Homeಮುಖಪುಟನೂತನ ಸಂಸತ್ ಭವನ ಉದ್ಘಾಟನೆಯ ಆಚರಣೆಗಳು; ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ

ನೂತನ ಸಂಸತ್ ಭವನ ಉದ್ಘಾಟನೆಯ ಆಚರಣೆಗಳು; ಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ

- Advertisement -
- Advertisement -

ವೈಚಾರಿಕತೆ, ಸ್ವಾಭಿಮಾನ ಮತ್ತು ದ್ರಾವಿಡ ಚಳುವಳಿ ಗಟ್ಟಿಯಾಗಿ ನೆಲೆಯೂರಿರುವ ತಮಿಳುನಾಡಿನಲ್ಲಿ ಸನಾತನದ ಪ್ರಭಾವ ಈಗಲೂ ಕಡಿಮೆಯೇನಲ್ಲ ಎಂಬುದಕ್ಕೆ ಪ್ರಸ್ತುತ ಚಾಲ್ತಿಯಲ್ಲಿರುವ “ಸೆಂಗೋಲ್” ಪ್ರಕರಣ ತಾಜಾ ಉದಾಹರಣೆ. ನೂತನ ಸಂಸತ್ ಭವನದ ಉದ್ಘಾಟನೆಗೆ ಆಗಮಿಸಿದ್ದ ತಮಿಳುನಾಡಿನ ಮಧುರೈ ಆದೀನಮ್ ಸಂಸ್ಥಾನದ ಒಂದು ತಂಡ ರಾಜಪ್ರಭುತ್ವದ ಪ್ರತೀಕವಾದ “ಸೆಂಗೋಲ್”ಅನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದೆ. ಅದನ್ನು ಸ್ವೀಕರಿಸಿದ ಮೋದಿಯವರು ತಮಿಳುನಾಡಿನ ಚೋಳ ಪರಂಪರೆಯನ್ನೂ, ತಮಿಳು ಭಾಷೆಯನ್ನೂ ಹಾಡಿಹೊಗಳಿದ್ದಾರೆ.

ಭಾರತದ ಮಟ್ಟಿಗೆ ಭೂತಕಾಲವನ್ನು ಹಾಡಿಹೊಗಳಿ ಸಂಭ್ರಮಿಸುವುದು ಹೊಸತೇನಲ್ಲ. ಗತವನ್ನು ರೊಮ್ಯಾಂಟಿಸೈಸ್ ಮಾಡುವುದು ಸನಾತನಿಗಳ ಸ್ವತ್ತು ಎಂಬಂತಾಗಿದೆ. ವೇದಗಳ ಕಾಲದಲ್ಲಿ ಭಾರತ ಹಾಗಿತ್ತು, ಸನಾತನ ಸಂಸ್ಕೃತಿ ಹೀಗಿತ್ತು ಎಂದು ಸುಳ್ಳುಗಳನ್ನು ಸಂಭ್ರಮಿಸುತ್ತಾ ವರ್ತಮಾನದಲ್ಲಿನ ಅಸಮಾನತೆಗೆ ಕುರುಡಾಗಿ, ಸಮಸಮಾಜದ ಆಶಯವನ್ನು ಬಲಿಕೊಡುವುದು ಈ ದೇಶದಲ್ಲಿ ಎಲ್ಲ ಕಾಲದಲ್ಲೂ ನಡೆದೇ ಇದೆ. ಈಗ ಸೆಂಗೋಲ್ ಸ್ವೀಕರಿಸಿ ತಮಿಳುನಾಡಿನ “ಚೋಳ” ರಾಜವಂಶವನ್ನು ಹೊಗಳುವ ಮೂಲಕ ಪ್ರಧಾನಿ ಮೋದಿಯವರೂ ಸಹ ಭೂತಕಾಲವನ್ನು ವೈಭವೀಕರಿಸುತ್ತಾ, ವರ್ತಮಾನದ ಸಮಸ್ಯೆಗಳನ್ನು ಹಾಗೂ ಭೂತಕಾಲದ ಮತ್ತೊಂದು ಕರಾಳ ಮುಖವನ್ನು ಮರೆಮಾಚುವ ಸಂಪ್ರದಾಯದ ಮುಂದುವರಿಕೆಯಾಗಿದ್ದಾರೆ.

