Homeಮುಖಪುಟಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

ಫೇಕುಗಳ ಕೈಯಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಎಂಬ ನಾಟಕ

- Advertisement -
- Advertisement -

| ಮಲ್ಲಿ |
ಕಾಂಗ್ರೆಸ್ಸಿನ ನೂರಾರು ಫೇಸ್‍ಬುಕ್ ಖಾತೆ, ಪುಟಗಳನ್ನು, ಬಿಜೆಪಿಯ ಕೆಲವೇ ಕೆಲವು ಖಾತೆ, ಪುಟಗಳನ್ನು ಫೇಸ್‍ಬುಕ್ ರದ್ದು ಮಾಡಿದೆ. ಫೇಕ್ ನ್ಯೂಸ್ ತಡೆಯುವುದರ ಭಾಗವಾಗಿ ಚುನಾವಣಾ ಹೊತ್ತಲ್ಲಿ ಇಂತಹ ತೋರಿಕೆಯ ಕ್ರಮ ಅದಕ್ಕೆ ಅಗತ್ಯವಾಗಿತ್ತು. ವಿಚಿತ್ರ ಎಂದರೆ ಭಾರತದಲ್ಲಿ ಅದು ಫೇಕ್‍ನ್ಯೂಸ್ ಪತ್ತೆ ಹಚ್ಚುವ ಕ್ರಮೇ ವಿರೋಧಾಭಾಸದಿಂದ ಕೂಡಿದೆ!

ಕಳ್ಳ ಚೌಕಿದಾರನ ಕೈಗೆ ಕಾಯುವ ಕೆಲಸ ಕೊಟ್ಟಂತಾಗಿದೆ. ಫೇಕು ಸುದ್ದಿಗಳನ್ನು ತಡೆಯಲೆಂದು ಫೇಸ್‍ಬುಕ್ ನೇಮಿಸಿಕೊಂಡಿರುವ ಕಂಪನಿಗಳೇ ಫೇಕು ಹರಡುವುದರಲ್ಲಿ, ಅದೂ ಬಿಜೆಪಿಗೆ ಅನುಕೂಲವಾಗುವ ಫೇಕ್ ನ್ಯೂಸ್‍ಗಳನ್ನು ಹರಡುವುದರಲ್ಲಿ ನಿರತವಾಗಿವೆ.
ಇಂಡಿಯಾಟುಡೇ, ಜಾಗರಣ್ ಮೀಡಿಯಾ ಮತ್ತು ಮೊಬೈಲ್‍ನ್ಯೂಸ್-ಈ ಮೂರು ಕಂಪನಿಗಳ ಪೋರ್ಟಲ್‍ಗಳು ಫ್ಯಾಕ್ಟ್ ಚೆಕಿಂಗ್ ಮಾಡುತ್ತಿದ್ದು ಫೇಸ್‍ಬುಕ್ ಸಹಪಾಠಿಗಳಾಗಿವೆ. ಆದರೆ ಇವೇ ಸಂಸ್ಥೆಗಳು ನಡೆಸುವ ಚಾನೆಲ್, ದಿನಪತ್ರಿಕೆ ಮತ್ತು ವೆಬ್‍ಸೈಟ್‍ಗಳು ಫೇಕು ಸುದ್ದಿಗಳನ್ನು ಪ್ರಸಾರ ಮಾಡುತ್ತವೆ. ಅಂದರೆ ಕಳ್ಳನಿಗೆ ಕಾಯುವ ಕೆಲಸವನ್ನು ಫೇಸ್‍ಬುಕ್ ನೀಡಿದೆ.

‘ಫೇಸ್‍ಬುಕ್‍ನಲ್ಲಿ ಸುಳ್ಳುಸುದ್ದಿಗಳು ಪ್ರಸಾರವಾಗದಂತೆ ತಡೆಯಲು ನಾವು ಬದ್ಧರಾಗಿದ್ದೇವೆ. 2019ರ ಚುನಾವಣೆಯ ಸಂದರ್ಭದ ಹಿನ್ನೆಲೆಯಲ್ಲಿ ನಾವು ಇನ್ನಷ್ಟು ಕ್ರಮಗಳನ್ನು ರೂಪಿಸಿದ್ದು, ಸುಳ್ಳುಸುದ್ದಿಗಳಿಗೆ, ಪ್ರಪಗಂಡಾಗಳಿಗೆ ಕಡಿವಾಣ ಹಾಕಲಿದ್ದೇವೆ….’ -ಫೇಸ್‍ಬುಕ್ ಇಂಡಿಯಾದ ಹೆಡ್ ಮನೀಷ ತಂಡೂರಿ ಕಳೆದ ತಿಂಗಳು ಹೀಗೆ ಉದ್ಘರಿಸಿದ್ದರು. ಆದರೆ ಫೇಸ್‍ಬುಕ್ ಈ ವಿಷಯದಲ್ಲಿ ಗಂಭೀರತೆಯನ್ನು ಹೊಂದಿಲ್ಲ ಎಂಬುದು ಪದೇ ಪದೇ ಸಾಬೀತಾಗಿದೆ. ಹಿಂದೆ ಅದು ಬಿಜೆಪಿ ಪಕ್ಷಕ್ಕೆ ಸಾಕಷ್ಟು ಅನುಕುಲವಾಗುವಂತೆ ವರ್ತಿಸಿದ್ದನ್ನೂ ಗಮನಿಸಿದಾಗ ಅದರ ನಡಾವಳಿಯೇ ಸಂಶಯಾತ್ಮಕ ಎನಿಸುತ್ತದೆ.

