HomeಮುಖಪುಟExplainer: ಪ್ರತಿನಿತ್ಯ ಬೆಂಗಳೂರಿನಲ್ಲಿ 70 ಜನರ ಮೇಲೆ ದಾಳಿ - ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವೇನು?

Explainer: ಪ್ರತಿನಿತ್ಯ ಬೆಂಗಳೂರಿನಲ್ಲಿ 70 ಜನರ ಮೇಲೆ ದಾಳಿ – ಬೀದಿ ನಾಯಿಗಳ ಸಮಸ್ಯೆಗೆ ಪರಿಹಾರವೇನು?

ಪ್ರತಿ ವರ್ಷ ರೇಬಿಸ್‌ನಿಂದಾಗಿ ವಿಶ್ವದಾದ್ಯಂತ ಮೃತಪಡುವ 59 ಸಾವಿರ ಜನರಲ್ಲಿ 36%(20,000) ಸಾವು ಭಾರತ ದೇಶವೊಂದರಲ್ಲೇ ಸಂಭವಿಸುತ್ತದೆ.

- Advertisement -
- Advertisement -

‘ನಾಯಿ’ ಮಾನವರ ಅನಾದಿ ಕಾಲದ ಸಂಗಾತಿ. ಪ್ರಾಚೀನ ಕಾಲದಿಂದಲೂ ಮಾನವ ನಾಗರೀಕತೆಗಳೊಂದಿಗೆ ನಾಯಿಗೆ ಅವಿನಾಭಾವ ಸಂಬಂಧವಿದೆ. ಇತ್ತೀಚೆಗೆ ನಾಯಿ ಸಾಕುವುದು ಶ್ರೀಮಂತಿಕೆಯ ಒಂದು ಲಕ್ಷಣ ಎಂದು ಪರಿಗಣಿಸಲ್ಪಡುತ್ತಿದೆ. ಇದರ ಜೊತಗೆ ರೈತರು ಸೇರಿದಂತೆ ಬಡವರು ತಮ್ಮ ಕೆಲಸಗಳಿಗೆ ನಾಯಿಗಳನ್ನು ಬಳಸುತ್ತಿದ್ದುದು ಹಿಂದಿನಿಂದಲೂ ನಡೆದುಕೊಂಡು ಬರುತ್ತಿರುವ ಪದ್ದತಿ.

ಭಾರತದಲ್ಲೂ ನಾಯಿಗಳನ್ನು ಸಾಕುವವರ ಸಂಖ್ಯೆಯೇನೂ ಕಮ್ಮಿಯಿಲ್ಲ. ಅದಾಗಿಯೂ ಭಾರತವು ನಾಯಿಗಳ ದಾಳಿಯಿಂದ ದಿನ ನಿತ್ಯ ನಲುಗುತ್ತಿದೆ. ಅದರಲ್ಲೂ ಬೀದಿ ನಾಯಿಗಳಿಂದ ಹೆಚ್ಚಿನ ದಾಳಿಗಳು ನಡೆಯುತ್ತಿವೆ. ಭಯೋತ್ಪಾದಕರ ದಾಳಿಯಲ್ಲಿ ಮೃತಪಡುವವರಿಗಿಂತ ಹೆಚ್ಚಾಗಿ ಬೀದಿ ನಾಯಿಗಳ ದಾಳಿಯಿಂದಾಗಿ ಹೆಚ್ಚಿನ ಭಾರತೀಯರು ಸಾಯುತ್ತಿದ್ದಾರೆ ಎಂದು ಬಿಬಿಸಿ 2016 ರಲ್ಲಿ ವರದಿ ಮಾಡಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ವಿಶ್ವಾದ್ಯಂತ ಇದೆ ಬರೋಬ್ಬರಿ 20 ಕೋಟಿಗಿಂತಲೂ ಹೆಚ್ಚು ಬೀದಿ ನಾಯಿಗಳು!

