Homeನಿಜವೋ ಸುಳ್ಳೋFact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

Fact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

- Advertisement -
- Advertisement -

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಏಪ್ರಿಲ್ 23 ರಂದು ತನ್ನ ಕೆಲಸ ಮುಗಿಸಿ ಹೆಂಡತಿಯೊಂದಿಗೆ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋ ಹೇಳಿಕೆಯೊಂದರಲ್ಲಿ ಆರೋಪಿಸಿದ್ದರು.

ಕಾಂಗ್ರೆಸ್ ಐಟಿ ಸೆಲ್‌ನ ರಾಷ್ಟ್ರೀಯ ಸಂಯೋಜಕ ಗೌರವ್ ಪಾಂಡಿ ಅರ್ನಬ್ ಗೋಸ್ವಾಮಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ವೀಡಿಯೊವೂ ದಾಳಿಗಿಂತ ಮುಂಚೆಯೇ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಸದಸ್ಯ ಸೂರಜ್ ಹೆಗ್ಡೆ ಮತ್ತು ರೋಫ್ಲ್ ರಿಪಬ್ಲಿಕ್ ಟ್ವಿಟರ್ ಹ್ಯಾಂಡಲ್ ಸಹ  ಇದೇ ವಿಷಯವನ್ನು ಟ್ವೀಟ್ ಮಾಡಿದ್ದರು. ಅಲ್ಲದೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅರ್ನಬ್ ಮೇಲೆ ದಾಳಿಯೇ ನಡೆದಿಲ್ಲ, ಆದರೂ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ರಿಪಬ್ಲಿಕ್ ಟಿವಿಯಿಂದ ದಾಳಿ ಸುದ್ದಿಯನ್ನು ಪ್ರಸಾರ ಮಾಡುವ ಮೊದಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮತ್ತು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಈ ದಾಳಿಯ ಬಗ್ಗೆ ತಿಳಿದಿದ್ದರು ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಶ್ರೀವತ್ಸ ಹೇಳಿದ್ದಾರೆ. ಚಾನೆಲ್‌ಗಳು ಮತ್ತು ಇಬ್ಬರು ವ್ಯಕ್ತಿಗಳು ಹಾಕಿದ ಟ್ವೀಟ್‌ಗಳ ಸಮಯವನ್ನು ಆಧರಿಸಿ ಅವರು ಈ ಆರೋಪ ಮಾಡಿದ್ದಾರೆ.

ಫ್ಯಾಕ್ಟ್-ಚೆಕ್

ಈ ಫ್ಯಾಕ್ಟ್ ಚೆಕ್ಕನ್ನು ಆಲ್ಟ್ ನ್ಯೂಸ್ ಎರಡು ರೀತಿಯಲ್ಲಿ ಪ್ರತ್ಯೇಕವಾಗಿ ವಿಶ್ಲೇಷಿಸಿದೆ.

1. ರಿಪಬ್ಲಿಕ್ ಟಿವಿ ಆಪಾದಿತ ದಾಳಿಯ ಬಗ್ಗೆ ವೀಕ್ಷಕರಿಗೆ ತಿಳಿಸುವ ಮೊದಲೆ ಅದನ್ನು ಚಿತ್ರೀಕರಿಸಲಾಗಿದೆ ಎಂದು ವೀಡಿಯೊದ ಮೆಟಾಡೇಟಾ ತೋರಿಸುತ್ತದೆಯೇ?

2. ಸಾಂಬಿತ್ ಪಾತ್ರ ಮತ್ತು ಅಶೋಕ್ ಪಂಡಿತ್ ಅವರು ಈ ದಾಳಿ ನಡೆಯುವ ಮೊದಲೇ ಟ್ವೀಟ್ ಮಾಡಿದ್ದಾರೆಯೇ?

