ನಟಿ ಶ್ರೀದೇವಿ ಅವರ ಮರಣೋತ್ತರ ವರದಿಯೆಂದು ಪ್ರತಿಪಾದಿಸಿ ವರದಿಯೊಂದರ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ವರದಿಯಲ್ಲಿ ನಟಿ ಶ್ರೀದೇವಿಗೆ ಬಲವಂತವಾಗಿ ಕೊಕೇನ್ ನೀಡಲಾಗಿತ್ತು, ಅವರ ದೇಹದಲ್ಲಿ ಮೂರು ಗಾಯಗಳಿತ್ತು ಜೊತೆಗೆ ಅವರ ಸಾವು ಸಹಜವಲ್ಲ ಎಂದು ಹೇಳುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಚಿತ್ರದ ಸತ್ಯಾಂಶವನ್ನು ಪರಿಶೀಲಿಸೋಣ.

ಇದನ್ನೂ ಓದಿ: ಪ್ರಧಾನಿ ಉದ್ಘಾಟಿಸಿದ ಅಟಲ್ ಸುರಂಗ ಎಂದು ಅಮೇರಿಕಾ ಸುರಂಗದ ಚಿತ್ರ ಹಂಚಿಕೊಂಡ ಮಾಧ್ಯಮಗಳು!
ಪ್ರತಿಪಾದನೆ: ನಟಿ ಶ್ರೀದೇವಿ ಅವರಿಗೆ ಬಲವಂತವಾಗಿ ಮಾದಕ ದ್ರವ್ಯ ಸೇವಿನೆ ಮಾಡಲಾಗಿತ್ತು. ಅವರ ಸಾವು ಸ್ವಾಭಾವಿಕವಲ್ಲ ಎಂದು ಹೇಳಿದ ಮರಣೋತ್ತರ ವರದಿ.
ಸತ್ಯ: ನಟಿ ಶ್ರೀದೇವಿ ಪ್ರಜ್ಞೆ ಕಳೆದುಕೊಂಡು ನಂತರ ಸ್ನಾನದತೊಟ್ಟಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ದುಬೈ ಮೀಡಿಯಾ ಆಫಿಸ್ ಟ್ವೀಟ್ ಮಾಡಿ ದೃಡಪಡಿಸಿದೆ. ಸಂಬಂಧಿತ ದಾಖಲೆಗಳೊಂದಿಗೆ ಹಲವಾರು ಸುದ್ದಿ ಸಂಸ್ಥೆಗಳು ಕೂಡಾ ಇದನ್ನೇ ದೃಡಪಟಿಸಿದೆ. ಇದಲ್ಲದೆ, ವೈರಲ್ ಡಾಕ್ಯುಮೆಂಟ್ ಅನ್ನು ಸೂಕ್ಷ್ಮವಾಗಿ ಗಮನಿಸಿದರೆ, ಈ ಡಾಕ್ಯುಮೆಂಟ್ ಅಧಿಕೃತವಲ್ಲ ಎಂದು ಸ್ಪಷ್ಟಪಡಿಸುವ ಅನೇಕ ಕಾಗುಣಿತ ಮತ್ತು ವ್ಯಾಕರಣ ತಪ್ಪುಗಳನ್ನು ನಾವೇ ಕಂಡುಕೊಳ್ಳಬಹುದು. ಆದ್ದರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೈರಲ್ ಪೋಸ್ಟ್‌ನ ಪ್ರತಿಪಾದನೆ ತಪ್ಪಾಗಿದೆ.
‘‘Sridevi death UAE’ ಎಂಬ ಕೀವರ್ಡ್ ಮೂಲಕ ಗೂಗಲ್‌ನಲ್ಲಿ ಹುಡುಕಾಟ ನಡೆಸಿದರೆ ದುಬೈ ಮೀಡಿಯಾ ಆಫಿಸ್ ಎಂಬ ಅಧೀಕೃತ ಟ್ವೀಟ್ಟರ್‌ನಲ್ಲಿ ಇದರ ಮಾಹಿತಿಯನ್ನು ಪಡೆಯಬಹುದಾಗಿದೆ. ಇದರಲ್ಲಿ ನಟಿಯು ಪ್ರಜ್ಞೆ ತಪ್ಪಿ, ನಂತರ ಸ್ನಾನದತೊಟ್ಟಿಯಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ ಎಂದು ಹೇಳಿದೆ. ಈ ವರದಿಯಲ್ಲಿ ಯಾವುದೇ ಗಾಯಗಳ ಬಗ್ಗೆ ಉಲ್ಲೇಖವಿಲ್ಲ.
Following the completion of post-mortem analysis, @DubaiPoliceHQ today stated that the death of Indian actress Sridevi occurred due to drowning in her hotel apartment’s bathtub following loss of consciousness.
— Dubai Media Office (@DXBMediaOffice) February 26, 2018
ಅಷ್ಟೇ ಅಲ್ಲದೆ, ಈ ಬಗ್ಗೆ ಇನ್ನಷ್ಟು ದಾಖಲೆ ಹುಡುಕಾಡಿದರೆ ನಟಿಯ ಸಾವಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರಕಟಿಸಿರುವ ಪತ್ರಿಕೆಯ ಲೇಖನವನ್ನು ಕಾಣಬಹುದಾಗಿದೆ. ಇದು ಆಕಸ್ಮಿಕವಾಗಿ ಮುಳುಗಿರುವುದು ಸಾವಿಗೆ ಕಾರಣ ಎಂದು ದಾಖಲೆ ಸಮೇತ ಖಚಿತಪಡಿಸುತ್ತದೆ.

ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ
ಅಲ್ಲದೆ ವೈರಲ್ ವರದಿಯು ಯುಎಇ ಸರ್ಕಾರದ ಯಾವುದೆ ಅಧೀಕೃತ ಮೂಲದ್ದಲ್ಲ ಎಂದು ಸ್ವತಃ ನಾವೆ ಕಂಡುಕೊಳ್ಳಬಹುದು. ಈ ವೈರಲ್ ವರದಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇದು ಅಧಿಕೃತವಲ್ಲ ಎಂದು ಸ್ಪಷ್ಟವಾಗುವ ಅನೇಕ ಕಾಗುಣಿತ ಮತ್ತು ವ್ಯಾಕರಣದ ತಪ್ಪುಗಳನ್ನು ಕಾಣಬಹುದಾಗಿದೆ. ಯುಎಇ ಆರೋಗ್ಯ ಸಚಿವಾಲಯದ ಲಾಂಛನವು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುವುದರಿಂದ, ಡಿಜಿಟಲ್ ಪರಿಕರಗಳನ್ನು ಬಳಸಿಕೊಂಡು ಪೋಸ್ಟ್‌ನಲ್ಲಿರುವಂತಹ ಡಾಕ್ಯುಮೆಂಟ್ ಅನ್ನು ಸುಲಭವಾಗಿ ರಚಿಸಬಹುದಾಗಿದೆ.

ಪ್ರಸ್ತುತ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮರಣದ ನಂತರ ಬಾಲಿವುಡ್‌ನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ, ನಟಿ ಶ್ರೀದೇವಿಯ ಸಾವಿಗೆ ಸಂಬಂಧಿಸಿದ ಪೋಸ್ಟ್‌ಗಳು ಕೂಡಾ ಮತ್ತೆ ಹರಿದಾಡುತ್ತಿದೆ. ಅಲ್ಲದೆ ವಿಭಿನ್ನವಾಗಿ ದಾರಿತಪ್ಪಿಸುವ ಪ್ರತಿಪಾದನೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಶ್ರೀದೇವಿಯವರ ಮರಣೋತ್ತರ ವರದಿಯು ನಿಜವಾದದ್ದಲ್ಲ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುವತಿಯನ್ನು ಅಮಾನುಷವಾಗಿ ಕೊಲ್ಲುತ್ತಿರುವ ಈ ವಿಡಿಯೋ ಭಾರತದ್ದಲ್ಲ
ವಿಡಿಯೋ ನೋಡಿ:`ಗಾಂಧಿ-151′ ವೆಬಿನಾರ್