ಈ “ಸೆಂಗೋಲ್” ಎಂದರೇನು? ತಮಿಳುನಾಡಿನ ರಾಜ ಪರಂಪರೆಯಲ್ಲಿ ಈ ಪದಕ್ಕೆ ಅಷ್ಟು ಮಹತ್ವವೇಕೆ? “ಸೆಂಗೋಲ್” ಪ್ರಕರಣಕ್ಕೆ ತಮಿಳುನಾಡು ಹೇಗೆ ಪ್ರತಿಕ್ರಿಯಿಸಿದೆ? ಪ್ರಧಾನಿ ಮೋದಿಯವರಿಗೆ ಮಧುರೈ ಆದೀನಮ್ ಈ ವಸ್ತುವನ್ನು ನೀಡಿದ್ದು ಏಕೆ? ಮತ್ತು ಕಳೆದ ನಾಲ್ಕು ವರ್ಷದಲ್ಲಿ ನೆರೆ-ಬರ ಸಮಸ್ಯೆ, ಕೊರೊನಾ ಸಾಂಕ್ರಾಮಿಕಕ್ಕೆ ಸಾವಿರಾರು ಜನ ಬಲಿಯಾದಾಗ ಕರ್ನಾಟಕಕ್ಕೆ ಆಗಮಿಸಿ ಕಷ್ಟಸುಖ ಕೇಳದ ಮೋದಿ ಇದೇ ಅವಧಿಯಲ್ಲಿ ತಮಿಳುನಾಡಿಗೆ ಮಾತ್ರ 16 ಸಲ ಹೋಗಿದ್ದು ಏಕೆ? ಹಿಂದಿ ಹೇರಿಕೆಯ ಹರಿಕಾರರಾದ ಇದೇ ಮೋದಿಯವರು ಇಂದು ಇದ್ದಕ್ಕಿದ್ದಂತೆ ತಮಿಳು ಭಾಷೆಯನ್ನು ಕೊಂಡಾಡುತ್ತಿರುವುದು ಏಕೆ? ಎಂಬ ಎಲ್ಲ ಪ್ರಶ್ನೆಗಳ ಉತ್ತರವನ್ನು ಕಂಡುಕೊಳ್ಳುತ್ತಾ (connecting the dots) ಹೋದರೆ ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿ ಹೆಣೆಯುತ್ತಿರುವ ಹೊಸ ರಾಜಕೀಯ ತಂತ್ರಗಾರಿಕೆಯೊಂದರ ಮರ್ಮ ಸ್ಪಷ್ಟವಾಗಿ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.

ಏನಿದು “ಸೆಂಗೋಲ್”?

ರಾಜದಂಡ ಎಂಬರ್ಥವನ್ನು ಬಿಟ್ಟರೆ “ಸೆಂಗೋಲ್”ಗೆ ಬೇರೆ ಯಾವುದೇ ವಿಶೇಷ ಅರ್ಥವಿಲ್ಲ. ಆದರೆ, ತಮಿಳುನಾಡನ್ನು ಆಳ್ವಿಕೆ ಮಾಡಿದ ಚೇರ, ಚೋಳ, ಪಾಂಡ್ಯ ರಾಜಮನೆತನಗಳು ಈ ರಾಜದಂಡವನ್ನು ಕೈಲಿಡಿದುಕೊಂಡೇ ಶತಶತಮಾನಗಳ ಕಾಲ ತಮಿಳು ಜನಸಮೂಹವನ್ನು ತನ್ನ ಕಾಲಡಿಯಲ್ಲಿ ಗುಲಾಮರಾಗಿ ಮಂಡಿಯೂರುವಂತೆ ಮಾಡಿತು ಎಂಬುದು ನೂರಕ್ಕೆ ನೂರರಷ್ಟು ಸತ್ಯ. ಇದಕ್ಕೆ ನೂರಾರು ಐತಿಹಾಸಿಕ ದಾಖಲೆಗಳಿವೆ.

