Homeರಂಜನೆಕ್ರೀಡೆಅಂಡರ್ 19 ವುಮೆನ್ಸ್ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ: ತಂಡದ ನೃತ್ಯ ಸಂಭ್ರಮ...

ಅಂಡರ್ 19 ವುಮೆನ್ಸ್ ಟಿ20 ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತ: ತಂಡದ ನೃತ್ಯ ಸಂಭ್ರಮ ಹೀಗಿದೆ

- Advertisement -
- Advertisement -

ಚೊಚ್ಚಲ ಅಂಡರ್ 19 ವುಮೆನ್ಸ್ ಟಿ20 ವಿಶ್ವಕಪ್ ಪ್ರಶಸ್ತಿ ಗೆಲ್ಲುವ ಮೂಲಕ ಭಾರತ ತಂಡ ಇತಿಹಾಸ ಸೃಷ್ಟಿಸಿದೆ. ಈ ವರ್ಷ ಉದ್ಘಾಟನೆಗೊಂಡ ಟೂರ್ನಿಯ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ಅಂಡರ್ 19 ವುಮೆನ್ಸ್ ತಂಡವನ್ನು 7 ವಿಕೆಟ್‌ಗಳಿಂದ ಮಣಿಸಿದ ಭಾರತ ತಂಡ ಪ್ರಶಸ್ತಿಗೆ ಮುತ್ತಿಕ್ಕಿತು. ಆ ಮೂಲಕ ಭಾರತದ ಮಹಿಳಾ ತಂಡವೊಂದು ಮೊದಲ ಬಾರಿಗೆ ವಿಶ್ವಕಪ್ ಗೆದ್ದ ಸಾಧನೆಗೆ ಪಾತ್ರವಾಗಿದೆ.

ಭಾರತ ತಂಡದ ನಾಯಕಿ ಶೆಫಾಲಿ ವರ್ಮಾ ಹಾಗೂ ವಿಕೆಟ್ ಕೀಪರ್ ರಿಚಾ ಘೋಷ್ ಈಗಾಗಲೇ ಭಾರತದ ಮಹಿಳೆಯರ ಕ್ರಿಕೆಟ್ ತಂಡದ ಸದಸ್ಯರಾಗಿದ್ದಾರೆ. ಅಲ್ಲದೆ ಮುಂದಿನ ತಿಂಗಳಿನಲ್ಲಿ ಆರಂಭವಾಗುವ T20 ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪರ ಆಡಲಿದ್ದಾರೆ. ಹಾಗಾಗಿ ಈ ಗೆಲುವು ಭಾರತ ಮಹಿಳಾ ತಂಡದ ಆತ್ಮವಿಶ್ವಾಸ ಹೆಚ್ಚಿಸಲಿದೆ.

ಮೊದಲು ಬೌಲಿಂಗ್ ಮಾಡಿದ ಭಾರತ ತಂಡ 17.1 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡವನ್ನು ಕೇವಲ 68 ರನ್‌ಗಳಿಗೆ ಆಲ್‌ಔಟ್ ಮಾಡಿತು. ಭಾರತ ತಂಡದ ಪರ ಟೈಟಸ್ ಸದು, ಅರ್ಚನಾ ದೇವಿ ಮತ್ತು ಪಾರ್ಸ್ವಿ ಚೋಪ್ರ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಭಾರತ ಕೇವಲ 14 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಚೊಚ್ಚಲ ವಿಶ್ವಕಪ್ ಎತ್ತಿ ಹಿಡಿಯಿತು.

ಭಾರತ ವಿಶ್ವಕಪ್ ಪ್ರಶಸ್ತಿ ಜಯಿಸುತ್ತಲೇ ದೇಶದಾದ್ಯಂತ ಸಂಭ್ರಮ ಗರಿಗೆದರಿತ್ತು. ಅಲ್ಲದೆ ಅಂಡರ್ 19 ಭಾರತ ಮಹಿಳಾ ತಂಡವು ಜನಪ್ರಿಯ ‘ಕಾಲಾ ಚಷ್ಮಾ’ ಗೀತೆಗೆ ನೃತ್ಯ ಮಾಡುವ ಮೂಲಕ ವಿಜಯವನ್ನು ಸಂಭ್ರಮಿಸಿದೆ. ಈ ನೃತ್ಯದ ವಿಡಿಯೋವನ್ನು ಐಸಿಸಿ ಇನ್ಸ್ಟಗ್ರಾಮ್ ಖಾತೆಯಲ್ಲಿ ಹೊಸ ಕಾಲ ಚಷ್ಮಾ ಚಾಂಪಿಯನ್ಸ್ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದೆ.

 

View this post on Instagram

 

A post shared by ICC (@icc)

ಪ್ರಶಸ್ತಿ ಗೆದ್ದ ಭಾರತದ ಮಹಿಳಾ ತಂಡಕ್ಕೆ ಪ್ರಧಾನಿ ಮೋದಿ, ರಾಷ್ಟ್ರಪತಿ ದ್ರೌಪದಿ ಮುರ್ಮು ಸೇರಿದಂತೆ ಹಲವರು ಅಭಿನಂದನೆ ತಿಳಿಸಿದ್ದಾರೆ.

ಇದನ್ನೂ ಓದಿ; ಮಹಿಳಾ ಕ್ರಿಕೆಟ್ ನಡೆದು ಬಂದ ಹಾದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೊಪ್ಪಳ: ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಲು ಕಾಂಗ್ರೆಸ್‌ಗೆ ಸುವರ್ಣಾವಕಾಶ!?

0
ಹಿಂದುತ್ವ ರಾಜಕಾರಣದ ವಿಚಾರದಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರ ಕಳೆದ ಒಂದೂವರೆ ದಶಕದಿಂದ ಥೇಟ್ ಚಿಕ್ಕಮಗಳೂರು-ಶಿವಮೊಗ್ಗದ ತದ್ರೂಪಿ. ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಹಿಂದುತ್ವದ ಅಜೆಂಡಾ ಇಲ್ಲಿ ನಿರ್ಣಾಯಕ. ಆದರೆ, 2014ರಲ್ಲಿ ಲೋಕಸಭಾ ಕಣಕ್ಕೆ ಸಂಗಣ್ಣ ಕರಡಿ...