HomeದಿಟನಾಗರFACT CHECK : ಮುಸ್ಲಿಮರು ಹಿಂದೂ ಸಾಧುಗಳ ವೇ‍ಷ ಧರಿಸಿ ಮಕ್ಕಳನ್ನು ಅಪಹರಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂಬುವುದು...

FACT CHECK : ಮುಸ್ಲಿಮರು ಹಿಂದೂ ಸಾಧುಗಳ ವೇ‍ಷ ಧರಿಸಿ ಮಕ್ಕಳನ್ನು ಅಪಹರಿಸುವಾಗ ಸಿಕ್ಕಿಬಿದ್ದಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

“ಮೂವರು ಮುಸ್ಲಿಂ ಧರ್ಮದ ವ್ಯಕ್ತಿಗಳು ಸಾಧುಗಳ ವೇಷ ಧರಿಸಿ ಹಿಂದೂ ಮಕ್ಕಳನ್ನು ಕಳ್ಳತನ ಮಾಡುತ್ತಿದ್ದರು. ಈ ವೇಳೆ ಜನರ ಕೈಗೆ ಸಿಕ್ಕಿ ಬಿದ್ದಿದ್ದಾರೆ” ಎಂದು ಆರೋಪಿಸಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.

ಸದಾ ಕೋಮುದ್ವೇಷ ಉತ್ತೇಜಿಸುವ ಮತ್ತು ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದರಲ್ಲಿ ಕುಖ್ಯಾತಿ ಪಡೆದಿರುವ ‘ಸುದರ್ಶನ್ ನ್ಯೂಸ್‌ ಯುಪಿ‘ ಎಕ್ಸ್‌ ಪೇಜ್‌ನಲ್ಲಿ ಆರಂಭದಲ್ಲಿ ವಿಡಿಯೋ ಹಂಚಿಕೊಂಡು “ಮೀರತ್‌ನಲ್ಲಿ ಸಾಧುಗಳಾಗಿ ತಿರುಗಾಡುತ್ತಿದ್ದ ಮೂವರನ್ನು ಸಾರ್ವಜನಿಕರು ಹಿಡಿದಿದ್ದಾರೆ. ವಿಚಾರಣೆಯ ಸಮಯದಲ್ಲಿ, ಒಬ್ಬ ವ್ಯಕ್ತಿಯ ಆಧಾರ್ ಕಾರ್ಡ್‌ನಲ್ಲಿ ಎಂ.ಡಿ ಶಮೀಮ್ ಎಂದು ಹೆಸರು ಕಂಡು ಬಂದಿದೆ. ಎಂ.ಡಿ ಶಮೀಮ್ ತನ್ನ ಗ್ಯಾಂಗ್ ಜೊತೆ ಕೇಸರಿ ಬಟ್ಟೆಗಳನ್ನು ಧರಿಸಿ ಹಿಂದೂಗಳ ಮನೆಗಳಿರುವ ಪ್ರದೇಶಗಳಿಗೆ ತೆರಳುತ್ತಿದ್ದರು. ಮೂವರು ಮಕ್ಕಳನ್ನು ಕಳ್ಳತನ ಮಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ” ಬರೆದುಕೊಳ್ಳಲಾಗಿತ್ತು.

ಇದೇ ರೀತಿಯ ಆರೋಪಗಳೊಂದಿಗೆ ಇತರ ಅನೇಕ ಎಕ್ಸ್‌ ಹ್ಯಾಂಡಲ್‌ಗಳಲ್ಲಿ ವಿಡಿಯೋ ಹಂಚಿಕೊಳ್ಳಲಾಗಿತ್ತು.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಸತ್ಯಾಸತ್ಯತೆ ಪರಿಶೀಲನೆ ನಡೆಸಲು ನಾವು ಕೀ ವರ್ಡ್ಸ್‌ಗಳನ್ನು ಬಳಸಿ, ಗೂಗಲ್ ಸರ್ಚ್ ಮಾಡಿದ್ದೇವೆ. ಈ ವೇಳೆ ಜುಲೈ 14 ರಂದು ಆಜ್‌ತಕ್ ಸುದ್ದಿ ವೆಬ್‌ಸೈಟ್‌ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ಆ ವರದಿಯ ಪ್ರಕಾರ ಮೀರತ್‌ನ ಪ್ರಹ್ಲಾದ್ ನಗರದಲ್ಲಿ ಘಟನೆ ನಡೆದಿದ್ದು, ಮಕ್ಕಳ ಅಪಹರಣಕಾರರೆಂದು ಶಂಕಿಸಿ ಮೂವರು ಸಾಧುಗಳನ್ನು ಸಾರ್ವಜನಿಕರು ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ಹೊಡೆದಾಟದ ವಿಡಿಯೋ ವೈರಲ್ ಆದ ನಂತರ, ಪೊಲೀಸರು ವಿಷಯ ಅರಿತು ಪುನೀತ್, ಮಿಕ್ಕಿ ಮತ್ತು ಸುಧಾಂಶು ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿಯಿಂದ ಹಲ್ಲೆಗೊಳಗಾದವರು ಮುಸ್ಲಿಮರಲ್ಲ ಎಂಬುವುದು ಸಾಬೀತಾಗಿದೆ.

