HomeUncategorizedರಾಮಮಂದಿರ ಉದ್ಘಾಟನೆ; ಅಧಿಕಾರ ದುರುಪಯೋಗ ಪಡಿಸಿ ಸರಕಾರಿ ರಜೆ ಘೋಷಣೆ; ಪ್ರತಿಪಕ್ಷಗಳ ಟೀಕೆ

ರಾಮಮಂದಿರ ಉದ್ಘಾಟನೆ; ಅಧಿಕಾರ ದುರುಪಯೋಗ ಪಡಿಸಿ ಸರಕಾರಿ ರಜೆ ಘೋಷಣೆ; ಪ್ರತಿಪಕ್ಷಗಳ ಟೀಕೆ

- Advertisement -
- Advertisement -

ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಪ್ರತಿಷ್ಟಾಪನಾ ಕಾರ್ಯಕ್ರಮವಿದ್ದು, ದೇಶದಾದ್ಯಂತ ಇರುವ ಎಲ್ಲಾ ಕೇಂದ್ರ ಸರ್ಕಾರದ ಅಧೀನದ ಕಚೇರಿಗಳು, ಸಂಸ್ಥೆಗಳು ಮತ್ತು  ಕೈಗಾರಿಕಾ ಸಂಸ್ಥೆಗಳಿಗೆ ಅರ್ಧ ದಿನ ರಜೆಯನ್ನು ಘೋಷಿಸಲಾಗಿದೆ. ಈ ಬಗ್ಗೆ ಪ್ರತಿಪಕ್ಷಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ಸರಕಾರವು ಅಧಿಕಾರ ದುರುಪಯೋಗ ಪಡಿಸಿ ರಜೆಯನ್ನು ಘೋಷಣೆ ಮಾಡಿದೆ ಎಂದು ಆರೋಪಿಸಿದೆ.

ಅಪೂರ್ಣವಾಗದ ದೇವಾಲಯದ ಉದ್ಘಾಟನೆ ‘ಶಾಸ್ತ್ರಗಳಿಗೆ ವಿರುದ್ಧ’ ಎಂದು ಶಂಕಾರಾಚಾರ್ಯ ಮಠದ ಮಠಾಧೀಶರು ಸೇರಿ ಹಲವು ಹಿಂದೂ ಮಠಾಧೀಶರು ವಿರೋಧಿಸಿದ್ದರು. ಲೋಕಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ರಾಮಮಂದಿರ ಉದ್ಘಾಟನೆಯನ್ನು ರಾಜಕೀಯಗೊಳಿಸಿದೆ ಎಂದು ಪ್ರತಿಪಕ್ಷಗಳು ಈ ಮೊದಲು ಟೀಕಿಸುತ್ತಾ ಬಂದಿದೆ. ಧರ್ಮದ ಜೊತೆ ರಾಜಕೀಯ ಮತ್ತು ಸಿಎಂ, ಪ್ರಧಾನಿಗಳು ಸೇರಿ ಆಡಳಿತ ಯಂತ್ರಗಳು ಧಾರ್ಮಿಕ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳುವುದು ಸಂವಿಧಾನ ಬಾಹಿರ ಮತ್ತು ಅಧಿಕಾರದ ದುರುಪಯೋಗವಾಗಿದೆ. ಇದೀಗ ಅಧಿಕಾರದ ದುರುಪಯೋಗ ಮಾಡಿಕೊಂಡು ಸಾರ್ವಜನಿಕ ರಜೆ ನೀಡಲಾಗಿದೆ ಎಂದು ಟೀಕೆ ವ್ಯಕ್ತವಾಗಿದೆ.

ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಮತ್ತು ಪಿಂಚಣಿ ಸಚಿವಾಲಯದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಬುಧವಾರ ಈ ಕುರಿತು ಆದೇಶವನ್ನು ಹೊರಡಿಸಿದ್ದು, ಜನವರಿ 22ರಂದು ಮಧ್ಯಾಹ್ನ 2.30ರವರೆಗೆ  ಸರಕಾರಿ ಕಚೇರಿಗಳನ್ನು ಮುಚ್ಚಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಮ್ ಲಲ್ಲಾ ಪ್ರಾಣ್ ಪ್ರತಿಷ್ಠಾಪನೆ ಸಮಾರಂಭವು ಜನವರಿ 22ರಂದು ಅಯೋಧ್ಯೆಯ ಮಧ್ಯಾಹ್ನ 12.20ಕ್ಕೆ ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಗೆ ಮುಕ್ತಾಯಗೊಳ್ಳಲಿದೆ ಎನ್ನಲಾಗಿದೆ. ಹಣಕಾಸು ಸಚಿವಾಲಯದ ಅಧೀನದ ಹಣಕಾಸು ಸೇವೆಗಳ ಇಲಾಖೆಯು ಪ್ರತ್ಯೇಕ ಆದೇಶದಲ್ಲಿ ಎಲ್ಲಾ ಸಾರ್ವಜನಿಕ ವಲಯದ ಬ್ಯಾಂಕ್‌ಗಳು, ಸಾರ್ವಜನಿಕ ವಲಯದ ವಿಮಾ ಕಂಪನಿಗಳು, ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ಜನವರಿ 22ರಂದು ಮಧ್ಯಾಹ್ನ 2.30ರವರೆಗೆ ಅರ್ಧ ದಿನದ ರಜೆಯನ್ನು ಪಡೆಯಲಿದೆ. ಅಯೋಧ್ಯೆ ರಾಮಮಂದಿರದ ಪ್ರಾಣ ಪ್ರತಿಷ್ಠೆಯ ಸಂದರ್ಭ ಇದು ಉದ್ಯೋಗಿಗಳಿಗೆ ರಾಮ್ ಲಲ್ಲಾ ಪ್ರಾಣಪ್ರತಿಷ್ಠಾಪನೆಯಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ ಎಂದು ಹೇಳಿದೆ.

ಈ ಮೊದಲು ಮಾದ್ಯಮಗಳ ಜೊತೆ ಮಾತನಾಡಿದ್ದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, ಅಯೋಧ್ಯೆಯ ರಾಮ ಮಂದಿರದ ಶಂಕುಸ್ಥಾಪನೆಯ ದಿನ ಜನವರಿ 22ರಂದು ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳನ್ನು ಅರ್ಧ ದಿನ ಮುಚ್ಚಲಾಗುವುದು ಎಂದು ತಿಳಿಸಿದ್ದರು.

ಇದಲ್ಲದೆ ತ್ರಿಪುರಾ, ಉತ್ತರಪ್ರದೇಶ, ಅಸ್ಸಾಂ, ಮಧ್ಯಪ್ರದೇಶ, ಛತ್ತೀಸ್‌ಗಢ, ಒಡಿಶಾ, ರಾಜಸ್ಥಾನ, ಗುಜರಾತ್‌, ಉತ್ತರಖಂಡ, ಪುದುಚೇರಿಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಅರ್ಧದಿನ ರಜೆಯನ್ನು ಘೋಷಿಸಲಾಗಿದೆ. ಗೋವಾದಲ್ಲಿ ಶಾಲೆಗಳಿಗೆ ಮತ್ತು ಸರಕಾರಿ ಕಚೇರಿಗಳಿಗೆ ರಜೆಯನ್ನು ಘೋಷಿಸಲಾಗಿದೆ. ಹರ್ಯಾಣದಲ್ಲಿ ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ. ಮಹಾರಾಷ್ಟ್ರ ಸರಕಾರ ರಾಜ್ಯದಲ್ಲಿ ಜ.22ರಂದು ಸಾರ್ವಜನಿಕ ರಜೆಯನ್ನು ಘೋಷಿಸಿದೆ.

