Homeಮುಖಪುಟಭಾರತದಲ್ಲಿ ಕಠಿಣ ಕಾಯ್ದೆಯಡಿಯಲ್ಲಿ ಜೈಲಿನಲ್ಲಿರುವ ಪತ್ರಕರ್ತರೆಷ್ಟು?: ಸಿಪಿಜೆ ವರದಿ...

ಭಾರತದಲ್ಲಿ ಕಠಿಣ ಕಾಯ್ದೆಯಡಿಯಲ್ಲಿ ಜೈಲಿನಲ್ಲಿರುವ ಪತ್ರಕರ್ತರೆಷ್ಟು?: ಸಿಪಿಜೆ ವರದಿ…

- Advertisement -
- Advertisement -

ಪತ್ರಕರ್ತರ ರಕ್ಷಣಾ ಸಮಿತಿ(ಸಿಪಿಜೆ) 2023ರ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತದಲ್ಲಿ 7 ಮಾದ್ಯಮ ಪ್ರತಿನಿಧಿಗಳು ಜೈಲಿನಲ್ಲಿದ್ದು, ಅದರಲ್ಲಿ ಐವರಿಗೆ ಕಠಿಣ ಯುಎಪಿಎಯಡಿ ಜೈಲು ಶಿಕ್ಷೆ ನೀಡಲಾಗಿದೆ ಎಂದು  ತಿಳಿಸಿದೆ. ಮಾದ್ಯಮ ಸ್ವಾತಂತ್ರ್ಯ, ಪತ್ರಕರ್ತರ ಸುರಕ್ಷತೆ ಮತ್ತು ಪತ್ರಕರ್ತರ ಅಭಿವ್ಯಕ್ತಿ ಸ್ವಾತಂತ್ರ್ಯದ ಭಾರತದಲ್ಲಿ ಹೆಚ್ಚು ದಾಳಿ ನಡೆಯುತ್ತಿದೆ ಎಂಬುವುದನ್ನು ಈ ಅಂಕಿ-ಅಂಶಗಳು ಬಹಿರಂಗಪಡಿಸುತ್ತದೆ.

ಪತ್ರಕರ್ತರ ರಕ್ಷಣಾ ಸಮಿತಿಯ 2023ರ ಜೈಲು ಜನಗಣತಿ ವರದಿಯ ಪ್ರಕಾರ, ವಿಶ್ವದಾದ್ಯಂತ ಒಟ್ಟು 320 ಪತ್ರಕರ್ತರು ಜೈಲಿನಲ್ಲಿ ಬಂಧಿಸಲ್ಪಟ್ಟಿದ್ದಾರೆ. ಈ ಪೈಕಿ 7 ಮಾದ್ಯಮ ಪ್ರತಿನಿಧಿಗಳು ಭಾರತದಲ್ಲಿ ಬಂಧಿಯಾಗಿದ್ದಾರೆ. ಡಿಸೆಂಬರ್ 1ರವರೆಗೆ ದತ್ತಾಂಶವನ್ನು ಸಂಗ್ರಹಿಸಿ ವರದಿಯನ್ನು ಸಿದ್ದಪಡಿಸಲಾಗಿದ್ದು,  1992 ರ ಬಳಿಕ ಜೈಲಿನಲ್ಲಿರುವ ಪತ್ರಕರ್ತರ ಸಂಖ್ಯೆ ಇದು ಎರಡನೇ ಅತಿ ಹೆಚ್ಚು ಎಂದು ಹೇಳಿದೆ. ಈ ಅಂಕಿ ಅಂಶಗಳು ಇದು ಸ್ವತಂತ್ರ ಧ್ವನಿಗಳ ವಿರುದ್ಧದ ನಿರಂಕುಶಾಧಿಕಾರ ಮತ್ತು ಸರ್ಕಾರಗಳ ಕಟುವಾದ ನಿಲುವನ್ನು  ಸೂಚಿಸುತ್ತದೆ.