“ತಮಿಳು ರಾಜಮನೆತನಗಳ “ಸೆಂಗೋಲ್ ಆಳ್ವಿಕೆ” ಎಂದರೆ ಯಾರೂ ರಾಜನನ್ನು ಪ್ರಶ್ನೆ ಮಾಡುವ ಹಾಗೇ ಇರಲಿಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೆ ಈಗ ದೇಶದ್ರೋಹಿ ಎಂಬಂತೆ ಆ ಕಾಲದಲ್ಲಿ ರಾಜದ್ರೋಹಿ, ಕುಲದ್ರೋಹಿ, ಶಿವದ್ರೋಹಿ ಎಂದು ಜರಿಯಲಾಗುತ್ತಿತ್ತು. ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಗಡಿಪಾರು ಮಾಡಲಾಗುತ್ತಿತ್ತು. ಇದಕ್ಕೆ ಸಾಕಷ್ಟು ಪುರಾವೆಗಳಿವೆ” ಎನ್ನುತ್ತಾರೆ ಖ್ಯಾತ ತಮಿಳು ಇತಿಹಾಸ ಮತ್ತು ಪ್ರಾಕ್ತನಶಾಸ್ತ್ರಜ್ಞ ಎನ್. ವಾನಮಾಮಲೈ.

ಇನ್ನು ತಮಿಳರು ಕೊಂಡಾಡುವ ಚೋಳರ ಕಾಲದ ತೆರಿಗೆ ಪದ್ಧತಿಯ ಕಡೆಗೆ ಗಮನ ಹರಿಸಿದರೆ, ಆ ಕಾಲದಲ್ಲಿ 400 ಬಗೆಯ ವಿವಿಧ ತೆರಿಗೆಗಳನ್ನು ವಸೂಲಿ ಮಾಡಲಾಗುತ್ತಿತ್ತು ಎಂಬುದು ತಿಳಿದುಬರುತ್ತದೆ. ಸಾಮ್ರಾಜ್ಯ ವಿಸ್ತರಣೆಯಲ್ಲಿದ್ದ ಚೋಳರು ರಾಜ್ಯಾಡಳಿತ ಮಾಡಿದ್ದಕ್ಕಿಂತ ಯುದ್ಧದಲ್ಲಿ ಕಾಲ ಕಳೆದದ್ದೇ ಹೆಚ್ಚು. ಹೀಗಾಗಿ “ಯುದ್ಧ ತೆರಿಗೆ”ಯನ್ನು ಪ್ರತ್ಯೇಕವಾಗಿ ವಸೂಲಿ ಮಾಡಲಾಗುತ್ತಿತ್ತು ಎಂಬ ಬಗ್ಗೆ ಉಲ್ಲೇಖಗಳಿವೆ.

ಇದನ್ನೂ ಓದಿ: ಸೆಂಗೋಲ್ ರಾಜದಂಡದ ಕುರಿತು ಬಿಜೆಪಿ ಹೇಳುತ್ತಿರುವ ಇತಿಹಾಸಕ್ಕೆ ಪುರಾವೆಗಳಿಲ್ಲ: ‘WhatsApp ಇತಿಹಾಸ’ ಶೀರ್ಷಿಕೆಯ ಅಂಕಣ ವೈರಲ್

ತೆರಿಗೆ ನೀಡದವರಿಗೆ ಕಠಿಣ ಶಿಕ್ಷೆಗಳನ್ನು ವಿಧಿಸಿರುವ ಬಗ್ಗೆ ಚೋಳ ಶಾಸನಗಳೇ ಸಾಕಷ್ಟು ಪುರಾವೆ ನೀಡಿವೆ. “ಚೋಳ ಸಾಮ್ರಾಜ್ಯದಲ್ಲಿ ’ಸೇಂದನ್ ಉಮಯಾಳ್’ ಎಂಬ ಮಹಿಳೆ ತೆರಿಗೆ ಕಟ್ಟಲಾಗದೆ ತೆರಿಗೆ ಅಧಿಕಾರಿಗಳು ನೀಡಿದೆ ಶಿಕ್ಷೆ ಮತ್ತು ಕಿರುಕುಳದಿಂದ ಬೇಸತ್ತು ಕೊನೆಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಳು” ಎಂಬ ಮಾಹಿತಿಯನ್ನು 1054ರ “ತಂಜೈ” ಶಾಸನ ಬಹಿರಂಗಪಡಿಸುತ್ತದೆ. ಈ ಬಗ್ಗೆ ಎನ್. ವಾನಮಾಮಲೈ ತಮ್ಮ ಪುಸ್ತಕದಲ್ಲಿ ವಿವರವಾಗಿ ಚರ್ಚಿಸಿದ್ದಾರೆ.

