Homeರಂಜನೆಕ್ರೀಡೆIPL ಫೈನಲ್: ಅಹಮದಾಬಾದ್‌ನಲ್ಲಿ ಇಂದು ಮಳೆ ಬಂದು ಪಂದ್ಯ ರದ್ದಾದರೆ ಟ್ರೋಫಿ ಯಾರಿಗೆ?

IPL ಫೈನಲ್: ಅಹಮದಾಬಾದ್‌ನಲ್ಲಿ ಇಂದು ಮಳೆ ಬಂದು ಪಂದ್ಯ ರದ್ದಾದರೆ ಟ್ರೋಫಿ ಯಾರಿಗೆ?

- Advertisement -
- Advertisement -

ಮೇ 28ರ ಭಾನುವಾರ ಗುಜರಾತ್‌ನ ಅಹಮದಾಬಾದ್‌ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಚನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ತಂಡಗಳ ನಡುವೆ IPL ಫೈನಲ್ ಪಂದ್ಯ ನಡೆಯಬೇಕಿತ್ತು. ಆದರೆ ಭಾರೀ ಮಳೆಗೆ ಒಂದು ಬಾಲ್ ಸಹ ಹಾಕಲಾಗದೆ ಪಂದ್ಯವನ್ನು ಮೀಸಲು ದಿನವಾದ ಸೋಮವಾರಕ್ಕೆ ಮುಂದೂಡಲಾಗಿದೆ. ಅಹಮದಾಬಾದ್‌ನಲ್ಲಿ ಇಂದು ಸಹ ಹೆಚ್ಚು ಮಳೆ ಬಂದು ಪಂದ್ಯ ರದ್ದಾದರೆ ಟ್ರೋಫಿ ಯಾರಿಗೆ ಎಂಬ ವಿಷಯದ ಕುರಿತು ಚರ್ಚೆ ನಡೆಯುತ್ತಿದೆ. ಈ ಕುರಿತು ಬಿಸಿಸಿಐ ನಿಯಮಗಳು ಏನು ಹೇಳುತ್ತವೆ ಎಂಬುದನ್ನು ನೋಡೋಣ.

ಇಂದು ಸಂಜೆ 7.30ಕ್ಕೆ ಫೈನಲ್ ಪಂದ್ಯ ಆರಂಭವಾಗಬೇಕಿದೆ. ಆದರೆ ಮಳೆ ಬಂದಲ್ಲಿ ಪಂದ್ಯವನ್ನು ಕೆಲ ಕಾಲ ಮುಂದೂಡಲಾಗುತ್ತದೆ. 9.30ರ ನಂತರವೂ ಮಳೆ ಬಂದರೆ ಓವರ್‌ಗಳನ್ನು ಕಡಿತಗೊಳಿಸಿ ಪಂದ್ಯ ಆಡಿಸಲಾಗುತ್ತದೆ. ಒಂದು ವೇಳೆ ಮತ್ತೆ ಬಂದಲ್ಲಿ ರಾತ್ರಿ 12 ಗಂಟೆಯವರೆಗೂ ಮಳೆ ನಿಲ್ಲಲು ಕಾಯಲಾಗುತ್ತದೆ. ಆಗ ಮಳೆ ನಿಂತಲ್ಲಿ ತಲಾ 5 ಓವರ್‌ಗಳ ಪಂದ್ಯ ಆಡಿಸಲಾಗುತ್ತದೆ. ಮಳೆ ನಿಂತು ಗ್ರೌಂಡ್ ಅನ್ನು ಒಣಗಿಸಲು ಸಮಯ ಬೇಕಾದರೆ 1 ಓವರ್‌ಗಳ ಸೂಪರ್ ಓವರ್ ಪಂದ್ಯ ಆಡಿಸಲಾಗುತ್ತದೆ.

ಪೂರ್ತಿ ಮಳೆ ಬಂದು ಪಂದ್ಯವೇ ರದ್ದಾಗಬೇಕಾದರೆ??

ಇಂದು ಸಹ ಧಾರಾಕಾರ ಮಳೆ ಸುರಿದು 1 ಓವರ್ ಕೂಡ ಆಡದೇ ಪಂದ್ಯ ರದ್ದಾದರೆ ಆಗ ಐಪಿಎಲ್ ನಿಯಮಗಳ ಪ್ರಕಾರ ಲೀಗ್ ಹಂತದ ಮುಕ್ತಾಯದ ವೇಳೆಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ತಂಡವನ್ನು ಚಾಂಪಿಯನ್ಸ್ ಎಂದು ಘೋಷಿಸಲಾಗುತ್ತದೆ. ಆ ಪ್ರಕಾರ ಈ ಋತುವಿನಲ್ಲಿ ಗುಜರಾತ್ ಟೈಟನ್ಸ್ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಅದು 14 ಪಂದ್ಯಗಳಲ್ಲಿ 10 ಗೆಲುವು ಮತ್ತು 4 ಸೋಲಿನೊಂದಿಗೆ 20 ಅಂಕಗಳನ್ನು ಪಡೆದಿದ್ದು, ಮಳೆ ಬಂದು ಪಂದ್ಯ ರದ್ದಾದರೆ ಗುಜರಾತ್ ಟೈಟನ್ಸ್ ಚಾಂಪಿಯನ್ ಆಗಲಿದೆ.

ಇನ್ನೊಂದೆಡೆ ಚನ್ನೈ ಸೂಪರ್ ಕಿಂಗ್ಸ್ ತಂಡವು 14 ಪಂದ್ಯಗಳಲ್ಲಿ 8 ಗೆಲುವು, ಒಂದು ಪಂದ್ಯ ರದ್ದು ಮತ್ತು 5 ಸೋಲಿನೊಂದಿಗೆ 17 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಮಳೆ ಬಂದರೆ ಅದು ಚನ್ನೈಗೆ ಅನಾನುಕೂಲವಾಗಲಿದೆ.

ಇದನ್ನೂ ಓದಿ:  ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಟೀಕಿಸಿದ ಬಿಜೆಪಿಗೆ ತಿರುಗೇಟು ಕೊಟ್ಟ ಶೆಟ್ಟರ್, ಸವದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...