ಭಾರತದಲ್ಲಿ 7 ಪತ್ರಕರ್ತರು ಸೆರೆವಾಸದಲ್ಲಿದ್ದು, ಸತತ ಮೂರನೇ ವರ್ಷವೂ ದೇಶದಲ್ಲಿ ಪತ್ರಕರ್ತರ ಬಂಧನದಲ್ಲಿ ದಾಖಲೆಯ ಹೆಚ್ಚಳವನ್ನು ತೋರಿಸುತ್ತದೆ. ಕಳೆದ ವರ್ಷ ಮೂವರು ಪತ್ರಕರ್ತರನ್ನು ಬಿಡುಗಡೆ ಮಾಡಲಾಗಿತ್ತು, ಆದರೆ ಆ ಬಳಿಕ ಮತ್ತೆ ಮೂವರನ್ನು ಬಂಧಿಸಲಾಗಿತ್ತು. ಭಾರತದಲ್ಲಿ ಜೈಲಿನಲ್ಲಿರುವ 7 ಪತ್ರಕರ್ತರಲ್ಲಿ ನಾಲ್ವರು ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ. ಐವರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯಡಿ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗಿದೆ.

ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕಲು ಯುಎಪಿಎ,  ಜಮ್ಮು ಮತ್ತು ಕಾಶ್ಮೀರ ಸಾರ್ವಜನಿಕ ಸುರಕ್ಷತಾ ಕಾಯಿದೆ ಸೇರಿದಂತೆ ಭಯೋತ್ಪಾದನಾ-ವಿರೋಧಿ ಕಾನೂನುಗಳ ಬಳಕೆಯ ಬಗ್ಗೆ ಭಾರತವು ಅಂತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳನ್ನು ಎದುರಿಸುತ್ತಿದೆ. ಪತ್ರಕರ್ತರ ಧ್ವನಿಗಳನ್ನು ಕಠಿಣ ಕಾನೂನುಗಳನ್ನು ವಿಧಿಸಿ ಹತ್ತಿಕ್ಕಲಾಗುತ್ತಿದೆ. ಪ್ರಜಾಪ್ರಭತ್ವ ದೇಶದಲ್ಲಿ ಪತ್ರಕರ್ತರನ್ನು ಬೆದರಿಸಲು ಸರಕಾರಿ ಸಂಸ್ಥೆಗಳನ್ನು ಬಳಕೆ ಮಾಡಲಾಗುತ್ತಿದೆ ಎಂದು ಟೀಕೆ ಕೇಳಿ ಬರುತ್ತಿದೆ.

ಜೈಲಿನಲ್ಲಿರುವ ಪತ್ರಕರ್ತರು: 

ಆಸಿಫ್ ಸುಲ್ತಾನ್: ಇವರು ಕಾಶ್ಮೀರದ ಪತ್ರಕರ್ತರಾಗಿದ್ದು, ಶ್ರೀನಗರ ಮೂಲದ Kashmir Narrator( ಕಾಶ್ಮೀರ ನರೇಟರ್ಸ್‌) ನಿಯತಕಾಲಿಕದಲ್ಲಿ ಕೆಲಸ ಮಾಡುತ್ತಿದ್ದರು. ಇವರು ಆಗಸ್ಟ್ 2018 ರಿಂದ ಜೈಲಿನಲ್ಲಿದ್ದಾರೆ. ಇವರ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆಸಿಫ್ ಸುಲ್ತಾನ್ ಉಗ್ರಗಾಮಿಗಳಿಗೆ ನೆರವು ನೀಡುತ್ತಿದ್ದಾರೆ ಮತ್ತು ಸಹಾನುಭೂತಿಯ ವರದಿಗಳನ್ನು ಪ್ರಕಟಿಸುತ್ತಿದ್ದಾರೆ ಎಂದು ಅಧಿಕಾರಿಗಳು ಆರೋಪಿಸಿದ್ದರು. ಅವರ ಕುಟುಂಬಸ್ಥರು ಮತ್ತು ಸಹೋದ್ಯೋಗಿಗಳು ಇದು ಆಧಾರರಹಿತ ಆರೋಪ ಎಂದು ಹೇಳಿದ್ದಾರೆ. ಆಸಿಫ್‌ ಸುಲ್ತಾನ್ ಬಂಧನದ ಬಳಿಕ ಅವರು ಕೆಲಸ ಮಾಡುತ್ತಿದ್ದ ನಿಯತಕಾಲಿಕೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ.

