Homeನಿಜವೋ ಸುಳ್ಳೋFact check: ಕೊರೊನಾ ಮಾನವ ನಿರ್ಮಿತ ವೈರಸ್ ಎಂದು ಜಪಾನ್‌ನ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆಯೇ?

Fact check: ಕೊರೊನಾ ಮಾನವ ನಿರ್ಮಿತ ವೈರಸ್ ಎಂದು ಜಪಾನ್‌ನ ನೊಬೆಲ್ ಪ್ರಶಸ್ತಿ ವಿಜೇತ ಹೇಳಿದ್ದಾರೆಯೇ?

- Advertisement -
- Advertisement -

ಕೊರೊನಾ ವೈರಸ್ ನೈಸರ್ಗಿದಕವಲ್ಲ, ಇದನ್ನು ತಯಾರಿದಲಾಗಿದೆ ಎಂದು ಜಪಾನಿನ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಹೇಳಿದ್ದಾರೆ ಎಂಬ ಸಂದೇಶಗಳು ಸಾಮಾಜಿಕ ಜಾಲತಾಣದಲ್ಲಿ ವೈರಲಾಗಿದೆ.

ಜಪಾನಿನ ಪ್ರಾಧ್ಯಾಪಕರಾದ ಡಾ. ತಸುಕು ಹೊಂಜೊ ಕ್ಯಾನ್ಸರ್ ಚಿಕಿತ್ಸೆಯ ವಿಭಿನ್ನ ಆವಿಷ್ಕಾರಕ್ಕಾಗಿ 2018 ರಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದಿದ್ದರು.

ವೈರಲಾಗುತ್ತಿರುವ ಸಂದೇಶ ಕೆಳಗಿನಂತಿದೆ.

“ಜಪಾನ್‌ನ ಔಷಧ ವಿಭಾಗದ ಪ್ರಾಧ್ಯಾಪಕ, ಪ್ರೊಫೆಸರ್ ಡಾ. ತಸುಕು ಹೊಂಜೊ, ಕೊರೊನಾ ವೈರಸ್ ನೈಸರ್ಗಿಕವಲ್ಲ ಎಂದು ಹೇಳುವ ಮೂಲಕ ಮಾಧ್ಯಮಗಳಲ್ಲಿ ಸಂಚಲನವನ್ನು ಸೃಷ್ಟಿಸಿದ್ದಾರೆ. ಇದು ಸ್ವಾಭಾವಿಕವಾಗಿದ್ದರೆ ಇಡೀ ಪ್ರಪಂಚದ ಮೇಲೆ ಈ ರೀತಿಯ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಯಾಕೆಂದರೆ ಪ್ರಕೃತಿಯ ಪ್ರಕಾರ, ವಿವಿಧ ದೇಶಗಳಲ್ಲಿ ತಾಪಮಾನವು ವಿಭಿನ್ನವಾಗಿರುತ್ತದೆ. ವೈರಸ್ ಸ್ವಾಭಾವಿಕವಾಗಿದ್ದರೆ ಅದು ಚೀನಾದಂತೆಯೇ ಇರುವ ತಾಪಮಾನದಲ್ಲಿ ಮಾತ್ರ ಪ್ರತಿಕೂಲವಾಗಿ ಪರಿಣಾಮ ಬೀರುತ್ತದೆ. ಆದರೆ ಇದು ಸ್ವಿಟ್ಜರ್ಲೆಂಡ್‌ನಂತಹ ದೇಶದಲ್ಲಿ ಹರಡುತ್ತಿದೆ, ಅದೇ ರೀತಿ ಮರುಭೂಮಿಯಲ್ಲಿ ಕೂಡಾ ಹರಡುತ್ತಿದೆ… ಪ್ರಾಣಿಗಳು ಮತ್ತು ವೈರಸ್‌ಗಳ ಬಗ್ಗೆ ನಾನು 40 ವರ್ಷಗಳ ಸಂಶೋಧನೆ ಮಾಡಿದ್ದೇನೆ. ಇದು ಸ್ವಾಭಾವಿಕವಲ್ಲ, ಇದನ್ನು ತಯಾರಿಸಲಾಗಿದೆ ಹಾಗೂ ಸಂಪೂರ್ಣವಾಗಿ ಕೃತಕವಾಗಿದೆ. ಚೀನಾದ ವುಹಾನ್ ಪ್ರಯೋಗಾಲಯದಲ್ಲಿ ನಾನು 4 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ಆ ಪ್ರಯೋಗಾಲಯದ ಎಲ್ಲಾ ಸಿಬ್ಬಂದಿಗಳು ನನಗೆ ಪರಿಚಯವಿದೆ. ಕೊರೊನಾ ಅಪಘಾತದ ನಂತರ ನಾನು ಅವರೆಲ್ಲರಿಗೂ ಫೋನ್ ಮಾಡುತ್ತಿದ್ದೇನೆ. ಆದರೆ ಅವರೆಲ್ಲರ ಫೋನ್ ಮೂರು ತಿಂಗಳಿನಿಂದ ಡೆಡ್ ಆಗಿದೆ. ಈ ಎಲ್ಲಾ ಲ್ಯಾಬ್ ತಂತ್ರಜ್ಞರು ಸಾವನ್ನಪ್ಪಿದ್ದಾರೆ ಎಂಬುವುದು ನನ್ನ ನಿಲುವ”

