Homeಮುಖಪುಟಇಸ್ರೇಲ್‌ ವೈಮಾನಿಕ ದಾಳಿಗೆ 'ಪ್ಯಾಲೆಸ್ತೀನ್‌ ಟಿವಿ' ವರದಿಗಾರ ಅಬು ಹತಾಬ್ ಸೇರಿ ಕುಟುಂಬದ 12 ಮಂದಿ...

ಇಸ್ರೇಲ್‌ ವೈಮಾನಿಕ ದಾಳಿಗೆ ‘ಪ್ಯಾಲೆಸ್ತೀನ್‌ ಟಿವಿ’ ವರದಿಗಾರ ಅಬು ಹತಾಬ್ ಸೇರಿ ಕುಟುಂಬದ 12 ಮಂದಿ ಬಲಿ

- Advertisement -
- Advertisement -

ದಕ್ಷಿಣ ಗಾಝಾ ಪಟ್ಟಿಯಲ್ಲಿರುವ ಖಾನ್ ಯೂನಿಸ್ ನಗರದ ಮೇಲೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಫೆಲೆಸ್ತೀನ್ ಚಾನೆಲ್‌ನ ವರದಿಗಾರ ಮೊಹಮ್ಮದ್ ಅಬು ಹತಾಬ್ ಮತ್ತು ಅವರ ಕುಟುಂಬದ 11 ಮಂದಿ ಸದಸ್ಯರು ಬಲಿಯಾಗಿದ್ದಾರೆ.

ಪ್ಯಾಲೆಸ್ತೀನ್‌ ಪ್ರಾಧಿಕಾರದ ಅಧೀನದಲ್ಲಿದ್ದ ‘ಪ್ಯಾಲೆಸ್ತೀನ್ ಟಿವಿ’ಯಲ್ಲಿ ಅಬು ಹತಾಬ್ ಕೆಲಸ ಮಾಡುತ್ತಿದ್ದರು. ಪ್ಯಾಲೆಸ್ತೀನ್‌ ಟಿವಿ, ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಅಬು ಹತಾಬ್‌ ಮತ್ತು ಕುಟುಂಬಸ್ಥರು ಮೃತಪಟ್ಟ ಬಗ್ಗೆ ವರದಿಯನ್ನು ಮಾಡಿದೆ. ಆದರೆ ಈ ಬಗ್ಗೆ ಇಸ್ರೇಲ್‌ ಮಿಲಿಟರಿ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

ಮೃತ 11 ಮಂದಿಯಲ್ಲಿ ಅಬು ಹತಾಬ್ ಅವರ ಪತ್ನಿ, ಮಗ ಮತ್ತು ಸಹೋದರ ಸೇರಿದ್ದಾರೆ ಎಂದು ಪ್ಯಾಲೆಸ್ತೀನ್  ಸುದ್ದಿ ಸಂಸ್ಥೆ ವಫಾ ವರದಿ ಮಾಡಿದೆ.

ಪತ್ರಕರ್ತರ ರಕ್ಷಣಾ ಸಮಿತಿಯು ಈ ಕುರಿತು ಪ್ರತಿಕ್ರಿಯಿಸಿದ್ದು, 1992ರ ಬಳಿಕ ಈ ಪ್ರದೇಶದಲ್ಲಿ ನಡೆದ ಯಾವುದೇ ಸಂಘರ್ಷಕ್ಕಿಂತ ಇದೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಪತ್ರಕರ್ತರ ಹತ್ಯೆ ನಡೆದಿದೆ ಎಂದು ದತ್ತಾಂಶಗಳನ್ನು ಉಲ್ಲೇಖಿಸಿ ಮಾಹಿತಿಯನ್ನು ನೀಡಿದೆ.

ವರದಿಯ ಪ್ರಕಾರ ಅ.7 ರಂದು ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ಆರಂಭವಾದ ಬಳಿಕ 36 ಪತ್ರಕರ್ತರ ಹತ್ಯೆ ನಡೆದಿದೆ. ಅವರಲ್ಲಿ 31 ಮಂದಿ ಪ್ಯಾಲೆಸ್ತೀನಿಯನ್ನರು, ನಾಲ್ವರು ಇಸ್ರೇಲ್ ಪತ್ರಕರ್ತರು ಮತ್ತು ಓರ್ವ ಲೆಬನಾನಿನ ಪತ್ರಕರ್ತನ ಹತ್ಯೆ ನಡೆದಿದೆ ಎಂದು ದತ್ತಾಂಶಗಳು ಬಹಿರಂಗಪಡಿಸಿದೆ.

