ರೈಲಿನ ತುಂಬಾ ಕಿಕ್ಕಿರಿದು ಜನರು ಪ್ರಯಾಣಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಈ ರೈಲು ಬಾಂಗ್ಲಾದೇಶದಿಂದ ಭಾರತದ ಕಡೆಗೆ ಬರುತ್ತಿದೆ ಎಂದು ಹೇಳಲಾಗಿದೆ.

“ಮುಂದಿನ ದಿನಗಳಲ್ಲಿ ನಿಮ್ಮ ಆಸ್ತಿಯನ್ನು ರಕ್ಷಿಸಲು ಸಾಧ್ಯವಾಗುವುದಿಲ್ಲ, ಈ ಗುಂಪಿನ ಮುಂದೆ ನಿಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳನ್ನು ರಕ್ಷಿಸಲು ಸಾಧ್ಯವಿಲ್ಲ. ಅಸ್ಸಾಂ ಮತ್ತು ಕೋಲ್ಕತ್ತಾ ಮೂಲಕ ಬಾಂಗ್ಲಾದೇಶ ಈ ಮುಸ್ಲಿಮರನ್ನು ವಿರೋಧಿಸಲು ಇನ್ನೂ ಸಮಯವಿದೆ. ಇಲ್ಲದಿದ್ದರೆ ನಿಮಗೆ ಅಳಲು ಕಣ್ಣೀರು ಕೂಡ ಇರುವುದಿಲ್ಲ” ಎಂಬ ಸಂದೇಶದೊಂದಿಗೆ ವಿಡಿಯೋ ಹಂಚಿಕೊಳ್ಳಲಾಗ್ತಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆ ಪರಿಶೀಲಿಸಲು ನಾವು ಅದರ ಸ್ಕ್ರೀನ್ ಶಾಟ್ ಅನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ವೈರಲ್ ವಿಡಿಯೋ ಮೂಲತಃ ಬಾಂಗ್ಲಾ ದೇಶದ್ದಾಗಿದೆ ಎಂದು ತಿಳಿದು ಬಂದಿದೆ.
‘ಗೆಟ್ಟಿ ಇಮೇಜಸ್‘ನಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ಪೋಟೋ ಲಭ್ಯವಾಗಿದ್ದು, ಅದರ ಜೊತೆಗೆ “ಅಂತಿಮ ಪ್ರಾರ್ಥನೆಯೊಂದಿಗೆ ಬಿಶ್ವಾ ಇಜ್ತೆಮಾದ ಮೊದಲ ಹಂತ ಮುಕ್ತಾಯ. ಬಿಸ್ವಾ ಇಜ್ತೆಮಾ ಎಂದು ಕರೆಯಲ್ಪಡುವ ಮುಸ್ಲಿಮರ ವಾರ್ಷಿಕ ಸಭೆ 2020ರ ಜನವರಿ 12 ರಂದು ಬಾಂಗ್ಲಾದೇಶದ ಢಾಕಾ ಬಳಿಯ ಟೋಂಗಿಯಲ್ಲಿ ಕೊನೆಗೊಳ್ಳುವುದರಿಂದ ಬಾಂಗ್ಲಾದೇಶದ ಮುಸ್ಲಿಂ ಭಕ್ತರು ಅಖೇರಿ ಮುನಾಜತ್ ಅಥವಾ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಕಿಕ್ಕಿರಿದ ರೈಲಿನಲ್ಲಿ ಹೊರಡುತ್ತಾರೆ. ಟೋಂಗಿಯ ತುರಾಗ್ ನದಿಯ ದಡದಲ್ಲಿ ಅಖೇರಿ ಮುನಾಜತ್ ನೊಂದಿಗೆ ವಾರ್ಷಿಕ ಮುಸ್ಲಿಮರ ಸಭೆ ಕೊನೆಗೊಳ್ಳುತ್ತಿದ್ದಂತೆ ಸಾವಿರಾರು ಮುಸ್ಲಿಮರು ಮಾನವಕುಲದ ಆಶೀರ್ವಾದಕ್ಕಾಗಿ ಕೈ ಎತ್ತಿದರು” ಎಂದು ಬರೆದುಕೊಳ್ಳಲಾಗಿದೆ.

