Homeದಿಟನಾಗರಫ್ಯಾಕ್ಟ್ ಚೆಕ್: ಕಪ್ಪು ಕಲ್ಲಿನ ಮೇಲೆ ಇಟ್ಟ ಕಬ್ಬಿಣದ ಮೊಳೆಗಳು ಕರಗುತ್ತವೆ ಎಂಬುದು ನಿಜವೇ?

ಫ್ಯಾಕ್ಟ್ ಚೆಕ್: ಕಪ್ಪು ಕಲ್ಲಿನ ಮೇಲೆ ಇಟ್ಟ ಕಬ್ಬಿಣದ ಮೊಳೆಗಳು ಕರಗುತ್ತವೆ ಎಂಬುದು ನಿಜವೇ?

- Advertisement -
- Advertisement -

ಕಪ್ಪು ಕಲ್ಲಿನ ಮೇಲೆ ಇಟ್ಟ ಕಬ್ಬಿಣದ ಮೊಳೆಗಳು ಕರಗುವ ದೃಶ್ಯಗಳುಳ್ಳ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕಲ್ಲು ಅಫ್ಘಾನಿಸ್ತಾನದಲ್ಲಿ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ. ಕಲ್ಲು ಹೊರಗಿನಿಂದ ತಂಪಾಗಿದ್ದರೂ, ಅದರ ಮೇಲೆ ಉಕ್ಕು ಮತ್ತು ಕಬ್ಬಿಣದಿಂದ ಮಾಡಿದ ಯಾವುದಾದರೂ ವಸ್ತುವನ್ನು ಇಟ್ಟರೆ ಅವುಗಳನ್ನು ಕರಗಿಸುತ್ತದೆ ಎಂದು ಪೋಸ್ಟ್‌ನಲ್ಲಿ ಹೇಳಲಾಗುತ್ತಿದೆ. ಇದು ನಿಜವೇ ಎಂಬುದನ್ನು ತಿಳಿಯೋಣ. 

ಪೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು. ಅಲ್ಲದೆ, ಕೆಲವು ಪಾಕಿಸ್ತಾನಿ ಬಳಕೆದಾರರು ಉರ್ದುವಿನಲ್ಲಿಯೂ ಈ ಹೇಳಿಕೆಯೊಂದಿಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. (ಲಿಂಕ್ 1ಲಿಂಕ್ 2ಲಿಂಕ್ 3)

ವಿಡಿಯೋದ ಸ್ಕ್ರೀನ್‌ಶಾಟ್‌ಗಳನ್ನು ಬಳಿಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ ಮೂಲಕ ಹುಡುಕಿದಾಗ, masralyoum.net ಎಂಬ ವೆಬ್‌ಸೈಟ್‌ನ ಲೇಖನವೊಂದು ಕಂಡುಬಂದಿದೆ. ವಿಡಿಯೋದಲ್ಲಿರುವ ಮೊಳೆಗಳು ಗ್ಯಾಲಿಯಂ ಎಂಬ ಲೋಹದಿಂದ ಮಾಡಲ್ಪಟ್ಟಿದ್ದು, ಅವುಗಳ ಕರಗುವ ಬಿಂದು ತುಂಬಾ ಕಡಿಮೆ ಇರುತ್ತವೆ. ಅವುಗಳನ್ನು ಸುಮಾರು 29ºC ಬಿಸಿ ಇರುವ ಕಲ್ಲಿನ ಮೇಲೆ ಇಟ್ಟಾಗ ಸುಲಭವಾಗಿ ಕರಗುತ್ತವೆ ಎಂದು ಜೆಡ್ಡಾ ಖಗೋಳವಿಜ್ಞಾನ ಸೊಸೈಟಿಯ ಸಂಸ್ಥಾಪಕ ಎಂ. ಮಜಿದ್ ಅಬು ಜಹ್ರಾ ಅವರು ಲೇಖನದಲ್ಲಿ ಉಲ್ಲೇಖಿಸಿದ್ದಾರೆ. 

ಲೇಖನವು ನವೆಂಬರ್ 27, 2021 ರ ಫೇಸ್‌ಬುಕ್ ಪೋಸ್ಟ್‌ನ ಲಿಂಕ್ ಅನ್ನು ಸಹ ಒಳಗೊಂಡಿದೆ. ಬೆಚ್ಚಗಿನ ಮೇಲ್ಮೈಯಲ್ಲಿ ಗ್ಯಾಲಿಯಂನಿಂದ ಮಾಡಿದ ವಸ್ತುಗಳನ್ನು ಇರಿಸಿದಾಗ ಸೂರ್ಯನ ಬೆಳಕು ಕೂಡ ಸುಲಭವಾಗಿ ಅವುಗಳನ್ನು ಕರಗಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ.