ಹಲವು ವರ್ಷಗಳ ಹಿಂದಿನ ಲೆಕ್ಕಾಚಾರದಂತೆ ವಿಶ್ವಾದ್ಯಂತ 20 ಕೋಟಿ ಬೀದಿನಾಯಿಗಳಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿತ್ತು. ಅದರಲ್ಲಿ ಭಾರತದಲ್ಲಿಯೇ ಸುಮಾರು 3.5 ರಿಂದ 4 ಕೋಟಿ ಬೀದಿ ನಾಯಿಗಳಿವೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ವಾರ್ಷಿಕವಾಗಿ ಅಂದಾಜು ಸಂಖ್ಯೆ 1.74 ಕೋಟಿ ಜನರು ನಾಯಿಗಳ ದಾಳಿಗೆ ಒಳಗಾಗುತ್ತಾರೆ. ಜೊತೆಗೆ ನಾಯಿ ಮೂಲಕ ಹರಡುವ ವೈರಸ್ ಆದ ರೇಬಿಸ್‌ನಿಂದ ಸಾಯುವವರು ಭಾರತದಲ್ಲೇ ಹೆಚ್ಚು ಎಂದು ವರದಿಗಳು ಉಲ್ಲೇಖಿಸುತ್ತವೆ. ರೇಬಿಸ್ ರೋಗ ಬಂದವರು ಬದುಕುವ ಸಾಧ್ಯತೆ ತೀರಾ ಕಮ್ಮಿ ಎನ್ನಲಾಗಿದೆ. ಏಕೆಂದರೆ ಕೋವಿಡ್‌ ಮರಣ ಪ್ರಮಾಣ ಶೇ1% ರಷ್ಟಿದ್ದರೆ ರೇಬಿಸ್ ಮರಣ ಪ್ರಮಾಣ ಶೇ.100% ರಷ್ಟು ಎನ್ನಲಾಗಿದೆ.

ಪ್ರತಿ ವರ್ಷ ರೇಬಿಸ್‌ನಿಂದಾಗಿ ವಿಶ್ವದಾದ್ಯಂತ ಮೃತಪಡುವ 59 ಸಾವಿರ ಜನರಲ್ಲಿ 36%(20,000) ಸಾವು ಭಾರತ ದೇಶವೊಂದರಲ್ಲೇ ಸಂಭವಿಸುತ್ತದೆ. ಇದರಲ್ಲಿ ಅರ್ಧದಷ್ಟು ಪ್ರಕರಣಗಳು 15 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಎಂಬುವುದು ಗಮನಾರ್ಹವಾಗಿದೆ.

ಉದಾಹರಣೆಗೆ ಹೇಳಬೇಕೆಂದರೆ ಬೆಂಗಳೂರು ನಗರವೊಂದರಲ್ಲೆ ಕಳೆದ ಆರು ತಿಂಗಳಲ್ಲಿ 15 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿ ದಾಳಿ ಮಾಡಿದ್ದು, ಪ್ರತಿ ನಿತ್ಯ ಸರಾಸರಿ 70ಕ್ಕೂ ಹೆಚ್ಚು ಮಂದಿ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಬಿಬಿಎಂಪಿ ಮೂಲಗಳ ಪ್ರಕಾರ, 2020 ಜನವರಿಯಿಂದ ಈವರೆಗೆ ಸುಮಾರು 52 ಸಾವಿರಕ್ಕೂ ಹೆಚ್ಚು ಜನರ ಮೇಲೆ ಬೀದಿ ನಾಯಿಗಳು ದಾಳಿ ಮಾಡಿವೆ. 2020ರ ಫೆಬ್ರವರಿಯಲ್ಲಿ ನಾಯಿ ಕಡಿತದಿಂದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಹಂದಿಗಳನ್ನು ಕಂಡರೆ ನಾಯಿ ಬೊಗಳುವುದು ಸಹಜ

ಯಾಕೆ ಭಾರತದಲ್ಲಿ ಹೆಚ್ಚಿನ ಬೀದಿ ನಾಯಿಗಳಿವೆ?

ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ಮತ್ತು 2001 ರ ಅನಿಮಲ್ ಬರ್ತ್ ಕಂಟ್ರೋಲ್ (ಎಬಿಸಿ) ನಿಯಮಗಳ ಪ್ರಕಾರ ಬೀದಿ ನಾಯಿಗಳನ್ನು ಕೊಲ್ಲುವುದು ಅಥವಾ ಅಂಗವಿಕಲಗೊಳಿಸುವುದು ಕಾನೂನುಬಾಹಿರ ಕೃತ್ಯವಾಗಿದೆ. ಬೀದಿ ಬದಿಯಲ್ಲಿ ಕಸ ಸುರಿಯುವುದು ಮತ್ತು ಪ್ರಾಣಿಗಳ ಜನನ ನಿಯಂತ್ರಣದ ಕೊರತೆಯು ಬೀದಿನಾಯಿಗಳ ಹೆಚ್ಚಳಕ್ಕೆ ಪ್ರಮುಖ ಅಂಶಗಳಾಗಿವೆ.

ಕಸದಿಂದ ತುಂಬಿರುವ ಬೀದಿಗಳು ಬೀದಿ ನಾಯಿಗಳಿಗೆ ಸೂಕ್ತವಾದ ಸಂತಾನೋತ್ಪತ್ತಿ ಕೇಂದ್ರವಾಗಿದೆ ಮಾರ್ಪಟ್ಟಿದೆ. ಎಬಿಸಿ ಪ್ರಕಾರ ನಾಯಿಗಳಿಗೆ ಸಂತಾನ ಹರಣಶಸ್ತ್ರಚಿಕಿತ್ಸೆ ನೀಡಬಹುದಾದರೂ ಅದು ಪರಿಣಾಮಕಾರಿಯಾಗಿ ನಡೆಯುತ್ತಿಲ್ಲ.

ಬೀದಿ ನಾಯಿಗಳನ್ನು 4 ಬಗೆಗಳಾಗಿ ಗುರುತಿಸಲಾಗುತ್ತದೆ

  • ಪಾಲಕರು ಇದ್ದು ಮುಕ್ತವಾಗಿ ತಿರುಗಾಡುವ ಬೀದಿ ನಾಯಿಗಳು: ಈ ನಾಯಿಗಳಿಗೆ ಪಾಲಕರು ಇರುತ್ತಾರೆ. ಆದರೆ ಇದು ದಿನವಿಡಿ ಅಥವಾ ಭಾಗಶಃ ದಿನ ಮುಕ್ತವಾಗಿ ಓಡಾಡಿಕೊಂಡು ಇರುತ್ತವೆ.
  • ಪಾಲಕರಿಲ್ಲದೆ ಸ್ವತಂತ್ರವಾಗಿ ತಿರುಗಾಡುವ ಬೀದಿ ನಾಯಿಗಳು: ಈ ನಾಯಿಗಳಿಗೆ ಈ ಹಿಂದೆ ಪಾಲಕರು ಇರುತ್ತರಾದರೂ, ಅವುಗಳನ್ನು ಅವರು ತೊರೆದಿರುತ್ತಾರೆ.
  • ಸಮುದಾಯ ಬೀದಿ ನಾಯಿಗಳು: ಈ ನಾಯಿಗೆ ಒಬ್ಬರೇ ಪಾಲಕರು ಇರುವುದಿಲ್ಲ. ಬದಲಾಗಿ ಒಂದು ಬೀದಿ ಅಥವಾ ಹೆಚ್ಚಿನ ಮನೆಗಳು ಅವುಗಳಿಗೆ ಆಹಾರ ಹಾಕುತ್ತಾ ಸಾಕಿರುತ್ತಾರೆ. ಅವುಗಳಿಗೆ ಆಹಾರ ಹಾಕುವ ಜನರ ಬೀದಿಗಳನ್ನು, ಓಣಿಗಳನ್ನು ಅವು ಕಾಯುತ್ತಿರುತ್ತವೆ. ಆದರೆ ಇತರ ದಾರಿಹೋಕರನ್ನು ಅವುಗಳು ಕಚ್ಚುತ್ತವೆ.
  • ಪಳಗದ ಬೀದಿ ನಾಯಿಗಳು: ಈ ನಾಯಿಗಳನ್ನು ಯಾರೂ ಸಾಕಿರುವುದಿಲ್ಲ. ಅವುಗಳು ತನ್ನ ಪಾಡಿಗೆ ಆಹಾರ ಹುಡುಕುತ್ತಾ ಬದುಕುತ್ತದೆ.

ಬೀದಿ ನಾಯಿಗಳ ಕಾಟಕ್ಕೆ ಪರಿಹಾರವೇನು?