ಇನ್ನೂ “ಚೋಳರ ಕಾಲದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ದೇಗುಲಗಳು ಅಸಲಿಗೆ ತೆರಿಗೆ ವಸೂಲಾತಿ ಕಚೇರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದವು ಮತ್ತು ಈ ಎಲ್ಲ ಅಧಿಕಾರವನ್ನು ಬ್ರಾಹ್ಮಣರಿಗೆ ನೀಡಲಾಗುತ್ತಿತ್ತು. ಇದಲ್ಲದೆ ಬ್ರಾಹ್ಮಣರಿಗೆ ಮತ್ತು ಶ್ರೀಮಂತರಿಗೆ ತೆರಿಗೆ ವಿನಾಯಿತಿ ಇತ್ತು. ಇದರ ಜತೆಗೆ ದೇವಾಲಯದ ನಿರ್ವಹಣೆಗೆಂದು ದಲಿತರ ಭೂಮಿಯನ್ನು ಕಸಿದು “ಬ್ರಹ್ಮದೇಯಂ” ಎಂಬ ಹೆಸರಿನಲ್ಲಿ ಬ್ರಾಹ್ಮಣರಿಗೆ ನೀಡಲಾಗುತ್ತಿತ್ತು. ದಲಿತರ ಭೂಮಿಯಲ್ಲಿ ದಲಿತರನ್ನೇ ಕೂಲಿಗಳನ್ನಾಗಿಸಲಾಗುತ್ತಿತ್ತು. ದಲಿತರನ್ನು ಊರಿನಿಂದ ಹೊರಗಿಟ್ಟು ಅಸ್ಪೃಶ್ಯತೆ ಆಚರಿಸಲಾಗುತ್ತಿತ್ತು, ಇನ್ನೂ ದಲಿತರ ಹೆಣ್ಣುಮಕ್ಕಳನ್ನು ದೇವದಾಸಿಯರಾಗಿ ಮಾಡಿದ ಕುಖ್ಯಾತಿಯೂ ಚೋಳರಿಗೆ ಇದೆ” ಎಂದು ಚೋಳರ ಕಾಲದ ಇತಿಹಾಸದ ಮತ್ತೊಂದು ಮುಖವನ್ನು ತೆರೆದಿಡುತ್ತಾರೆ ಎನ್. ವಾನಮಾಮಲೈ.

ಚೋಳರು ಮಾತ್ರವಲ್ಲ ತಮಿಳುನಾಡನ್ನು ಆಳ್ವಿಕೆ ಮಾಡಿದ ಚೇರರು ಮತ್ತು ಪಾಂಡ್ಯರ ಕಾಲದಲ್ಲೂ ಜನರನ್ನು ಸುಲಿಯಲಾಗಿತ್ತು. ರಾಜಾಳ್ವಿಕೆಯ ಎಲ್ಲ ಕಾಲದಲ್ಲೂ ಸಮಾಜದ ಕಟ್ಟಕಡೆಯ ಜನಸಮುದಾಯ ನೋವನ್ನಷ್ಟೇ ಉಂಡಿದೆ. ಆದರೆ, ನಾವು ರಾಜಾಳ್ವಿಕೆಯನ್ನು ಸಂಭ್ರಮಿಸುತ್ತಾ ಆ ಕಾಲದ ಮತ್ತೊಂದು ಘೋರ ಮುಖವನ್ನು ಮರೆಮಾಚಿಬಿಡುತ್ತೇವೆ. ಈಗ ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿರುವುದೂ ಅದನ್ನೇ ಎಂದು ತಮಿಳುನಾಡಿನ ಹಲವು ಚಿಂತಕರು ಕಿಡಿಕಾರುತ್ತಿದ್ದಾರೆ.