ವಿಪಕ್ಷಗಳಿಂದ ಟೀಕೆ:

ರಾಮಮಂದಿರ ಪ್ರಾಣಪ್ರತಿಷ್ಟಾಪಾನಾ ದಿನ ಸರಕಾರಿ ಕಚೇರಿ, ಶಾಲೆಗಳಿಗೆ ರಜೆ ನೀಡಿರುವ ಕೇಂದ್ರ ಸರಕಾರ ಮತ್ತು ಬಿಜೆಪಿ ಆಡಳಿತದ ರಾಜ್ಯಗಳನ್ನು ಪ್ರತಿಪಕ್ಷಗಳು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರವು ಇಂತಹ ಸುತ್ತೋಲೆ ಹೊರಡಿಸುವ ಮೂಲಕ ಅಧಿಕಾರದ ದುರುಪಯೋಗ ಮಾಡಿದೆ. ಧಾರ್ಮಿಕ ನಂಬಿಕೆಯ ವಿಚಾರದಲ್ಲಿ ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳುವ ಹಕ್ಕು ನೌಕರರಿಗೆ ಇದೆ. ಸರ್ಕಾರದ ಇಂತಹ ಕ್ರಮವು ಸಂವಿಧಾನ ಮತ್ತು ಸುಪ್ರೀಂಕೋರ್ಟ್‌ನ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಸಿಪಿಎಂ ಪಾಲಿಟ್‌ ಬ್ಯೂರೊ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ ಅಧಿಕಾರದಲ್ಲಿರುವ ರಾಜ್ಯವೊಂದು ಈದ್‌ ಮಿಲಾದ್‌ ದಿನದ ರಜೆಯನ್ನು ರದ್ದುಗೊಳಿಸಿದೆ. ಶುಕ್ರವಾರದ ನಮಾಝ್‌ಗೆ ಮೀಸಲಿಟ್ಟಿದ್ದ 30 ನಿಮಿಷಗಳ ವಿರಾಮದ ಅವಧಿಯನ್ನು ಸಾಂವಿಧಾನಿಕ ಹುದ್ದೆಯಲ್ಲಿರುವ ಒಬ್ಬರು ರದ್ದು ಮಾಡಿದ್ದಾರೆ. ಯಾರ ತುಷ್ಟೀಕರಣವೂ ಇಲ್ಲದೆ ಎಲ್ಲರ ಅಭಿವೃದ್ಧಿ ಎಂದರೆ ಇದೇನಾ? ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಪ್ರಶ್ನಿಸಿದ್ದಾರೆ.

ಇದನ್ನು ಓದಿ:ಭಾರತದಲ್ಲಿ ಕಠಿಣ ಕಾಯ್ದೆಯಡಿಯಲ್ಲಿ ಜೈಲಿನಲ್ಲಿರುವ ಪತ್ರಕರ್ತರೆಷ್ಟು?: ಸಿಪಿಜೆ ವರದಿ…

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದೆಹಲಿ ಕಾಂಗ್ರೆಸ್‌ನಲ್ಲಿ ನಿಲ್ಲದ ರಾಜೀನಾಮೆ ಪರ್ವ; ಎಎಪಿ ಮೈತ್ರಿ ವಿರೋಧಿಸಿ ಪಕ್ಷ ತೊರೆದ ಮತ್ತಿಬ್ಬರು...

0
ದೆಹಲಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅರವಿಂದ್ ಸಿಂಗ್ ಲವ್ಲಿ ನಂತರ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದ್ದು, ರಾಷ್ಟ್ರ ರಾಜಧಾನಿಯ ಎರಡು ಲೋಕಸಭಾ ಸ್ಥಾನಗಳಿಗೆ ನೇಮಿಸಿದ್ದ ಅದರ ಇಬ್ಬರು ನಾಯಕರು, ವೀಕ್ಷಕರಾದ ನೀರಜ್ ಬಸೋಯಾ ಮತ್ತು ನಸೀಬ್...