ಆಲ್ಟರ್ನೇಟಿವ್‌ ನೋಬೆಲ್, Alternative Nobel -2020

ಪರ್ಯಾಯ ನೊಬೆಲ್ ಪ್ರಶಸ್ತಿ (ಆಲ್ಟರ್ನೇಟಿವ್‌ ನೋಬೆಲ್) ಎಂದು ಕರೆಯಲ್ಪಡುವ ”ರೈಟ್‌ ಲೈವ್ಲೀಹುಡ್ ಪ್ರಶಸ್ತಿ-2020” ಪ್ರಶಸ್ತಿಯನ್ನು, ಬೆಲಾರಸ್ ದೇಶದ ವಿರೋಧ ಪಕ್ಷದ ನಾಯಕ ಅಲೆಸ್ ಬಿಯಾಲಿಯಾಟ್ಸ್ಕಿ, ಪ್ರಸ್ತುತ ಜೈಲಿನಲ್ಲಿರುವ ಇರಾನಿನ ಮಾನವ ಹಕ್ಕುಗಳ ವಕೀಲೆ ನಸ್ರಿನ್ ಸೊತೌಡೆಹ್, ಅಮೇರಿಕಾದ ಸಾಮಾಜಿಕ ಹೋರಾಟಗಾರ ಬ್ರಿಯಾನ್ ಸ್ಟೀವನ್ಸನ್ ಮತ್ತು ನಿಕರಾಗುವಾದ ಪರಿಸರ ಹಕ್ಕುಗಳ ಹೋರಾಟಗಾರ ಲೊಟ್ಟಿ ಕನ್ನಿಂಗ್ಹ್ಯಾಮ್ ವ್ರೆನ್‌ಗೆ ಘೋಷಣೆಯಾಗಿದೆ.

“ಜಾಗತಿಕವಾಗಿ ಪ್ರಜಾಪ್ರಭುತ್ವಕ್ಕೆ ತೊಡಕುಗಳು ಹೆಚ್ಚುತ್ತಿವೆ. ಇದು ಪ್ರಪಂಚದಾದ್ಯಂತ ಪ್ರಜಾಪ್ರಭುತ್ವವನ್ನು ಬೆಂಬಲಿಸುವವರೆಲ್ಲರೂ ಎದ್ದುನಿಂತು ಪರಸ್ಪರ ಬೆಂಬಲಿಸುವ ಸಮಯ” ಎಂದು ಸ್ವೀಡನ್‌‌ನ “ರೈಟ್ ಲೈವ್ಲೀಹುಲ್ ಪ್ರತಿಷ್ಠಾನ”ದ ಮುಖ್ಯಸ್ಥ ಓಲೆ ವಾನ್ ಯುಕ್ಸ್ಕುಲ್ ಹೇಳಿದ್ದಾರೆ.

ಇದನ್ನೂ ಓದಿ: ಆರೋಗ್ಯ ಕ್ಷೇತ್ರದಲ್ಲಿ ಕೇರಳದ ದಣಿವರಿಯದ ಸೇವೆಗೆ ವಿಶ್ವಸಂಸ್ಥೆಯ ಪ್ರಶಸ್ತಿ

58 ವರ್ಷದ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಯಾಲಿಯಾಟ್ಸ್ಕಿ, ಈ ಹಿಂದೆ ನೋಬೆಲ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು. ಅವರು ದೇಶದ ಅಧ್ಯಕ್ಷ ಅಲೆಕ್ಸಾಂಡರ್ ಲುಕಾಶೆಂಕೊ ಅವರ ನೀತಿಯನ್ನು ಪ್ರಶ್ನಿಸಿದ್ದಕ್ಕಾಗಿ ಬಂಧಿಸಲ್ಪಟ್ಟು ಜೈಲಿನಲ್ಲಿದ್ದ ಸಾವಿರಾರು ಬೆಲರೂಸಿಯನ್ನರಿಗೆ ಕಾನೂನು ನೆರವು ನೀಡಿದ್ದರು.

ಪ್ರಸ್ತುತ ಜೈಲಿನಲ್ಲಿರುವ ಇರಾನಿನ ಮಾನವ ಹಕ್ಕುಗಳ ವಕೀಲೆ ನಸ್ರಿನ್ ಸೊತೌಡೆಹ್‌ಗೆ, ವೈಯಕ್ತಿಕ ಅಪಾಯವನ್ನು ಮೀರಿ, ರಾಜಕೀಯ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸಿದ ಅವರ ನಿರ್ಭೀತ ಕ್ರಿಯಾಶೀಲತೆಗಾಗಿ ಪ್ರಶಸ್ತಿ ಘೋಷಿಸಲಾಗಿದೆ.