ಭಾರತದ ಫೇಸ್‍ಬುಕ್ ಅಕೌಂಟುಗಳಲ್ಲಿ ಸುಳ್ಳು ಸುದ್ದಿ ಪತ್ತೆ ಹಚ್ಚಲು, ಆ ಮೂಲಕ ಅಂತಹ ಮೂಲಗಳನ್ನು ನಿರ್ಬಂಧಿಸಲು, ಫೇಸ್‍ಬುಕ್ ಕಳೆದ ತಿಂಗಳು ಮತ್ತೆ 3 ಫ್ಯಾಕ್ಟ್-ಚೆಕಿಂಗ್ ಪೋರ್ಟಲ್‍ಗಳೊಂದಿಗೆ ಒಪ್ಪಂದ ಮಾಡಿಕೊಂಡಿತು. ಅದರಲ್ಲಿ ಮೂರು ಪೋರ್ಟಲ್ ಕಂಪನಿಗಳು ಸ್ವತ: ಸುಳ್ ಸುದ್ದಿಯ ವಕ್ತಾರರೇ ಆಗಿವೆ.

ಫೇಸ್‍ಬುಕ್ ನೇಮಿಸಿಕೊಂಡಿರುವ ಅಂತಹ ಮೂರು ಪ್ರಚಂಡ ಫೇಕುದಾರ್ (ಕಳ್ಳ ಚೌಕಿದಾರ್)ಗಳು ಪುಲ್ವಾಮಾ ಘಟನೆಯ ನಂತರ ವಿಪರೀತ ಸುಳ್ಳುಗಳನ್ನು ಸತ್ಯದ ತಲೆ ಮೇಲೆ ಹೊಡೆದಂತೆ ಹಬ್ಬಿಸಿವೆ. ಸತ್ಯ ಗೊತ್ತಾದ ಮೇಲೂ ಅವು ವಿಷಾದಿಸಿಲ್ಲ ಕೂಡ. ಅಂದರೆ, ಸುಳ್ಳು ಎಂದು ಗೊತ್ತಿದ್ದೂ ಅವು ಈ ಕೆಲಸ ಮಾಡಿವೆ.

ಫೇಸ್‍ಬುಕ್‍ನ ಕಾಟಾಚಾರದ ಕ್ರಮ
ತನ್ನ ಬ್ರ್ಯಾಂಡ್‍ನೇಮ್ ಉಳಿಸಿಕೊಳ್ಳಲು ಫ್ಯಾಕ್ಟ್ ಚೆಕಿಂಗ್ ಮಾಡುತ್ತೇವೆ ಎನ್ನುವ ಫೇಸ್‍ಬುಕ್ ನಿಜಕ್ಕೂ ಆ ವಿಷಯದಲ್ಲಿ ಪ್ರಾಮಾಣಿಕವಾಗಿಲ್ಲ. ಸುಳ್ಳೋ, ಸತ್ಯವೋ, ಅದಕ್ಕೆ ತನ್ನ ವ್ಯವಹಾರ ಕ್ಲಿಕ್ ಆಗಬೇಕಷ್ಟೇ.
ಹಿಂದೆ ಅಮೆರಿಕದಲ್ಲಿ ಫೇಸ್‍ಬುಕ್‍ನ ಫ್ಯಾಕ್ಟ್ ಚೆಕಿಂಗ್ ಪೋರ್ಟಲ್ ಆಗಿದ್ದ ‘ಸ್ನೋಪ್ಸ್’ನ ಮ್ಯಾನೇಜಿಂಗ್ ಎಡಿಟರ್ ಬ್ರೂಕ್ ಬಿನ್‍ಸೋಸ್ಕಿ ಪ್ರಕಾರ, ‘ನಮ್ಮನ್ನು ಅವರು ‘ಕ್ರೈಸಿಸ್ ಪಿ.ಆರ್. ತರಹ ಬಳಸುತ್ತಾರೆ ಅಷ್ಟೇ… ತಾವು ಫೇಕ್ ನ್ಯೂಸ್ ತಡೆಯಲು ಕ್ರಮ ಕೈಗೊಂಡಿದ್ದೇವೆ ಎಂದು ನಂಬಿಸಲು ಫೇಸ್‍ಬುಕ್ ಈ ನಾಟಕ ಆಡುತ್ತದೆ. ನಿಜಕ್ಕೂ ಫೇಕ್ ತಡೆಯುವಲ್ಲಿ ಅದಕ್ಕೆ ಯಾವ ಆಸಕ್ತಿಯೂ ಇಲ್ಲ….”
(ಆಧಾರ: altnews.in )

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...