Homeಮುಖಪುಟಫೇಸ್‌ಬುಕ್‌ ವಿರುದ್ಧ ರೋಹಿಂಗ್ಯಾ ನಿರಾಶ್ರಿತರು ಕೋರ್ಟ್ ಮೊರೆ

ಫೇಸ್‌ಬುಕ್‌ ವಿರುದ್ಧ ರೋಹಿಂಗ್ಯಾ ನಿರಾಶ್ರಿತರು ಕೋರ್ಟ್ ಮೊರೆ

- Advertisement -
- Advertisement -

ರೋಹಿಂಗ್ಯಾ ನಿರಾಶ್ರಿತ ಸಮುದಾಯ ಫೇಸ್‌ಬುಕ್‌ ವಿರುದ್ಧ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಶಕ್ತಿ ಅರ್ಜಿಯನ್ನು ಸಲ್ಲಿಸಿದೆ. ಫೇಸ್‌ಬುಕ್‌ ಮೂಲಕ ತಮ್ಮ ಸಮುದಾಯಗಳ ವಿರುದ್ಧ ದ್ವೇಷದ ಪ್ರಸಾರ ವ್ಯಾಪಕವಾಗಿ  ನಡೆಯುತ್ತಿದೆ, ಇದು ಸಮುದಾಯದ ವಿರುದ್ಧದ ಹಿಂಸೆಗೆ ಕಾರಣವಾಗುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

2019ರಲ್ಲಿ ಈಕ್ವಾಲಿಟಿ ಲ್ಯಾಬ್ಸ್‌ನ ದಲಿತರು, ಮುಸ್ಲಿಮರು, ಕ್ರಿಶ್ಚಿಯನ್ನರು, ಬೌದ್ಧರು ಮತ್ತು ಇತರರನ್ನು ಒಳಗೊಂಡ 20 ಅಂತರಾಷ್ಟ್ರೀಯ ಸಂಶೋಧಕರ ತಂಡ ವ್ಯವಸ್ಥಿತವಾಗಿ 1,000 ಫೇಸ್‌ಬುಕ್ ಪೋಸ್ಟ್‌ಗಳನ್ನು  ಪತ್ತೆಹಚ್ಚಿ ಅದರಲ್ಲಿ ಸಮುದಾಯದ ಮಾನದಂಡಗಳ ಉಲ್ಲಂಘನೆಯ ಮಾಡಲಾಗಿದೆ ಎಂದು ಹೇಳಿತ್ತು. ಈ ಬಗ್ಗೆ ರಿಪೋರ್ಟ್‌ ಮಾಡಿದ ಬಳಿಕ ಫೇಸ್‌ಬುಕ್‌ ಒಟ್ಟು ಪೋಸ್ಟ್‌ಗಳಲ್ಲಿ 40%ಕ್ಕಿಂತ ಹೆಚ್ಚು ಪೋಸ್ಟ್‌ಗಳನ್ನು ತೆಗೆದುಹಾಕಿತ್ತು. ಆದರೆ  90 ದಿನಗಳ ಬಳಿಕ ಪೋಸ್ಟ್‌ಗಳನ್ನು ಮರುಸ್ಥಾಪಿಸಲಾಗಿತ್ತು. ಮರುಸ್ಥಾಪಿಸಲಾದ ಬಹುಪಾಲು ಪೋಸ್ಟ್‌ಗಳು ಇಸ್ಲಾಮೋಫೋಬಿಕ್ ಪೋಸ್ಟ್‌ಗಳಾಗಿದ್ದವು.