ಶುಕ್ರವಾರ ಅಬು ಹತಾಬ್ ಅವರ ಅಂತ್ಯಕ್ರಿಯೆ ನಡೆದಿದ್ದು, ಈ ವೇಳೆ ಸಂಬಂಧಿಕರು, ಸ್ನೇಹಿತರು ಮತ್ತು ಪತ್ರಕರ್ತರು ಅಳುತ್ತಿರುವುದು ಮತ್ತು ಪ್ರಾರ್ಥಿಸುತ್ತಿರುವ ಪೋಟೋಗಳು ವೈರಲ್‌ ಆಗಿದೆ.

ಅ.13 ರಂದು ರಾಯಿಟರ್ಸ್‌ನ ಪತ್ರಕರ್ತ ಇಸ್ಸಾಮ್ ಅಬ್ದುಲ್ಲಾ ಅವರ ಹತ್ಯೆ ನಡೆದಿದೆ. ಇಸ್ರೇಲ್‌ ಸೇನೆಯು ಘಟನೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದೆ. ಪತ್ರಕರ್ತರು ಯುದ್ಧ ವಲಯಗಳ ಬಳಿ ಇರುವುದು ಜೀವಕ್ಕೆ ತೀವ್ರ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿದೆ.

ಕಳೆದ ವಾರ ರಾಯಿಟರ್ಸ್‌ಗೆ ಇಸ್ರೇಲ್‌ ಮಿಲಿಟರಿ ಪಡೆ ಪತ್ರ ಬರೆದಿದ್ದು, ಗಾಝಾದಲ್ಲಿನ ವರದಿಗಾರರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಏಕೆಂದರೆ ಹಮಾಸ್ ತನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ನಾಗರಿಕರು ಮತ್ತು ಪತ್ರಕರ್ತರ ಮೇಲೆ ನಡೆಸುತ್ತಿದೆ ಎಂದು ಇಸ್ರೇಲ್‌ ನಡೆಸಿದ ಕೃತ್ಯವನ್ನು ಹಮಾಸ್‌ನ ಮೇಲೆ ಹೊರಿಸಲು ಮುಂದಾಗಿದೆ.

ಯುದ್ಧದ ದೈನಂದಿನ ಭೀಕರತೆಯನ್ನು ಜಗತ್ತಿಗೆ ತೋರಿಸುತ್ತಿದ್ದ ಗಾಝಾದಲ್ಲಿನ ಪತ್ರಕರ್ತರು ತಮ್ಮ ಜೀವನವನ್ನು ಅಥವಾ ಕುಟುಂಬಗಳನ್ನು ಕಳೆದುಕೊಳ್ಳುವಂತಹ ಪರಿಸ್ಥಿತಿ ಉಂಟಾಗಿದೆ. ಅಲ್ ಜಝೀರಾದ ಗಾಝಾ ಬ್ಯೂರೋ ಮುಖ್ಯಸ್ಥ ವೇಲ್ ಅಲ್-ದಹದೌಹ್ ಅವರ ಕುಟುಂಬದ ಹಲವಾರು ಸದಸ್ಯರು ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಕೊಲ್ಲಲ್ಪಟ್ಟಿದ್ದಾರೆ.

ಇದಲ್ಲದೆ ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಲ್‌ ಜಝೀರಾ ಮಾದ್ಯಮದ ಬ್ರಾಡ್‌ ಕಾಸ್ಟಿಂಗ್ ಇಂಜಿನಿಯರ್‌ ಮೊಹಮದ್ ಅಬು ಅಲ್-ಕುಮ್ಸಾನ್ ಕುಟುಂಬದ 19 ಸದಸ್ಯರು ಸೇರಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು.

ಇದನ್ನು ಓದಿ: ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾ ಸಿಬ್ಬಂದಿಯ ಕುಟುಂಬದ 19 ಮಂದಿ ಬಲಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...