ಕೆಲವು ಸಣ್ಣ ಪುಟ್ಟ ದೇಶಗಳು ಕೊಲ್ಲುವ ಮೂಲಕ ಸಂಪೂರ್ಣವಾಗಿ ಬೀದಿನಾಯಿಗಳನ್ನು ನಾಶಮಾಡಿವೆ. ಆದರೆ ಭಾರತದ ಕಾನೂನಿನ ಪ್ರಕಾರ, ಬೀದಿ ನಾಯಿಗಳನ್ನು ಹೊಡೆಯುವುದು, ಕೊಲ್ಲುವುದು ಅಥವಾ ಓಡಿಸುವುದು ಅಥವಾ ಸ್ಥಳಾಂತರಿಸುವುದು ಕಾನೂನು ರೀತಿಯಲ್ಲಿ ಅಪರಾಧ. ಅನಿಮಲ್ ಬರ್ತ್ ಕಂಟ್ರೋಲ್ (ನಾಯಿಗಳು) ನಿಯಮಗಳು-2001(ಎಬಿಸಿ)ಯಲ್ಲಿ ಕಲ್ಪಿಸಲಾದ ರೀತಿಯಲ್ಲಿ ಮಾತ್ರ ಅವುಗಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಬಹುದು. ಭಾರತೀಯ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ 1960 (ಎ ಸೆಂಟ್ರಲ್ ಆಕ್ಟ್) ಅಡಿಯಲ್ಲಿ ಜಾರಿಗೊಳಿಸಲಾಗಿರುವಂತೆ ಅವುಗಳಿಗೆ ಲಸಿಕೆಯನ್ನು ಹಾಕಿ ನಂತರ ಅವುಗಳ ಮೂಲ ಸ್ಥಳಗಳಿಗೆ ಹಿಂತಿರುಗಿಸಬೇಕು.

ಡಬ್ಲೂಎಚ್‌ಓ ಮೂರು ಸಲಹೆಗಳನ್ನು ನೀಡಿದೆ.

1. ಬೀದಿನಾಯಿಗಳ ಚಲನೆಯನ್ನು ನಿಯಂತ್ರಿಸುವುದು. ಅಂದರೆ ಒಂದು ಏರಿಯಾದ ನಾಯಿಗಳು ಮತ್ತೊಂದು ಏರಿಯಾಗೆ ಪ್ರವೇಶಿಸದಂತೆ ತೆಡೆಯುವುದು.

2. ಏರಿಯಾಗಳನ್ನು ಸ್ವಚ್ಛವಾಗಿಡುವುದು: ಯಾವುದೇ ಕಸ – ಕಡ್ಡಿ, ತ್ಯಾಜ್ಯ ಆಹಾರವನ್ನು ಬಿಸಾಡದೇ ಇದ್ದರೆ ಸಹಜವಾಗಿ ಆ ಏರಿಯಾದಲ್ಲಿ ಬೀದಿ ನಾಯಿಗಳು  ಕಡಿಮೆಯಾಗುತ್ತವೆ.

3. ಸಂತಾನಹರಣ ಚಿಕಿತ್ಸೆ: ಆ ಮೂಲಕ ನಾಯಿಗಳ ಪ್ರಮಾಣ ಕಡಿಮೆ ಮಾಡಬಹುದು. ಸಾಕು ನಾಯಿಗಳಿಗೂ ಸಂತಾನಹರಣ ಮಾಡಿಸಬೇಕು. ಆದರೆ ಆಪರೇಷನ್ ವೆಚ್ಚ ಸರಾಸರಿ 10 ಸಾವಿರ ಇರುವುದರಿಂದು ಬಹಳಷ್ಟು ಜನರು ನಾಯಿಗಳಿಗೆ ಸಂತಾನಹರಣ ಮಾಡಿಸಲು ಮುಂದಾಗುತ್ತಿಲ್ಲ. ಅವರು ತಾವು ಸಾಕಿದ ನಾಯಿಗಳು ಮರಿ ಹಾಕಿದಾಗ ಅವರುಗಳನ್ನು ಕಸ ಇರುವಲ್ಲ, ಬೇರೆ ಕಡೆಗೆ ಹೋಗಿ ಬಿಟ್ಟು ಬರುತ್ತಾರೆ. ಮುಂದೆ ಅವರು ಬೀದಿ ನಾಯಿಗಳಾಗುತ್ತವೆ.

ಹಾಗಾಗಿ ಸರ್ಕಾರವು ಸಂತಾನಹರಣ ಚಿಕಿತ್ಸೆಯ ಜವಾವ್ದಾರಿ ಹೊತ್ತುಕೊಳ್ಳಬೇಕು ಮತ್ತು ಸಾಕು ನಾಯಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಬೇಕು. ಅಲ್ಲದೆ ಪ್ರತಿ ನಾಯಿಗೆ ರೇಬಿಸ್ ಲಸಿಕೆಯನ್ನು ತಪ್ಪದೇ ಹಾಕುವುದು ಸರ್ಕಾರದ ಜವಾಬ್ದಾರಿಯಾಗಿದೆ.

ಬೀದಿ ನಾಯಿಗಳಿಗೆ ದೀರ್ಘಾವಧಿಯ ಆಶ್ರಯಗಳನ್ನು ಪುರಸಭೆಗಳು ಮತ್ತು ಪ್ರಾಣಿ ಕಲ್ಯಾಣ ಎನ್‌ಜಿಒಗಳು ನೀಡಬೇಕೆಂದು ಪಿಸಿಎ ಕಾಯ್ದೆ ಹೇಳುತ್ತದೆ. ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿ (AWBI) ಈ ಉದ್ದೇಶಕ್ಕಾಗಿ ಅವರಿಗೆ ಧನಸಹಾಯ ಮಾಡಬೇಕಾಗಿದೆ. ಆಶ್ರಯವನ್ನು ಹೇಗೆ ನಡೆಸಬೇಕು ಎಂಬುದರ ಕುರಿತು ಮಾರ್ಗಸೂಚಿಗಳಿದ್ದು, ಅವುಗಳು ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಬೇಕಾಗಿದೆ.

ಇದನ್ನೂ ಓದಿ: ‘ಚಾರ್ಲಿ’ಗಷ್ಟೇ ಅಲ್ಲ, ಎಲ್ಲ ಸದಭಿರುಚಿಯ ಸಿನಿಮಾಗಳಿಗೂ ಸಿಗಲಿ ತೆರಿಗೆ ವಿನಾಯಿತಿ- ಚಿತ್ರಕರ್ಮಿಗಳ ಒಕ್ಕೊರಲ ಆಗ್ರಹ

ಅಲ್ಲದೆ ನಾಯಿಗಳನ್ನು ಕೊಳ್ಳುವ ಬದಲು ಬೀದಿ ನಾಯಿಗಳನ್ನು ದತ್ತು ಪಡೆಯಬೇಕು

ಎನ್‌ಜಿಒಗಳು ಮತ್ತು ಪ್ರಾಣಿ ಪ್ರೇಮಿಗಳು ನಾಯಿಗಳನ್ನು ಕೊಳ್ಳುವ ಬದಲು ಬೀದಿ ನಾಯಿಗಳಿಗೆ ಕಾನೂನಿನ ಅಡಿಯಲ್ಲಿ ಅವುಗಳಿಗೆ ಆಶ್ರಯ ನೀಡಿದರೆ ಬೀದಿ ನಾಯಿಗಳ ಕಾಟದಿಂದ ಮುಕ್ತಿ ಪಡೆಯಬಹುದು. ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ (PCA) ಕಾಯಿದೆ-1960 ಮತ್ತು ರೇಬೀಸ್ ತಡೆಗಟ್ಟುವಿಕೆಯ WHO ಮಾರ್ಗಸೂಚಿಗಳಿಗೆ ಅನುಗುಣವಾಗಿ, ‘ಅನಾರೋಗ್ಯ ಅಥವಾ ದತ್ತು ಸ್ವೀಕಾರಕ್ಕೆ ಸೂಕ್ತವಲ್ಲದ ನಾಯಿಗಳಿಗೆ ಮಾನವೀಯ ದಯಾಮರಣವನ್ನು ಕೂಡಾ ನೀಡಬಹುದಾಗಿದೆ.