“ಇಲ್ಲಿಯವರೆಗಿನ ನನ್ನ ಎಲ್ಲ ಜ್ಞಾನ ಮತ್ತು ಸಂಶೋಧನೆಯ ಆಧಾರದ ಮೇಲೆ ಹೇಳುತ್ತಿದ್ದೇನೆ, ಕೊರೊನಾ ಸ್ವಾಭಾವಿಕವಲ್ಲ ಎಂದು 100% ಆತ್ಮವಿಶ್ವಾಸದಿಂದ ಹೇಳಬಲ್ಲೆ. ಇದು ಬಾವಲಿಗಳಿಂದ ಬಂದಿಲ್ಲ, ಚೀನಾ ಇದನ್ನು ತಯಾರಿಸಿದೆ. ನಾನು ಹೇಳುತ್ತಿರುವುದು ಈಗ ಅಥವಾ ನನ್ನ ಮರಣದ ನಂತರ ಸುಳ್ಳು ಎಂದು ಸಾಬೀತಾದರೆ, ನನ್ನ ನೊಬೆಲ್ ಪ್ರಶಸ್ತಿಯನ್ನು ವಾಪಾಸು ಪಡೆಯಬಹುದು. ಚೀನಾ ಸುಳ್ಳು ಹೇಳುತ್ತಿದೆ ಹಾಗೂ ಸತ್ಯವು ಒಂದು ದಿನ ಎಲ್ಲರೆದುರು ಬಹಿರಂಗಗೊಳ್ಳುತ್ತದೆ. ”

ಈ ಸಂದೇಶವು ವಾಟ್ಸಾಪ್, ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ಜಪಾನ್‌ನ ಟೋಕಿಯೊ ವಿಶ್ವವಿದ್ಯಾಲಯದ ಪ್ರೊ.ತಸುಕು ಹೊಂಜೊ ಅವರು ಹೇಳುತ್ತಿದ್ದಾರೆ, ನಾನು ನನ್ನ ಜೀವನದ 40 ವರ್ಷಗಳನ್ನು ಪ್ರಯೋಗಾಲಯಗಳಲ್ಲಿ ಕೆಲಸ ಮಾಡಿದ್ದೇನೆ. ಕೊರೊನಾ ವೈರಸ್ ಚೀನಾ ಪ್ರಯೋಗಾಲಯದಲ್ಲಿ ಅಸ್ವಾಭಾವಿಕವಾಗಿ ಸಿದ್ಧಪಡಿಸಿದೆ, ಎಂದು ಬಿಜೆಪಿಯ ಡಿ. ಆರ್. ಯಶ್ಪಾಲ್ ಸಿಂಗ್ ಟ್ವೀಟ್ ಮಾಡಿದ್ದರು.

