Homeನಿಜವೋ ಸುಳ್ಳೋಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?

ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ತಾಯಿ ಕಳೆದುಕೊಂಡ ಚಿರತೆ ಮರಿಗೆ ಅಮ್ಮನ ಪ್ರೀತಿ ನೀಡಿದ ಸಾಕಿದ ಹಸು?

ವರದಿ ಮಾಡಿದ ಶ್ಯಾಮ್ ಪರೇಖ್ "ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು" ಎಂದಿದ್ದಾರೆ.

- Advertisement -
- Advertisement -

ಅಸ್ಸಾಂನಲ್ಲಿ ಹುಟ್ಟಿದ ಕೂಡಲೇ ತಾಯಿ ಕಳೆದುಕೊಂಡ ಚಿರತೆ ಮರಿಗೆ ಹಸುವೊಂದು ಅಮ್ಮನ ಪ್ರೀತಿ ನೀಡುತ್ತಿದೆ ಎಂಬ ಚಿತ್ರಗಳು ಮತ್ತು ಸುದ್ದಿ ವೈರಲ್ ಆಗತೊಡಗಿವೆ. ಉದ್ಯಮಿ ಸಿದ್ಧಾರ್ಥ್‌ ಪೈ ಇದೇ ಸ್ಕ್ರೀನ್‌ಶಾಟ್‌ ಅನ್ನು ಟ್ವೀಟ್ ಮಾಡಿ ನಂತರ ಡಿಲಿಟ್ ಮಾಡಿದ್ದಾರೆ.

If only some Humans could learn from this….This took place in Assam. A man bought a cow from the neighboring village…

Posted by Robindro Sharma on Saturday, June 6, 2020

ಚಿತ್ರಗಳೊಂದಿಗೆ ಹಂಚಿಕೊಂಡ ಕಥೆಯಲ್ಲಿ ಹಸು ಚಿರತೆ ಮರಿಯನ್ನು ರಾತ್ರಿವೇಳೆ ಮುದ್ದಾಡುತ್ತದೆ ಎಂದು ಹೇಳಲಾಗುತ್ತಿದೆ. ಸಂಪೂರ್ಣ ಕಥೆ ಹೀಗಿದೆ, “ಇದು ಅಸ್ಸಾಂನಲ್ಲಿ ನಡೆಯಿತು. ಒಬ್ಬ ವ್ಯಕ್ತಿಯು ಪಕ್ಕದ ಹಳ್ಳಿಯಿಂದ ಹಸುವೊಂದನ್ನು ಖರೀದಿಸಿ ಮನೆಗೆ ತಂದನು, ಅದರ ನಂತರ ಆ ಹಳ್ಳಿಯಲ್ಲಿ ಪ್ರತಿ ರಾತ್ರಿ ನಾಯಿಗಳು ನಿರಂತರವಾಗಿ ಬೊಗಳುತ್ತಿದ್ದವು. ಆಗ ಅವನು ಕಳ್ಳರು ಲಾಕ್ ಡೌನ್‌ನ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆಂದು ಅನುಮಾನಿಸಿ, ಹಸು ಕಟ್ಟಿರುವಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದನು. ಬೆಳಿಗ್ಗೆ ಎದ್ದು ಆ ವೀಡಿಯೊ ನೋಡಿ ಅವನು ನೋಡಿ ಆಘಾತಕ್ಕೊಳಗಾದನು. ಏಕೆಂದರೆ ಪ್ರತಿದಿನ ರಾತ್ರಿ ಹಸುವಿರುವಲ್ಲಿಗೆ ಚಿರತೆ ಮರಿಯೊಂದು ಬರುತ್ತಿದ್ದು ಹಸು ಅದನ್ನು ಮುದ್ದಾಡುತ್ತಿತ್ತು. ಆಗ ಅವನು ಹಸುವನ್ನು ಖರೀದಿಸಿದ ಹಳ್ಳಿಗೆ ಹಿಂತಿರುಗಿ, ಹಿಂದಿನ ಮಾಲೀಕರ ಬಳಿಗೆ ಹೋಗಿ ಚಿರತೆ ಬಗ್ಗೆ ತಿಳಿಸಿ, ಚಿತ್ರ ಮತ್ತು ವೀಡಿಯೊಗಳನ್ನು ತೋರಿಸಿದರು. ಆಗ ಹಿಂದಿನ ಮಾಲೀಕರು ಆ ಮನುಷ್ಯನಿಗೆ ನಡೆದ ಕಥೆಯನ್ನು ಹೇಳಿದರು. ಚಿರತೆ ಮರಿಗೆ ಕೇವಲ 20 ದಿನವಾಗಿದ್ದಾಗ, ಅದರ ತಾಯಿಯನ್ನು ಕೊಲ್ಲಲ್ಪಟ್ಟಿತು. ನಂತರ ಅವನು ಮರಿಯನ್ನು ನೋಡಿ ಕನಿಕರವಾಗಿ ತನ್ನ ಹಸುವಿನ ಬಳಿಗೆ ತಂದುಬಿಟ್ಟನು. ಹಸು ಅದನ್ನು ಸಾಕಿತು. ಚಿರತೆ ಬೆಳೆದು ದೊಡ್ಡದಾದಾಗ ಅದನ್ನು ಕಾಡಿಗೆ ಬಿಡಲಾಯಿತು. ಆದರೆ ಅದು ಯಾವಾಗಲೂ ಹಸುವಿನೊಂದಿಗೆ ಮುದ್ದಾಡಲು ಮತ್ತು ವಿಶ್ರಾಂತಿ ಪಡೆಯಲು ಮರಳಿ ಬರುತ್ತಿದೆ”.

