Homeಮುಖಪುಟಕಾನೂನುಬಾಹಿರವಾಗಿ ವಜಾಗೊಳಿಸಿದ ಬಾಟಾ ಸೇಲ್ಸ್‌ಮ್ಯಾನ್‌ಗಳಿಗೆ 75% ಪರಿಹಾರ ನೀಡಬೇಕು: ಬಾಂಬೆ ಹೈಕೋರ್ಟ್

ಕಾನೂನುಬಾಹಿರವಾಗಿ ವಜಾಗೊಳಿಸಿದ ಬಾಟಾ ಸೇಲ್ಸ್‌ಮ್ಯಾನ್‌ಗಳಿಗೆ 75% ಪರಿಹಾರ ನೀಡಬೇಕು: ಬಾಂಬೆ ಹೈಕೋರ್ಟ್

- Advertisement -
- Advertisement -

2007ರಲ್ಲಿ ಬಾಟಾ ಸೇಲ್ಸ್‌ಮ್ಯಾನ್‌ಗಳನ್ನು ವಿಚಾರಣೆ ನಡೆಸದೆ ವಜಾಗೊಳಿಸಿರುವುದನ್ನು ಗಮನಿಸಿದ ಬಾಂಬೆ ಹೈಕೋರ್ಟ್, ಏಳು ಸೇಲ್ಸ್‌ಮ್ಯಾನ್‌ಗಳಿಗೆ 19.5 ಲಕ್ಷದಿಂದ 33 ಲಕ್ಷದವರೆಗೆ ಪರಿಹಾರ ನೀಡುವಂತೆ ಸೂಚಿಸಿದೆ.

ವಾರದಲ್ಲಿ ಏಳು ದಿನಗಳು ಹೆಚ್ಚಿನ ಅವಧಿಯೊಂದಿಗೆ ಕೆಲಸ ಮಾಡಬೇಕು ಎಂದು ಶೋರೂಮ್‌ಗಳಿಗೆ ನೀಡಿದ ವೇಳಾಪಟ್ಟಿಯನ್ನು ಅನುಸರಿಸಲು ನಿರಾಕರಿಸಿದ ಏಳು ಮಾರಾಟಗಾರರನ್ನು ಕೆಲಸದಿಂದ ವಜಾಗೊಳಿಸಲಾಗಿತ್ತು.

ಯಾವುದೇ ವಿಚಾರಣೆಯಿಲ್ಲದೆ ಅವರನ್ನು ವಜಾಗೊಳಿಸಿರುವುದನ್ನು ಗಮನಿಸಿದ ನ್ಯಾಯಮೂರ್ತಿ ಸಂದೀಪ್ ಮರ್ನೆ ಅವರು, ”ವಜಾಗೊಳಿಸಿ 16 ವರ್ಷಗಳು ಕಳೆದಿವೆ ಮತ್ತು ಅವರು ಈಗ ಮಾರಾಟಗಾರರಾಗಿ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಾಧ್ಯವಾಗದಿರಬಹುದು. ಕಳೆದ 16 ವರ್ಷಗಳ ಹಿಂದಿನ ವೇತನದ 75 ಪ್ರತಿಶತದಷ್ಟು ಪರಿಹಾರವನ್ನು ನೀಡಬೇಕು ಎಂದು ಹೇಳಿದರು.

”ದೂರುದಾರರು ಈಗ ಬಾಟಾದ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟಗಾರರಾಗಿ ಕರ್ತವ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಸ್ಥಿತಿಯಲ್ಲಿದ್ದಾರೆಯೇ ಎಂದು ತಿಳಿದಿಲ್ಲ… ಆದರೆ ಕಳೆದ 16 ವರ್ಷಗಳಿಂದ ಅವರಿಗೆ ಅನ್ಯಾಯವಾಗಿದೆ. ಹಾಗಾಗಿ ಅವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳಲು ಸಾಧ್ಯವಾಗದೇ ಇರಬಹುದು, ಬದಲಾಗಿ ಅವರಿಗೆ ಸುಮಾರು 75% ನಷ್ಟು ಮೊತ್ತದ ಪರಿಹಾರ ಪಾವತಿಸಲು ಬಾಟಾಗೆ ನಿರ್ದೇಶಿಸಿದರೆ ನ್ಯಾಯ ನೀಡಿದಂತಾಗುತ್ತದೆ” ಎಂದು ನ್ಯಾಯಾಧೀಶರು ಹೇಳಿದರು.

2007ರಲ್ಲಿ ಬಾಟಾ ಕಂಪನಿಯು ಮುಂಬೈ, ಥಾಣೆ ಮತ್ತು ಪುಣೆಯಲ್ಲಿ ನಷ್ಟ ತಗ್ಗಿಸಲು ತನ್ನ ಶೋರೂಮ್‌ಗಳನ್ನು ವಾರದ ಎಲ್ಲಾ ಏಳು ದಿನಗಳು ಕಾರ್ಯನಿರ್ವಹಿಸಲು ನಿರ್ಧರಿಸಿತು. ಪ್ರತಿ ಉದ್ಯೋಗಿಗೆ ವಾರದ ರಜೆ ನೀಡಲಾಗುವುದು ಮತ್ತು ರಾತ್ರಿ 9:30ರೊಳಗೆ ಅಂಗಡಿಗಳನ್ನು ಮುಚ್ಚಬೇಕು ಎಂಬ ಷರತ್ತಿನ ಮೇಲೆ ರಾಜ್ಯ ಸರ್ಕಾರ ಇದಕ್ಕೆ ಅನುಮತಿ ನೀಡಿದೆ.