ಫ್ಯಾಕ್ಟ್ ಚೆಕ್:

ವೈರಲ್ ಸಂದೇಶದಲ್ಲಿ ಇರುವಂತೆ ತಸುಕು ಹೊಂಜೊ, ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದ ನೊಬೆಲ್ ಪ್ರಶಸ್ತಿ ವಿಜೇತ ಪ್ರಾಧ್ಯಾಪಕ ಎಂಬುವುದು ನಿಜ. ಕ್ಯಾನ್ಸರ್ ಚಿಕಿತ್ಸೆಯ ಆವಿಷ್ಕಾರಕ್ಕಾಗಿ ಅವರು ಜೇಮ್ಸ್ ಆಲಿಸನ್ ಅವರೊಂದಿಗೆ 2018 ರಲ್ಲಿ ಔಷಧಕ್ಕಾಗಿ ನೊಬೆಲ್ ಪ್ರಶಸ್ತಿಯನ್ನು ಪುರಸ್ಕೃತರಾಗಿದ್ದರು. ನ್ಯೂಸ್‌ಮೀಟರ್ ಎಂಬ ಸುದ್ದಿ ಸಂಸ್ಥೆ ಈ-ಮೇಲ್ ಮುಖಾಂತರ ಪ್ರಾಧ್ಯಾಪಕರನ್ನು ಇದರ ಬಗ್ಗೆ ಕೇಳಿದಾಗ ಅವರು, ಈ ಎಲ್ಲಾ ಸುದ್ದಿಗಳುನ್ನು ನಿರಾಕರಿಸಿದ್ದಾರೆ. ಇ-ಮೇಲ್‌ನಲ್ಲಿ, ತಸುಕು ಹೊಂಜೊ ಅಡಿಯಲ್ಲಿ ಕೆಲಸ ಮಾಡುತ್ತಿರುವ ಪಿಎಚ್ಡಿ ವಿದ್ಯಾರ್ಥಿ ಅಲೋಕ್ ಕುಮಾರ್ ಪ್ರಾಧ್ಯಾಪಕರ ಪರವಾಗಿ ಈ ಹೇಳಿಕೆಯನ್ನು ನೀಡಿದ್ದಾರೆ.

“ಪ್ರೊ. ಹೊಂಜೊ ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಸಂದೇಶದ ಪ್ರತಿಯೊಂದು ವಾಕ್ಯವೂ ಸಂಪೂರ್ಣವಾಗಿ ಸುಳ್ಳು ಮತ್ತು ಸತ್ಯದೊಂದಿಗೆ ಯಾವುದೇ ಸಂಬಂಧವಿಲ್ಲ. ಪ್ರೊ. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ಕೆಲಸ ಮಾಡಲಿಲ್ಲ, ಎಂದಿಗೂ ಅಲ್ಲಿಗೆ ಕರೆ ಮಾಡಿಲ್ಲ ಹಾಗೂ ಅವರು ವೈರಸ್ ಮೂಲ ಮತ್ತು ಕಾರ್ಯಗಳು, ಇತರ ಸಂಬಂಧಿತ ವಿಷಯಗಳ ಬಗ್ಗೆ ಕೆಲಸ ಮಾಡಲಿಲ್ಲ.” ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.

ವೈರಲ್ ಸಂದೇಶದಲ್ಲಿ ಇರುವಂತೆ, ಪ್ರೊಫೆಸರ್ ತಸುಕು ಹೊಂಜೊ ಕಳೆದ ನಾಲ್ಕು ವರ್ಷಗಳಿಂದ ಚೀನಾದ ವುಹಾನ್‌ನಲ್ಲಿರುವ ಯಾವುದೇ ಪ್ರಯೋಗಾಲಯದಲ್ಲಿ ಕೆಲಸ ಮಾಡಿಲ್ಲ. ಕ್ಯೋಟೋ ವಿಶ್ವವಿದ್ಯಾಲಯದ ಅಧಿಕೃತ ವೆಬ್‌ಸೈಟ್‌ ನ ಅವರ ಜೀವನಚರಿತ್ರೆಯಲ್ಲಿ, ಪ್ರಾಧ್ಯಾಪಕರು 1984 ರಿಂದ 2005 ರವರೆಗೆ ಜಪಾನ್‌ನ ಕ್ಯೋಟೋ ವಿಶ್ವವಿದ್ಯಾಲಯದಲ್ಲಿ ಪೂರ್ಣ ಸಮಯ ಬೋಧಿಸುತ್ತಿದ್ದಾರೆಂದು ಹೇಳುತ್ತಿದೆ. ಪ್ರಸ್ತುತ, ಅವರು ಕ್ಯೋಟೋ ವಿಶ್ವವಿದ್ಯಾಲಯದ ಇಮ್ಯುನೊಲಾಜಿ ಮತ್ತು ಜೀನೋಮಿಕ್ ಮೆಡಿಸಿನ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದಾರೆ.


