Homeಮುಖಪುಟಶಿವಸೇನೆ ಪಕ್ಷ ಯಾರಿಗೆ ಸೇರಬೇಕು? - ಸುಪ್ರೀಂ ವಿಚಾರಣೆಯಲ್ಲಿ ಸಿಎಂ ಶಿಂಧೆ ಬಣಕ್ಕೆ ಹಿನ್ನಡೆ

ಶಿವಸೇನೆ ಪಕ್ಷ ಯಾರಿಗೆ ಸೇರಬೇಕು? – ಸುಪ್ರೀಂ ವಿಚಾರಣೆಯಲ್ಲಿ ಸಿಎಂ ಶಿಂಧೆ ಬಣಕ್ಕೆ ಹಿನ್ನಡೆ

- Advertisement -
- Advertisement -

ಮೂಲ ಶಿವಸೇನೆ ಪಕ್ಷ ನಮಗೆ ಸೇರಬೇಕು ಎಂದು ಸಿಎಂ ಏಕನಾಥ್ ಶಿಂಧೆಯವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಎನ್.ವಿ ರಮಣರವರು ಅದನ್ನು ಚುನಾವಣಾ ಆಯೋಗ ಈಗಲೇ ತೀರ್ಮಾನ ಮಾಡಬಾರದು ಎಂದು ಹೇಳಿದ್ದಾರೆ. ಇದು ಶಿಂಧೆ ಬಣಕ್ಕೆ ಹಿನ್ನಡೆಯಾದರೆ ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣಕ್ಕೆ ಸಮಾಧಾನ ತರಿಸಿದೆ.

ಈ ಕುರಿತು ದೊಡ್ಡ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗುವುದು ಮತ್ತು ಆಗಸ್ಟ್ 8 ರಂದು ಈ ಕುರಿತು ವಿಚಾರಣೆ ನಡೆಸಲಾಗುವುದು ಎಂದು ರಮಣ ಹೇಳಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆಯು ನಮಗೆ ಅನ್ವಯಿಸುವುದಿಲ್ಲ. ಏಕೆಂದರೆ ಶಿವಸೇನೆ ಪಕ್ಷದ ಒಟ್ಟು ಶಾಸಕರಲ್ಲಿ ಮೂರನೇ ಎರಡಕ್ಕಿಂತ ಹೆಚ್ಚು ಶಾಸಕರು ನಮ್ಮ ಜೊತೆಗಿದ್ದಾರೆ. ಹಾಗಾಗಿ ಅಧಿಕೃತವಾಗಿ ಶಿವಸೇನೆ ಪಕ್ಷ ನಮ್ಮದಾಗಿದೆ. ಪಕ್ಷದ ಆಂತರಿಕ ವ್ಯವಹಾರಗಳಲ್ಲಿ ಕೋರ್ಟ್ ಮಧ್ಯಪ್ರವೇಶಿಸಬಾರದು ಮತ್ತು ಚುನಾವಣಾ ಆಯೋಗ ನಮಗೆ ಮೂಲ ಶಿವಸೇನೆ ಪಕ್ಷದ ಮಾನ್ಯತೆ ಕೊಡಬೇಕು ಎಂದು ವಾದಿಸಿ ಏಕನಾಥ್ ಶಿಂಧೆ ಅರ್ಜಿ ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ ಅದನ್ನು ತಳ್ಳಿ ಹಾಕಿದೆ.

ಅರ್ಜಿದಾರರ ಪರ ವಾದ ಮಾಡಿದ ವಕೀಲ ಹರೀಶ್ ಸಾಳ್ವೆಯವರು,”40 ಶಾಸಕರು ಶಿವಸೇನೆ ಪಕ್ಷ ತೊರೆದಿದ್ದಾರೆ ಎಂದು ಹೇಳಲು ಯಾವುದೇ ಸಾಕ್ಷಿ ಇಲ್ಲ. ಹಾಗಾಗಿ ಮೂಲ ಪಕ್ಷ ಅವರದೇ ಆಗಿರುತ್ತದೆ” ಎಂದಿದ್ದಾರೆ.

ಉದ್ಧವ್ ಠಾಕ್ರೆ ಬಣದ ಪರ ವಹಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ವಾದಿಸಿ “50 ರಲ್ಲಿ 40 ಶಾಸಕರ ಬೆಂಬಲವಿದೆ ಎಂದು ಅವರು ಹೇಳುತ್ತಿದ್ದಾರೆ. ಅಕ್ರಮವಾಗಿ ಹಣಕಾಸಿನ ಆಮಿಷಿ ತೋರಿಸಿ ಕೃತಕ ಬಹುಮತವನ್ನು ಸೃಷ್ಟಿಸಲಾಗಿದೆ. ಹಾಗಾಗಿ ಅವರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂದು ಅರ್ಜಿ ಸಲ್ಲಿಸಿದ್ದೇವೆ. ಒಂದು ವೇಳೆ ಆ 40 ಶಾಸಕರು ಅನರ್ಹಗೊಂಡರೆ ಅವರ ವಾದಕ್ಕೆ ಯಾವ ಆಧಾರ ಉಳಿಯುತ್ತದೆ?” ಎಂದು ಪ್ರಶ್ನಿಸಿದ್ದಾರೆ.

40 ಶಾಸಕರು ಅಥವಾ ಯಾವುದೇ ಶಾಸಕಾಂಗ ಪಕ್ಷ ತಾವು ರಾಜಕೀಯ ಪಕ್ಷ ಎಂದು ಹೇಳಬಹುದೇ? ಅವರು ಶಾಸಕಾಂಗ ಪಕ್ಷವನ್ನು ರಾಜಕೀಯ ಪಕ್ಷದೊಂದಿಗೆ ಸಮೀಕರಿಸಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಸಿಬಲ್ ವಾದಿಸಿದ್ದಾರೆ.

ಆಗಸ್ಟ್ 8ರ ಒಳಗೆ ಎರಡೂ ಬಣಗಳು ಸಾಕ್ಷ್ಯಗಳನ್ನು ಒದಗಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ. ಅಲ್ಲಿಯವರೆಗೂ ಯಾವುದೇ ತೀರ್ಮಾನ ತೆಗೆದುಕೊಳ್ಳಬಾರದೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಬಹುಶಃ ಈ ಪ್ರಕರಣವನ್ನು ಸಂವಿಧಾನ ಪೀಠಕ್ಕೆ ವರ್ಗಾಹಿಸುವ ಸಂಭವವಿದೆ.

ಇದನ್ನೂ ಓದಿ : ನಮ್ಮ ರಾಷ್ಟ್ರ ಧ್ವಜದ ವಿನ್ಯಾಸಕಾರ್ತಿ ಸುರಯ್ಯಾ ತಯ್ಯ್‌ಬ್‌ಜಿ: ಭಾರತೀಯರೆಲ್ಲಾ ತಿಳಿಯಬೇಕಾದ ವಾಸ್ತವ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...