ತಪ್ಪು ಸಂದೇಶಗಳೊಂದಿಗೆ ವಿಡಿಯೋ ವೈರಲ್ ಆದ ನಂತರ ಮೀರತ್ ಪೊಲೀಸರು ಕೂಡ ಘಟನೆ ಕುರಿತು ವಿಡಿಯೋ ಮೂಲಕ ಸ್ಪಷ್ಟನೆ ಕೊಟ್ಟಿದ್ದರು. ಸಾರ್ವಜನಿಕರು ಸಾಧುಗಳನ್ನು ಮಕ್ಕಳ ಕಳ್ಳರೆಂದು ಭಾವಿಸಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೊಳಗಾದವರು ಮುಸ್ಲಿಮರಲ್ಲ ಎಂದು ಸ್ಪಷ್ಟಪಡಿಸಿದ್ದರು.

ಇನ್ನು ಈ ಘಟನೆಯಲ್ಲಿ ಸಾಧುಗಳ ಗುರುತಿನ ಬಗ್ಗೆ ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಟಿವಿ 9 ಭಾರತವರ್ಷ್ ಮತ್ತು ನ್ಯೂಸ್ 18 ವರದಿಗಳು ತಿಳಿಸಿವೆ. ಅವರು ಮುಸ್ಲಿಂ ಮಕ್ಕಳ ಅಪಹರಣಕಾರರು ಎಂದು ಭಾವಿಸಿ ಮೂವರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಥಳಿಸಿದ್ದಾರೆ ಎಂಬುವುದು ಕೂಡ ತಿಳಿದು ಬಂದಿದೆ. ಸಾಧುಗಳು ಮುಸ್ಲಿಮರಲ್ಲ, ಆದರೆ ನಾಥ ಸಮುದಾಯದವರು ಎಂದು ಮೀರತ್ ಪೊಲೀಸರು ದೃಢಪಡಿಸಿದ್ದಾರೆ.

ಒಟ್ಟಿನಲ್ಲಿ ಮೀರತ್‌ನಲ್ಲಿ ಹಲ್ಲೆಗೊಳಗಾದವರು ಸಾಧುಗಳ ವೇಷ ಧರಿಸಿದ ಮುಸ್ಲಿಂ ವ್ಯಕ್ತಿಗಳಲ್ಲ. ಅವರು ನಾಥ  ಸಮುದಾಯಕ್ಕೆ ಸೇರಿದ ಹಿಂದೂ ಸಾಧುಗಳು. ಸಾರ್ವಜನಿಕರು ಮಕ್ಕಳ ಕಳ್ಳರು ಎಂದು ತಪ್ಪಾಗಿ ತಿಳಿದು ಅವರಿಗೆ ಥಳಿಸಿದ್ದರು. ಆ ಘಟನೆಯ ವಿಡಿಯೋಗೆ ಕೋಮು ಬಣ್ಣ ಬಳಿದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲಾಗಿದೆ. ಹಾಗಾಗಿ, ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.

ಇದನ್ನೂ ಓದಿ : FACT CHECK : ಸೋನಿಯಾ ಗಾಂಧಿ ಸಿಗರೇಟ್ ಹಿಡಿದು ನಿಂತಿದ್ದು ನಿಜವೇ? ವೈರಲ್ ಫೋಟೋದ ಸತ್ಯಾಸತ್ಯತೆ ಇಲ್ಲಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೇರಳ | ಆರ್‌ಎಸ್‌ಎಸ್‌ ನಾಯಕನ ಭೇಟಿಯನ್ನು ಒಪ್ಪಿಕೊಂಡ ಎಡಿಜಿಪಿ ಅಜಿತ್ ಕುಮಾರ್ : ವರದಿ

0
ಕೇರಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌ ನಾಯಕನನ್ನು ಭೇಟಿಯಾಗಿರುವುದು ನಿಜ ಎಂದು ಕೇರಳ ಪೊಲೀಸರ ವಿಶೇಷ ಘಟಕ ಖಚಿತಪಡಿಸಿರುವುದಾಗಿ ವರದಿಯಾಗಿದೆ. ಎಡಿಜಿಪಿ ಅಜಿತ್ ಕುಮಾರ್ ಅವರು ಆರ್‌ಎಸ್‌ಎಸ್‌...