ದಯಾಮರಣಕ್ಕೆ ಪರ್ಯಾಯವಾಗಿ ಅನೇಕ ಅಮೇರಿಕನ್ ಮತ್ತು ಯುರೋಪಿಯನ್ ನಗರಗಳಲ್ಲಿ ಪ್ರಾಣಿಗಳನ್ನು ಎನ್‌ಜಿಒಗಳು ನಿರ್ವಹಿಸುವ ಆಶ್ರಯಕ್ಕೆ ಕರೆದೊಯ್ಯಲಾಗುತ್ತದೆ. ಅವುಗಳನ್ನು ಎರಡರಿಂದ ನಾಲ್ಕು ವಾರಗಳವರೆಗೆ ಅಲ್ಲಿ ಇರಿಸಲಾಗುತ್ತದೆ. ಆ ಸಮಯದಲ್ಲಿ ಯಾರೂ ಅವನ್ನು ದತ್ತು ತೆಗೆದುಕೊಳ್ಳದಿದ್ದರೆ ದಯಾಮರಣ ನೀಡಲಾಗುತ್ತದೆ.

ಬೆಂಗಳೂರು ಸಿಟಿಝನ್ ಮ್ಯಾಟರ್‌ ಎಂಬ ಪೋರ್ಟಲ್‌ಗೆ ಸಂದರ್ಶನ ನೀಡಿ ಮಾತನಾಡಿದ ಪ್ರಾಣಿ ಪರಿಸರಶಾಸ್ತ್ರಜ್ಞ ಮತ್ತು ಸಂರಕ್ಷಣಾ ಜೀವಶಾಸ್ತ್ರಜ್ಞ ಡಾ ಅಬಿ ತಮೀಮ್ ವನಕ್ ಅವರು, “ಬೀದಿ ನಾಯಿಗಳಿಗೆ ಪರಿಹಾರವೆಂದರೆ ಸಾಧ್ಯವಾದಷ್ಟು ನಾಯಿಗಳನ್ನು ದತ್ತು ಪಡೆಯುವುದು ಮತ್ತು ಉಳಿದವುಗಳಿಗೆ ದೀರ್ಘಾವಧಿಯ ಆಶ್ರಯವನ್ನು ಸೃಷ್ಟಿಸುವುದು. ಜೊತೆಗೆ ಬೀದಿನಾಯಿಗಳು ಸೇರಿದಂತೆ ಯಾವುದೇ ಪ್ರಾಣಿಗಳಿಗೆ ಆಹಾರವನ್ನು ನೀಡುವುದನ್ನು ನಿಲ್ಲಿಸಬೇಕು. ಹೀಗೆ ಆಹಾರ ನೀಡುವುದೇ ಅವುಗಳ ಸಂಖ್ಯೆ ಹೆಚ್ಚಾಗಲು ಕಾರಣ. ಆಹಾರ ನೀಡುವುವವರು ಅಷ್ಟೆ ಮಾಡುತ್ತಾರೆ ವಿನಃ ಅವುಗಳ ಸಂತಾನ ಹರಣದ ಬಗ್ಗೆ ತಲೆಕಡಿಸಿಕೊಳ್ಳುವುದಿಲ್ಲ” ಎಂದು ಅಭಿಪ್ರಾಯಪಡುತ್ತಾರೆ.

ಬೀದಿ ನಾಯಿಗಳ ಜವಾಬ್ದಾರಿ ಯಾರದ್ದು?

ನಾಲ್ಕು ವರ್ಷಗಳ ಹಿಂದೆ ಬೀದಿನಾಯಿಗಳ ದಾಳಿಯಿಂದ ಮೃತಪಟ್ಟಿದ್ದ 22 ತಿಂಗಳ ಮಗುವಿನ ಕುಟುಂಬಕ್ಕೆ ಸಾಂತ್ವನ ಹೇಳಿದ ಕರ್ನಾಟಕ ಹೈಕೋರ್ಟ್, ಜೂನ್‌ ತಿಂಗಳ ಅಂತ್ಯದಲ್ಲಿ ಬೀದಿ ನಾಯಿಗಳ ನಿರ್ವಹಣೆ ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಎಂದು ಪುನರುಚ್ಚರಿಸಿತ್ತು. ಜೊತೆಗೆ ಸಂಸ್ತ್ರಸ್ತ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ನೀಡುವಂತೆ ಬೆಳಗಾವಿ ಜಿಲ್ಲಾ ಪಂಚಾಯಿತಿಗೆ ಸೂಚಿಸಿತ್ತು. 2012ರ ಮಾಸ್ಟರ್‌ ಜಿಷ್ಣು ಪ್ರಕರಣದಲ್ಲಿ ಬಿಬಿಎಂಪಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ತಡೆಗೆ ನೀಡಿರುವ ನಿರ್ದೇಶನಗಳು ಜಿಲ್ಲೆ, ತಾಲೂಕು, ಗ್ರಾಮ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳಿಗೂ ಅನ್ವಯವಾಗುತ್ತವೆ ಎಂದು ನ್ಯಾಯಾಲಯ ಘೋಷಿಸಿದೆ.