‘ಶಟರ್ ಸ್ಟಾಕ್‘ ಎಂಬ ಇನ್ನೊಂದು ಪೋಟೋ ವೆಬ್‌ಸೈಟ್‌ನಲ್ಲಿ ವೈರಲ್ ವಿಡಿಯೋಗೆ ಸಂಬಂಧಿಸಿದ ಫೋಟೋ ದೊರೆತಿದ್ದು, “ಫೆಬ್ರವರಿ 11, 2024 ರಂದು ಬಾಂಗ್ಲಾದೇಶದ ಢಾಕಾದಲ್ಲಿರುವ ಟೋಂಗಿಯಲ್ಲಿರುವ ಬಿಸ್ವಾ ಇಜ್ತೆಮಾದಲ್ಲಿ ಅಖೇರಿ ಮುನಾಜತ್ ಅಥವಾ ಎರಡನೇ ಹಂತದ ಅಂತಿಮ ಪ್ರಾರ್ಥನೆಯಲ್ಲಿ ಭಾಗವಹಿಸಿದ ನಂತರ ಮುಸ್ಲಿಂ ಭಕ್ತರು ಕಿಕ್ಕಿರಿದ ರೈಲಿನಲ್ಲಿ ಹೊರಡುತ್ತಾರೆ” ಎಂದು ಬರೆಯಲಾಗಿದೆ.

ಇಲ್ಲಿ ಎಲ್ಲಿಯೂ ಬಾಂಗ್ಲಾದೇಶದಿಂದ ಕೋಲ್ಕತ್ತಾ ಅಥವಾ ಭಾರತಕ್ಕೆ ಬರುತ್ತಿರುವ ರೈಲು ಎಂದು ಉಲ್ಲೇಖಿಸಿಲ್ಲ. ಈ ಫೋಟೋಗಳ ಮೂಲಕ ಪ್ರತೀ ವರ್ಷ ಬಾಂಗ್ಲಾದೇಶದಲ್ಲಿ ಬಿಸ್ವಾ ಇಜ್ತೆಮಾದಲ್ಲಿ ಅಖೇರಿ ಮುನಾಜತ್ ಎಂಬಲ್ಲಿ ವಾರ್ಷಿಕ ಪ್ರಾರ್ಥನೆ ನಡೆಯುತ್ತದೆ ಮತ್ತು ಅಲ್ಲಿಗೆ ಸಾವಿರಾರು ಜನ ಮುಸ್ಲಿಂ ಭಕ್ತಾದಿಗಳು ಕಿಕ್ಕಿರಿದ ರೈಲಿನಲ್ಲಿ ಆಗಮಿಸುತ್ತಾರೆ ಎಂದು ತಿಳಿಸಲಾಗಿದೆ.
ಒಟ್ಟಿನಲ್ಲಿ ಪ್ರತಿ ವರ್ಷ ಬಾಂಗ್ಲಾದೇಶದಲ್ಲಿ ಬಿಸ್ವಾ ಇಜ್ತೆಮಾದಲ್ಲಿ ಅಖೇರಿ ಮುನಾಜತ್ ಎಂಬಲ್ಲಿ ವಾರ್ಷಿಕ ಪ್ರಾರ್ಥನೆ ನಡೆಯುತ್ತದೆ. ಈ ಪ್ರಾರ್ಥನೆಗೆ ಸಾವಿರಾರು ಜನ ಮುಸ್ಲಿಂ ಭಕ್ತಾದಿಗಳು ಸೇರುತ್ತಾರೆ ಈ ವಿಡಿಯೋವನ್ನು ಸುಳ್ಳು ಪ್ರತಿಪಾದನೆಯೊಂದಿಗೆ ಬಾಂಗ್ಲಾದೇಶದಿಂದ ಕೊಲ್ಕತ್ತಾ ಅಥವಾ ಭಾರತಕ್ಕೆ ಬರುತ್ತಿರುವ ರೈಲು ಎಂದು ವಿಡಿಯೋ ಹಂಚಿಕೊಳ್ಳಲಾಗುತ್ತಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಸುಳ್ಳಾಗಿದೆ.
ಇದನ್ನೂ ಓದಿ : FACT CHECK : ಹಿಂದೂಗಳ ಮದುವೆಯಲ್ಲಿ ಮುಸ್ಲಿಂ ಯುವಕ ಸಿಹಿ ತಿಂಡಿಗೆ ಮೂತ್ರ ಮಾಡಿದ್ದಾನೆ ಎಂಬುವುದು ಸುಳ್ಳು