ಮೆಟಾಡೇಟಾ

ಮೆಟಾಡೇಟಾ ಎಂದರೆ ಡೇಟಾದ ಬಗ್ಗೆ ಇರುವ ಮಾಹಿತಿ ಆಗಿದೆ. ಕೆಲವು ಪರಿಕರಗಳು ವೀಡಿಯೊಗಳಿಗೆ ಸಂಬಂಧಿಸಿದ ಮೆಟಾಡೇಟಾವನ್ನು ಬಹಿರಂಗಪಡಿಸುತ್ತವೆ. ಆದರೆ ಮೂಲ ಫೈಲ್‌ನಿಂದ ಕಂಡುಹಿಡಿದಾಗ ಮಾತ್ರ ಅಂತಹ ಡೇಟಾ ನಿಖರವಾಗಿರುತ್ತದೆ. ವೀಡಿಯೊ ಕಳುಹಿಸಿದ ಪ್ಲಾಟ್‌ಫಾರ್ಮ್ ಆಧರಿಸಿ ಮೆಟಾಡೇಟಾವನ್ನು ಮಾರ್ಪಡಿಸಲಾಗುತ್ತದೆ. ಟ್ವಿಟರ್ ಫೈಲ್‌ಗಳ ಮೆಟಾಡೇಟಾವು ಟ್ವಿಟ್ಟರಿನಲ್ಲಿ ಅಪ್‌ಲೋಡ್ ಮಾಡಿದಾಗ ಅವುಗಳ ಆಧಾರದ ಮೇಲೆ ದಿನಾಂಕ ಮತ್ತು ಸಮಯವನ್ನು ತೋರಿಸುತ್ತದೆ, ಆದರೆ ಅವುಗಳನ್ನು ಚಿತ್ರೀಕರಿಸಿದಾಗ ಅಲ್ಲ.

ವೀಡಿಯೊದ ಮೆಟಾಡೇಟಾವನ್ನು ಕಂಡು ಹಿಡಿಯಲು ಕಾಂಗ್ರೆಸ್ ಸದಸ್ಯರು metadata2go.com ವೆಬ್‌ಸೈಟ್ ಅನ್ನು ಬಳಸಿದ್ದಾರೆ. ಅವರು ವೀಡಿಯೊವನ್ನು ಡೌನ್‌ಲೋಡ್ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸತ್ಯವನ್ನು ಕಂಡುಕೊಳ್ಳಲು ಯಾರು ಬೇಕಾದರೂ ರೀತಿ ಪ್ರಯತ್ನಿಸಬಹುದು. ವೆಬ್‌ಸೈಟ್ ವಿಡಿಯೋ ತಯಾರಾದ ಸಮಯವನ್ನು ಏಪ್ರಿಲ್ 22 ರಂದು 8:17 PM ಎಂದು ತೋರಿಸುತ್ತದೆ. ಆದರೆ, ‘ಟ್ಯಾಗ್‌ಗಳು’  ವೆಬ್‌ಸೈಟ್ ಸಮಯವನ್ನು‘2020-04-22T20:17:11.000000Z’ ಎಂದು ತೋರಿಸುತ್ತದೆ. ಇದರ ‘Z’ ಅಕ್ಷರವು ಜುಲು ಸಮಯವನ್ನು ಗ್ರೀನ್ವಿಚ್ ಮೀನ್ ಟೈಮ್ (ಜಿಎಂಟಿ) ಎಂದು ಸೂಚಿಸುತ್ತದೆ, ಇದನ್ನು ಈಗ ಯೂನಿವರ್ಸಲ್ ಟೈಮ್ ಕೋಆರ್ಡಿನೇಟೆಡ್ (ಯುಟಿಸಿ) ಎಂದು ಕರೆಯಲಾಗುತ್ತದೆ.

ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ (ಐಎಸ್ಟಿ) ನೊಂದಿಗೆ ಇದನ್ನು ಹೊಂದಿಸಿದಾಗ 5:30 ಗಂಟೆಗಳನ್ನು ಸೇರಿಸುವ ಅಗತ್ಯವಿದೆ, ಅಂದರೆ ಸರಿಯಾದ ಸಮಯ ರಾತ್ರಿ 1:47 ಏಪ್ರಿಲ್ 23. ಅಂದರೆ ರಿಪಬ್ಲಿಕ್ ಟಿವಿ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ ನಿಖರವಾದ ಸಮಯ ಇದು.

