“ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಗಳಲ್ಲಿನ ಹಗರಣಗಳ ವಿರುದ್ದ ಶೂ ಪಾಲಿಶ್ ಮಾಡುವ ಮೂಲಕ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಾರೆ. ಮೂರು ಬಾರಿ ಪರಾಜಿತರಾಗಿರುವ ರಾಹುಲ್ ಗಾಂಧಿ, ಇತ್ತೀಚೆಗೆ ಸ್ವಚ್ಛ ಪರೀಕ್ಷೆಗಳ ಹೋರಾಟಗಾರ ಎಂಬಂತೆ ಬಿಂಬಿಸಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗುತ್ತಿರುವ ಬಗ್ಗೆ ಅವರು ಮೌನವಾಗಿದ್ದಾರೆ” ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆಗಸ್ಟ್ 25ರಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿದ್ದರು.

“ಕಾಂಗ್ರೆಸ್ ಆಡಳಿತದ ಕರ್ನಾಟಕದಲ್ಲಿ ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಆದರೆ, ರಾಹುಲ್ ಗಾಂಧಿ ಮೌನವಾಗಿದ್ದಾರೆ” ಎಂಬುವುದಾಗಿದೆ ಅಮಿತ್ ಮಾಳವೀಯ ಪೋಸ್ಟ್‌ನ ಅರ್ಥ. ಈಗಲೂ ಆ ಪೋಸ್ಟ್ ಮಾಳವೀಯ ಅವರ ಖಾತೆಯಲ್ಲಿ ಇದೆ.
ಫ್ಯಾಕ್ಟ್‌ಚೆಕ್ : ಅಮಿತ್ ಮಾಳವೀಯ ಎಕ್ಸ್ ಪೋಸ್ಟ್‌ನಲ್ಲಿ ಕರ್ನಾಟಕದ ಕುರಿತು ಮಾಡಿರುವ ಆರೋಪ ಸುಳ್ಳು.
ಅಸಲಿಗೆ, ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಇಂದು (ಆ. 27) ನಡೆಸಲಿರುವ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡುವಂತೆ ಆಗ್ರಹಿಸಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಆಗಸ್ಟ್ 24ರಂದು ಆಕಾಂಕ್ಷಿಗಳು ಶೂ ಪಾಲಿಶ್ ಮಾಡುವ ಮೂಲಕ ಪ್ರತಿಭಟಿಸಿದ್ದರು. ಆ ಪ್ರತಿಭಟನೆಯ ಫೋಟೋ ಆಗಿದೆ ಅಮಿತ್ ಮಾಳವೀಯ ಹಂಚಿಕೊಂಡಿರುವುದು.
ವಿದ್ಯಾರ್ಥಿ ಸಂಘದ ಪ್ರತಿಭಟನೆಯ ಕುರಿತು ಪ್ರಜಾವಾಣಿ ಮಾಡಿರುವ ವರದಿಯನ್ನು ಇಲ್ಲಿ ಓದಬಹುದು.

ಇಲ್ಲಿ, ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳ ಸಣ್ಣ ಗುಂಪೊಂದು ಪ್ರತಿಭಟನೆ ಮಾಡಿದ ಫೋಟೋ ಬಳಸಿಕೊಂಡು ಕರ್ನಾಟಕದಲ್ಲಿ ಕೆಪಿಎಸ್‌ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಅಮಿತ್ ಮಾಳವಿಯಾ ಸುಳ್ಳು ಸುದ್ದಿ ಹರಡಿದ್ದಾರೆ.
ಇದನ್ನೂ ಓದಿ : FACT CHECK : ಕೋಲ್ಕತ್ತಾದಲ್ಲಿ ಪ್ರತಿಭಟನೆಯಿಂದ ಹಿಂದಿರುಗುತ್ತಿದ್ದ ಯುವತಿಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎನ್ನುವುದು ಕಟ್ಟುಕಥೆ