ಇದನ್ನೂ ಓದಿ: ಮುಸ್ಲಿಮರಿಂದ ಕಲ್ಲು ತೂರಾಟಕ್ಕೊಳಗಾಗಿ ಯುಪಿ ವೈದ್ಯೆ ವಂದನಾ ತಿವಾರಿ ಸಾವಿಗೀಡಾದರೆ?


ಕೊರೊನಾ ವೈರಸ್ ಸ್ವಾಭಾವಿಕವಲ್ಲ’ ​​ಎಂಬ ಹೇಳಿಕೆಯ ಬಗ್ಗೆ ಗೂಗಲ್ ನಲ್ಲಿ ಹುಡುಕಾಡಿದರೆ ಈ ಸಂಬಂಧ ಹುಡುಕಾಟ ನಡೆಸಿದರೆ ಪ್ರಾಧ್ಯಾಪಕ ತಸುಕು ಹಂಜೊ ಹೇಳಿರುವ ಯಾವುದೇ ಫಲಿತಾಂಶಗಳು ನೀಡುವುದಿಲ್ಲ. ವಾಸ್ತವವಾಗಿ ತಸುಕು ಹಂಜೊ 2020 ರ ಏಪ್ರಿಲ್ 10 ರಂದು ಪ್ರಕಟವಾದ ಜಪಾನ್ ಮೂಲದ ಸುದ್ದಿ ಪೋರ್ಟಲ್ ನಿಕ್ಕಿ ಏಷ್ಯನ್ ರಿವ್ಯೂಗೆ ಸಂದರ್ಶನವೊಂದನ್ನು ನೀಡಿ “ರೋಗವೂ ಚೀನಾದಲ್ಲಿ ಹುಟ್ಟಿಕೊಂಡಿತು ಆದರೆ ದೇಶವು ಮೊದಲನೆಯದಾಗಿ ಚೇತರಿಸಿಕೊಂಡಿತು. ಇದರಿಂದಾಗಿ ಚೀನಾ ಪ್ರಭಾವವನ್ನು ಹೆಚ್ಚಿಸುತ್ತದೆ ಅಥವಾ ಜಗತ್ತು ಚೀನಾವನ್ನು ದೂರವಿಡುತ್ತದೆಯೆ ಎಂದು ನಾನು ಹೇಳಲಾರೆ, ಆದರೆ ವೈರಸ್ ಸ್ಪೋಟಗೊಂಡ ನಂತರ ಜಾಗತಿಕ ಕ್ರಮವು ಬದಲಾಗುವ ಸಾಧ್ಯತೆಯಿದೆ.” ಎಂದಷ್ಟೆ ಹೇಳಿದ್ದರು. ಆದರೆ ಕೊರೊನಾ ಮಾನವ ನಿರ್ಮಿತ ವೈರಸ್ ಎಂಬ ಬಗ್ಗೆ ತಸುಕು ಹಂಜೊ ಎಲ್ಲೂ ಉಲ್ಲೇಖಿಸಿಲ್ಲ.