ದ್ವೇಷದ ವಿರುದ್ಧ ಹೋರಾಟದ ಭಾಗವಾಗಿ ಮತ್ತು ಈಕ್ವಾಲಿಟಿ ಲ್ಯಾಬ್ಸ್ ವರದಿಯನ್ನು ಉಲ್ಲೇಖಿಸಿ ರೋಹಿಂಗ್ಯಾ ನಿರಾಶ್ರಿತರು ಭಾರತೀಯ ಸಂವಿಧಾನದ 226ನೇ ವಿಧಿಯ ಅಡಿಯಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸಲ್ಲಿಸಿದ್ದಾರೆ. ದೆಹಲಿ ಸೇರಿ ದೇಶದಾದ್ಯಂತ ತಮ್ಮ ಸಮುದಾಯದ ಸದಸ್ಯರು ಎದುರಿಸುತ್ತಿರುವ ಹಿಂಸಾಚಾರದಿಂದ ಬದುಕುವ ಹಕ್ಕಿನ ರಕ್ಷಣೆಯನ್ನು ಕೋರುವುದು, ಫೇಸ್‌ಬುಕ್‌ನಲ್ಲಿ ಜನಾಂಗೀಯತೆ ಮತ್ತು ಧರ್ಮದ ಆಧಾರದ ಮೇಲೆ ಗುರಿಯಾಗಿಸಿಕೊಂಡು ದ್ವೇಷದ ಪ್ರಸಾರದ ಪರಿಣಾಮವಾಗಿ ಕೆಲವೊಮ್ಮೆ ದೈಹಿಕ ದಾಳಿಗಳು ನಡೆಯುತ್ತಿದೆ ಎಂದು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಪಿಐಎಲ್‌ನ ಅರ್ಜಿದಾರರು ಜನಾಂಗೀಯ ಹಿಂಸಾಚಾರದಿಂದಾಗಿ ಮ್ಯಾನ್ಮಾರ್‌ನಿಂದ ಪಲಾಯನ ಮಾಡಿದ ರೋಹಿಂಗ್ಯಾ ನಿರಾಶ್ರಿತರಾಗಿದ್ದಾರೆ ಮತ್ತು ಅವರು ಕಳೆದ 2ರಿಂದ 5 ವರ್ಷಗಳ ಕಾಲ ದೆಹಲಿಯಲ್ಲಿ ನೆಲೆಸಿದ್ದು, ಯುಎನ್‌ಎಚ್‌ಸಿಆರ್ ಗುರುತಿನ ಚೀಟಿಯನ್ನು ಪಡೆದಿದ್ದಾರೆ. UN ನಿರಾಶ್ರಿತರ ಸಂಸ್ಥೆ ಇವರನ್ನು ಕಿರುಕುಳಕ್ಕೊಳಗಾದ ಸಮುದಾಯವೆಂದು ಗುರುತಿಸಿದೆ. ರೋಹಿಂಗ್ಯಾ ಜನರು ಮ್ಯಾನ್ಮಾರ್‌ನ ರಾಖೈನ್ ರಾಜ್ಯದಿಂದ ಬಂದ ಮುಸ್ಲಿಂ ಅಲ್ಪಸಂಖ್ಯಾತರಾಗಿದ್ದಾರೆ. ಗಮನಿಸಬೇಕಾದ ಅಂಶವೆಂದರೆ, 2023ರ ಹೊತ್ತಿಗೆ UNHCR ಭಾರತವು ಮ್ಯಾನ್ಮಾರ್‌ನ ಸರಿಸುಮಾರು 74,600 ರೋಹಿಂಗ್ಯಾ ನಿರಾಶ್ರಿತರಿಗೆ ಆಶ್ರಯ ನೀಡುತ್ತಿದೆ ಎಂದು ವರದಿ ಮಾಡಿದೆ. ಅದರಲ್ಲಿ ಅಂದಾಜು 54,100ಕ್ಕಿಂತ ಹೆಚ್ಚು ಜನರು ಫೆಬ್ರವರಿ 2021ರ  ದಂಗೆಯಿಂದ ಭಾರತಕ್ಕೆ ಬಂದವರಾಗಿದ್ದಾರೆ.

ದ್ವೇಷದ ಪೋಸ್ಟ್‌ಗಳನ್ನು ಭಾರತದಲ್ಲಿ ತಮ್ಮನ್ನು ಗುರಿಯಾಗಿಸಿ ಪೋಸ್ಟ್‌ ಮಾಡಲಾಗುತ್ತದೆ. ಫೇಸ್‌ಬುಕ್ ತನ್ನ ವೇದಿಕೆಯಲ್ಲಿ ದ್ವೇಷದ ಭಾಷಣದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾಗಿದೆ. ಭಾರತದಲ್ಲಿ ರೋಹಿಂಗ್ಯಾ  ಗುಂಪನ್ನು ಭಾರತಕ್ಕೆ ಬೆದರಿಕೆ ಎಂದು ಚಿತ್ರಿಸಲಾಗುತ್ತಿದೆ ಆಗಾಗ್ಗೆ ಗುಂಪನ್ನು ಭಯೋತ್ಪಾದಕರು, ಒಳನುಸುಳುವವರು ಎಂದು ಉಲ್ಲೇಖಿಸುತ್ತದೆ. 2019ರ ಅಧ್ಯಯನವು, 6% ರಷ್ಟು ಇಸ್ಲಾಮೋಫೋಬಿಕ್ ಪೋಸ್ಟ್‌ಗಳು ನಿರ್ದಿಷ್ಟವಾಗಿ ರೋಹಿಂಗ್ಯಾ ಜನರನನ್ನು ಗುರಿಯಾಗಿಸಿಕೊಂಡಿದೆ. ಭಾರತದಲ್ಲಿಅವರು ಮುಸ್ಲಿಂ ಜನಸಂಖ್ಯೆಯ 0.02%ರಷ್ಟಿದ್ದಾರೆ.