MOTHER'S DAYThese are pictures of a village in Assam (India). A man bought the cow from a neighboring village and…

Posted by John Helios on Tuesday, May 12, 2020

ಈ ಪೋಸ್ಟ್ ಅನ್ನು ಹಲವಾರು ವೈಯಕ್ತಿಕ ಬಳಕೆದಾರರು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಕೆಲವರು ಇತ್ತೀಚೆಗೆ ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಸಾವಿಗೆ ಇದನ್ನು ಲಿಂಕ್ ಮಾಡಿ ಆನೆ ಮರಿಯೂ ಉಳಿಯಲಿಲ್ಲ. ಪಶುಗಳಿಗಿಂತ ಮನುಷ್ಯರೆ ಕೆಟ್ಟವರು ಎಂದು ಹೇಳಲಾಗಿದೆ. ಇನ್ನು ಕೆಲವರು ಕಳೆದ ಮೇ ತಿಂಗಳಿನಲ್ಲಿ ಅಮ್ಮಂದಿರ ದಿನದಂದು ಇದೇ ಕಥೆಯನ್ನು ಫೋಟೊ ಜೊತೆಗೆ ಹಂಚಿಕೊಂಡಿದ್ದರು. ಇದಲ್ಲವೇ ತಾಯಿ ಪ್ರೀತಿ ಎಂದು ಬರೆದಿದ್ದರು. ಆ ಪೋಸ್ಟನ್ನು 9000 ಜನ ಹಂಚಿಕೊಂಡಿದ್ದರು.

ಫ್ಯಾಕ್ಟ್-ಚೆಕ್

ಗೂಗಲ್‌ನಲ್ಲಿ ಹಲವು ಕೀವರ್ಡ್ ಹುಡುಕಾಟ ನಡೆಸಿದಾಗ ಅಸ್ಸಾಂನಲ್ಲಿ ಈ ಘಟನೆ ನಡೆದ ಯಾವುದೇ ಸಾಕ್ಷ್ಯ ಸಿಗಲಿಲಲ್ಲ. ಆದರೆ onforest.com ವೆಬ್‌ಸೈಟ್‌ನಲ್ಲಿನ ಲೇಖನವೊಂದು ಸಿಕ್ಕಿತು. ಅಲ್ಲಿ ಹೆಚ್ಚಿನ ರೆಸಲ್ಯೂಶನ್‌ನ ಅದೇ ಚಿತ್ರಗಳು ಲಭ್ಯವಿದೆ. 2002 ರಲ್ಲಿ ಗುಜರಾತ್‌ನ ವಡೋದರಾ ಜಿಲ್ಲೆಯ ಆಂಟೋಲಿ ಗ್ರಾಮದಲ್ಲಿ ಹಸು ಮತ್ತು ಚಿರತೆ ಜೊತೆಗಿದ್ದ ವಿಚಿತ್ರ ಘಟನೆ ನಡೆದಿದೆ ಎಂದು ಲೇಖನ ಹೇಳುತ್ತದೆ.

ಪತ್ರಕರ್ತ ಶ್ಯಾಮ್ ಪರೇಖ್ ಅವರು 2002 ರಲ್ಲಿ ಟೈಮ್ಸ್ ಆಫ್ ಇಂಡಿಯಾಕ್ಕಾಗಿ ಈ ಚಿತ್ರವನ್ನು ಕಳಿಸಿ ವರದಿ ಮಾಡಿದ್ದಾರೆ. ಆದರೆ ಮೇಲಿನ ಕಥೆ ಹೇಳುವಂತೆ ಚಿರತೆ ಮರಿಯ ತಾಯಿ ಸತ್ತು ಹೋಯಿತು, ಹಸು ಸಾಕಿತು ಎಂಬುದು ಯಾವುದೂ ಇಲ್ಲಿ ಉಲ್ಲೇಖವಾಗಿಲ್ಲ. ಅಲ್ಲಿನ ಕಥೆಗೂ ಇಲ್ಲಿನ ವರದಿಗೂ ಯಾವುದೇ ಸಂಬಂಧವಿಲ್ಲ.