ಸಜಾದ್ ಗುಲ್:‘ದಿ ಕಾಶ್ಮೀರ್ ವಾಲಾ’ ಪೋರ್ಟಲ್‌ನ ಟ್ರೈನಿ ವರದಿಗಾರ ಮತ್ತು ವಿದ್ಯಾರ್ಥಿಯಾಗಿದ್ದ ಗುಲ್ ಅವರನ್ನು 2022ರ ಜನವರಿ 5ರಂದು ರಾತ್ರಿ ಬಂಡಿಪೋರಾ ಜಿಲ್ಲೆಯ ಹಾಜಿನ್ ಪ್ರದೇಶದ ಅವರ ಮನೆಯಿಂದ ಬಂಧಿಸಲಾಗಿತ್ತು. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 120B (ಕ್ರಿಮಿನಲ್ ಪಿತೂರಿ), 153B ಮತ್ತು 505B ಸೇರಿದಂತೆ ವಿವಿಧ ಸೆಕ್ಸನ್‌ಗಳಡಿಯಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ರೂಪೇಶ್ ಕುಮಾರ್ ಸಿಂಗ್: ಇವರು ಸ್ವತಂತ್ರ ಪತ್ರಕರ್ತರಾಗಿದ್ದು, ಜುಲೈ 2022 ರಿಂದ ಜೈಲಿನಲ್ಲಿದ್ದಾರೆ. ರೂಪೇಶ್ ಕುಮಾರ್ ಸಿಂಗ್ ಅವರು ಜಾರ್ಖಂಡ್‌ ಮೂಲದ ಪತ್ರಕರ್ತರಾಗಿದ್ದು, ಮಾನವ ಹಕ್ಕುಗಳ ಉಲ್ಲಂಘನೆ ಮತ್ತು ಬುಡಕಟ್ಟು ಜನರ ಕಿರುಕುಳದ ಕುರಿತು ವರದಿಗೆ ಹೆಸರುವಾಸಿಯಾಗಿದ್ದರು.

ಗೌತಮ್ ನವ್ಲಾಖಾ; ಗೌತಮ್ ನವ್ಲಾಖಾ ಒಬ್ಬ ಭಾರತೀಯ ಮಾನವ ಹಕ್ಕುಗಳ ಕಾರ್ಯಕರ್ತ ಮತ್ತು ಪತ್ರಕರ್ತರಾಗಿದ್ದಾರೆ. ಅವರು ಕಾಶ್ಮೀರದಲ್ಲಿ ಸೇನೆ ನಡೆಸುವ ದೌರ್ಜನ್ಯಗಳ ಟೀಕಾಕಾರರಾಗಿದ್ದರು. ಅವರು ದೆಹಲಿಯ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್‌ನ ಸದಸ್ಯರಾಗಿದ್ದಾರೆ. ಭೀಮಾ-ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಪ್ರಬೀರ್ ಪುರ್ಕಾಯಸ್ಥ;

ನ್ಯೂಸ್‌ಕ್ಲಿಕ್‌ನ ಪ್ರಬೀರ್ ಪುರ್ಕಾಯಸ್ಥ ಅವರು ಕಳೆದ ವರ್ಷ ಅಕ್ಟೋಬರ್‌ನಿಂದ ಜೈಲಿನಲ್ಲಿದ್ದಾರೆ. ತಮ್ಮ ಸಂಸ್ಥೆಗೆ ಚೀನಾದಿಂದ ಆರ್ಥಿಕ ನೆರವು ಪಡೆದಿದ್ದಾರೆಂಬ ಆರೋಪದ ಮೇಲೆ ಯುಎಪಿಎ (ದೇಶದ್ರೋಹ) ಮತ್ತು ವಿದೇಶಿ ನಿಧಿ ಉಲ್ಲಂಘನೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಅಕ್ಟೋಬರ್ 3ರಂದು ಅವರನ್ನು ಬಂಧಿಸಲಾಗಿತ್ತು.