2020 ರ ಪ್ರಶಸ್ತಿ ಪಡೆದ ಮೂರನೇ ವ್ಯಕ್ತಿ 60 ವರ್ಷಗಳ ಬ್ರಿಯಾನ್ ಸ್ಟೀವನ್ಸನ್ ಆಗಿದ್ದು, ಇವರು ನಾಗರಿಕ ಹಕ್ಕುಗಳ ವಕೀಲರಾಗಿದ್ದಾರೆ. ಅಮೇರಿಕಾದಲ್ಲಿ ಅಪರಾಧ ನ್ಯಾಯ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಆಘಾತದ ಸಂದರ್ಭದಲ್ಲಿ ಜನಾಂಗೀಯ ಸಾಮರಸ್ಯವನ್ನು ಮುನ್ನಡೆಸಲು ಕೈಗೊಂಡ ಸ್ಪೂರ್ತಿದಾಯಕ ಪ್ರಯತ್ನಕ್ಕಾಗಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಇದನ್ನೂ ಓದಿ: ನೊಬೆಲ್​ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಟ್ರಂಪ್ ಹೆಸರು ಶಿಫಾರಸ್ಸು: ನಾರ್ವೇಯ ಸಂಸತ್ ಸದಸ್ಯ

ನಾಲ್ಕನೇ ವ್ಯಕ್ತಿ ನಿಕರಾಗುವಾದ ಪರಿಸರ ಹಕ್ಕು ಹೋರಾಟಗಾರ ಲೊಟ್ಟಿ ಕನ್ನಿಂಗ್ಹ್ಯಾಮ್ ವ್ರೆನ್ ಆಗಿದ್ದು, ಅವರಿಗೆ ಸ್ಥಳೀಯ ಜಮೀನುಗಳು ಮತ್ತು ಸಮುದಾಯಗಳನ್ನು, ಶೋಷಣೆ ಮತ್ತು ಲೂಟಿಯಿಂದ ರಕ್ಷಿಸಲು ನಿರಂತರವಾಗಿ ಹೋರಾಟ ಮಾಡಿದ್ದಕ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಡಿಸೆಂಬರ್ 3 ರಂದು ಇವರಿಗೆ ಪ್ರಶಸ್ತಿ ಪ್ರದಾನವಾಗಲಿದ್ದು, ಪ್ರಶಸ್ತಿ ವಿಜೇತರು ತಲಾ 1 ಮಿಲಿಯನ್ ಕ್ರೋನರ್ (110,100 ಅಮೇರಿಕಾ ಡಾಲರ್‌) ಬಹುಮಾನವನ್ನು ಪಡೆಯುತ್ತಾರೆ. ಕಳೆದ ಬಾರಿ ಈ ಪ್ರಶಸ್ತಿ ಸ್ವೀಡಿಷ್ ಪರಿಸರ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌ಗೆ ಲಭಿಸಿತ್ತು.

“ರೈಟ್‌ ಲೈವ್ಲೀಹುಡ್ ಪ್ರಶಸ್ತಿ”ಯನ್ನು 1980 ರಲ್ಲಿ ಪ್ರಾರಂಭಿಸಲಾಯಿತು. ಇದನ್ನು ಸ್ವೀಡಿಷ್-ಜರ್ಮನ್ ಮೂಲದ ಜಾಕೋಬ್ ವಾನ್ ಯುಕ್ಸ್ಕುಲ್ ಪ್ರಾರಂಬಿಸಿದ್ದು, ನೊಬೆಲ್ ಪ್ರಶಸ್ತಿಯಿಂದ ನಿರ್ಲಕ್ಷಿಸಲ್ಪಟ್ಟವರನ್ನು ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ.

ಮತ್ತಷ್ಟು ಓದಿಗೆ:  Activists from Belarus, Iran, Nicaragua and US to Receive ‘Alternative Nobel’ Prize

ಇದನ್ನೂ ಓದಿ: ಪದ್ಮಭೂಷಣ ಪ್ರಶಸ್ತಿ ಪಡೆದ ಸಾಹಿತಿಯನ್ನು ’ಬೌದ್ಧಿಕ ಜಿಹಾದಿ’ ಎಂದ ಬಿಜೆಪಿ ಶಾಸಕ: ದೂರು ದಾಖಲು

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts