Homeಮುಖಪುಟದಲಿತ, ಒಬಿಸಿ ಅಥವಾ ಬ್ರಾಹ್ಮಣ: ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥರು ಯಾರಾಗುತ್ತಾರೆ?

ದಲಿತ, ಒಬಿಸಿ ಅಥವಾ ಬ್ರಾಹ್ಮಣ: ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥರು ಯಾರಾಗುತ್ತಾರೆ?

ಮುಂದಿನ ಲೋಕಸಭಾ ಚುನಾವಣೆಯ ದೃಷ್ಟಿಯಲ್ಲಿ ಬಿಜೆಪಿ ಜಾತಿ ಸಮೀಕರಣದ ಲೆಕ್ಕಾಚಾರ ಹಾಕುತ್ತಿದೆ. ಯುಪಿ ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಇತ್ತ ಬ್ರಾಹ್ಮಣ ಲಾಬಿಯೂ ನಡೆಯುತ್ತಿದೆ.

- Advertisement -
- Advertisement -

ಉತ್ತರ ಪ್ರದೇಶದ ಬಿಜೆಪಿ ಮುಖ್ಯಸ್ಥರಾಗಿರುವ ಸ್ವತಂತ್ರದೇವ್ ಸಿಂಗ್ ಅವರ ಮೂರು ವರ್ಷಗಳ ಅಧಿಕಾರಾವಧಿ ಪೂರ್ಣಗೊಂಡಿದೆ. ರಾಜಕೀಯವಾಗಿ ಪ್ರಮುಖ ಪಾತ್ರ ವಹಿಸುವ ಉತ್ತರ ಪ್ರದೇಶದಲ್ಲಿ ಮುಂದಿನ ಬಿಜೆಪಿ ಅಧ್ಯಕ್ಷರು ಯಾರಾಗುತ್ತಾರೆಂಬ ಕುತೂಹಲ ಕೆರಳಿದೆ. ರಾಜ್ಯದಲ್ಲಿನ ಸಂಕೀರ್ಣ ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸುವ ಗುರುತರ ಜವಾಬ್ದಾರಿಯನ್ನು ಬಿಜೆಪಿ ಈಗ ಎದುರಿಸಬೇಕಾಗಿದೆ.

ಸ್ವತಂತ್ರದೇವ್ ಅವರ ನಂತರ 2024ರ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಯಾರು ಪಕ್ಷವನ್ನು ಮುನ್ನಡೆಸುತ್ತಾರೆ ಎಂಬ ಕಾರಣದಿಂದ ಈ ಆಯ್ಕೆಯು ಪ್ರಮುಖ ಪಾತ್ರ ವಹಿಸಿದೆ.

ಮೂರು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಐದನೇ ರಾಜ್ಯ ಬಿಜೆಪಿ ಮುಖ್ಯಸ್ಥ ಸ್ವತಂತ್ರದೇವ್, ಯೋಗಿ ಆದಿತ್ಯನಾಥ್ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದಿರುವ ಪ್ರಭಾವಿ ಇತರ ಹಿಂದುಳಿದ ವರ್ಗಗಳ (ಒಬಿಸಿ) ನಾಯಕರೂ ಆಗಿದ್ದಾರೆ. ಅವರು ಉತ್ತರ ಪ್ರದೇಶ ವಿಧಾನ ಪರಿಷತ್ತಿನ ನಾಯಕರೂ ಹೌದು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಯೋಗಿ ಸರ್ಕಾರವು ಎರಡನೇ ಅವಧಿಗೆ ಅಧಿಕಾರ ಹಿಡಿದ ಬಳಿಕ ಸ್ವತಂತ್ರದೇವ್ ಅವರು ಕಳೆದ ನಾಲ್ಕು ತಿಂಗಳಿನಿಂದ ಮಂತ್ರಿಯಾಗಿದ್ದಾರೆ. ಆದರೆ ಬಿಜೆಪಿಯು ‘ಒಂದು ಸದಸ್ಯ-ಒಂದು ಹುದ್ದೆ’ ಎಂಬ ತತ್ವವನ್ನು ಹೇಳುತ್ತಿದೆ. ಇದರ ನಡುವೆ ಶನಿವಾರ ಯುಪಿ ಬಿಜೆಪಿ ಮುಖ್ಯಸ್ಥರಾಗಿ ತಮ್ಮ ಅಧಿಕಾರಾವಧಿಯನ್ನು ಸ್ವತಂತ್ರದೇವ್ ಪೂರ್ಣಗೊಳಿಸಿದ್ದಾರೆ.

“ಹೊಸ ಬಿಜೆಪಿ ಅಧ್ಯಕ್ಷರ ಆಯ್ಕೆ ವಿಳಂಬಕ್ಕೆ ಎರಡು ಕಾರಣಗಳಿವೆ. ಪಕ್ಷದೊಳಗಿನ ಆಂತರಿಕ ಚುನಾವಣೆಗಳು ಶೀಘ್ರದಲ್ಲೇ ನಡೆಯಲಿರುವುದರಿಂದ ಪಕ್ಷದ ಹೊಸ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆಯ ಜೊತೆಗೆ ಉತ್ತರ ಪ್ರದೇಶದ ಹೊಸ ಮುಖ್ಯಸ್ಥರನ್ನು ಆಯ್ಕೆ ಮಾಡಲು ಬಿಜೆಪಿ ಚಿಂತಿಸಿದೆ. ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಅವರ ಮೂರು ವರ್ಷಗಳ ಅವಧಿ ಈ ವರ್ಷಾಂತ್ಯಕ್ಕೆ ಮುಗಿಯಲಿದೆ” ಎಂದು ಕೇಂದ್ರ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದಾರೆ.

“ಮುಖ್ಯ ಕಾರಣವೆಂದರೆ ಬಿಜೆಪಿಯು ಬ್ರಾಹ್ಮಣ ಅಥವಾ ಒಬಿಸಿ ಎಂಬ ಎರಡು ಮುಖಗಳ ಆಯ್ಕೆಯ ಗೊಂದಲವನ್ನು ಎದುರಿಸುತ್ತಿದೆ. ಇದಕ್ಕಾಗಿ ಸಿಎಂ ಯೋಗಿ ಆದಿತ್ಯನಾಥ್ ಸೇರಿದಂತೆ ಯುಪಿ ನಾಯಕರೊಂದಿಗೆ ಸಮಾಲೋಚನೆ ಪೂರ್ಣಗೊಂಡಿಲ್ಲ” ಎಂದು ಬಿಜೆಪಿ ನಾಯಕರೊಬ್ಬರು ‘ದಿ ಪ್ರಿಂಟ್‌’ ಜಾಲತಾಣಕ್ಕೆ ತಿಳಿಸಿದ್ದಾರೆ. ಬ್ರಾಹ್ಮಣರನ್ನು ಪಕ್ಷದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಬ್ರಾಹ್ಮಣ ಲಾಬಿಯೂ ಒತ್ತಡ ಹೇರುತ್ತಿದೆ ಎಂದು ಅವರು ಹೇಳಿದ್ದಾರೆ.

ಕೆಲವು ತಿಂಗಳ ಹಿಂದೆ ಅನೌಪಚಾರಿಕವಾಗಿ ಯುಪಿ ನಾಯಕರ ಜೊತೆ ಮಾತನಾಡಲಾಗಿದೆ. ಆದರೆ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ ಎಂದು ಪಕ್ಷದ ಮತ್ತೊಬ್ಬ ಹಿರಿಯ ನಾಯಕರು ಹೇಳಿದ್ದಾರೆ. “ಜಾತಿ ಸಮೀಕರಣಗಳನ್ನು ಸಮತೋಲನಗೊಳಿಸುವುದರ ಸಂದಿಗ್ಧತೆಯಲ್ಲೂ ಪಕ್ಷವಿದೆ” ಎಂದು ಅವರು ತಿಳಿಸಿದ್ದಾರೆ.

ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಬ್ರಾಹ್ಮಣರಾಗಿದ್ದು, ಸಿಎಂ ಕೂಡ ಮೇಲ್ಜಾತಿಯವರಾದ್ದರಿಂದ (ಠಾಕೂರ್) ಸಮುದಾಯವನ್ನು ಕಡೆಗಣಿಸಲಾಗದಿದ್ದರೂ ಮತ್ತೊಬ್ಬ ಬ್ರಾಹ್ಮಣನನ್ನು ನೇಮಿಸುವ ಅಗತ್ಯವಿಲ್ಲ ಎಂದು ಬಿಜೆಪಿ ಕಾರ್ಯಾಧ್ಯಕ್ಷರು ಹೇಳಿದ್ದಾರೆ.

ಇದನ್ನೂ ಓದಿರಿ: ಮೇಘಾಲಯ: ಬಿಜೆಪಿ ರಾಜ್ಯ ಉಪಾಧ್ಯಕ್ಷನ ರೆಸಾರ್ಟ್‌ನಲ್ಲಿ ವೇಶ್ಯಾವಾಟಿಕೆ; 6 ಮಂದಿ ಅಪ್ರಾಪ್ತರ ರಕ್ಷಣೆ

“ದಲಿತರು ಮತ್ತು ಒಬಿಸಿಗಳ ಮೇಲೆ ಹೆಚ್ಚಿನ ಗಮನ ಹರಿಸಲಾಗುತ್ತಿದೆ ಎಂಬ ಗೊಣಗಾಟ ಪಕ್ಷದಲ್ಲಿ ಮನೆ ಮಾಡಿದೆ. ಬ್ರಾಹ್ಮಣ ಮುಖದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ ರಾಜ್ಯ ನಾಯಕರ ಜೊತೆ ನಡೆದ, ಮೊದಲ ಸಭೆಯಲ್ಲಿ, ಬ್ರಾಹ್ಮಣರನ್ನು ಹೊರತುಪಡಿಸಿ ಬೇರೆಯವರನ್ನು ಹುಡುಕುವಂತೆ ಸಂದೇಶ ರವಾನಿಸಲಾಗಿದೆ” ಎಂದಿದ್ದಾರೆ.

ಬ್ರಾಹ್ಮಣ ಮುಖವನ್ನು ಆರಿಸಿದ್ದರೆ, ಪಕ್ಷವು ಮೊದಲೇ ಘೋಷಣೆ ಮಾಡುತ್ತಿತ್ತು ಎಂದು ಕೇಂದ್ರದ ಬಿಜೆಪಿಯ ಮತ್ತೊಬ್ಬ ನಾಯಕ ಅಭಿಪ್ರಾಯಪಟ್ಟಿದ್ದಾರೆ.

“ಪಕ್ಷವು ಬ್ರಾಹ್ಮಣ ಮುಖಗಳ ಹೊರತಾಗಿ ನೋಡುತ್ತಿದೆ. ಒಬಿಸಿ ಮತ್ತು ದಲಿತರಲ್ಲಿ ಯಾರನ್ನಾದರೂ ಆಯ್ಕೆ ಮಾಡಲು ಯೋಚಿಸುತ್ತಿದೆ. ಸ್ವತಂತ್ರದೇವ್ ಅವರು ಕುರ್ಮಿ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಅವರ ಬದಲಿಗೆ ಒಬಿಸಿ ಅಭ್ಯರ್ಥಿಯನ್ನು ನೇಮಿಸುವುದು ಜಾಣತನ. ಅಲ್ಲದೆ, ರಾಜ್ಯ ಚುನಾವಣೆಯಲ್ಲಿ ದಲಿತರು ನಮ್ಮನ್ನು ದೊಡ್ಡ ಮಟ್ಟದಲ್ಲಿ ಬೆಂಬಲಿಸಿದ್ದಾರೆ. ಆದ್ದರಿಂದ ದಲಿತ ನಾಯಕರೂ ಆಯ್ಕೆಯಾಗಬಹುದು. ಜಾತಿ ಪ್ರಾಬಲ್ಯದಿಂದ ಒಬಿಸಿಗಳೂ ಮುಖ್ಯವಾಗುತ್ತಾರೆ. ಹೀಗಾಗಿ ಯಾವುದೂ ಅಂತಿಮವಾಗಿಲ್ಲ” ಎಂದಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೋಕಸಭಾ ಚುನಾವಣೆ: ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ 13 ರಾಜ್ಯಗಳ 88 ಕ್ಷೇತ್ರಗಳಲ್ಲಿ ಇಂದು...

0
ಲೋಕಸಭಾ ಚುನಾವಣೆಯ ಹಿನ್ನೆಲೆ ಎರಡನೇ ಹಂತದಲ್ಲಿ ಕರ್ನಾಟಕ ಸೇರಿದಂತೆ ಒಟ್ಟು 13 ರಾಜ್ಯಗಳಲ್ಲಿ ಇಂದು ಮತದಾನ ನಡೆಯುತ್ತಿದೆ. ಎರಡನೇ ಹಂತದಲ್ಲಿ ಕರ್ನಾಟಕದ 14 ಕ್ಷೇತ್ರಗಳು ಸೇರಿದಂತೆ ದೇಶದ 88 ಕ್ಷೇತ್ರಗಳಿಗೆ ಬೆಳಿಗ್ಗೆ 7ರಿಂದ  ಮತದಾನ...