ಬಾಟಾ ಕಂಪನಿಯು ಡ್ಯೂಟಿ ಚಾರ್ಟ್‌ನ್ನು ಸಿದ್ಧಪಡಿಸಿತ್ತು ಆದರೆ ಕೆಲವು ಮಾರಾಟಗಾರರು ಇದನ್ನು ವಿರೋಧಿಸಿದರು. ರೋಸ್ಟರ್‌ಗೆ ಬದ್ಧರಾಗಿರಲು ಅವರು ನಿರಾಕರಿಸುವುದನ್ನು ದುರ್ನಡತೆ ಎಂದು ಪರಿಗಣಿಸಿ ಬಾಟಾ ಅವರ ಸೇವೆಯಿಂದ ವಜಾಗೊಳಿಸಿತು.

ಇದನ್ನೂ ಓದಿ: ಜಾತಿ ನಿಂದನೆ ಪ್ರಕರಣ: ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಬಂಧನ

ಮಾರಾಟಗಾರರು ಲೇಬರ್ ಕೋರ್ಟ್‌ನ್ನು ಸಂಪರ್ಕಿಸಿದರು, ಅದು ಅವರ ಪರವಾಗಿ ತೀರ್ಪು ನೀಡಿತು. ಅವರಿಗೆ 50 ಪ್ರತಿಶತ ಹಿಂಬದಿ ವೇತನ ನೀಡಿತು. ಈ ನಿರ್ಧಾರವನ್ನು ಕೈಗಾರಿಕಾ ನ್ಯಾಯಾಲಯ ಎತ್ತಿ ಹಿಡಿದಿದೆ.

ಸೇಲ್ಸ್‌ಮನ್‌ಗಳು ಕೆಲಸಗಾರರಲ್ಲ ಮತ್ತು ಹೀಗಾಗಿ ಕಾರ್ಮಿಕ ನ್ಯಾಯಾಲಯಕ್ಕೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಬಾಟಾ ಕಂಪನಿಯು ಹೈಕೋರ್ಟ್‌ನ ಮುಂದೆ ಇದನ್ನು ಪ್ರಶ್ನಿಸಿತು. ಮಾರಾಟಗಾರರು ಕೂಡ 100 ಪ್ರತಿಶತ ವೇತನವನ್ನು ಕೋರಿ ಹೈಕೋರ್ಟ್‌ನ ಮುಂದೆ ಆದೇಶವನ್ನು ಪ್ರಶ್ನಿಸಿದರು.

ಆಪಾದಿತ ದುಷ್ಕೃತ್ಯವನ್ನು ಸಾಬೀತುಪಡಿಸಲು ಬಾಟಾ ಯಾವುದೇ ವಿಚಾರಣೆಯನ್ನು ನಡೆಸಿಲ್ಲ ಎಂದು ನ್ಯಾಯಾಲಯವು ಕಂಡುಹಿಡಿದಿದೆ ಮತ್ತು ಹೀಗಾಗಿ ಇದು ಕಾನೂನುಬಾಹಿರವೆಂದು ಪರಿಗಣಿಸಿತು.

ನಾಲ್ಕು ತಿಂಗಳೊಳಗೆ ಪ್ರತಿ ಸಂತ್ರಸ್ತ ಮಾರಾಟಗಾರನಿಗೆ ಸರಿಸುಮಾರು 75 ಪ್ರತಿಶತದಷ್ಟು ಹಿಂದಿನ ವೇತನದ ಒಟ್ಟು ಮೊತ್ತದ ಪರಿಹಾರವನ್ನು ನೀಡುವಂತೆ ನ್ಯಾಯಾಲಯವು ಬಾಟಾಗೆ ನಿರ್ದೇಶಿಸಿತು. ನಿಗದಿತ ಅವಧಿಯೊಳಗೆ ಪರಿಹಾರ ನೀಡದಿದ್ದಲ್ಲಿ ವಾರ್ಷಿಕ ಶೇ 8ರಷ್ಟು ಬಡ್ಡಿ ನೀಡುವಂತೆಯೂ ನ್ಯಾಯಾಲಯ ಬಾಟಾಗೆ ಆದೇಶಿಸಿದೆ.

ಈ ಬಗ್ಗೆ ಸಮಾಜಿಕ ಕಾರ್ಯಕರ್ತರು, ಕಾರ್ಮಿಕರ ಪರ ಹೋರಾಟಗಾರರಾದ ಡಾ. ವಾಸು ಅವರು ಪ್ರತಿಕ್ರಿಯಿಸಿದ್ದು, ”ಬಹಳ ದಿನಗಳ ನಂತರ ಕಾರ್ಮಿಕರ ಪರವಾಗಿ ಮತ್ತು ಕಾರ್ಮಿಕರ ಹಕ್ಕುಗಳನ್ನು ಎತ್ತಿಹಿಡಿದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. ವಾರದ ರಜೆ ನೀಡುವುದು ಪ್ರಪಂಚದಾದ್ಯಂತ ಜಾರಿಯಾಗಿ 100 ವರ್ಷಗಳೇ ಕಳೆದಿವೆ. ಅದನ್ನು ನಿರಾಕರಿಸಲು ಹೊರಟಿದ್ದ ಬಾಟಾ ಕಂಪನಿಗೆ ಮತ್ತು ಉದ್ಯೋಗಿಗಳಿಗೆ ನ್ಯಾಯಾಲಯದ ಆದೇಶ ಎಚ್ಚರಿಕೆಯ ಗಂಟೆಯಾಗಿದೆ” ಎಂದು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...