ಭಾರತದಲ್ಲಿನ ಹಲವಾರು ಫೇಸ್‌ಬುಕ್ ಬಳಕೆದಾರರು ಹೆಚ್ಚಾಗಿ ಮುಸ್ಲಿಮರಾಗಿರುವ ರೋಹಿಂಗ್ಯಾಗಳನ್ನು ಗುರಿಯಾಗಿಸಿ ‘ಅಕ್ರಮ ವಲಸಿಗರು’, ‘ದೇಶದ ಶತ್ರುಗಳು’ ಮತ್ತು ‘ಬಾಂಗ್ಲಾದೇಶಿಗಳು’ ಎಂಬ ಪದಗಳನ್ನು ಹೇಗೆ ಬಳಸುತ್ತಾರೆ ಎಂಬುದನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲವು ಬಳಕೆದಾರರು ಈ ‘ದೇಶದ ಶತ್ರುಗಳ’ ಮನೆಗಳನ್ನು ಧ್ವಂಸಗೊಳಿಸಲು ‘ಬುಲ್ಡೋಜರ್’ಗಳ ಬಳಕೆ ಮಡಬೇಕೆಂದು ಪೋಸ್ಟ್‌ ಮಾಡಿದ್ದರು. ಫೇಸ್‌ಬುಕ್‌ನಲ್ಲಿನ ಕೆಲವು ಭಾರತೀಯ ಬಳಕೆದಾರರು ರೋಹಿಂಗ್ಯಾಗಳು ಅಪಹರಣ ಮತ್ತು ಅಂಗಾಂಗ ಮಾರಾಟದ ದಂಧೆಗಳನ್ನು ನಡೆಸುತ್ತಿರುವವರು ಎಂದು ತಪ್ಪು ಮಾಹಿತಿಯನ್ನು ಹರಡಿದ್ದಾರೆ.

ಬ್ಯಾರಿಸ್ಟರ್ ಇವಾ ಬುಜೊ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಈ ಬಗ್ಗೆ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆಯಿದೆ. ಏಕೆಂದರೆ ರೋಹಿಂಗ್ಯಾಗಳ ವಿರುದ್ಧ ಫೇಸ್‌ಬುಕ್‌ನಲ್ಲಿ ಹರಡುತ್ತಿರುವ ಹಾನಿಕಾರಕ ವಿಷಯಗಳು ಪುನರಾವರ್ತನೆ ಆಗುತ್ತಿದೆ. ಅರ್ಜಿಯನ್ನು ಸಲ್ಲಿಸುವುದು ಭಾರತದಲ್ಲಿ ರೋಹಿಂಗ್ಯಾಗಳ ಬಗ್ಗೆ ಹರಡುತ್ತಿರುವ ಹಾನಿಕಾರಕ ಪೋಸ್ಟ್‌ಗಳನ್ನು ತಡೆಗಟ್ಟುವ ಕ್ರಮದ ಭಾಗವಾಗಿದೆ ಎಂದು ಹೇಳಿದ್ದಾರೆ. ಭಾರತದಂತಹ ದೇಶಗಳು ರೆಪ್ಯೂಜೀಸ್‌ ಕನ್ವೆನ್ಸನ್‌ಗೆ ಸಹಿ ಹಾಕಿಲ್ಲ. ರೊಹಿಂಗ್ಯಾಗಳು ಕನ್ವೆನ್ಶನ್ ಅನ್ವಯವಾಗುವ ದೇಶಗಳಲ್ಲಿ ನಿರಾಶ್ರಿತರಿಗೆ ಇರುವ ಸಮಾನವಾದ ಹಕ್ಕುಗಳನ್ನು ಭಾರತದಲ್ಲಿ ಹೊಂದಿಲ್ಲ, ಅದು ಅವರನ್ನು ಅತ್ಯಂತ ದುರ್ಬಲಗೊಳಿಸುತ್ತದೆ ಎಂದು ಬುಜೊ ಹೇಳಿದರು.