ಆದರೆ, ನೊಬೆಲ್ ಪ್ರಶಸ್ತಿ ವಿಜೇತ ಫ್ರೆಂಚ್ ವೈರಾಲಜಿಸ್ಟ್ ವೈರಸ್ ಮಾನವ ನಿರ್ಮಿತ ಎಂದಿದ್ದಾರೆಂದು ಹೇಳಿರುವ ಮಾಧ್ಯಮ ವರದಿಗಳಿವೆ. “ಫ್ರೆಂಚ್ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ, ಔಷಧದಲ್ಲಿ 2008 ರ ನೊಬೆಲ್ ಪ್ರಶಸ್ತಿಯನ್ನು ಪಡೆದ ಏಡ್ಸ್ ವೈರಸ್ನ ಸಹ-ಅನ್ವೇಷಕ, ಕೊರೊನಾ ವೈರಸ್ ಜೀನೋಮ್ನಲ್ಲಿ ಎಚ್ಐವಿ ಮತ್ತು ಮಲೇರಿಯಾದ ಸೂಕ್ಷ್ಮಾಣು ಅಂಶಗಳು ಹೆಚ್ಚು ಶಂಕಿತವಾಗಿದೆ ಮತ್ತು ವೈರಸ್ನ ಗುಣಲಕ್ಷಣಗಳು ಸ್ವಾಭಾವಿಕವಾಗಿ ಹುಟ್ಟಿಕೊಂಡಿಲ್ಲ ”ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿತ್ತು.

ಪ್ರೊ. ತಸುಕು ಹೊಂಜೊ ಎಂಬ ಹೆಸರಿನ ಖಾತೆ “ಕೊರೊನಾ ವೈರಸ್ ಯಾವ ಉದ್ದೇಶಕ್ಕಾಗಿ ಉತ್ಪತ್ತಿಯಾಗಿದೆ ಎಂದು ನನಗೆ ತಿಳಿದಿಲ್ಲ, ಆದರೆ ಇದು ಮಾನವ ನಿರ್ಮಿತ ಎಂದು ನಾನು ಖಂಡಿತವಾಗಿ ಹೇಳಬಲ್ಲೆ.” ಎಂದು ಬರೆದಿದೆ. ಆದರೆ ಟ್ವಿಟರ್ ಹ್ಯಾಂಡಲ್ ಅದು ತಸುಕು ಹೊಂಜೊ ಅವರದೆ ಎಂಬ ಬಗ್ಗೆ ಪರಿಶೀಲಿಸಲಾಗಿಲ್ಲ. ಹೊಂಜೊ ಅವರ ಹೇಳಿಕೆಯಂತೆ “ನೀವು ಪ್ರಸ್ತಾಪಿಸಿದ ಟ್ವಿಟರ್ ಹ್ಯಾಂಡಲ್ ಪ್ರೊ. ತಸುಕು ಹೊಂಜೊಗೆ ಸೇರಿಲ್ಲ. ದುರುದ್ದೇಶಪೂರಿತ ಉದ್ದೇಶಗಳೊಂದಿಗೆ ಇದನ್ನು ಯಾರೋ ರಚಿಸಿದ್ದಾರೆ. ದಯವಿಟ್ಟು ಈ ನಕಲಿ ಸುದ್ದಿಯನ್ನು ನಿಲ್ಲಿಸಿ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಹುಡುಕಾಟ ನಡೆಸಿದರೆ ಈ ಖಾತೆಯನ್ನು 2020 ರ ಏಪ್ರಿಲ್‌ನಲ್ಲಿ ರಚಿಸಲಾಗಿದೆ ಎಂದು ತಿಳಿಯಬಹುದು, ಏಪ್ರಿಲ್ 24 ರಿಂದ ಕೇವಲ ಎರಡು ಟ್ವೀಟ್‌ಗಳು ಇದ್ದು, ಇದು ನಕಲಿ ಖಾತೆ ಎಂದು ಸೂಚಿಸುತ್ತದೆ.