ಇದನ್ನೂ ಓದಿ: ಪಂಜಾಬ್‌: ನಾಯಿಯನ್ನು ಸ್ಕೂಟಿಗೆ ಕಟ್ಟಿ ಎಳೆದೊಯ್ದ ಮಹಿಳೆ – ಪ್ರಕರಣ ದಾಖಲು

ಬೀದಿ ನಾಯಿ ಮುಕ್ತ ದೇಶ ನೆದರ್ಲ್ಯಾಂಡ್ಸ್‌‌!

ಬೀದಿ ನಾಯಿಗಳ ಹಾವಳಿಯ ಬಗ್ಗೆ ಹಲವಾರು ದೂರುಗಳ ಹಿನ್ನಲೆಯಲ್ಲಿ ಮಾತನಾಡಿದ್ದ ರಾಜ್ಯ ಪಶುಸಂಗೋಪನಾ ಇಲಾಖೆ ಸಚಿವ ಪ್ರಭು ಚೌಹಾಣ್, ಇಲಾಖೆಯಿಂದ ಬೆಂಗಳೂರಿನಲ್ಲಿ ಬೀದಿ ನಾಯಿಗಳನ್ನು ದಾಳಿ ಮತ್ತು ರೇಬಿಸ್ ಮುಕ್ತಗೊಳಿಸುವ ಬಗ್ಗೆ ಗಂಭೀರವಾಗಿ ಕೆಲಸ ಮಾಡುತ್ತಿದೆ. ಸಧ್ಯದಲ್ಲೇ ಬೆಂಗಳೂರು ಬೀದಿ ನಾಯಿ ಮುಕ್ತ ನಗರವಾಗಲಿದೆ ಎಂದು ಹೇಳಿದ್ದರು. ಆದರೆ ಯುರೋಪಿನ ದೇಶವಾದ ನೆದರ್ಲ್ಯಾಂಡ್ಸ್‌‌ 2020ರಲ್ಲಿಯೇ ದೇಶವನ್ನು ಬೀದಿ ನಾಯಿ ಮುಕ್ತ ದೇಶ ಎಂದು ಘೋಷಿಸಿದೆ.

ನೆದರ್ಲ್ಯಾಂಡ್ಸ್ ತನ್ನ ಬೀದಿನಾಯಿ ಸಮಸ್ಯೆಯನ್ನು ನಿರ್ಮೂಲನೆ ಹೇಗೆ ಮಾಡಿತು. ಕೊಲ್ಲುವ ಮೂಲಕವೇ?

ನೆದರ್ಲ್ಯಾಂಡ್ಸ್ ತನ್ನ ಬೀದಿನಾಯಿ ಸಮಸ್ಯೆಯನ್ನು ಕೊಲ್ಲುವ ಮೂಲಕ ಮಾಡಿಲ್ಲ. ಅದು ಪ್ರಮುಖವಾಗಿ ನಾಲ್ಕು ಯೋಜನೆಗಳನ್ನು ರೂಪಿಸಿ ತನ್ನ ಗುರಿಯನ್ನು ಮುಟ್ಟಿತ್ತು. ದೇಶವೂ CNVR ಪ್ರೋಗ್ರಾಂ (ಸಂಗ್ರಹ, ಸಂತಾನಹರಣ, ವ್ಯಾಕ್ಸಿನೇಟ್ ಮತ್ತು ವಾಪಾಸು) ಮೂಲಕ ಬೀದಿ ನಾಯಿ ಮುಕ್ತ ದೇಶ ಎಂಬ ಗುರಿಯನ್ನು ಸಾಧಿಸಿತು. ಈ ಯೋಜನೆಯು ರಾಷ್ಟ್ರವ್ಯಾಪಿ ನಡೆದಿದ್ದು, ಸರ್ಕಾರದಿಂದ ಅನುದಾನ ಪಡೆದ ಸಂತಾನಹರಣ ಕಾರ್ಯಕ್ರಮವಾಗಿದೆ. ವಿಶ್ವ ಪ್ರಾಣಿ ಸಂರಕ್ಷಣಾ ಸಂಸ್ಥೆಯು ಬೀದಿ ನಾಯಿಗಳ ಸಂಖ್ಯೆಯನ್ನು ಎದುರಿಸಲು ಇದು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ನಂಬುತ್ತದೆ.