2023ರ ಜುಲೈ 31ರಂದು ನುಹ್ ಕೋಮು ಹಿಂಸಾಚಾರದ ವೇಳೆ  ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ತಮ್ಮ ಗುಡಿಸಲುಗಳಿಗೆ ಬಂದು ಘಟನೆಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಹಲವರನ್ನು ದೆಹಲಿಗೆ ಕರೆದೊಯ್ದರು ಎಂದು ರೊಹಿಂಗ್ಯನ್‌ ಸಮುದಾಯದ ಜನರು ಹೇಳಿದ್ದಾರೆ.

ರೊಹಿಂಗ್ಯಾ ಅರ್ಜಿದಾರರನ್ನು ನ್ಯಾಯಾಲಯದಲ್ಲಿ ಪ್ರತಿನಿಧಿಸುತ್ತಿರುವ ವಕೀಲ ಕವಾಲ್‌ಪ್ರೀತ್ ಕೌರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಅಲ್ಪಸಂಖ್ಯಾತರ ವಿರುದ್ಧ ವಿಶೇಷವಾಗಿ ರೋಹಿಂಗ್ಯಾ ಸಮುದಾಯದ ವಿರುದ್ಧ ದ್ವೇಷವನ್ನು ಉತ್ತೇಜಿಸಲು ಭಾರತದಲ್ಲಿ ಫೇಸ್‌ಬುಕ್ ವಹಿಸುತ್ತಿರುವ ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯನ್ನು ಸಲ್ಲಿಸಲಾಗಿದೆ ಎಂದು ಹೇಳಿದರು. ರೋಹಿಂಗ್ಯಾ ವಿರುದ್ಧದ ಪೋಸ್ಟ್‌ಗಳು ಭಾರತದಲ್ಲಿ ಹುಟ್ಟಿಕೊಂಡಿವೆ ಮತ್ತು ನೈಜ ಸಮಯದಲ್ಲಿ ಹಿಂಸಾಚಾರವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿವೆ. ಭಾರತದಲ್ಲಿ ನೆಲೆಸಿರುವ ರೋಹಿಂಗ್ಯಾ ಸಮುದಾಯದ ವಿರುದ್ಧ ಪದೇ ಪದೇ ಹೇಳಿಕೆಗಳು, ಅವರನ್ನು ಗುರಿಯಾಗಿಟ್ಟುಕೊಂಡ ಫೇಸ್‌ಬುಕ್‌ ಈ ಪೋಸ್ಟ್‌ಗಳು ಬಾಂಗ್ಲಾದೇಶದಲ್ಲಿ ನಡೆದಂತೆ ಹಿಂಸಾಚಾರಕ್ಕೆ ಕಾರಣವಾಗಬಹುದು ಎಂದು ಕೌರ್‌ ಹೇಳಿದ್ದಾರೆ.

ಇದನ್ನು ಓದಿ: ಭಾರತದಲ್ಲಿ ಕಠಿಣ ಕಾಯ್ದೆಯಡಿಯಲ್ಲಿ ಜೈಲಿನಲ್ಲಿರುವ ಪತ್ರಕರ್ತರೆಷ್ಟು?: ಸಿಪಿಜೆ ವರದಿ…

 

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚರ್ಚ್‌ಗಳಲ್ಲಿ ‘ದಿ ಕೇರಳ ಸ್ಟೋರಿ’ ಪ್ರದರ್ಶನ: ಕೋಮು ಅಜೆಂಡಾ ಬಗ್ಗೆ ಎಚ್ಚರಿಸಿದ ತಲಶ್ಶೇರಿ ಬಿಷಪ್

0
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಕೇರಳದ ಕೆಲ ಚರ್ಚ್‌ಗಳಲ್ಲಿ ವಿವಾದಿತ 'ದಿ ಕೇರಳ ಸ್ಟೋರಿ' ಸಿನಿಮಾ ಪ್ರದರ್ಶನ ಮಾಡಲಾಗಿತ್ತು. ಮುಸ್ಲಿಮರ ಬಗ್ಗೆ ಸುಳ್ಳು ಪ್ರತಿಪಾದಿತ ಈ ಸಿನಿಮಾ ಪ್ರದರ್ಶನದ ಮೂಲಕ ಮುಸ್ಲಿಮರ ಬಗ್ಗೆ ಕ್ರಿಶ್ಚಿಯನ್ನರಲ್ಲಿ...