ಈ ಮೂಲಕ ನಾವು ತಸುಕು ಅವರದ್ದು ಎಂದು ಹೇಳಿಕೊಂಡು ವೈರಲಾಗಿರುವ ಸಂದೇಶವೂ ಸುಳ್ಳು ಎಂದು ತಿಳಿದುಕೊಳ್ಳಬಹುದು. ಕೊರೊನಾವನ್ನು ತಯಾರಿಸಲಾಗಿದೆ ಮತ್ತು ವೈರಸ್ ಸಂಪೂರ್ಣವಾಗಿ ಕೃತಕವಾಗಿದೆ ಎಂದು ತಸುಕು ಹೊಂಜೊ ಹೇಳಿದ್ದಾರೆನ್ನುವ ಸಂದೇಶ ಸುಳ್ಳಾಗಿದೆ. ಯಾಕೆಂದರೆ ಪ್ರೊ. ಹೊಂಜೊ ಅವರೆ ಸ್ವತಃ ಇದನ್ನು ನಿರಾಕರಿಸಿದ್ದಾರೆ. ಅಲ್ಲದೆ ಕೊರೊನಾ ವೈರಸನ್ನು ತಯಾರಿಸಲಾಗಿದೆ ಎಂದ ಪ್ರೊ.ತಾಸುಕು ಹೊಂಜೊ ಕುರಿತ ಯಾವುದೇ ಮಾಧ್ಯಮ ವರದಿಗಳಿಲ್ಲ.

ಜಪಾನಿನ ಪ್ರೊಫೆಸರ್ ವುಹಾನ್ ಲ್ಯಾಬ್‌ನಲ್ಲಿ 4 ವರ್ಷಗಳನ್ನು ಕಳೆದಿದ್ದಾರೆ ಎಂಬ ಸುದ್ದಿ ಕೂಡಾ ಸುಳ್ಳಾಗಿದ್ದು. ಹೊಂಜೊ ವುಹಾನ್ ಪ್ರಯೋಗಾಲಯದಲ್ಲಿ ನಾಲ್ಕು ವರ್ಷಗಳನ್ನು ಕಳೆದಿಲ್ಲ ಎಂದು ಅವರ ಜೀವನಚರಿತ್ರೆ ಹೇಳುತ್ತದೆ, ಹಾಗೂ ಅವರದು ಎಂದು ಹೇಳಿಕೊಳ್ಳುವ ಟ್ವಿಟರ್ ಹ್ಯಾಂಡಲ್ ಕೂಡಾ ನಕಲಿಯಾಗಿದೆ.


ಇದನ್ನೂ ಓದಿ:  ಅರ್ನಬ್ ಗೋಸ್ವಾಮಿಯ ದಾಳಿಯ ವಿಡಿಯೋ, ದಾಳಿಗೂ ಮುನ್ನವೇ ಮಾಡಲಾಗಿತ್ತೇ?


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರ ಪ್ರದೇಶ| ರಸ್ತೆ ಗುಂಡಿಗೆ ಇಳಿದ ಆಂಬ್ಯುಲೆನ್ಸ್; ಮರುಜೀವ ಪಡೆದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ!

ಉತ್ತರ ಪ್ರದೇಶದ ಬರೇಲಿಯ ಖಾಸಗಿ ಆಸ್ಪತ್ರೆಯೊಂದರ ವೈದ್ಯರು ಮೆದುಳು ನಿಷ್ಕ್ರಿಯ ಎಂದು ಘೋಷಿಸಿದ್ದು, ಮಹಿಳೆಯೊಬ್ಬರ ಮೃತದೇಹವನ್ನು ಅಂತ್ಯಕ್ರಿಯೆಗಾಗಿ ಮನೆಗೆ ಸಾಗಿಸುತ್ತಿದ್ದಾಗ ಆಂಬ್ಯುಲೆನ್ಸ್ ರಸ್ತೆಯ ಗುಂಡಿಗೆ ಇಳಿದ ನಂತರ ಆಕೆ ಜೀವಂತವಾಗಿರುವ ಲಕ್ಷಣಗಳು ಕಂಡುಬಂದು...