ಮಜಿದ್ ಹೈದರಿ:

ಮಜಿದ್ ಹೈದರಿ ಜಮ್ಮು ಮತ್ತು ಕಾಶ್ಮೀರದ  ಸ್ವತಂತ್ರ ಪತ್ರಕರ್ತರಾಗಿದ್ದು, ಇವರನ್ನು ಕ್ರಿಮಿನಲ್ ಪಿತೂರಿ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದು, ಆ ಬಳಿಕ ಅವರ ವಿರುದ್ಧ ಕಠಿಣ ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಇರ್ಫಾನ್ ಮೆಹರಾಜ್: 

ಇರ್ಫಾನ್ ಮೆಹರಾಜ್  ಕಾಶ್ಮೀರಿ ಮೂಲದ ಪತ್ರಕರ್ತರಾಗಿದ್ದು, ಅವರನ್ನು  ಭಾರತದ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಅಧಿಕಾರಿಗಳು  ಭಯೋತ್ಪಾದನೆ ಆರೋಪದಡಿಯಲ್ಲಿ ಬಂಧಿಸಿದ್ದಾರೆ. ನವೆಂಬರ್ 2021 ರಲ್ಲಿ “ಭಯೋತ್ಪಾದನೆ” ಮತ್ತು ಇತರ ಆರೋಪಗಳ ಮೇಲೆ ಪರ್ವೇಜ್ ಅವರನ್ನು ಬಂಧಿಸಲಾಯಿತು. ವಂದೆ ಮ್ಯಾಗಜೀನ್‌ನ ಸಂಸ್ಥಾಪಕ ಸಂಪಾದಕರಾಗಿರುವ ಮೆಹ್ರಾಜ್, TwoCircles.net ವೆಬ್‌ಸೈಟ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರು ಅಲ್ ಜಝೀರಾ ಸೇರಿದಂತೆ ಹಲವಾರು ಅಂತರಾಷ್ಟ್ರೀಯ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

ಪತ್ರಕರ್ತರನ್ನು ಜೈಲಿಗಟ್ಟಿರುವ ದೇಶಗಳ ಪೈಕಿ ಇರಾನ್‌ನೊಂದಿಗೆ ಭಾರತವು 6ನೇ ಸ್ಥಾನದಲ್ಲಿದೆ. ಅ.7ರಿಂದ  ಇಸ್ರೇಲ್-ಹಮಾಸ್‌ ನಡುವೆ ಯುದ್ಧ ಪ್ರಾರಂಭವಾದಾಗಿನಿಂದ ವಿಶ್ವದಲ್ಲೇ ಅತಿ ಹೆಚ್ಚು ಪತ್ರಕರ್ತರನ್ನು  ಜೈಲಿಗಟ್ಟಿದ ದೇಶಗಳಲ್ಲಿ ಇಸ್ರೇಲ್‌ ಮುಂಚೂಣಿಯಲ್ಲಿದೆ ಎಂದು ಸಿಪಿಜೆ ವರದಿಯು ತಿಳಿಸಿದೆ.

ಇದನ್ನು ಓದಿ: ರಾಹುಲ್ ಗಾಂಧಿಯ ಲೋಕಸಭೆ ಸದಸ್ಯತ್ವ ಮರುಸ್ಥಾಪನೆ ಪ್ರಶ್ನಿಸಿ ಪಿಐಎಲ್‌: ವಕೀಲನಿಗೆ ₹1ಲಕ್ಷ ದಂಡ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ಕಿರುಕುಳ ಆರೋಪಿ ಬ್ರಿಜ್ ಭೂಷಣ್ ಸಿಂಗ್ ಬದಲಿಗೆ ಮಗನಿಗೆ ಟಿಕೆಟ್ ಕೊಟ್ಟ ಬಿಜೆಪಿ

0
ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತಿರುವ ಉತ್ತರ ಪ್ರದೇಶದ ಕೈಸರ್‌ಗಂಜ್ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಕೈಬಿಟ್ಟು, ಪುತ್ರ ಕರಣ್ ಭೂಷಣ್ ಸಿಂಗ್‌ಗೆ...