“ರಾಜಾಳ್ವಿಕೆಯ ಕಾಲದಲ್ಲಿ ಎಲ್ಲ ವರ್ಗದ ಜನಸಮುದಾಯಗಳಿಗೂ ಸಮಾನ ನ್ಯಾಯ ಎಂಬುದು ಮರೀಚಿಕೆಯಾಗಿತ್ತು. ಇದೇ ಕಾರಣಕ್ಕೆ ಭಾರತದಲ್ಲಿ ಹಲವು ಹೋರಾಟಗಳ ನಂತರ ಪ್ರಜಾಪ್ರಭುತ್ವ ಜಾರಿಗೊಳಿಸಲಾಗಿತ್ತು. ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ ಸನಾತನ ಮನುವಾದಿಗಳ ಪಾಲಿಗೆ ಶವ ಪೆಟ್ಟಿಗೆಯೇ ಆಗಿತ್ತು. ಆದರೆ, ಜಿಎಸ್‌ಟಿ ಮುಂತಾದ ಒಕ್ಕೂಟ ವಿರೋಧಿ ನೀತಿಗಳ ಮೂಲಕ ಈಗಾಗಲೇ ಪರೋಕ್ಷ ರಾಜಾಳ್ವಿಕೆ ಹೇರಿರುವ ಪ್ರಧಾನಿ ಮೋದಿ ಇಂದು ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‌ನಲ್ಲಿ ರಾಜಾಳ್ವಿಕೆಯ ಪ್ರತೀಕವಾದ “ಸೆಂಗೋಲ್”ಅನ್ನು ಬಹಿರಂಗವಾಗಿ ಸ್ವೀಕರಿಸುವ ಮೂಲಕ ಭಾರತವನ್ನು ಮತ್ತೆ ಸನಾತನಿಗಳ ದೇಶವನ್ನಾಗಿ ಮಾರ್ಪಡಿಸಲು ಯತ್ನಿಸುತ್ತಿದ್ದಾರೆ. ಇದು ನಿಜಕ್ಕೂ ಪ್ರಜಾಪ್ರಭುತ್ವಕ್ಕೆ ಆಘಾತಕಾರಿ ಬೆಳವಣಿಗೆ” ಎನ್ನುತ್ತಾರೆ ತಮಿಳುನಾಡಿನ ಡಿಎಂಕೆ ಪಕ್ಷದ ಯುವ ನಾಯಕರಾದ ರಾಜೀವ್ ಗಾಂಧಿ.

ತಮಿಳುನಾಡನ್ನು ಗೆಲ್ಲಲು ಸೆಂಗೋಲ್ ತಂತ್ರ?

ತಮಿಳುನಾಡಿನಲ್ಲೂ ಬಿಜೆಪಿ ಅಧಿಕಾರ ಹಿಡಿಯುವಂತಾಗಬೇಕು ಎಂಬುದು ಆರ್‌ಎಸ್‌ಎಸ್‌ನ ಬಹುದಿನದ ಕನಸು. ಪಶ್ಚಿಮ ಬಂಗಾಳದಲ್ಲೂ ತಕ್ಕಮಟ್ಟಿಗೆ ನೆಲೆಯೂರಿರುವ ಬಿಜೆಪಿ ಪಾಲಿಗೆ ತಮಿಳುನಾಡು ಎಂಬುದು ಮಾತ್ರ ದೂರದ ಬೆಟ್ಟದಂತಾಗಿದೆ. ದ್ರಾವಿಡ ಚಳವಳಿ ಇನ್ನೂ ಗಟ್ಟಿಯಾಗಿರುವ ತಮಿಳುನಾಡಿನ ಬಹುಸಂಖ್ಯಾತ ಜನ ಈಗಲೂ ಕೋಮುವಾದಿ ಪಕ್ಷವನ್ನು ಹತ್ತಿರಕ್ಕೂ ಬಿಟ್ಟುಕೊಂಡಿಲ್ಲ.