ಪಶ್ಚಿಮ ಏಷ್ಯಾ ಸಂಘರ್ಷ: ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್​ ಡ್ರೋನ್​ ದಾಳಿ; ಭಾರತೀಯ ಪ್ರಜೆ ಸೇರಿ ನಾಲ್ವರಿಗೆ ಗಾಯ

ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರಾನಿನ ಎರಡು ಡ್ರೋಣಗಳಿಂದ ದಾಳಿ ನಡೆದಿದೆ. ಈ ದಾಳಿಯಲ್ಲಿ ಓರ್ವ ಭಾರತೀಯ ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲಿನ ಸರ್ಕಾರದ ಪರವಾಗಿ ಪ್ರಕಟಣೆ ಹೊರಡಿಸಿರುವ...

ಜಾರ್ಖಂಡ್| ಆಂಬ್ಯುಲೆನ್ಸ್ ನಿರಾಕರಿಸಿದ ಆಸ್ಪತ್ರೆ ಸಿಬ್ಬಂದಿ; ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿದ ತಂದೆ

ಆಸ್ಪತ್ರೆ ಸಿಬ್ಬಂದಿ ಆಂಬ್ಯುಲೆನ್ಸ್ ನಿರಾಕರಿಸಿದ್ದರಿಂದ ಕೂಲಿಕಾರ ತಂದೆಯೊಬ್ಬ ಕಾರ್ಡ್‌ಬೋರ್ಡ್‌ನಲ್ಲಿ ಮಗುವಿನ ಶವ ಸಾಗಿಸಿರುವ ಹೃದಯವಿದ್ರಾವಕ ಘಟನೆಯೊಂದು ಜಾರ್ಖಂಡ್‌ನ ಪಶ್ಚಿಮ ಸಿಂಗ್ಭೂಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಕಳೆದ ಶನಿವಾರ ನಡೆದಿದೆ ಎನ್ನಲಾದ...

ಮಧುರಾಂತಕಂ ಬಳಿ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ: ಪೋಕ್ಸೋ ಪ್ರಕರಣದಡಿ ಓರ್ವ ರೌಡಿ ಶೀಟರ್ ಬಂಧನ

ಚೆನ್ನೈ (ಚೆಂಗಲ್ಪಟ್ಟು): ಸೋಮವಾರ ರಾತ್ರಿ ಮಧುರಾಂಟಕಂ ಬಳಿಯ ಜಲಮೂಲದ ದಡದಲ್ಲಿ 14 ವರ್ಷದ ಬಾಲಕಿಯ ಮೇಲೆ ರೌಡಿ ಶೀಟರ್ ಮತ್ತು ಆತನ ಸಹಚರರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ಪ್ರಕರಣ ಸಂಬಂಧ ಪೋಕ್ಸೋ...

ಮುಸ್ಲಿಂ ಮಹಿಳೆಯರ ವಿರುದ್ಧದ ಷರಿಯಾ ಕಾನೂನಿಗೆ ಏಕರೂಪ ನಾಗರಿಕ ಸಂಹಿತೆ ಪರಿಹಾರ: ಸುಪ್ರೀಂ ಕೋರ್ಟ್

"ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ತಾರತಮ್ಯದ ಆನುವಂಶಿಕ ನಿಬಂಧನೆಗಳನ್ನು ಪರಿಹರಿಸಲು ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಅತ್ಯಂತ ಪರಿಣಾಮಕಾರಿ ಪರಿಹಾರ ಎಂದು ಸುಪ್ರೀಂ ಕೋರ್ಟ್ ಮಂಗಳವಾರ (ಮಾ.20) ಹೇಳಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ...

ಮುಂಬೈ: ಬಜೆಟ್ ಅಧಿವೇಶನದ ನಡುವೆ ವಿಧಾನ ಭವನದ ಬಳಿ ವ್ಯಕ್ತಿಯೊಬ್ಬನಿಂದ ಆತ್ಮಹತ್ಯೆಗೆ ಯತ್ನ: ವಶಕ್ಕೆ ಪಡೆದ ಪೊಲೀಸರು

ಮುಂಬೈ: ಮಾರ್ಚ್ 11, ಬುಧವಾರ ಮಹಾರಾಷ್ಟ್ರ ವಿಧಾನ ಭವನದ ಹೊರಗೆ ವ್ಯಕ್ತಿಯೊಬ್ಬರು ಆತ್ಮಾಹುತಿ ಮಾಡಿಕೊಳ್ಳಲು ಯತ್ನಿಸಿರುವುದಾಗಿ ವರದಿಯಾಗಿದೆ. ತಕ್ಷಣವೇ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದಾರೆ.  2026 ರ ಮಹಾರಾಷ್ಟ್ರ ಬಜೆಟ್ ಅಧಿವೇಶನ ವಿಧಾನ ಭವನದಲ್ಲಿ...

