Homeಮುಖಪುಟಸೆಂಗೋಲ್ ರಾಜದಂಡದ ಕುರಿತು ಬಿಜೆಪಿ ಹೇಳುತ್ತಿರುವ ಇತಿಹಾಸಕ್ಕೆ ಪುರಾವೆಗಳಿಲ್ಲ: 'WhatsApp ಇತಿಹಾಸ' ಶೀರ್ಷಿಕೆಯ ಅಂಕಣ ವೈರಲ್

ಸೆಂಗೋಲ್ ರಾಜದಂಡದ ಕುರಿತು ಬಿಜೆಪಿ ಹೇಳುತ್ತಿರುವ ಇತಿಹಾಸಕ್ಕೆ ಪುರಾವೆಗಳಿಲ್ಲ: ‘WhatsApp ಇತಿಹಾಸ’ ಶೀರ್ಷಿಕೆಯ ಅಂಕಣ ವೈರಲ್

- Advertisement -
- Advertisement -

ಬ್ರಿಟಿಷ್ ಸರ್ಕಾರ ದೇಶ ಬಿಟ್ಟು ಹೋಗುವಾಗ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರಿಗೆ ಅಧಿಕಾರ ಹಸ್ತಾಂತರದ ಸಂಕೇತವಾಗಿ ತಮಿಳುನಾಡಿನ ಐತಿಹಾಸಿಕ ರಾಜದಂಡವಾದ ಸೆಂಗೋಲ್‌ಅನ್ನು ಅರ್ಪಿಸಿದ್ದಾರೆ ಎಂದು ಬಿಜೆಪಿಯ ಹಲವಾರು ನಾಯಕರು ಗುರುವಾರ ಹೇಳಿದ್ದಾರೆ.

ನೆಹರೂ ಕುಟುಂಬಕ್ಕೆ ಸಮರ್ಪಿತವಾದ ಸೆಂಗೋಲ್‌ಅನ್ನು ಪ್ರಯಾಗ್‌ರಾಜ್‌ನಲ್ಲಿರುವ ವಸ್ತುಸಂಗ್ರಹಾಲಯವಾದ ಆನಂದ ಭವನದಲ್ಲಿ ಇರಿಸಿದ್ದಾರೆ ಎಂದು ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನು ಟೀಕಿಸಿತು.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಚೆನ್ನೈನಲ್ಲಿ ಪತ್ರಿಕಾಗೋಷ್ಠಿ ನಡೆಸಿ, ”ಪತ್ರಕರ್ತರಿಗೆ ಸಮರ್ಥನೆಗಾಗಿ ಸಾಕ್ಷಿಗಾಗಿ ಸಾಕ್ಷ್ಯಚಿತ್ರ ದಾಖಲೆ ನೀಡಿದ್ದಾರೆ. ಈ ಬಗ್ಗೆ ತಮಿಳು ಬರಹಗಾರ ಜಯಮೋಹನ್ ಅವರು, ಇದು ಅಪಹಾಸ್ಯದ ಸಂಗತಿ ಎಂದು “WhatsApp ಇತಿಹಾಸ” ಎಂಬ ಶೀರ್ಷಿಕೆಯ ಬ್ಲಾಗ್ ಪೋಸ್ಟ್ ಬರೆದಿದ್ದಾರೆ.

”ಸ್ವಾತಂತ್ರ್ಯದ ಸಂದರ್ಭದಲ್ಲಿ ಭಾರತದಾದ್ಯಂತ ಕಳುಹಿಸಲಾದ ಹಲವಾರು ಉಡುಗೊರೆಗಳಲ್ಲಿ ರಾಜದಂಡವು ಇರುವ ಸಾಧ್ಯತೆಯಿದೆ” ಎಂದು ಜಯಮೋಹನ್ ಅವರು ಬರೆದಿದ್ದಾರೆ.

ಬಿಜೆಪಿಯವರು, ಬಿಆರ್ ಅಂಬೇಡ್ಕರ್ ಅವರ ಭಾಷಾ ರಾಜ್ಯಗಳ ಚಿಂತನೆಗಳು, ಪೆರ್ರಿ ಆಂಡರ್ಸನ್ ಅವರ ದಿ ಇಂಡಿಯನ್ ಐಡಿಯಾಲಜಿ ಪುಸ್ತಕ ಮತ್ತು ಯಾಸ್ಮಿನ್ ಖಾನ್ ಅವರ ಗ್ರೇಟ್ ಪಾರ್ಟಿಷನ್: ದಿ ಮೇಕಿಂಗ್ ಆಫ್ ಇಂಡಿಯಾ ಅಂಡ್ ಪಾಕಿಸ್ತಾನದ ಸಾರಗಳನ್ನು ಉಲ್ಲೇಖಿಸಿದ್ದಾರೆ. ಆದರೆ ರಾಜದಂಡವು ಅಧಿಕಾರದ ವರ್ಗಾವಣೆಯನ್ನು ಸಂಕೇತಿಸುತ್ತದೆ ಎಂದು ಅವರಲ್ಲಿ ಯಾರೂ ಹೇಳಲಿಲ್ಲ ಎಂದು ದಿ ಹಿಂದೂ ವರದಿ ಮಾಡಿದೆ.

