“ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡುತ್ತಿರುವ ವಿಡಿಯೋ. ಇದು ಭಾರತದಲ್ಲಿ ನಡೆದಿದ್ದರೆ ಇಸ್ಲಾಂ ಅಪಾಯದಲ್ಲಿದೆ ಎನ್ನುತ್ತಿದ್ದರು” ಎಂದು ಪ್ರತಿಪಾದಿಸಿದ ಹಳೆಯ ವಿಡಿಯೋವೊಂದು ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಕುರಿತು ನಾನುಗೌರಿ.ಕಾಂ ಸತ್ಯಾಸತ್ಯತೆ ಪರಿಶೀಲನೆ ನಡೆಸಿದೆ. ಇದಕ್ಕಾಗಿ ಗೂಗಲ್‌ನಲ್ಲಿ ನಾವು ವಿಡಿಯೋ ಹುಡುಕಾಡಿದ್ದೇವೆ. ಈ ವೇಳೆ “Sri Sathya Sai Official”ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ನಮಗೆ ಮೂಲ ವಿಡಿಯೋ ದೊರೆತಿದೆ.
ಯೂಟ್ಯೂಬ್‌ನಲ್ಲಿರುವ ವಿಡಿಯೋ ದುಬೈನ ಮಸೀದಿಯಲ್ಲಿ ತೆಗೆಯಲಾಗಿಲ್ಲ, ಇದು ಆಂಧ್ರ ಪ್ರದೇಶದ ಪುಟ್ಟಪರ್ತಿಯಲ್ಲಿರುವ ಪ್ರಶಾಂತಿ ನಿಲಯಂನಲ್ಲಿ ನಡೆದ ಕಾರ್ಯಕ್ರಮಕ್ಕೆ ಸಂಬಂಧಿಸಿದೆ. ಶ್ರೀ ಸತ್ಯ ಸಾಯಿಬಾಬಾ ಅವರ ಮಹಾಸಮಾಧಿಯ ಮುಂದೆ ಈ ಕಾರ್ಯಕ್ರಮ ನಡೆದಿದೆ. ವಿಡಿಯೋದಲ್ಲಿರುವ ಕೆಲವು ಭಕ್ತರು ಬಹ್ರೇನ್, ಇರಾನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ಸೇರಿದವರಾಗಿದ್ದಾರೆ ಎಂದು ತಿಳಿದು ಬಂದಿದೆ.
“ಸರ್ವ ಧರ್ಮ ಸ್ವರೂಪ ಸಾಯಿ”- ಅರೇಬಿಯನ್ ಗಾಯಕವೃಂದ –10 ಜುಲೈ 2012″ ಎಂಬ ಶೀರ್ಷಿಕೆಯ ಯೂಟ್ಯೂಬ್ ವಿಡಿಯೋದಲ್ಲಿ ಮಧ್ಯಪ್ರಾಚ್ಯ ಮತ್ತು ಗಲ್ಫ್ ದೇಶಗಳನ್ನು ಒಳಗೊಂಡ ಸಾಯಿ ಸಂಘಟನೆಯ ಪ್ರದೇಶ 94 ರ ‘ಪ್ರಶಾಂತಿ’ ತೀರ್ಥಯಾತ್ರೆಯು ಪ್ರಶಾಂತಿ ನಿಲಯವನ್ನು ಇಸ್ಲಾಮಿಕ್ ಉತ್ಸಾಹದಿಂದ ಆವರಿಸಿದೆ. ಬಹ್ರೇನ್, ಇರಾನ್, ಕುವೈತ್, ಒಮಾನ್, ಕತಾರ್, ಸೌದಿ ಅರೇಬಿಯಾ, ಸಿರಿಯಾ, ಟರ್ಕಿ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಭಕ್ತರು ಪ್ರಶಾಂತಿ ನಿಲಯಂನಲ್ಲಿ ಅರೆಬಿಕ್ ಸವಿಯನ್ನು ಒದಗಿಸಿದರು ಎಂದು ಬರೆಯಲಾಗಿದೆ.

ಆದ್ದರಿಂದ ವೈರಲ್ ವಿಡಿಯೋ ದುಬೈನ ಮಸೀದಿಯೊಂದರಲ್ಲಿ ಮುಸ್ಲಿಂ ಮಹಿಳೆಯರು ರಾಮ ಭಜನೆ ಹಾಡುತ್ತಿರುವ ವಿಡಿಯೋ ಅಲ್ಲ ಎಂಬುವುದು ಖಚಿತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾದ ಮಾಹಿತಿಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗ್ತಿದೆ.
ಇದನ್ನೂ ಓದಿ : Fact Check: ರೈತ ಹೋರಾಟದ ಉದ್ದೇಶ ಮೋದಿ ವರ್ಚಸ್ಸು ಕುಂದಿಸುವುದಾ? ಮಾಧ್ಯಮ ವರದಿಗಳ ಸತ್ಯಾಸತ್ಯತೆ ಏನು?