ತಮಿಳುನಾಡಿನ ಜನರ ಮನಸ್ಸೆಳೆಯಲು ಮೋದಿ ನಾನಾ ತಂತ್ರವನ್ನು ಹೆಣೆದಾಯ್ತು; ಕಳೆದ ನಾಲ್ಕು ವರ್ಷದಲ್ಲಿ ಅತಿಹೆಚ್ಚು ಬಾರಿ ಅಂದರೆ 16 ಬಾರಿ ಅವರು ತಮಿಳುನಾಡಿಗೆ ಭೇಟಿ ಕೊಟ್ಟಿದ್ದಾರೆ. ಕರ್ನಾಟಕದ ಕಷ್ಟಕ್ಕೆ ಓಗೊಡದ ಮೋದಿ ಸಣ್ಣಪುಟ್ಟ ಕಾರ್ಯಕ್ರಮಗಳಿಗೂ ಸಹ ನೆರೆಯ ರಾಜ್ಯಕ್ಕೆ ತೆರಳಿದ್ದಾರೆ. ಆದರೂ, ಕಳೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಮಟ್ಟಿಗೆ ಬಿಜೆಪಿ-ಎಡಿಎಂಕೆ ಮೈತ್ರಿಪಕ್ಷಗಳ ಸಾಧನೆ ಶೂನ್ಯ ಎಂಬುದು ಉಲ್ಲೇಖಾರ್ಹ.

ಯಾವುದೇ ಕಸರತ್ತಿಗೂ ಮಣಿಯದ ತಮಿಳುನಾಡಿನ ಜನಸಮೂಹವನ್ನು ಭಾವನಾತ್ಮಕವಾಗಿ ವಶಪಡಿಸಿಕೊಳ್ಳಲು ಆರ್‌ಎಸ್‌ಎಸ್ ಹೂಡಿರುವ ಮತ್ತೊಂದು ಹೊಸ ತಂತ್ರವೇ ಈ “ಸೆಂಗೋಲ್” ಎನ್ನಲಾಗುತ್ತಿದೆ.

ರಾಜೀವ್ ಗಾಂಧಿ

ನೆರೆಯ ತಮಿಳುನಾಡಿನ ಜನ ದ್ರಾವಿಡ ಚಳವಳಿಯನ್ನು ಒಪ್ಪಿಕೊಂಡು ಕೋಮುವಾದಕ್ಕೆ ಬೆನ್ನು ತೋರಿಸಿದ್ದರೂ ಸಹ ಭಾಷೆ ಮತ್ತು ತಮ್ಮ ನಾಡಿನ ಪರಂಪರೆಯ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರಲ್ಲೂ ಚೋಳ ಸಾಮ್ರಾಜ್ಯದ ಬಗ್ಗೆ ಅಲ್ಲಿನ ಜನರಿಗೆ ವಿಶೇಷ ಪ್ರೀತಿ ಮತ್ತು ಆರಾಧನಾ ಭಾವ ಇದೆ. ಹೀಗಾಗಿ ಚೋಳ ಸಾಮ್ರಾಜ್ಯದ ದ್ಯೋತಕವಾಗಿ “ಸೆಂಗೋಲ್”ಅನ್ನು ಸಂತ್‌ನಲ್ಲಿ ಪ್ರತಿಷ್ಠಾಪಿಸಿಬಿಟ್ಟರೆ ತಮಿಳುನಾಡಿನಲ್ಲಿ ಬಿಜೆಪಿ ಸುಲಭಕ್ಕೆ ಬೀಡುಬಿಡಬಹುದು ಎಂಬ ಲೆಕ್ಕಾಚಾರದಲ್ಲಿದೆ ಎನ್ನಲಾಗುತ್ತಿದೆ.

2024ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡೇ ಬಿಜೆಪಿ ಸರ್ಕಾರ ಈ ಎಲ್ಲ ತಂತ್ರವನ್ನು ಹೆಣೆಯುತ್ತಿದೆ. ಆದರೆ, ನರೇಂದ್ರ ಮೋದಿ ಎಂಬ ನಾಯಕ ಹಾಗೂ ಬಿಜೆಪಿ ಎಂಬ ಕೋಮುವಾದಿ ಪಕ್ಷವನ್ನು ಯಾವ ಕಾರಣಕ್ಕೂ ಒಪ್ಪದ ತಮಿಳುನಾಡಿನ ಜನ ಮೋದಿ ಅವರ ಈ ಹೊಸ ಈವೆಂಟ್ ಮ್ಯಾನೇಜ್ಮೆಂಟ್ ಕಾರ್ಯಕ್ರಮಕ್ಕೆ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

ನೆಹರೂ ಅವರಿಗೂ ಸೆಂಗೋಲ್ ನೀಡಲಾಗಿತ್ತೇ?