ಟ್ವಿಟರ್ ಬಳಕೆದಾರರಾದ ರವಿ ನಾಯರ್ ಬೇರೆಯೊಂದು ಪ್ರತಿಪಾದನೆಯನ್ನು ಮಾಡಿದ್ದರು. ಅವರು ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಪರಿಶೀಲಿಸಿ ಮತ್ತು ಅರ್ನಬ್ ಹೇಳಿಕೆಯನ್ನು ಏಪ್ರಿಲ್ 23 ರಂದು  21:04 UTC ಅಥವಾ ರಾತ್ರಿ 2:34 IST ನಲ್ಲಿ ಉದ್ದೇಶಿತ ದಾಳಿ ರಾತ್ರಿ 12:15 ಕ್ಕೆ ನಡೆಯುವ ಮೊದಲು ರಚಿಸಲಾಗಿದೆ ಎಂದು ಸೂಚಿಸಿದ್ದರು. ಅವರ ವಿಶ್ಲೇಷಣೆ ಅವರು metadata2go.com ನಿಂದ ಪಡೆದ ಫಲಿತಾಂಶಗಳನ್ನು ಆಧರಿಸಿದೆ.

ಆದರೆ “ಆಲ್ಟ್ ನ್ಯೂಸ್” metadata2go.com ನಲ್ಲಿ ಇದನ್ನು ಪರಿಶೀಲಿಸಿದಾಗ ಅವರಿಗೆ ವಿಭಿನ್ನ ಫಲಿತಾಂಶ ಸಿಕ್ಕಿದೆ ಎಂದು ವರದಿ ಮಾಡಿದೆ. ಅಂದರೆ ಯೂ ಟ್ಯೂಬ್ ವೀಡಿಯೊದ ಮೆಟಾಡೇಟಾವನ್ನು ಡೌನ್‌ಲೋಡ್ ಮಾಡಿ metadata2go.com ಗೆ ಅಪ್‌ಲೋಡ್ ಮಾಡುವ ಮೂಲಕ ಪರಿಶೀಲಿಸುವುದು ವಿಶ್ವಾಸಾರ್ಹ ಪ್ರಕ್ರಿಯೆಯಲ್ಲ. ಯೂಟ್ಯೂಬ್ ಮೆಟಾಡೇಟಾವನ್ನು ಪರಿಶೀಲಿಸುವ ಉತ್ತಮ ಸಾಧನವೆಂದರೆ Amnesty International’s YouTube DataViewer. ಅಮ್ನೆಸ್ಟಿ ಪ್ರಕಾರ, ವೀಡಿಯೊವನ್ನು ಏಪ್ರಿಲ್ 23 ರಂದು 21:13 ಅಥವಾ ರಾತ್ರಿ 2:43 IST ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಟ್ವಿಟರ್‌ನಂತೆಯೇ, ಯೂಟ್ಯೂಬ್ ಕೂಡಾ ವೀಡಿಯೊದಿಂದ ಎಲ್ಲಾ ಮೆಟಾಡೇಟಾವನ್ನು ತೆಗೆದುಹಾಕುತ್ತದೆ. ಅಮ್ನೆಸ್ಟಿ ತೋರಿಸಿದ ಸಮಯ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಸಮಯ, ಆದರೆ ವೀಡಿಯೊ ಮಾಡಿದ ನಿಜವಾದ ದಿನಾಂಕವಲ್ಲ.

ಆದ್ದರಿಂದ, ಹಲವಾರು ಕಾಂಗ್ರೆಸ್ ಸದಸ್ಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಸಮಯವನ್ನು ವೀಡಿಯೊದ ನಿಜವಾದ ಮೆಟಾಡೇಟಾ (ರಚನೆಯ ದಿನಾಂಕ) ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಇದಲ್ಲದೆ, ಮೆಟಾಡೇಟಾ ಯುಟಿಸಿಯಲ್ಲಿನ ಸಮಯವನ್ನು ಪ್ರತಿಬಿಂಬಿಸುತ್ತದೆ, ಇದು ಭಾರತೀಯ ಸಮಯವನ್ನು ಪ್ರತಿಬಿಂಬಿಸಲು ಸರಿಹೊಂದಿಸಬೇಕಾಗಿದೆ.