ಮತ್ತಷ್ಟು ಮಾಹಿತಿಗಾಗಿ ಹುಡುಕಿದಾಗ, ಏಪ್ರಿಲ್ 12, 2018 ರಂದು ಪ್ರಕಟವಾಗಿದ್ದ ABC10 ಸುದ್ದಿ ವರದಿ ದೊರೆತಿದೆ. ಈ ವೀಡಿಯೊ ವರದಿಯು ಕಲ್ಲಿನ ಮೇಲೆ ಇರಿಸಲಾದ ಮೊಳೆಯು ಗ್ಯಾಲಿಯಂನಿಂದ ಮಾಡಲ್ಪಟ್ಟಿದೆ ಎಂದು ಉಲ್ಲೇಖಿಸಿದೆ. ಇದು 85.6°F ಕರಗುವ ಬಿಂದುವನ್ನು ಹೊಂದಿದೆ. ಈ ತಾಪಮಾನದಲ್ಲಿ, ಗ್ಯಾಲಿಯಂ ಸುಲಭವಾಗಿ ಕರಗುತ್ತದೆ ಎಂದು ವಿವರಿಸಲಾಗಿದೆ.

ಮಾನವ ದೇಹದ ಸರಾಸರಿ ಉಷ್ಣತೆಯು ಸುಮಾರು 98.6°F ಆಗಿದೆ ಎಂಬುದನ್ನೂ ನಾವು ಈ ಸಮಯದಲ್ಲಿ ಗಮನಿಸಬೇಕು. ಏಕೆಂದರೆ, ಈ ಲೋಹವು ಮಾನವ ಸ್ಪರ್ಶದಿಂದಲೂ ಸರಳವಾಗಿ ಕರಗುತ್ತದೆ. ಆದರೂ, ಇದು ಕೋಣೆಯ ಉಷ್ಣಾಂಶದಲ್ಲಿ ಘನವಾಗಿರುತ್ತದೆ. ಇದು ಅತ್ಯಂತ ಹೆಚ್ಚಿನ (4044°F) ಕುದಿಯುವ ಬಿಂದುವನ್ನು ಹೊಂದಿದೆ. ಗ್ಯಾಲಿಯಂ ಅನ್ನು ಹೊರತುಪಡಿಸಿ, ಪಾದರಸ, ಸೀಸಿಯಮ್ ಮತ್ತು ರುಬಿಡಿಯಂನಂತಹ ಇತರ ಲೋಹಗಳು ಕೋಣೆಯ ಉಷ್ಣಾಂಶದಲ್ಲಿ ದ್ರವ ಸ್ಥಿತಿಯಲ್ಲಿರುತ್ತವೆ. ಅದಕ್ಕಾಗಿಯೇ ಅವುಗಳನ್ನು ಥರ್ಮಾಮೀಟರ್‌ಗಳಲ್ಲಿ ಬಳಸಲಾಗುತ್ತದೆ.

ಅಲ್ಲದೆ, ಉಕ್ಕು ಮತ್ತು ಕಬ್ಬಿಣವನ್ನು ಕರಗಿಸಿದಾಗ ಅವು ಕ್ರಮವಾಗಿ ನೀಲಿ ಮತ್ತು ಕಿತ್ತಳೆ ಬಣ್ಣಕ್ಕೆ ತಿರುಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಈ ಲೋಹದ ಬಣ್ಣವು ದ್ರವೀಕರಿಸಿದ ನಂತರವೂ ಅದೇ ಬಣ್ಣದ್ದು ಆಗಿರುತ್ತದೆ.

ಒಟ್ಟಾರೆಯಾಗಿ ಹೇಳುವುದಾದರೆ, ವೀಡಿಯೊದಲ್ಲಿ ಕಂಡುಬರುವ ಕಲ್ಲು ಮಾಂತ್ರಿಕವಾದುದ್ದಲ್ಲ ಎಂಬುದು ಇದರಿಂದ ದೃಢಪಟ್ಟಿದೆ. ಆದರೆ, ವೀಡಿಯೊದಲ್ಲಿ ಕಂಡುಬರುವ ದೃಶ್ಯಗಳಿಗೆ ಕಾರಣ, 85.6°F ನ ಕಡಿಮೆ ಕರಗುವ ಬಿಂದುವನ್ನು ಹೊಂದಿರುವ ಲೋಹವಾದ ಗ್ಯಾಲಿಯಂನಿಂದ ಮಾಡಿದ ಮೊಳೆಗಳಾಗಿವೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಗುಜರಾತ್‌ನಲ್ಲಿ ಹೈಕೋರ್ಟ್‌ ಮೀಸಲಾತಿ ರದ್ದುಗೊಳಿಸಿದೆ ಎಂಬುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...