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯವನ್ನು ಘೋಷಿಸಲಾಗಿತ್ತು. ನೆಹರೂ ಅವರನ್ನು ಹಂಗಾಮಿ ಪ್ರಧಾನಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಭಾರತದಲ್ಲಿ ಅಧಿಕಾರ ಹಸ್ತಾಂತರದ ಸಂಕೇತವಾಗಿ (symbol of transferring power) ಏನನ್ನು ಗುರುತಿಸಲಾಗುತ್ತದೆ ಎಂಬುದರ ಬಗ್ಗೆ ಬ್ರಿಟಿಷರಲ್ಲಿ ಗೊಂದಲವಿತ್ತು.

ಈ ಸಂದರ್ಭದಲ್ಲಿ ನೆಹರೂ ಅವರ ಆಪ್ತರಾಗಿದ್ದ ತಮಿಳುನಾಡಿನ ಮುಖಂಡ ರಾಜಾಜಿ, “ರಾಜರು ಅಧಿಕಾರವನ್ನು ತಮ್ಮ ಉತ್ತರಾಧಿಗಳಿಗೆ “ಸೆಂಗೋಲ್” ನೀಡುವ ಮೂಲಕ ಹಸ್ತಾಂತರ ಮಾಡುತ್ತಾರೆ. ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡುತ್ತಿರುವ ಈ ಘಳಿಗೆಗೆ ನಾವು ಸೆಂಗೋಲ್ ಅನ್ನು ಸಂಕೇತವಾಗಿ ಬಳಸಬಹುದು” ಎಂಬ ಉಪಾಯ ನೀಡಿದ್ದರು. ಕೊನೆಗೆ ಆ ಜವಾಬ್ದಾರಿಯನ್ನು ಅವರಿಗೇ ನೀಡಲಾಗಿತ್ತು. ಸನಾತನ ಆಚರಣೆಗಳ ಮೇಲೆ ಭಾರೀ ನಂಬಿಕೆ ಹೊಂದಿದ್ದ ರಾಜಾಜಿ ಮಧುರೈನ ಆದೀನಂ ಸಂಸ್ಥಾನವನ್ನು ಸಂಪರ್ಕಿಸಿದ್ದರು. ರಾಜಾಜಿ ಬೇಡಿಕೆಗಾಗಿ ಆದೀನಂ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿದ್ದೇ ಇಂದು ಮೋದಿ ಕೈಲಿರುವ ಸೆಂಗೋಲ್.

ಭಾರತದಲ್ಲಿ ಬ್ರಿಟಿಷರ ಕೊನೆಯ ವೈಸ್‌ರಾಯ್ ಆಗಿದ್ದ ಮೌಂಟ್ ಬ್ಯಾಟನ್ ಈ ಸೆಂಗೋಲ್‌ಅನ್ನು ಜವಾಹರಲಾಲ್ ನೆಹರೂ ಅವರ ಕೈಗೆ ನೀಡುವ ಮೂಲಕ ಭಾರತಕ್ಕೆ ಸ್ವಾತಂತ್ರ್ಯವನ್ನು ಹಸ್ತಾಂತರಿಸಿದ್ದರು. ಆದರೆ, ನೆಹರು ಈ ಸೆಂಗೋಲ್‌ಅನ್ನು ಸ್ವೀಕರಿಸುತ್ತಿದ್ದಂತೆ ಇದು ರಾಜಾಳ್ವಿಕೆಯ ಪ್ರತೀಕ, ಹೀಗಾಗಿ ಪ್ರಜಾಪ್ರಭುತ್ವ ಭಾರತಕ್ಕೆ ಇದರ ಅಗತ್ಯವಿಲ್ಲ ಎಂದು ಅಲಹಾಬಾದ್‌ನ ಮ್ಯೂಸಿಯಂಗೆ ಕಳಿಸಿಕೊಟ್ಟಿದ್ದರು. ಇಂತಹ ಆಚರಣೆಯ ವಿರುದ್ಧ ಅಂದು ಸಿ.ಎನ್ ಅಣ್ಣಾದೊರೈ (ಅವರು ಮುಂದೆ ತಮಿಳುನಾಡಿನ ಮುಖ್ಯಮಂತ್ರಿಯಾದರು) ಎಚ್ಚರಿಸಿದ್ದರು ಎಂಬುದು ಕೂಡ ಉಲ್ಲೇಖಾರ್ಹ.

