು ರವಿ ಅವರು ಸಂಪಾದಿಸಿದ್ದಾರೆ. ಈತನಕ ಅಕ್ಷರ ದುಂದುಬಿ, ಶಿಖರ ಸಂಪದ, ಜ್ಞಾನ ಮಂಜರಿ, ಅಷ್ಟಾದಶ ದರ್ಪಣ, ಪಂಚವಟಿ, ಅಂಬರಮಣಿ, ಸಪ್ತಗಿರಿ ವೈಭವ, ಗಿರಿತೇಜ ಲಹರಿ, ನವ ನಿಕೇತನ, ದಶದೀಪ್ತಿ ದರ್ಶಿಕೆ ಎಂಬ ಹತ್ತು ಸ್ಮರಣ ಸಂಚಿಕೆಗಳನ್ನು ತರಲಾಗಿದೆ. ಈ ಸಂಚಿಕೆಗಳು ಶಾಲೆಯ ಎಲ್ಲಾ ಬಗೆಯ ಕ್ರಿಯಾಶೀಲ ಚಟುವಟಿಕೆಗಳ ದಾಖಲೆಗಳಾಗಿವೆ.

ಇಷ್ಟಾಗಿಯೂ ರವಿ ಅವರ ಎಲ್ಲಾ ಕೆಲಸ ಕಾರ್ಯಗಳಲ್ಲಿ ಸೂಕ್ಷ್ಮವಾಗಿ ಧಾರ್ಮಿಕತೆಯ ಪ್ರಭಾವವಿದೆ. ಅಂಬೇಡ್ಕರ್, ಸಂವಿಧಾನ ಪ್ರಜಾಪ್ರಭುತ್ವದ ಆಶಯಗಳ ಕುರಿತ ವೈಚಾರಿಕ ಕಾರ್ಯಕ್ರಮಗಳು ನಡೆದದ್ದು ತುಂಬಾ ವಿರಳ. ಅಂತೆಯೇ ಶಾಲಾ ಆವರಣದ ವಿವೇಕಾನಂದ ಪ್ರತಿಮೆ, ಪಂಚವಟಿ, ಶಾಲಾ ಸಂಚಿಕೆಯ ಹೆಸರುಗಳು, ಸ್ವಾಮೀಜಿಗಳನ್ನು ಶಾಲೆಗೆ ಕರೆಸುವುದು ಇಂತದ್ದರಲ್ಲೆಲ್ಲಾ ಸನಾತನತೆ ಇಣುಕುತ್ತದೆ. ಇದು ಮುಂದೆ ಶಾಲೆಯ ಸಾಧನೆಯನ್ನು ಮಂಕಾಗಿಸಬಹುದು.

ಸಂವಿಧಾನ ಬದ್ಧ ಸಾರ್ವಜನಿಕ ಸಂಸ್ಥೆಯಾದ ಶಾಲೆಯೊಂದರಲ್ಲಿ ಯಾವುದೇ ಧರ್ಮದ ಛಾಯೆಗಳು ಢಾಳಾಗಿ ಕಾಣಿಸಕೂಡದು. ’ಭಾರತೀಯರಾದ ನಾವು’ ಎಂದು ಆರಂಭವಾಗುವ ಸಂವಿಧಾನದ ಪ್ರಸ್ತಾವನೆಗೆ ಪೂರಕವಾಗಿ ಶಾಲೆಯ ಮಕ್ಕಳಲ್ಲಿ ವೈಚಾರಿಕತೆಯನ್ನು ಬೆಳೆಸುವುದು ಶಿಕ್ಷಕರ ಆದ್ಯ ಕರ್ತವ್ಯ. ಈ ಬೆಳವಣಿಗೆ ಅಕಸ್ಮಾತ್ ನಡೆದಿದ್ದರೆ, ಮುಂದಿನ ದಿನಗಳಲ್ಲಿ ರವಿ ಬೆಂಚಳ್ಳಿಯವರು ಇದನ್ನು ಸರಿಪಡಿಸಿಕೊಳ್ಳುತ್ತಾರೆಂದು ಭಾವಿಸುವೆ.

ತನ್ನ ಬಿಡುವಿಲ್ಲದ ಕೆಲಸಗಳಿಗೆ ತನ್ನ ಸಂಗಾತಿ ಸುಮತಿಯವರ ನೆರವಿದೆ ಎಂದು ರವಿ ಹೇಳುತ್ತಾರೆ. ಮಕ್ಕಳಾದ ವೈಭವ್ ಮತ್ತು ವರ್ಷಿತ ಅವರರೊಂದಿಗೆ ಸದ್ಯಕ್ಕೆ ರವಿಯವರು ಲಕ್ಷ್ಮೇಶ್ವರದಲ್ಲಿ ನೆಲೆಸಿದ್ದಾರೆ. ಊರಿನವರ ಸಹಕಾರದೊಂದಿಗೆ ಶಾಲೆಯನ್ನು ಇನ್ನಷ್ಟು ಎತ್ತರಕ್ಕೆ ಹೊಯ್ಯಲಿ, ಸರಕಾರಿ ಪ್ರೌಢಶಾಲೆಗಳಿಗೆ ಅತ್ಯುತ್ತಮ ಮಾದರಿಯನ್ನು ರೂಪಿಸಲಿ ಎಂದು ನಾನುಗೌರಿ.ಕಾಮ್ ಆಶಿಸುತ್ತದೆ.

ಗೊಜನೂರು ಪ್ರೌಢಶಾಲೆ ತನ್ನದೇ ಸ್ವಂತ ವೆಬ್ ಸೈಟ್ ಹೊಂದಿದೆ. ಆಸಕ್ತರು ಶಾಲೆಯನ್ನು ಈ www.ghsgojanur.com ಕೊಂಡಿಯಿಂದ ಸಂಪರ್ಕಿಸಬಹುದು. ಅಲ್ಲದೇ ಶಾಲೆಯ ಕಲಿಕಾ ಪ್ರಗತಿ, ಚಟುವಟಿಕೆ ಹಾಗೂ ಸಾಧನೆಗಳನ್ನು youtube ನ ghsgojanur ಚಾನಲ್ ಮೂಲಕ ವೀಕ್ಷೀಸಬಹುದು. ಸಂಪರ್ಕಕ್ಕೆ ಇಮೇಲ್‌ [email protected] ಸಂಪರ್ಕಿಸಬಹುದು.

-ಅರುಣ್ ಜೋಳದಕೂಡ್ಲಿಗಿ


ಓದಿ: ಊರನ್ನೇ ರಂಗಭೂಮಿ ಮಾಡಿದ ಶಿಕ್ಷಕ ಅಶೋಕ ತೋಟ್ನಳ್ಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...