Homeಮುಖಪುಟನೈತಿಕ ಸಮಿತಿಯ ಅಧ್ಯಕ್ಷರು 'ವಸ್ತ್ರಾಪಹರಣ'ಕ್ಕೆ ಒಳಗಾಗಿದ್ದಾರೆ: ಸ್ಪೀಕರ್‌ಗೆ ಮೊಯಿತ್ರಾ ಪತ್ರ

ನೈತಿಕ ಸಮಿತಿಯ ಅಧ್ಯಕ್ಷರು ‘ವಸ್ತ್ರಾಪಹರಣ’ಕ್ಕೆ ಒಳಗಾಗಿದ್ದಾರೆ: ಸ್ಪೀಕರ್‌ಗೆ ಮೊಯಿತ್ರಾ ಪತ್ರ

- Advertisement -
- Advertisement -

ನಗದು-ಪ್ರಶ್ನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಲೋಕಸಭೆಯ ನೈತಿಕತೆ ಸಮಿತಿ ಮುಂದೆ ಹಾಜರಾಗಿದ್ದರು. ತಮಗೆ ಅನೈತಿಕ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ ಸಭೆಯಿಂದ ಹೊರ ನಡೆದಿದ್ದರು. ನೈತಿಕ ಸಮಿತಿಯ ಅಧ್ಯಕ್ಷರು “ವಸ್ತ್ರಾಹರಣ” ಅಥವಾ ವಸ್ತ್ರಾಪಹರಣಕ್ಕೆ ಒಳಗಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಾನಿಯಿಂದ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಆರೋಪಿಸಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಸುಪ್ರೀಂ ಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರು ದೂರು ನೀಡಿದ್ದಾರೆ.

ನೈತಿಕ ಸಮಿತಿಯು ಅಕ್ಟೋಬರ್‌ನಲ್ಲಿ ಈ ವಿಷಯದ ಬಗ್ಗೆ ತನ್ನ ತನಿಖೆಯನ್ನು ಪ್ರಾರಂಭಿಸಿತು. ಮೊಯಿತ್ರಾ ಅವರು ಗುರುವಾರ ಸಮಿತಿಯ ಮುಂದೆ ಹಾಜರಾದರು ಆದರೆ ಸಮಿತಿಯ ವಿರೋಧ ಪಕ್ಷದ ಸದಸ್ಯರೊಂದಿಗೆ ಸಭೆಯಿಂದ ಹೊರನಡೆದರು. ಸಮಿತಿಯ ಅಧ್ಯಕ್ಷ ವಿನೋದ್ ಸೋಂಕರ್ ಅವರು ತಮ್ಮ ವೈಯಕ್ತಿಕ ಮತ್ತು ಅನೈತಿಕ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಮೊಯಿತ್ರಾ ಆರೋಪಿಸಿದರು.

ಸಭೆಯ ನಂತರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದ ಮೊಯಿತ್ರಾ, ”ಸಮಿತಿಯು ಯಾವುದೇ ನೈತಿಕತೆ ಉಳಿಸಿಕೊಂಡಿಲ್ಲ” ಎಂದು ಹೇಳಿದರು.

”ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವ ಬದಲು, ಅಧ್ಯಕ್ಷರು ಮಾನಹಾನಿಕರ ರೀತಿಯಲ್ಲಿ ನನ್ನನ್ನು ಪ್ರಶ್ನಿಸುವ ಮೂಲಕ ದುರುದ್ದೇಶಪೂರಿತವಾಗಿ ಮತ್ತು ಸ್ಪಷ್ಟವಾಗಿ ಪೂರ್ವಾಗ್ರಹ ಪೀಡಿತ ಪಕ್ಷಪಾತವನ್ನು ಪ್ರದರ್ಶಿಸಿದರು, 11 ಸದಸ್ಯರಲ್ಲಿ ಐದು ಸದಸ್ಯರು ಹೊರನಡೆದರು ಮತ್ತು ಅವರ ಅವಮಾನಕರ ನಡವಳಿಕೆಯನ್ನು ಪ್ರತಿಭಟಿಸಿ  ಸಭೆಯನ್ನೇ ಬಹಿಷ್ಕರಿಸಿದರು” ಎಂದು ಆರೋಪಿಸಿದ್ದಾರೆ.

”ಸಮಿತಿಯ ಅಧ್ಯಕ್ಷ ವಿನೋದ್ ಸೋಂಕರ್ ತನ್ನ ವಿವರವಾದ ಮತ್ತು ವೈಯಕ್ತಿಕ ಪ್ರಶ್ನೆಗಳನ್ನು ಕೇಳುವ ಸ್ಕ್ರಿಪ್ಟ್ ಸಿದ್ಧಪಡಿಸಿಕೊಂಡರು. ಅದನ್ನು ಓದುವಾಗ ಪ್ರಶ್ನೆಗಳು ಅತ್ಯಂತ ಅಸಹ್ಯವಾದ ಸಾಲುಗಳಿಂದ ಕೂಡಿದ್ದವು. ಈ ಕೊಳಕು ಪ್ರಶ್ನೆಗಳಿಂದ ದೂರವಿರಲು ಸಮಿತಿಯ ಇತರ ಸದಸ್ಯರು ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ ಅವರು ಮುಂದುವರೆದರು” ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.

ತನ್ನ ವಿರುದ್ಧದ ಆರೋಪಗಳ ಕುರಿತು, ಮೊಯಿತ್ರಾ ಅವರು ಕಟುವಾದ ಭಾಷೆ ಬಳಸಿ ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷದ ಸದಸ್ಯರು ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ನೈತಿಕ ಸಮಿತಿ ಸಭೆಯಲ್ಲಿ ಅನೈತಿಕ, ವೈಯಕ್ತಿಕ ಪ್ರಶ್ನೆ ಕೇಳಿದರು: ಮಹುವಾ ಮೊಯಿತ್ರಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಕರ್ನಾಟಕದಲ್ಲಿ ಮುಸ್ಲಿಮರು ರಸ್ತೆ ಮಧ್ಯೆ ಗೋಹತ್ಯೆ ಮಾಡಿದ್ದಾರೆ ಎಂಬುವುದು ಸುಳ್ಳು

0
"ಕರ್ನಾಟಕದಲ್ಲಿ ಮುಸ್ಲಿಂ ಸಮುದಾಯದವರು ರಸ್ತೆ ಮಧ್ಯೆಯೇ ಬಹಿರಂಗವಾಗಿ ಗೋಹತ್ಯೆ ಮಾಡಿದ್ದಾರೆ" ಎಂದು ಎಕ್ಸ್‌ನಲ್ಲಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ. ವಿಡಿಯೋದಲ್ಲಿ ಜೀಪ್‌ ಒಂದರ ಮುಂಭಾಗದಲ್ಲಿ ಹಸುವಿನ ಕಳೇಬರ ಕಟ್ಟಿದಂತೆ ಕಾಣುತ್ತಿದೆ. ಫ್ಯಾಕ್ಟ್‌ಚೆಕ್ : ವಿಡಿಯೋದ ಸತ್ಯಾಸತ್ಯತೆಯನ್ನು ನಾವು...