ಟ್ವೀಟ್‌ಗಳು

ವೀಡಿಯೊದಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 12:15 ಕ್ಕೆ ಅರ್ನಬ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಿಪಬ್ಲಿಕ್ ಟಿವಿಯು ದಾಳಿಯ ಬಗ್ಗೆ ಮೊದಲ ಟ್ವೀಟ್ ಅನ್ನು ರಾತ್ರಿ 1:06 ಕ್ಕೆ ಮಾಡಿದೆ. ಸಂಬಿತ್ ಪಾತ್ರ ಮತ್ತು ಅಶೋಕ್ ಪಂಡಿತ್ ಕೆಲವು ನಿಮಿಷಗಳ ಮೊದಲು ಕ್ರಮವಾಗಿ ರಾತ್ರಿ 1:05 ಮತ್ತು 12:55 ಕ್ಕೆ ಟ್ವೀಟ್ ಮಾಡಿದ್ದಾರೆ. ಇದು ರಿಪಬ್ಲಿಕ್ ಟಿವಿ ಸುದ್ದಿ ಮಾಡುವ ಮೊದಲೇ ಇವರಿಬ್ಬರಿಗೆ ದಾಳಿಯ ಬಗ್ಗೆ ತಿಳಿದಿತ್ತು ಎಂದು ಹಲವರು ನಂಬಲು ಕಾರಣವಾಯಿತು.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಾಕುವುದಕ್ಕಿಂತ ಮೊದಲೇ ಅಂದರೆ ರಾತ್ರಿ 12:45 ಕ್ಕೆ ರಿಪಬ್ಲಿಕ್ ಟಿವಿ ದಾಳಿಯ ಸುದ್ದಿಯನ್ನು ಬಹಿರಂಗಪಡಿಸಿದೆ. ನಂತರ ಘಟನೆಯ ಬಗ್ಗೆ ಟ್ವೀಟ್ ಹಾಗೂ ಯೂಟ್ಯೂಬಿನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ರಿಪಬ್ಲಿಕ್ ಟಿವಿಯ ಟ್ವೀಟ್ ಸಮಯವನ್ನು ಆಧರಿಸಿ ದಾಳಿ ನಡೆಯುವ ಮೊದಲೇ ಸಂಬಿತ್ ಪಾತ್ರ ಮತ್ತು ಪಂಡಿತ್ ಅವರಿಗೆ ತಿಳಿದಿದೆ ಎಂಬ ಹೇಳಿಕೆ ಸುಳ್ಳಾಗಿದೆ. ಆಪಾದಿತ ಘಟನೆಯ ಬಗ್ಗೆ ಚಾನೆಲ್ ಮೊದಲು ಟಿವಿಯಲ್ಲಿ, ನಂತರ ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿತ್ತು. ಆದ್ದರಿಂದ ಕಾಂಗ್ರೆಸ್ ಸದಸ್ಯರು ಹಾಗೂ ಇತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಮಾಡುವ ಎರಡೂ ಆರೋಪಗಳು ಸುಳ್ಳು ಎಂದು ಸಾಬೀತಾಗುತ್ತದೆ.


ಇದನ್ನೂ ಓದಿ: Fact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಭಾರತದಲ್ಲಿ 12 ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಒರಾಕಲ್ : ಜಾಗತಿಕವಾಗಿ 30 ಸಾವಿರ ಜನರ ಕೆಲಸಕ್ಕೆ ಕುತ್ತು

ಐಟಿ ದೈತ್ಯ ಒರಾಕಲ್ ಜಾಗತಿಕ ಮಟ್ಟದಲ್ಲಿ ಸುಮಾರು 30,000 ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದ್ದು, ಇದು ಭಾರತದ ಮೇಲೂ ತೀವ್ರ ಪರಿಣಾಮ ಬೀರಿದೆ. ವರದಿಗಳ ಪ್ರಕಾರ, ಭಾರತವೊಂದರಲ್ಲೇ ಸುಮಾರು 12,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಕಂಪನಿಯು ತನ್ನ ಒಟ್ಟು ಉದ್ಯೋಗಿಳ...