ಆದರೆ ಮೇ 28ರಂದು ನಡೆದ ನೂತನ ಸಂಸತ್ ಭವನದ ಉದ್ಘಾಟನೆಯಲ್ಲಿ, ಅಲಹಾಬಾದ್‌ನ ಮ್ಯೂಸಿಯಂನಲ್ಲಿದ್ದ ಸೆಂಗೋಲ್‌ಅನ್ನು ತಂದು, ಕೆಲವು ಕಾವಿಧಾರಿಗಳ ಸಮ್ಮುಖದಲ್ಲಿ ಅದನ್ನು ಪಡೆದು, ಅವರ ಕಾಲಿಗೆರಗಿ, ಪ್ರಜಾಪ್ರಭುತ್ವದ ದೇಗುಲವಾದ ಸಂಸತ್‌ನಲ್ಲಿಯೇ ಇದೀಗ ಅದನ್ನು ಪ್ರತಿಷ್ಠಾಪಿಸಿರುವುದು ದುರಂತವೇ ಸರಿ.

ಅಶೋಕ್ ಕುಮಾರ್

ಅಶೋಕ್ ಕುಮಾರ್
ಮೂಲತಃ ಭದ್ರಾವತಿಯವರಾದ ಅಶೋಕ್, ಹಲವು ಮಾಧ್ಯಮಗಳಲ್ಲಿ ಕೆಲಸ ಮಾಡಿರುವ ಅನುಭವಿ ಯುವ ಪತ್ರಕರ್ತರು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. When the whole country with all parties are practising caste based politics, caste based reservations, caste based appointments, caste / religion based appeasement, it looks funny to still talk secular principles. The one and only opposition in my view is Modiji is inaugurating .

LEAVE A REPLY

Please enter your comment!
Please enter your name here

- Advertisment -

ಭೂ ಕಬಳಿಕೆ ಆರೋಪ : ಸದನದಲ್ಲಿ ಚರ್ಚೆಗೆ ಸಿದ್ದ ಎಂದ ಸಚಿವ ಕೃಷ್ಣ ಬೈರೇಗೌಡ

"ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ ಎತ್ತಿರುವ ವೈಯಕ್ತಿಕ ಆರೋಪದ ಬಗ್ಗೆ ಚರ್ಚೆಗೆ ಸಿದ್ದ" ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು. ಗುರುವಾರ (ಡಿ.18) ವಿಧಾನಸಭೆಯ ಶೂನ್ಯ ವೇಳೆಯಲ್ಲಿ, ವಿಧಾನಪರಿಷತ್...

ಡಿಸೆಂಬರ್ 15 ರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಕ್ಕಾಗಿ ಜಾಮಿಯಾ ಮಿಲಿಯಾ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯದಿಂದ ಶೋಕಾಸ್ ನೋಟಿಸ್‌

2019 ರಲ್ಲಿ ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರ ನಡೆದು ಆರು ವರ್ಷಗಳು ತುಂಬಿದ್ದು, ಅದರ ವಾರ್ಷಿಕ ನೆನಪಿನಲ್ಲಿ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿಗಳು ಡಿಸೆಂಬರ್ 15 ರಂದು ಕ್ಯಾಂಪಸ್ ಒಳಗೆ ದೊಡ್ಡ ಪ್ರತಿಭಟನೆ ನಡೆಸಿದ್ದರು....

ಅಮೆರಿಕದ ಸುಂಕಗಳು ತಮಿಳುನಾಡಿನ ರಫ್ತು ಕೈಗಾರಿಕೆಗಳನ್ನು ಅಂಚಿಗೆ ತಳ್ಳುತ್ತವೆ: ಪ್ರಧಾನಿ ಮೋದಿಗೆ ಸಿಎಂ ಸ್ಟಾಲಿನ್ ಎಚ್ಚರಿಕೆ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಭಾರತದ ರಫ್ತಿನ ಮೇಲೆ ಅಮೆರಿಕ ವಿಧಿಸಿರುವ ಭಾರೀ ಸುಂಕಗಳು ರಾಜ್ಯದ ಕೆಲವು ಉದ್ಯೋಗ- ಕೈಗಾರಿಕೆಗಳನ್ನು ತೀವ್ರ ಬಿಕ್ಕಟ್ಟಿನತ್ತ...

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...