ಕೋವಿಡ್ ಲಸಿಕೆ ಕೆಲ ಸಾವುಗಳಿಗೆ ಕಾರಣವಾಗಿದೆ ಎಂದು ಅಧಿಕೃತ ದತ್ತಾಂಶ ತೋರಿಸಿದೆ, ಸರ್ಕಾರ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ : ಸುಪ್ರೀಂ ಕೋರ್ಟ್

ಸರ್ಕಾರದ ಅಧೀನದ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಮೂಲಕ ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಬಳಿಕ ಕೆಲ ಸಾವುಗಳು ಸಂಭವಿಸಿರುವುದನ್ನು ಅಧಿಕೃತ ದತ್ತಾಂಶಗಳೇ ದೃಢಪಡಿಸಿವೆ. ಹೀಗಿರುವಾಗ, ಲಸಿಕೆ ಹಾಕಿಸಿಕೊಂಡ ನಂತರ ಸಾವು...

ತಮಿಳುನಾಡು| ಪೊಲೀಸ್ ದೌರ್ಜನ್ಯದಿಂದ ಎರಡು ತಿಂಗಳಲ್ಲಿ ನಾಲ್ವರು ದಲಿತರು ಸಾವು

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಪ್ರತಿಬಿಂಬಿಸುವ ಆತಂಕಕಾರಿ ವಿಚಾರವೊಂದು ಮುನ್ನಲೆಗೆ ಬಂದಿದ್ದು, ಪೊಲೀಸ್ ಹಿಂಸಾಚಾರದಿಂದಾಗಿ ಎರಡು ತಿಂಗಳ ಅವಧಿಯಲ್ಲಿ ನಾಲ್ವರು ದಲಿತರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ, ಎರಡು ಪ್ರಕರಣಗಳನ್ನು...

ಪಶ್ಚಿಮ ಏಷ್ಯಾ ಸಂಘರ್ಷ| ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿದ್ದಾಗಿ ವಿಡಿಯೋ ಹಂಚಿಕೊಂಡ ಅಮೆರಿಕ ಸೇನೆ

ಪಶ್ಚಿಮ ಏಷ್ಯಾದಿಂದ ತೈಲ ರಫ್ತನ್ನು ತಡೆಯಲು ಇರಾನ್ ಪ್ರಯತ್ನಿಸುತ್ತಿರುವುದರಿಂದ ಹಾರ್ಮುಜ್ ಜಲಸಂಧಿಯಲ್ಲಿ ಇರಾನಿನ 16 ಹಡಗುಗಳನ್ನು ನಾಶಪಡಿಸಿರುವುದಾಗಿ ಅಮೆರಿಕ ಸೇನೆ ಹೇಳಿಕೊಂಡಿದೆ.  ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಇರಾನ್ ಜಲಸಂಧಿಯಲ್ಲಿ ಗಣಿಗಳನ್ನು...

13 ವರ್ಷಗಳಿಂದ ಕೋಮಾದಲ್ಲಿರುವ ಯುವಕನ ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅನುಮತಿ

ಕಳೆದ 13 ವರ್ಷಗಳಿಂದ ಕೋಮಾದಲ್ಲಿರುವ 32 ವರ್ಷದ ಹರೀಶ್ ರಾಣಾ ಎಂಬ ಯುವಕನ ಪರೋಕ್ಷ (ನಿಷ್ಕ್ರಿಯ) ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಬುಧವಾರ (ಮಾ.11) ಅನುಮತಿ ನೀಡಿದೆ ಎಂದು livelaw.in ವರದಿ ಮಾಡಿದೆ. ದೆಹಲಿ ಮೂಲದ ಹರೀಶ್...