ಗೋವಾ ನೈಟ್‌ಕ್ಲಬ್ ಬೆಂಕಿ ಪ್ರಕರಣ: ಮಾಲೀಕರಾದ ಸೌರಭ್ ಲೂತ್ರಾ, ಗೌರವ್ ಲೂತ್ರಾ ಸಹೋದರರಿಗೆ ಜಾಮೀನು

ಪಣಜಿ: ಕಳೆದ ಡಿಸೆಂಬರ್‌ನಲ್ಲಿ 25 ಜನರ ಸಾವಿಗೆ ಕಾರಣವಾದ ವಿನಾಶಕಾರಿ ಬೆಂಕಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಿರ್ಚ್ ಬೈ ರೋಮಿಯೋ ಲೇನ್ ನೈಟ್‌ಕ್ಲಬ್‌ನ ಮಾಲೀಕರಾದ ಸೌರಭ್ ಲೂತ್ರಾ ಮತ್ತು ಗೌರವ್ ಲೂತ್ರಾ ಅವರಿಗೆ...

ಲೈಂಗಿಕ ದೌರ್ಜನ್ಯ ಆರೋಪ: ಮಲಯಾಳಂ ಚಲನಚಿತ್ರ ನಿರ್ದೇಶಕ ರಂಜಿತ್ ಬಾಲಕೃಷ್ಣನ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ 

ಕೇರಳ: ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಿರ್ದೇಶಕ ಮತ್ತು ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಅವರನ್ನು ಬುಧವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಪ್ರಸ್ತುತ ಅವರನ್ನು ಎರ್ನಾಕುಲಂ ಸಬ್ ಜೈಲಿನಲ್ಲಿ ಇರಿಸಲಾಗಿದೆ.  ಜನವರಿ...

ಫಾರ್ಮ್–6 ವಿವಾದ : ಕೋಲ್ಕತ್ತಾದ ಚುನಾವಣಾಧಿಕಾರಿ ಕಚೇರಿ ಮುಂದೆ ಟಿಎಂಸಿ -ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ

ಮತದಾರರ ಪಟ್ಟಿಗೆ ಹೊಸದಾಗಿ ಹೆಸರುಗಳನ್ನು ಸೇರಿಸುವ ನಮೂನೆ -6 (ಫಾರ್ಮ್ -6) ವಿಚಾರದಲ್ಲಿ ಕೋಲ್ಕತ್ತಾದ ಮುಖ್ಯ ಚುನಾವಣಾಧಿಕಾರಿ ಕಚೇರಿ ಮುಂದೆ ಮಂಗಳವಾರ (ಮಾ. 31) ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬಿಜೆಪಿ ಕಾರ್ಯಕರ್ತರ...

‘ಶೀಘ್ರದಲ್ಲೇ ಹೊರಡುತ್ತೇನೆ’: ‘2-3 ವಾರಗಳಲ್ಲಿ’ ಇರಾನ್ ಮೇಲಿನ ಯುದ್ಧ ಕೊನೆಗೊಳಿಸುವ ಬಗ್ಗೆ ಸುಳಿವು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ 

ವಾಷಿಂಗ್ಟನ್ ಡಿಸಿ: ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತಗೊಳಿಸಿರುವ ಒಂದು ತಿಂಗಳ ಕಾಲ ನಡೆದ ಯುದ್ಧದ ಸಂಭಾವ್ಯ ಅಂತ್ಯದ ಬಗ್ಗೆ ಸುಳಿವು ನೀಡುವ ಮೂಲಕ, ಮುಂದಿನ ಎರಡು ಮೂರು ವಾರಗಳ ಮೊದಲೇ ಇರಾನ್ ವಿರುದ್ಧದ...

