“ಸ್ವಾತಂತ್ರ್ಯ ದಿನಾಚರಣೆಯಂದು ಧ್ವಜಾರೋಹಣ ಮಾಡುವ ವೇಳೆ ಧ್ವಜ ಅರಳದೆ ಸಿಲುಕಿಕೊಂಡಿತ್ತು. ಆಗ ಕಾಗೆಯೊಂದು ಹಾರಿಬಂದು ಧ್ವಜವನ್ನು ಬಿಡಿಸಿ ಹೋಗಿದೆ” ಎಂದು ವಿಡಿಯೋವೊಂದು ಭಾರೀ ವೈರಲ್ ಆಗಿದೆ.
ಅನೇಕ ಫೇಸ್‌ಬುಕ್, ಎಕ್ಸ್, ವಾಟ್ಸಾಪ್ ಬಳಕೆದಾರರು ವಿಡಿಯೋ ಹಂಚಿಕೊಂಡು ಏನೋ ಪವಾಡ ನಡೆದಿದೆ, ಪಕ್ಷಿಗಳಿಗೂ ಭಾರತದ ಬಗ್ಗೆ ಹೆಮ್ಮೆಯಿದೆ, ಪಕ್ಷಿಗಳಿಗೂ ದೇಶ ಪ್ರೇಮವಿದೆ ಎಂಬಿತ್ಯಾದಿ ಬರಹಗಳನ್ನು ಬರೆದುಕೊಂಡಿದ್ದರು.
ಅನೇಕ ಮುಖ್ಯ ವಾಹಿನಿ ಮಾಧ್ಯಮಗಳು ಕೂಡ ವಿಡಿಯೋ ಹಂಚಿಕೊಂಡು ಕಾಗೆಯ ದೇಶ ಪ್ರೇಮವನ್ನು ಕೊಂಡಾದಿದ್ದವು.
ಹಾಗಾದರೆ, ಕಾಗೆ ಬಂದು ಧ್ವಜ ಬಿಡಿಸಿ ಹೋಗಿರುವುದು ನಿಜಾನಾ? ಎಂಬುವುದನ್ನು ನೋಡೊಣ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ಕುರಿತು ಮಾಹಿತಿ ಹುಡುಕಿದಾಗ ಮುಖೇಶ್ ಎಂಬ ಎಕ್ಸ್ ಬಳಕೆದಾರರೊಬ್ಬರು ವೈರಲ್ ವಿಡಿಯೋದ ಎರಡು ಆಯಾಮಗಳನ್ನು ಪೋಸ್ಟ್ ಮಾಡಿರುವುದು ಕಂಡು ಬಂದಿದೆ.
ಅದರಲ್ಲಿ, ಧ್ವಜಾರೋಹಣದ ವೇಳೆ ಕಾಗೆ ಬಂದು ಧ್ವಜವನ್ನು ಬಿಡಿಸಿಲ್ಲ ಎಂಬ ಸತ್ಯ ಬಯಲಾಗಿದೆ. ಮುಖೇಶ್ ಅವರು ಹಂಚಿಕೊಂಡ ವಿಡಿಯೋದಲ್ಲಿ ಕಾಣುವಂತೆ ಧ್ವಜಾರೋಹಣದ ವೇಳೆ ಸಮಯಕ್ಕೆ ಸರಿಯಾಗಿ ಕಾಗೆ ಬಂದು ಪಕ್ಕದ ತೆಂಗಿನ ಮರದ ಗರಿಯಲ್ಲಿ ಕುಳಿತಿದೆ. ಅದು ವಿಡಿಯೋದಲ್ಲಿ ಧ್ವಜ ಬಿಡಿಸಿ ಹೋದಂತೆ ಕಂಡಿದೆ. ಇದೇ ಘಟನೆಯ ಮತ್ತೊಂದು ವಿಡಿಯೋದಲ್ಲಿ ವಾಸ್ತವವಾಗಿ ನಡೆದಿರುವುದೇನು ಎಂಬುವುದನ್ನು ನೋಡಬಹುದು.
Fake information , bird has nothing to do with flag , here is different angle .
Man we as country have stopped thinking critically , look at this tweet with 1 M impressions pic.twitter.com/TrvykAZNCq https://t.co/NmTFCXi4TQ
— Mukesh (@mikejava85) August 17, 2024
ಒಟ್ಟಿನಲ್ಲಿ , ಧ್ವಜಾರೋಹಣದ ವೇಳೆ ಕಾಗೆ ಬಂದು ಧ್ವಜ ಬಿಡಿಸಿ ಹೋಗಿದೆ ಎಂಬ ಸುದ್ದಿ ಸುಳ್ಳು. ಕಾಗೆ ಬಂದು ಕುಳಿತಿರುವುದು ಧ್ವಜಸ್ತಂಭಕ್ಕೆ ನೇರವಾಗಿ ಇರುವ ಪಕ್ಕದ ತೆಂಗಿನ ಮರದ ಗರಿಯಲ್ಲಾಗಿದೆ. ಅದು ಧ್ವಜ ಬಿಡಿಸದಂತೆ ಕಂಡಿದಿ. ಹಾಗಾಗಿ, ಹಲವರು ಕಾಗೆಯ ದೇಶಪ್ರೇಮದ ಬಗ್ಗೆ ಕೊಂಡಾಡಿದ್ದಾರೆ.
ಇದನ್ನೂ ಓದಿ : FACT CHECK : ಪ್ರತಿಭಟನೆಯ ವಿಡಿಯೋಗೆ ಕೋಮು ಬಣ್ಣ ಬಳಿದ ಮಾಧ್ಯಮಗಳು