ಆದರೆ ಹಸು ಜೊತೆ ಚಿರತೆ ಮರಿ ಇದ್ದುದು ನಿಜವಾಗಿದ್ದರೆ ಅದು ಹೇಗೆ ಸಾಧ್ಯ ಎಂದು ಟೈಮ್ಸ್ ಆಫ್ ಇಂಡಿಯಾ ವಡೋದರಾದ ಕಾಡು ಸಂರಕ್ಷಣಾಧಿಕಾರಿ ಎಚ್ ಎಸ್ ಸಿಂಗ್ ಅವರನ್ನು ಪ್ರಶ್ನಿಸಿದೆ. ಅವರು “ಕೆಲವೊಮ್ಮೆ ಪ್ರಾಣಿಗಳ ನಡವಳಿಕೆಯನ್ನು ಮಾರ್ಪಡಿಸಬಹುದು. ಈ ಸಂದರ್ಭದಲ್ಲಿ, ಬಹುಶಃ ಚಿರತೆ ಉಪ-ವಯಸ್ಕ ಹಂತವನ್ನು ದಾಟಿದೆ, ಅದು ಕಾಡು ಪರಿಸರದಲ್ಲಿ ಬೆಳೆಯದೇ ಗ್ರಾಮೀಣ ಪ್ರದೇಶದಲ್ಲಿ ಬೆಳೆದುದರಿಂದ ಅದು ಬೇಟೆಯಾಡುವ ಪ್ರವೃತ್ತಿಯನ್ನು ರೂಢಿಸಿಕೊಂಡಿಲ್ಲ” ಎಂದಿದ್ದಾರೆ.

ವರದಿ ಮಾಡಿದ ಶ್ಯಾಮ್ ಪರೇಖ್ “ಇದು 18 ವರ್ಷದ ಹಿಂದೆ ಗುಜರಾತ್‌ನಲ್ಲಿ ನಡೆದಿದೆ. ಆ ಸಮಯದಲ್ಲಿ ಹಸುವಿನೊಂದಿಗೆ ಚಿರತೆ ಮರಿ ಇದ್ದುದ್ದನ್ನು ಹೇಳಿದಾಗ ಹಲವಾರು ಜನರು ನಂಬಲಿಲ್ಲ. ಅದಕ್ಕಾಗಿ ನಾವು ಇದನ್ನು ದೃಢೀಕರಿಸಲು ವನ್ಯಜೀವಿ ಛಾಯಾಗ್ರಾಹಕನನ್ನು ಕರೆಸಿ ಅವುಗಳ ಫೋಟೊ ತೆಗೆಯಲು ಕೇಳಿದೆವು” ಎಂದಿದ್ದಾರೆ.

ತೀರ್ಮಾನ

ಗುಜರಾತ್‌ನಲ್ಲಿ ವರದಿಯಾದ ಸುಮಾರು ಎರಡು ದಶಕಗಳಷ್ಟು ಹಳೆಯದಾದ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ ಇದು ಅಸ್ಸಾಂನಲ್ಲಿ ಸಂಭವಿಸಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ, ಅದಕ್ಕೆ ಮತ್ತಷ್ಟು  ವಿಸ್ತಾರವಾದ ಕಥೆ ಕಟ್ಟಿ ಪುನರುಜ್ಜೀವನಗೊಳಿಸಲಾಗಿದೆ.


ಇದನ್ನೂ ಓದಿ: ಹಸುವಿನ ಹೊಟ್ಟೆಯಲ್ಲಿ ಮಗು ಜನನದ ವದಂತಿ : ರಾತ್ರೋ ರಾತ್ರಿ ಜನರನ್ನು ಎಬ್ಬಿಸಿ ಮೌಢ್ಯಾಚರಣೆ

ಇದನ್ನೂ ಓದಿ: ಕೊರೊನಾ Fact check : ಜನ ಮನೆಯಿಂದ ಹೊರಬರದಿರಲು ಬೀದಿಗಳಿಗೆ 800 ಸಿಂಹಗಳನ್ನು ಬಿಟ್ಟ ರಷ್ಯಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...