ಶುಕ್ರವಾರ ಎಥಿಕ್ಸ್ ಕಮಿಟಿಯ ಅಧ್ಯಕ್ಷರು ನನಗೆ ಯಾವ ಹೋಟೆಲ್‌ಗಳಲ್ಲಿ ಉಳಿದುಕೊಂಡಿದ್ದೀರಿ? ಮತ್ತು ಯಾರೊಂದಿಗೆ ಉಳಿದುಕೊಂಡಿದ್ರೀ? ಎಂದು ಕೇಳಿದ್ದಾರೆಂದು ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ ಅವರು ಆರೋಪಿಸಿದರು.
ಸಂಸತ್ತಿನಲ್ಲಿ ಅದಾನಿ ಗ್ರೂಪ್ ವಿರುದ್ಧ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದನಿಯಿಂದ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹಾದ್ರಾಯಿ ಅವರು ದೂರು ನೀಡಿದ್ದರು.
ನೈತಿಕ ಸಮಿತಿಯು ಅಕ್ಟೋಬರ್‌ನಲ್ಲಿ ಈ ವಿಷಯದ ಬಗ್ಗೆ ತನ್ನ ತನಿಖೆಯನ್ನು ಪ್ರಾರಂಭಿಸಿತು. ಮೊಯಿತ್ರಾ ಅವರು ಗುರುವಾರ ಸಮಿತಿಯ ಮುಂದೆ ಹಾಜರಾದರು ಆದರೆ ಮೊಯಿತ್ರಾ ಅವರು ಸಮಿತಿಯ ವಿರೋಧ ಪಕ್ಷದ ಸದಸ್ಯರೊಂದಿಗೆ ಸಭೆಯಿಂದ ಹೊರನಡೆದರು. ಸಮಿತಿಯ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ವಿನೋದ್ ಸೋಂಕರ್ ಅವರು ತಮ್ಮ ವೈಯಕ್ತಿಕ ಮತ್ತು ಅನೈತಿಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿದರು.
”ನೀವು ರಾತ್ರಿಯಲ್ಲಿ ಯಾರೊಂದಿಗೆ ಮಾತನಾಡುತ್ತೀರಿ”, “ಎಷ್ಟು ಬಾರಿ”, “ನೀವು ನನಗೆ ಕರೆ ವಿವರಗಳನ್ನು ನೀಡಬಹುದೇ” ಸೇರಿದಂತೆ ನನ್ನ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಅಸಹ್ಯಕರ ಪ್ರಶ್ನೆಗಳನ್ನು ಕೇಳಿದರು” ಎಂದು ಮೊಯಿತ್ರಾ ಶುಕ್ರವಾರ ಹೇಳಿದರು.
”ನೀವು ದರ್ಶನ್ ಹಿರಾನಂದನಿ ಅವರ ಆತ್ಮೀಯ ಸ್ನೇಹಿತರಾಗಿದ್ದೀರಿ ಎಷ್ಟು ಆತ್ಮೀಯವಾಗಿದ್ದೀರಿ? ಇದು ಅವರ ಹೆಂಡತಿಗೆ ತಿಳಿದಿದೆಯಾ? ಎಂದು ಕೇಳಿದರು. ನೀವು ಹೌದು ಅಥವಾ ಇಲ್ಲ ಎಂದು ಉತ್ತರಿಸಬೇಕು” ಎಂದು ಹೇಳಿರುವುದಾಗಿ ಮೊಯಿತ್ರಾ ದಿ ಹಿಂದೂಗೆ ತಿಳಿಸಿದರು.
ಸಂಸದರು ಲಾಗಿನ್ ಮತ್ತು ಪಾಸ್‌ವರ್ಡ್ ಹಂಚಿಕೊಳ್ಳುವುದನ್ನು ನಿಷೇಧಿಸುವ ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ ಮತ್ತು ಸಂಸದೀಯ ಸಹಾಯಕರು ಸಂಸದರ ಪರವಾಗಿ ನಿಯಮಿತವಾಗಿ ಸಿಸ್ಟಮ್‌ಗೆ ಲಾಗ್ ಇನ್ ಆಗುತ್ತಾರೆ ಎಂದು ಮೊಯಿತ್ರಾ ಹೇಳಿದ್ದಾರೆ ಎಂದು ದಿ ಹಿಂದೂ ವರದಿ ಮಾಡಿದೆ.
ಗುರುವಾರದ ಕಲಾಪಗಳ ನಂತರ, ಮೊಯಿತ್ರಾ ಅವರು ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದು, ಸಮಿತಿಯಲ್ಲಿ “ಯಾವುದೇ ನೀತಿ ಮತ್ತು ನೈತಿಕತೆ ಉಳಿದಿಲ್ಲ. ನೈತಿಕ ಸಮಿತಿಯ ಅಧ್ಯಕ್ಷರು “ವಸ್ತ್ರಾಹರಣ” ಅಥವಾ ವಸ್ತ್ರಾಪಹರಣಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ನೈತಿಕ ಸಮಿತಿಯ ಅಧ್ಯಕ್ಷರು ‘ವಸ್ತ್ರಾಪಹರಣ’ಕ್ಕೆ ಒಳಗಾಗಿದ್ದಾರೆ: ಸ್ಪೀಕರ್‌ಗೆ ಮೊಯಿತ್ರಾ ಪತ್ರ