ರಾಜದಂಡ ಸಿದ್ಧಪಡಿಸಿದವರನ್ನು ವಿಶೇಷ ವಿಮಾನದಲ್ಲಿ ದೆಹಲಿಗೆ ಕರೆದೊಯ್ಯಲಾಗಿದೆ ಎಂದೂ ಸರ್ಕಾರ ಹೇಳಿಕೊಂಡಿದೆ. ಅದೇನೇ ಇದ್ದರೂ, ಅಧಿಕಾರದ ಹಸ್ತಾಂತರದ ಬಗ್ಗೆ ನಿರ್ದಿಷ್ಟವಾದ ಹೇಳಿಕೆಗೆ ಪುರಾವೆಗಳ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೀತಾರಾಮನ್, ”ನಿಮಗೆ ಬೇಕಾದಷ್ಟು ಸಾಕ್ಷ್ಯಚಿತ್ರಗಳು [ಪುರಾವೆಗಳು] ಇವೆ” ಎಂದು ಹೇಳಿದರು.

ಇದನ್ನೂ ಓದಿ: ಒಬ್ಬ ವ್ಯಕ್ತಿಯ ‘ಅಹಂ’ನಿಂದ ರಾಷ್ಟ್ರಪತಿಗಳ ಸಾಂವಿಧಾನಿಕ ಹಕ್ಕಿಗೆ ವಂಚನೆ: ಕಾಂಗ್ರೆಸ್ ಟೀಕೆ

”ನಾವು ಇಂದು ಹೇಳುತ್ತಿರುವುದು ಎಲ್ಲ ವಿಚಾರಗಳು ಸಂಶೋಧನಾ ಮೂಲಗಳಿಂದ ಪಡೆಯಲಾಗಿದೆ ಮತ್ತು ನೀವು ಅನುಬಂಧದಲ್ಲಿ ನೋಡುತ್ತೀರಿ” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

ಬಿಜೆಪಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಕೂಡ ಟ್ವಿಟರ್‌ನಲ್ಲಿ ”ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರಿಸುವ ಸಂಕೇತವಾಗಿ ಪ್ರಧಾನಿ ನೆಹರು ಅವರಿಗೆ ಚಿನ್ನದ ಕೋಲನ್ನು ನೀಡಿದ್ದಾರೆ. ಕಾಂಗ್ರೆಸ್‌ಗೆ ಅದರ ಬಗ್ಗೆ ಹೆಮ್ಮೆ ಇರಬೇಕಿತ್ತು ಆದರೆ ಅದನ್ನು ಆನಂದ ಭವನದಲ್ಲಿ ಕೂಡಿಹಾಕಲಾಯಿತು ಮತ್ತು ಚಿನ್ನದ ಕೋಲನ್ನು ನೆಹರೂಗೆ ‘ಉಡುಗೊರೆ’ ಎಂದು ಕರೆಯಲಾಯಿತು. ಕಾಂಗ್ರೆಸ್‌ನಲ್ಲಿ ಹಿಂದೂ ಆಚರಣೆಗಳ ಬಗ್ಗೆ ತಿರಸ್ಕಾರವಿದೆ” ಎಂದು ಅವರು ಬರೆದಿದ್ದಾರೆ.

ಇನ್ನು ಈ ಬಗ್ಗೆ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಅವರು ಟ್ವಿಟ್ ಮಾಡಿದ್ದು, ”ವಾಟ್ಸಾಪ್ ವಿಶ್ವವಿದ್ಯಾನಿಲಯದಿಂದ ವಿಶಿಷ್ಟವಾಗಿ ಸುಳ್ಳಿನೊಂದಿಗೆ ಹೊಸ ಸಂಸತ್ತು ಉದ್ಘಾಟನೆಯಾಗುತ್ತಿರುವುದು ಆಶ್ಚರ್ಯವೇ? ಬಿಜೆಪಿ/ಆರ್‌ಎಸ್‌ಎಸ್ ಸಂಶೋದಕರು ಗರಿಷ್ಠ ಹಕ್ಕುಗಳು, ಕನಿಷ್ಠ ಸಾಕ್ಷ್ಯಗಳೊಂದಿಗೆ ಮತ್ತೊಮ್ಮೆ ಬಹಿರಂಗಗೊಂಡಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