ದೊಡ್ಡಬಳ್ಳಾಪುರದಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ : ಕೆಐಎಡಿಬಿ ವಿರುದ್ಧ ಬೀದಿಗಿಳಿದ ಜನ

ದೇವನಹಳ್ಳಿ ಬಳಿಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಭೂ ಸ್ವಾಧೀನ ವಿರೋಧಿ ಹೋರಾಟ ಪ್ರಾರಂಭಗೊಂಡಿದೆ. ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ (ಕೆಐಎಡಿಬಿ) ವಿರುದ್ಧ ಜನರು ಬೀದಿಗಿಳಿದಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ...

ಬಿಹಾರ: ಪತಿಯನ್ನು ಹತ್ಯೆ ಮಾಡಿದ ಗುಂಪಿನಿಂದ ಬೆದರಿಕೆ; ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿದ ಮುಸ್ಲಿಂ ಮಹಿಳೆ ಸಾವು, ಮಕ್ಕಳ ಸ್ಥಿತಿ ಗಂಭೀರ

ಬಿಹಾರದ ರೋಹ್ತಾಸ್ ಜಿಲ್ಲೆಯ ಮುಸ್ಲಿಂ ಮಹಿಳೆಯೊಬ್ಬರು ಮಂಗಳವಾರ ತನ್ನ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.  ಪತಿಯನ್ನು ಅಮಾನುಷವಾಗಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದ ಆರೋಪಿಗಳಿಂದ ಬೆದರಿಕೆಗಳನ್ನು ತಾಳಲಾರದೆ...

ಅತ್ಯಾಚಾರ ಆರೋಪ: ಅಶೋಕ್ ಖರತ್ ಅವರ ಪುತ್ರನನ್ನು ವಿಚಾರಣೆಗಾಗಿ ವಶಕ್ಕೆ ಪಡೆದ ಎಸ್ಐಟಿ; ಪತ್ನಿಗಾಗಿ ಹುಡುಕಾಟ 

ನಾಸಿಕ್: ಅತ್ಯಾಚಾರ ಆರೋಪಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ವಿರುದ್ಧ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ನಾಸಿಕ್ ನಗರದಲ್ಲಿ ಆತನ ಮಗನನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದು, ಆತನ ಪತ್ನಿಗಾಗಿಯೂ...

ಇರಾಕ್‌ : ಬಗ್ದಾದ್‌ನಲ್ಲಿ ಯುಎಸ್‌ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅಪಹರಣ

ಇರಾಕ್‌ ರಾಜಧಾನಿ ಬಗ್ದಾದ್‌ ನಗರದ ಅಲ್-ಸಾದೂನ್ ಬೀದಿಯಲ್ಲಿರುವ ಬಗ್ದಾದ್ ಹೋಟೆಲ್ ಬಳಿ ಅಮೆರಿಕದ ಪ್ರಶಸ್ತಿ ವಿಜೇತ ಸ್ವತಂತ್ರ ಪತ್ರಕರ್ತೆ ಶೆಲ್ಲಿ ಕಿಟಲ್‌ಸನ್ ಅವರನ್ನು ಮಂಗಳವಾರ (ಮಾ.31, 2026) ಅಪಹರಿಸಲಾಗಿದೆ ಎಂದು ವರದಿಯಾಗಿದೆ. ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ,...

ವಾಣಿಜ್ಯ ಎಲ್‌ಪಿಜಿ ದರ 195.50 ರೂ. ಏರಿಕೆ : ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ

ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ತೈಲ ಬೆಲೆಗಳು ಏರುತ್ತಿರುವ ನಡುವೆ, ವಾಣಿಜ್ಯ ಎಲ್‌ಪಿಜಿ ದರವನ್ನು ಬುಧವಾರ (ಏ.1) 195.50 ರೂ. ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪ್ರಕಾರ, ಬೆಲೆ ಏರಿಕೆ ಬಳಿಕ...