ಇದರ ಜೊತೆಗೆ ದೇಶವು ಅಂಗಡಿಯಿಂದ ಖರೀದಿಸುವ ನಾಯಿಗಳಿಗೆ ಹೆಚ್ಚಿನ ದರ ವಿಧಿಸಿತ್ತು. ಅದರ ಬದಲಿಗೆ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳಲು ಜನರನ್ನು ಪ್ರೋತ್ಸಾಹಿಸುತ್ತದೆ. ಅಷ್ಟೆ ಅಲ್ಲದೆ ತೊಂದರೆಯಲ್ಲಿರುವ ಪ್ರಾಣಿಗಳನ್ನು ರಕ್ಷಿಸುವುದು ಸೇರಿದಂತೆ ಪ್ರಾಣಿಗಳ ವಿರುದ್ಧದ ಅಪರಾಧಗಳ ಮೇಲ್ವಿಚಾರಣೆಗಾಗಿ ನೆದರ್ಲ್ಯಾಂಡ್ಸ್ ಪ್ರಾಣಿ ಪೊಲೀಸ್ ಪಡೆಯನ್ನು ಸ್ಥಾಪಿಸಿದೆ.

ಭಾರತವು ನೆದರ್ಲ್ಯಾಂಡ್ ದೇಶದ ಮಾದರಿಯಲ್ಲಿ ಕ್ರಮ ಕೈಗೊಂಡು ನಾಯಿಗಳ ಹಾವಳಿಯನ್ನು ನಿಯಂತ್ರಿಸಬೇಕಿದೆ ಮತ್ತು ಲಕ್ಷಾಂತರ ಜೀವಗಳನ್ನು ಕಾಪಾಡಬೇಕಿದೆ.

ಇದನ್ನೂ ಓದಿ; ಎನ್‌ಪಿಎಸ್‌ ನೌಕರರ ಮೇಲೆ ಸರ್ಕಾರಿ ನೌಕರರ ಸಂಘದಿಂದ ಹಲ್ಲೆ; ಷಡಕ್ಷರಿ ಮೇಲೆ ಗಂಭೀರ ಆರೋಪ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮೂರನೇ ಅತ್ಯಾಚಾರ ಪ್ರಕರಣ ದಾಖಲು : ಉಚ್ಛಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಾಂಕೂಟತ್ತಿಲ್ ಬಂಧನ

ಅತ್ಯಾಚಾರ ಆರೋಪ ಕೇಳಿ ಬಂದ ಬಳಿಕ ಕಾಂಗ್ರೆಸ್‌ನಿಂದ ಉಚ್ಛಾಟನೆಗೊಂಡಿರುವ ಕೇರಳದ ಪಾಲಕ್ಕಾಡ್‌ನ ಶಾಸಕ ರಾಹುಲ್ ಮಾಂಕೂಟತ್ತಿಲ್ ಅವರನ್ನು ಭಾನುವಾರ (ಜ.11) ಬಂಧಿಸಲಾಗಿದೆ. ಪಾಲಕ್ಕಾಡ್‌ನ ಕೆಪಿಎಂ ರೀಜೆನ್ಸಿ ಹೋಟೆಲ್‌ನಿಂದ ಬೆಳಗಿನ ಜಾವ 12.30ರ ಸುಮಾರಿಗೆ ಮಾಂಕೂಟತ್ತಿಲ್...

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...