Homeಮುಖಪುಟಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾ ಸಿಬ್ಬಂದಿಯ ಕುಟುಂಬದ 19 ಮಂದಿ...

ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ: ಅಲ್ ಜಝೀರಾ ಸಿಬ್ಬಂದಿಯ ಕುಟುಂಬದ 19 ಮಂದಿ ಬಲಿ

- Advertisement -
- Advertisement -

ಗಾಝಾದ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಅಲ್‌ ಜಝೀರಾ ಮಾದ್ಯಮ ಸಿಬ್ಬಂದಿಯ ಕುಟುಂಬದ 19 ಸದಸ್ಯರು ಸೇರಿ 50ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ.

ಜಬಾಲಿಯಾ ಶಿಬಿರದ ಮೇಲೆ ಇಸ್ರೇಲ್‌ ನಡೆಸಿದ ವಾಯು ದಾಳಿಯಲ್ಲಿ ಗಾಝಾದ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಬ್ರಾಡ್‌ ಕಾಸ್ಟಿಂಗ್ ಇಂಜಿನಿಯರ್‌ ಮೊಹಮದ್ ಅಬು ಅಲ್-ಕುಮ್ಸಾನ್ ಅವರ ಸಹೋದರ, ಇಬ್ಬರು ಸಹೋದರಿಯರು ಮತ್ತು 8 ಸೋದರಳಿಯರು ಮತ್ತು ಸೊಸೆಯಂದಿರನ್ನು ಕಳೆದುಕೊಂಡಿದ್ದಾರೆ ಎಂದು ಅಲ್ ಜಝೀರಾ ವರದಿ ಮಾಡಿದೆ.

ಕೆಲವು ದಿನಗಳ ಹಿಂದೆ ಇಸ್ರೇಲ್‌ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲ್ ಜಝೀರಾ ವರದಿಗಾರ ದಹದೌಹ್ ಅವರು ಪತ್ನಿ ಮಗ, ಮಗಳು ಮತ್ತು ಮೊಮ್ಮಗನನ್ನು ಕಳೆದುಕೊಂಡಿದ್ದರು.

ಇಸ್ರೇಲ್ ಜಬಾಲಿಯಾ ಶಿಬಿರದ ಮೇಲೆ ನಡೆಸಿದ ದಾಳಿಯಲ್ಲಿ 47 ಜನರು ಮೃತಪಟ್ಟಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ಹೊರಬಿದ್ದಿದೆ. ದಾಳಿಯಲ್ಲಿ ಹಮಾಸ್‌ನ ಕಮಾಂಡರ್‌ಗೆ ಕೂಡ ಹತ್ಯೆ ಮಾಡಲಾಗಿದೆ.

ಇಸ್ರೇಲ್‌ ನಿರಾಶ್ರಿತರ ಶಿಬಿರದ ಮೇಲೆ ನಡೆಸಿದ ಬಾಂಬ್ ದಾಳಿಯಲ್ಲಿ 50ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಹೇಳಿದ್ದಾರೆ.

ಇಸ್ರೇಲ್ ತನ್ನ ಹೇಳಿಕೆಯಲ್ಲಿ ಕಮಾಂಡರ್ ಇಬ್ರಾಹಿಂ ಬಿಯಾರಿ ಸೇರಿದಂತೆ ಹಲವಾರು ಹಮಾಸ್ ಕಾರ್ಯಕರ್ತರನ್ನು ಹತ್ಯೆ ಮಾಡಿದೆ ಎಂದು ಹೇಳಿದೆ. ಆದರೆ ಹಮಾಸ್ ಶಿಬಿರದಲ್ಲಿ ತಮ್ಮ ನಾಯಕರು ಇರಲಿಲ್ಲ ಎಂದು ಹೇಳಿದೆ.

ಅ.7ರಂದು ಇಸ್ರೇಲ್‌ ಮೇಲೆ ಹಮಾಸ್‌ ನಡೆಸಿದ ದಾಳಿಯಲ್ಲಿ 1,400 ಜನರು ಮೃತಪಟ್ಟಿದ್ದಾರೆ. ಹಮಾಸ್‌ 200 ಜನರನ್ನು ಒತ್ತೆಯಾಳಾಗಿಟ್ಟಿತ್ತು.ಆ ಬಳಿಕ ಇಸ್ರೇಲ್ ನಡೆಸಿದ ಸರಣಿ ಬಾಂಬ್‌ ದಾಳಿಯಲ್ಲಿ ಗಾಝಾದಲ್ಲಿ ಮಕ್ಕಳು ಮಹಿಳೆಯರು ಸೇರಿ 8000 ಮಂದಿ ಮೃತಪಟ್ಟಿದ್ದಾರೆ. ಇದಲ್ಲದೆ ಇಸ್ರೇಲ್‌ ಗಾಝಾಪಟ್ಟಿಗೆ ನೀರು, ವಿದ್ಯುತ್‌ ಸಂಪರ್ಕ ಕಡಿತಗೊಳಿಸಿ ಮಾನವೀಯ ನೆರವಿಗೆ ತಡೆ ನೀಡಿತ್ತು.

ಪ್ಯಾಲೆಸ್ತೀನ್‌ನಲ್ಲಿ ನೀರು, ಆಹಾರ, ವೈದ್ಯಕೀಯ ಸಹಾಯವಿಲ್ಲದೆ ಜನರ ಪರಿಸ್ಥಿತಿ ಗಂಭೀರವಾಗಿದೆ ಎಂದು ಯುಎನ್‌ ವಿಶ್ವಕ್ಕೆ ಎಚ್ಚರಿಸಿತ್ತು. ಇತ್ತೀಚೆಗೆ ಯುಎನ್ ಸಾಮಾನ್ಯ ಸಭೆಯಲ್ಲಿ ಗಾಝಾಗೆ ಮಾನವೀಯ ನೆರವು ನೀಡುವ ಕುರಿತು ನಿರ್ಣಯವನ್ನು ಅಂಗೀಕರಿಸಲಾಗಿತ್ತು.

ಇದನ್ನು ಓದಿ: ಜಾತಿ ತಾರತಮ್ಯದ ಬಗ್ಗೆ ಲೇಖನ: ಪ್ರಕಾಶ್ ಮಂಟೇದ ವಿರುದ್ಧ FIR ದಾಖಲು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳದಲ್ಲಿ ತೀವ್ರಗೊಳ್ಳಲಿರುವ ಮಳೆ; ಆರೇಂಜ್-ಯೆಲ್ಲೋ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ

0
ಮುಂದಿನ ಕೆಲವು ದಿನಗಳಲ್ಲಿ ಮಳೆ ತೀವ್ರಗೊಳ್ಳುವ ಸಾಧ್ಯತೆಯಿರುವುದರಿಂದ ಭಾರತೀಯ ಹವಾಮಾನ ಇಲಾಖೆ ಗುರುವಾರ ಕೇರಳದ ಹಲವು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಿದೆ. ಮೇ 18 ರಂದು ಪಾಲಕ್ಕಾಡ್ ಮತ್ತು ಮಲಪ್ಪುರಂ, ಮೇ 19 ರಂದು...