ಭಾರತದಾದ್ಯಂತ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆ, ಮಹಾರಾಷ್ಟ್ರದಂತಹ ಅತ್ಯಂತ ಹೆಚ್ಚು ಪೀಡಿತ ರಾಜ್ಯಗಳ ಹಲವಾರು ಜಿಲ್ಲೆಗಳಲ್ಲಿ ಲಸಿಕೆ ಕೊರತೆ ಇರುವ ಬಗ್ಗೆ ವರದಿಯಾಗಿದೆ. ಆದರೆ ಮಾರ್ಚ್ ತಿಂಗಳ ಮಧ್ಯದ ವೇಳೆಗೆ ಭಾರತದಲ್ಲಿ ನೀಡುತ್ತಿದ್ದ ಲಸಿಕೆ ಪ್ರಮಾಣಕ್ಕಿಂತ ಎರಡು ಪಟ್ಟು ರಫ್ತು ಮಾಡಿದೆ ಎಂಬ ಅಘಾತಕಾರಿ ವರದಿಯೂ ಬೆಳಕಿಗೆ ಬಂದಿದೆ.
ಪ್ರಸ್ತುತ ಲಸಿಕೆಯ ರಫ್ತು ಸ್ಥಗಿತಗೊಂಡಿದೆ ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ. ದೇಶದ ಐದು ರಾಜ್ಯಗಳಲ್ಲಿ ಲಸಿಕೆ ಕೊರತೆ ಅನುಭವಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಮಹಾರಾಷ್ಟ್ರ
ಮಹಾರಾಷ್ಟ್ರದ ಲಸಿಕೆ ದಾಸ್ತಾನು ಕೇವಲ ಮೂರು ದಿನಗಳು ಮಾತ್ರ ಇರುತ್ತದೆ ಎಂದು ಆರೋಗ್ಯ ಸಚಿವ ರಾಜೇಶ್ ಟೊಪೆ ಬುಧವಾರ ಹೇಳಿದ್ದರು. ಕೇಂದ್ರವು ಸಾಕಷ್ಟು ಲಸಿಕೆಗಳನ್ನು ನೀಡದಿದ್ದರೆ, ವ್ಯಾಕ್ಸಿನೇಷನ್ ಕೇಂದ್ರಗಳನ್ನು ಮುಚ್ಚುವಂತಹ ಪರಿಸ್ಥಿಗೆ ಸರ್ಕಾರ ತಲುಪಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಒಬ್ಬ ಅಸಮರ್ಥ ನಾಯಕ: ಸಿದ್ದರಾಮಯ್ಯ
“ರಾಜ್ಯವು 50,000 ಕ್ಕೂ ಹೆಚ್ಚು ಪ್ರಕರಣಗಳನ್ನು ವರದಿ ಮಾಡುತ್ತಿದೆ. ಹೆಚ್ಚಿನ ಯುವಕರು ಸೋಂಕಿಗೆ ಒಳಗಾಗುತ್ತಿರುವುದರಿಂದ, ನಾವು ಚುಚ್ಚುಮದ್ದಿನೊಂದಿಗೆ ಧಾವಿಸಬೇಕು. ನಾವು ಕೇಂದ್ರ ಸರ್ಕಾರಕ್ಕೆ ಲಿಖಿತವಾಗಿ ಬರೆದು ನೆನಪಿಸಿದ್ದೇವೆ, ಆದರೆ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಬಂದಿಲ್ಲ” ಎಂದು ಟೋಪೆ ಹೇಳಿದ್ದಾರೆ.
ಜಾರ್ಖಂಡ್
ಜಾರ್ಖಂಡ್‌ನಲ್ಲಿ ಕೇವಲ 3.5 ಲಕ್ಷ ಡಜನ್ ಲಸಿಕೆ ಮಾತ್ರ ಲಭ್ಯವಿರುವುದರಿಂದ ಲಸಿಕೆ ಕೊರತೆಯತ್ತ ರಾಜ್ಯವು ಸಾಗುತ್ತಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಆರೋಗ್ಯ ಕಾರ್ಯದರ್ಶಿ ಕೆ.ಕೆ. ಸೋನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರವು ಮಾರ್ಚ್ 23 ಮತ್ತು ಏಪ್ರಿಲ್ 2 ರಂದು ಹೆಚ್ಚಿನ ಲಸಿಕೆಗಳನ್ನು ನೀಡುವಂತೆ ಕೇಂದ್ರಕ್ಕೆ ಎರಡು ಬಾರಿ ಮನವಿಗಳನ್ನು ಕಳುಹಿಸಿದೆ, ಆದರೆ ಇದುವರೆಗೂ ಲಸಿಕೆ ಬಂದಿಲ್ಲ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಮುಸ್ಲಿಂ ಮತದಾರರಿಗೆ ಮನವಿ’; ನೀತಿ ಸಂಹಿಂತೆ ಉಲ್ಲಂಘನೆ ಎಂದ ಚುನಾವಣಾ ಆಯೋಗ!
“ರಾಜ್ಯದಲ್ಲಿ ಈವರೆಗೆ 18 ಲಕ್ಷಕ್ಕೂ ಹೆಚ್ಚು ವ್ಯಕ್ತಿಗಳಿಗೆ ಲಸಿಕೆ ನೀಡಲಾಗಿದ್ದು, ಶೀಘ್ರವಾಗಿ ಕನಿಷ್ಠ 5 ಲಕ್ಷ ಲಸಿಕೆಯ ಡೋಸೇಜ್ ಬೇಕಾಗುತ್ತವೆ” ಎಂದು ಸೋನ್ ಹೇಳಿದ್ದಾರೆ.
