ವ್ಯಕ್ತಿಯೊಬ್ಬ ಬ್ಯಾಂಕ್ ಮ್ಯಾನೇಜರ್ ಒಬ್ಬರಿಗೆ ಕಪಾಳಮೋಕ್ಷ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ರವಿಂದ್ರ ಕಪೂರ್ ಎಂಬ ಎಕ್ಸ್ ಬಳಕೆದಾರರೊಬ್ಬರು ವಿಡಿಯೋ ಹಂಚಿಕೊಂಡಿದ್ದು, “ಬಿಜೆಪಿ ಮುಖಂಡರೊಬ್ಬರು ಸಾರ್ವಜನಿಕ ವಲಯದ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡುವ ಧೈರ್ಯ ತೋರಿದ್ದಾರೆ ಎಂದು ಬರೆದುಕೊಂಡಿದ್ದಾರೆ.
A BJP leader has the audacity to slap a Public Sector Bank Manager.
The Arrogant BJP should soon be taught a lesson 🔥🔥 pic.twitter.com/g6rnI9gj0D
— Ravinder Kapur. (@RavinderKapur2) August 14, 2024
“ದುರಹಂಕಾರಿ ಬಿಜೆಪಿಗೆ ಬೇಗ ತಕ್ಕ ಪಾಠ ಕಲಿಸಬೇಕು. ಎಂತಹ ಗೂಂಡಾಗಿರಿ ನಡೆಯುತ್ತಿದೆ, ಬಿಜೆಪಿಯವರು ನಾಚಿಕೆಯಿಲ್ಲದೆ ಬ್ಯಾಂಕ್ ಮ್ಯಾನೇಜರ್ ಮೇಲೆ ಕೈ ಎತ್ತಿದ್ದಾರೆ. ಈ ನಾಯಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶಾಯರ್ ಗುರೂಜಿ ಹರಿಯಾಣ ಎಂಬ ಎಕ್ಸ್ ಖಾತೆಯಯಲ್ಲಿ ಬರೆದುಕೊಳ್ಳಲಾಗಿದೆ.
What hooliganism is going on, the BJP people have shamelessly raised their hands on the bank manager, strictest action should be taken against this flag leader! pic.twitter.com/cR3h9A58eu
— Shayar Guruji Haryana (@ShayarGuruji) August 14, 2024
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 13 ಆಗಸ್ಟ್ 2024 ರಂದು ಪುಣೆ ಪಲ್ಸ್ ಎಂಬ ಮಾಧ್ಯಮ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ.

ಪುಣೆ ಪಲ್ಸ್ ವರದಿಯ ಪ್ರಕಾರ, ಬ್ಯಾಂಕ್ ಮ್ಯಾನೇಜರ್ ಮೇಲೆ ‘ಸ್ವಾಭಿಮಾನಿ’ ಗುಂಪಿನ ಸದಸ್ಯರು ಹಲ್ಲೆ ನಡೆಸಿದ್ದಾರೆ. ಬ್ಯಾಂಕ್ ಮ್ಯಾನೇಜರ್ ರೈತರಿಗೆ ನೀಡುವ ವಿವಿಧ ಸಬ್ಸಿಡಿಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಆರೋಪಿಸಿ ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಯುವ ಜಿಲ್ಲಾಧ್ಯಕ್ಷರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಸ್ವಾಭಿಮಾನಿ ಶೆಟ್ಕರಿ ಸಂಘಟನೆಯು ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ರೈತ ಸಂಘವಾಗಿದೆ. ಇದನ್ನು ಸಂಸದ ರಾಜು ಶೆಟ್ಟಿ ಅವರು ಸ್ಥಾಪಿಸಿದ್ದಾರೆ.
ದಿ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಸ್ವಾಭಿಮಾನಿ ಶೇತ್ಕರಿ ಸಂಘಟನೆಯ ಯುವ ಜಿಲ್ಲಾಧ್ಯಕ್ಷರು ಬ್ಯಾಂಕ್ ಮ್ಯಾನೇಜರ್ ಹಲ್ಲೆ ನಡೆಸಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖ ಮಾಡಿದೆ. ರೈತರು, ಹಾಲು, ವಸತಿ, ವಿಧವೆಯರು ಮತ್ತು ನಿರ್ಗತಿಕರಿಗೆ ನೆರವು ಸೇರಿದಂತೆ ವಿವಿಧ ಸಬ್ಸಿಡಿಗಳನ್ನು ಬ್ಯಾಂಕ್ ಮ್ಯಾನೇಜರ್ ಸ್ಥಗಿತಗೊಳಿಸಿದ್ದಾರೆ ಎಂದು ಗುಂಪು ಆರೋಪಿಸಿದೆ. ಇಂದು ಸ್ವಾಭಿಮಾನಿ ಶೆಟ್ಕರಿ ಸಂಘಟನೆಯ ಸದಸ್ಯರು ಬ್ಯಾಂಕ್‌ಗೆ ಮುತ್ತಿಗೆ ಹಾಕಿ ಗದ್ದಲ ಎಬ್ಬಿಸಿ ಪ್ರತಿಭಟನೆ ನಡೆಸಿದರು ಎಂದು ವರದಿಯಾಗಿದೆ.

ಹಾಗಾಗಿ ವೈರಲ್ ವಿಡಿಯೋದಲ್ಲಿಹಂಚಿಕೊಂಡಂತೆ ಬ್ಯಾಂಕ್ ಮ್ಯಾನೆಜರ್ ಮೇಲೆ ಹಲ್ಲೆ ನಡೆಸಿರುವುದು ಬಿಜೆಪಿ ನಾಯಕರಲ್ಲ ಎಂಬುದು ಸ್ಪಷ್ಟವಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದವರು ಸ್ವಾಭಿಮಾನಿ ಶೆಟ್ಕರಿ ಸಂಘಟನೆಯ ಯುವ ಜಿಲ್ಲಾಧ್ಯಕ್ಷರೇ ಹೊರತು ಬಿಜೆಪಿ ನಾಯಕರಲ್ಲ ಎಂಬುದು ಸ್ಪಷ್ಟವಾಗಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪ್ರತಿಪಾದನೆಯೊಂದಿಗೆ ಬ್ಯಾಂಕ್ ಮ್ಯಾನೇಜರ್‌ಗೆ ಕಪಾಳಮೋಕ್ಷ ಮಾಡಿದವರು ಬಿಜೆಪಿ ನಾಯಕರು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : FACT CHECK : ಪ್ರತಿಭಟನೆಯ ವಿಡಿಯೋಗೆ ಕೋಮು ಬಣ್ಣ ಬಳಿದ ಮಾಧ್ಯಮಗಳು


