Homeಮುಖಪುಟಟ್ರೋಲ್ ಆಗುತ್ತಿರುವ ಅಜಿತ್ ಹನುಮಕ್ಕನವರ್: "ಏಜೆಂಟ್ ಅಜಿತ್" ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್

ಟ್ರೋಲ್ ಆಗುತ್ತಿರುವ ಅಜಿತ್ ಹನುಮಕ್ಕನವರ್: “ಏಜೆಂಟ್ ಅಜಿತ್” ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್

ಈ ವರದಿ ಬರೆಯುವ ವೇಳೆಗೆ #Agent_Ajith ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸುಮಾರು 11,500 ಟ್ವಿಟ್ಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

- Advertisement -
- Advertisement -

ಸುವರ್ಣ ಸುದ್ಧಿ ವಾಹಿನಿಯ ಮುಖ್ಯಸ್ಥರಾದ ಅಜಿತ್ ಹನುಮಕ್ಕವನರ್ ಟ್ವಿಟ್ಟರ್‌ನಲ್ಲಿ ಭಾರೀ ಟ್ರೋಲ್‌ ಆಗುತ್ತಿದ್ದು, ಏಜೆಂಟ್ ಅಜಿತ್ ಎಂದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.

ಈ ವರದಿ ಬರೆಯುವ ವೇಳೆಗೆ #Agent_Ajith ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸುಮಾರು 11,500 ಟ್ವಿಟ್ಟರ್ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ಡಾ.ಭರತಶ್ರೀ ಎಂಬುವವರು ಚಿತ್ರವೊಂದನ್ನು ಟ್ವೀಟ್ ಮಾಡಿ, “ಇಂದಿನ ಮಾಧ್ಯಮಗಳ ಮುಖ” ಎಂದು ಬರೆದುಕೊಂಡಿದ್ದಾರೆ. ಈ ಚಿತ್ರವು ರಿಪಬ್ಲಿಕ್ ಟಿ.ವಿಯ ಮುಖ್ಯಸ್ಥರಾದ ಅರ್ನಾಬ್ ಗೋಸ್ವಾಮಿಯನ್ನು ಹೋಲುತ್ತಿದ್ದು, ಅವರು ಖಾಕಿ ಚಡ್ಡಿ ಹಾಕಿಕೊಂಡು ಕುಳಿತಿರುವಂತೆ ಎಡಿಟ್ ಮಾಡಲಾಗಿದೆ.

ಇದನ್ನೂ ಓದಿ :ಮೋದಿ ಸರ್ಕಾರ ಭಾರತವನ್ನು ಪ್ರಪಾತಕ್ಕೆ ತಳ್ಳಿದೆ, ಮಾಧ್ಯಮಗಳು ’ಸಬ್‌ ಚಂಗಾಸಿ’ ಎನ್ನುತ್ತಿವೆ: ರಾಹುಲ್

ಅನಿಲ್‌ ಕುಮಾರ್ ಎಂಬುವವರು ಟ್ವೀಟ್ ಮಾಡಿದ್ದು, “ನಿರುದ್ಯೋಗದ ಬಗ್ಗೆ ಚರ್ಚಿಸದ ಅಜಿತ್‌ಗೆ ನಾಚಿಕೆಯಾಗಬೇಕು. ಬಿಜೆಪಿಯ ಚಮಚಾಗಿರಿ” ಎಂದು ಬರೆದುಕೊಂಡಿದ್ದು, ಸುವರ್ಣ ಸುದ್ಧಿ ವಾಹಿನಿಯಲ್ಲಿ ಅಜಿತ್ ಹನುಮಕ್ಕನವರ್ ಚರ್ಚಿಸಲಾದ ಮತ್ತು ಪ್ರಸಾರವಾದ ಕಾರ್ಯಕ್ರಮಗಳ ಬಗ್ಗೆ ಒಂದು ಗ್ರಾಫ್‌ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ, ನಿರುದ್ಯೋಗ ಸಮಸ್ಯೆ, ರೈತರ ಆತ್ಮಹತ್ಯೆ, ಆರ್ಥಿಕ ಕುಸಿತ, ಚೀನಾ ಸಮಸ್ಯೆ, ಕೊರೊನಾ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯ, ಭಾರತದ ಗಡಿ ಆಕ್ರಮಣ ಮಾಡಿರುವ ಚೀನಾ ಸೇರಿದಂತೆ ಮುಂತಾದ ಸಮಸ್ಯೆಗಳ ಬಗ್ಗೆ ಚರ್ಚಿಸಿಯೇ ಇಲ್ಲ ಎಂದು ತೋರಿಸಲಾಗಿದೆ. ಇನ್ನು ಇವರು ಚರ್ಚಿಸಿರುವ ವಿಷಯಗಳು, ಲಾಕ್‌ಡೌನ್ ಮುಂದೂಡಿಕೆ, ಸ್ಯಾಂಡಲ್‌ವುಡ್ ಡ್ರಗ್ ಮಾಫಿಯಾ, ತಬ್ಲಿಘಿಗಳು, ವಿರೋಧ ಪಕ್ಷಗಳ ಕುರಿತು, ಜಿಮ್, ವಿದ್ಯಾರ್ಥಿಗಳು, 20 ಲಕ್ಷ ಕೋಟಿ ಪ್ಯಾಕೇಜ್, ಧರ್ಮ ಮತ್ತು ಧಾರ್ಮಿಕತೆ, ರಾಮಮಂದಿರದ ಬಗ್ಗೆ ಎಂದು ಗ್ರಾಫ್ ಹೇಳುತ್ತದೆ.

ಇದನ್ನೂ ಓದಿ :ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಮಾಧ್ಯಮಗಳು ಸುಳ್ಳು ಹೇಳುತ್ತಿವೆ: ಸಿಬಿಐ

ಇನ್ನೂ ಸಾವಿರಾರು ಜನರು ಏಜೆಂಟ್ ಅಜಿತ್ ಎಂದು ಟ್ವೀಟ್ ಮಾಡಿದ್ದು, ರಿಪಬ್ಲಿಕ್ ಟಿವಿಯ ಅರ್ನಾಬ್‌ ಗೋಸ್ವಾಮಿಗೆ ಹೋಲಿಸಿದ್ದಾರೆ. ಇನ್ನೂ ಕೆಲವರು ಅಜಿತ್, ಬಿಜೆಪಿ ನಾಯಕರೊಂದಿಗೆ ಹೊಟೆಲ್ ಒಂದರಲ್ಲಿ ತೆಗೆದುಕೊಂಡಿರುವ ಚಿತ್ರಗಳನ್ನು ಹಾಕಿ, ಬಿಜೆಪಿಯ ಏಜೆಂಟ್ ಎಂದು ಟ್ವೀಟ್ ಮಾಡಿದ್ದಾರೆ. ಇನ್ನೂ ಕೆಲವರು ಇವರನ್ನು ಪೇಯ್ಡ್‌ ಮೆನ್ ಎಂದು ಕರೆದಿದ್ದಾರೆ.


ಇದನ್ನೂ ಓದಿ :ಕೊರೊನಾ, ನಿರುದ್ಯೋಗದ ಕುರಿತು ಎಚ್ಚರಿಸಿದ್ದೆ, ಮಾಧ್ಯಮಗಳು ಅಣಕಿಸಿದ್ದವು: ರಾಹುಲ್ ಗಾಂಧಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...