1. ಆಗಿನ ಮದ್ರಾಸ್ ಪ್ರಾಂತ್ಯದ ಧಾರ್ಮಿಕ ಸಂಸ್ಥೆಯಿಂದ ಕಲ್ಪಿಸಲ್ಪಟ್ಟ ಮತ್ತು ಮದ್ರಾಸ್ ನಗರದಲ್ಲಿ ರಚಿಸಲಾದ ಭವ್ಯವಾದ ರಾಜದಂಡವನ್ನು ಆಗಸ್ಟ್ 1947 ರಲ್ಲಿ ನೆಹರೂಗೆ ನೀಡಲಾಯಿತು.

2. ಮೌಂಟ್‌ಬ್ಯಾಟನ್, ರಾಜಾಜಿ ಮತ್ತು ನೆಹರು ಈ ರಾಜದಂಡವನ್ನು ಭಾರತಕ್ಕೆ ಬ್ರಿಟಿಷ್ ಅಧಿಕಾರದ ವರ್ಗಾವಣೆಯ ಸಂಕೇತವೆಂದು ವಿವರಿಸುವ ಯಾವುದೇ ದಾಖಲಿತ ಪುರಾವೆಗಳಿಲ್ಲ. ಆದರೆ ವಾಟ್ಸಪ್ ಯುನಿವರ್ಸಿಟಿಯ ಈ ಸುಳ್ಳು ಸುದ್ದಿಯೊಂದಿಗೆ ಈಗ ಮಾಧ್ಯಮಗಳು ಡೋಲು ಬಾರಿಸುತ್ತಿವೆ.

3. ರಾಜದಂಡವನ್ನು ನಂತರ ಅಲಹಾಬಾದ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲಾಯಿತು. ಡಿಸೆಂಬರ್ 14, 1947 ರಂದು ನೆಹರೂ ಅಲ್ಲಿ ಹೇಳಿದ್ದು ಸಾರ್ವಜನಿಕ ದಾಖಲೆಯ ವಿಷಯವಾಗಿದೆ ಎಂದಿದ್ದರು.

4. ರಾಜದಂಡವನ್ನು ಈಗ ತಮಿಳುನಾಡಿನಲ್ಲಿ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಪ್ರಧಾನಿ ಮತ್ತು ಅವರ ಡೋಲು ಬಾರಿಸುವವರು ಬಳಸುತ್ತಿದ್ದಾರೆ. ಸುಳ್ಳನ್ನು ಸತ್ಯ ಮಾಡುವ ಈ ಬ್ರಿಗೇಡ್‌ನ ಉದ್ದೇಶವಾಗಿದೆ. ಉದ್ದೇಶಗಳಿಗೆ ಸರಿಹೊಂದುವಂತೆ ಸತ್ಯಗಳನ್ನು ಕಸೂತಿ ಮಾಡುವ ಈ ಬ್ರಿಗೇಡ್‌ನ ವಿಶಿಷ್ಟವಾಗಿದೆ.

ಈಗ ನಮ್ಮ ಮುಂದಿರುವ ನಿಜವಾದ ಪ್ರಶ್ನೆ ಎಂದರೆ, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಹೊಸ ಸಂಸತ್ತನ್ನು ಉದ್ಘಾಟಿಸಲು ಏಕೆ ಅವಕಾಶ ನೀಡುತ್ತಿಲ್ಲ? ಎಂಬುದಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. It’s one more SANATANA HINDU startegy to propagate the twisted narratives and their passion to observe the ritual of Untouchability by not inviting the President to inagurate the new parliament house…

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯವರು ಬಜೆಟ್ ಓದುವುದೂ ಇಲ್ಲ, ಆರ್ಥಿಕತೆ ಬಗ್ಗೆ ಗೊತ್ತೂ ಇಲ್ಲ: ಸಿಎಂ ಸಿದ್ದರಾಮಯ್ಯ

0
ಬಡವರಿಗೆ ಆರ್ಥಿಕ ಸಬಲತೆ ಕೊಡುವುದು ಅಭಿವೃದ್ಧಿ ಅಲ್ಲವೇ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಗ್ಯಾರಂಟಿ ಯೋಜನೆಗಳನ್ನೇ ಸಾಧನೆ ಎಂದು ಬಿಂಬಿಸಲಾಗುತ್ತಿದೆ. ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ" ಎಂಬ ಬಿಜೆಪಿಗರ ಆರೋಪಕ್ಕೆ...