“ವಿಶೇಷ ಲಸಿಕಾ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ, ಇದರ ಅಡಿಯಲ್ಲಿ ನಾವು ಪ್ರತಿದಿನ 1 ಲಕ್ಷಕ್ಕೂ ಹೆಚ್ಚು ಜನರಿಗೆ ವ್ಯಾಕ್ಸಿನೇಷನ್ ಗುರಿಯನ್ನು ನಿಗದಿಪಡಿಸಿದ್ದೇವೆ. ಈ ತಿಂಗಳ ಎರಡನೇ ವಾರದಲ್ಲಿ ರಾಜ್ಯಕ್ಕೆ ಲಸಿಕೆ ಬರಬಹುದು” ಎಂದು ಸೋನ್ ಹೇಳಿದ್ದಾರೆ.
ಮಧ್ಯಪ್ರದೇಶ
ರಾಜ್ಯದಲ್ಲಿ ಯಾವುದೇ ಲಸಿಕೆ ಕೊರತೆ ಇಲ್ಲ ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾನ್ ಮಂಗಳವಾರ ಹೇಳಿದ್ದಾರೆ. ಆದರೆ ಮೂಲಗಳ ಪ್ರಕಾರ ಪಶ್ಚಿಮ ಮಧ್ಯಪ್ರದೇಶದ ಜಬುವಾ, ಅಲಿರಾಜ್‌ಪುರ, ಗ್ವಾಲಿಯರ್ ಚಂಬಲ್ ಪ್ರದೇಶದ ಶಿವಪುರಿ ಮತ್ತು ವಿಂಧ್ಯ ಪ್ರದೇಶದ ಸತ್ನಾಗಳಲ್ಲಿ ಲಸಿಕೆಯ ಕೊರತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಪ್ರದೇಶಗಳಲ್ಲಿ ಕೇವಲ ಮೂರು ದಿನಗಳಿಗೆ ಬೇಕಾದ ಲಸಿಕೆ ಅಷ್ಟೇ ದಾಸ್ತಾನು ಇದೆ ಎಂದು ಹೇಳಲಾಗಿದೆ.
ಬಿಹಾರ
ಲಸಿಕೆ ಕೊರತೆಯ ಬಗ್ಗೆ ಮಾತನಾಡಲು ಯಾವುದೇ ಅಧಿಕಾರಿಗಳು ಅಧೀಕೃತವಾಗಿ ಮುಂದೆ ಬಂದಿಲ್ಲವಾದರೂ, ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಕಳೆದ ಕೆಲವು ದಿನಗಳಲ್ಲಿ ಲಸಿಕೆಯ ಕೊರತೆಯ ಪರಿಣಾಮದಿದಂದಾಗಿ ಒಂದು 12 ಜಿಲ್ಲೆಗಳಲ್ಲಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಕಡಿಮೆಯಾಗಿದೆ.
ಇದನ್ನೂ ಓದಿ: ರಫೇಲ್ ಒಪ್ಪಂದಕ್ಕಾಗಿ ಭಾರತೀಯ ಮಧ್ಯವರ್ತಿಗೆ 1 ಮಿಲಿಯನ್ ಯೂರೋ ನೀಡಲಾಗಿದೆ: ವರದಿ
ರಾಜ್ಯದ 4.5 ಲಕ್ಷ ಆರೋಗ್ಯ ಕಾರ್ಯಕರ್ತರು ಸೇರಿದಂತೆ 40 ಲಕ್ಷ ಜನರಿಗೆ ಲಸಿಕೆಯನ್ನು ಈಗಾಗಲೇ ನೀಡಲಾಗಿದೆ. ಕೊರೊನಾ ಎರಡನೇ ಅಲೆಯ ನಂತರ, ವಿಶೇಷವಾಗಿ ಹೋಳಿಯ ನಂತರ ಹೆಚ್ಚಿನ ಜನರು ವ್ಯಾಕ್ಸಿನೇಷನ್‌ಗಾಗಿ ಹೊರಟಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
ಪ್ರತಿದಿನ ಲಸಿಕೆಗಳನ್ನು ಕನಿಷ್ಠ 4 ಲಕ್ಷ ಜನರಿಗೆ ನೀಡಲು ರಾಜ್ಯವು ಪ್ರಯತ್ನಿಸುತ್ತಿದೆ ಎಂದು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪ್ರತ್ಯಯ ಅಮೃತ್ ತಿಳಿಸಿದ್ದಾರೆ.
ಒಡಿಶಾ
ಆರೋಗ್ಯ ಸಚಿವ ನಾಬಾ ಕಿಶೋರ್ ದಾಸ್ 25 ಲಕ್ಷ ಡೋಸ್ ಲಸಿಕೆ ಕೋರಿ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಲಸಿಕೆ ಕೊರತೆಯಿಂದಾಗಿ 600 ಕ್ಕೂ ಹೆಚ್ಚು ಲಸಿಕೆ ಕೇಂದ್ರಗಳನ್ನು ಬುಧವಾರ ಮುಚ್ಚಲಾಗಿದೆ.
ಇದನ್ನೂ ಓದಿ: ಹಿಂದು ರಾಷ್ಟ್ರವೆಂಬುದೇ ಭ್ರಮೆ; ಆಕಾರ್ ಪಟೇಲ್ ಅವರ ’ಅವರ್ ಹಿಂದು ರಾಷ್ಟ್ರ’ ಪುಸ್ತಕ ಪರಿಚಯ


