Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಒಮ್ಮೆಲೇ 15 ಚಿತ್ರ ಬಿಡಿಸಿ ಗಿನ್ನೀಸ್ ದಾಖಲೆ ಬರೆದದ್ದು ನಿಜವೇ?

ಫ್ಯಾಕ್ಟ್‌ಚೆಕ್: ಒಮ್ಮೆಲೇ 15 ಚಿತ್ರ ಬಿಡಿಸಿ ಗಿನ್ನೀಸ್ ದಾಖಲೆ ಬರೆದದ್ದು ನಿಜವೇ?

- Advertisement -
- Advertisement -

ಕಳೆದ ಕೆಲವು ದಿನಗಳಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊವೊಂದು ವೈರಲ್ ಆಗುತ್ತಿದ್ದು, ಈ ವಿಡಿಯೊವನ್ನು ವೀಕ್ಷಿಸಿದವರು ಇದು ಸಾಧ್ಯವೇ ಎಂದು ಬೆರಗಿನಿಂದ ನೋಡುತ್ತಿದ್ದಾರೆ. ವಿಡಿಯೊದಲ್ಲಿರುವ ದೃಶ್ಯಾವಳಿಯು ನೋಡಿದ ಪ್ರತಿಯೊಬ್ಬರನ್ನೂ ಬೆರಗುಗೊಳಿಸುವಂತೆಯೇ ಇದೆ.

ಮಹಾತ್ಮಾ ಗಾಂಧಿ, ಡಾ.ಬಿ.ಆರ್.ಅಂಬೇಡ್ಕರ್, ಭಗತ್ ಸಿಂಗ್, ಡಾ.ರಾಜೇಂದ್ರ ಪ್ರಸಾದ್ ಮತ್ತು ಸುಭಾಷ್ ಚಂದ್ರ ಬೋಸ್ ಸೇರಿದಂತೆ ರಾಷ್ಟ್ರನಾಯಕರ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ರಚಿಸುವ ವಿಡಿಯೊ ಇದಾಗಿದೆ ಎಂದು ಪ್ರತಿಪಾದಿಸಲಾಗಿದೆ. ಸದ್ಯ ಈ ವಿಡಿಯೊ  ವೈರಲ್ ಆಗಿದ್ದು, ಓದುಗರ ಕೋರಿಕೆಯನ್ನು ಪರಿಗಣಿಸಿ ‘ಏನ್‌ಸುದ್ದಿ.ಕಾಂ’ ಫ್ಯಾಕ್ಟ್‌ಚೆಕ್ ಮಾಡಿದೆ.

15 ಬೇರೆ ಬೇರೆ ಚಿತ್ರಗಳನ್ನು ಏಕಕಾಲಕ್ಕೆ ರಚಿಸಲು ಸಾಧ್ಯವೆ?  ವೈರಲ್ ವಿಡಿಯೊದಲ್ಲಿರುವ ದೃಶ್ಯಾವಳಿಗಳು ಸತ್ಯವೇ ಎಂದು ‘ಏನ್‌ಸುದ್ದಿ.ಕಾಂ’ ಪರಿಶೀಲಿಸಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಸಾಮಾನ್ಯವಾಗಿ ಒಂದು ನಿಗದಿತ ಸಮಯದಲ್ಲಿ ಒಂದು ವಿಷಯದ ಬಗ್ಗೆ ಗಮನಹರಿಸುವುದೇ ಕಷ್ಟವಾಗಿರುವಾಗ, ಒಮ್ಮೆಲೇ 15 ವಿಭಿನ್ನ ಚಿತ್ರಗಳನ್ನು ರಚಿಸುತ್ತಾರೆ ಎಂಬುವುದನ್ನು ನಂಬುವುದು ಕಷ್ಟ.

ವಿಡಿಯೊವನ್ನು ಪರಿಶೀಲಿಸಲು ಗೂಗಲ್ ಸರ್ಚ್ ಮಾಡಿದಾಗ ಇಂಡಿಯನ್ ಎಕ್ಸ್‌ಪ್ರೆಸ್, ಮಿಂಟ್, ಟೈಮ್ಸ್‌ನೌ  ಸುದ್ದಿ ಮಾಧ್ಯಮಗಳು ವರದಿಗಳನ್ನು ಪ್ರಕಟಿಸಿವೆ. ಮಹೀಂದ್ರಾ ಗ್ರೂಪ್‌ನ ಚೇರ್‌ಮೆನ್ ಆಗಿರುವ ಆನಂದ್ ಮಹೀಂದ್ರಾರವರು ಟ್ವೀಟ್ ಮಾಡಿದ್ದು, “ಇದು ಹೇಗೆ ಸಾಧ್ಯ? ನಿಜವಾಗಿಯೂ ಆಕೆ ಪ್ರತಿಭಾವಂತ ಕಲಾವಿದೆ. ಆದರೆ ಒಂದೇ ಬಾರಿಗೆ 15 ಭಾವಚಿತ್ರಗಳನ್ನು ರಚಿಸುವುದು ಕಲೆಗಿಂತ ಹೆಚ್ಚು – ಇದು ಒಂದು ಪವಾಡ! ಆಕೆಯ ಬಳಿ ಸಮೀಪದ ಯಾರಾದರೂ ಈ ಸಾಧನೆಯನ್ನು ದೃಢೀಕರಿಸಬಹುದೇ? ನಿಜವಾಗಿದ್ದರೆ, ಆಕೆಯನ್ನು ಪ್ರೋತ್ಸಾಹಿಸಬೇಕು ಮತ್ತು ವಿದ್ಯಾರ್ಥಿವೇತನ, ಇತರ ರೀತಿಯ ಬೆಂಬಲವನ್ನು ಒದಗಿಸಲು ನಾನು ಸಂತೋಷಪಡುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.

ಸಾಮಾನ್ಯವಾಗಿ ಈ ರೀತಿ ಚಿತ್ರಗಳನ್ನು ರಚಿಸಲು ಗಣಕಯಂತ್ರಕ್ಕೆ ಮತ್ತು ಪ್ರೋಗ್ರಾಮ್ ಮಾಡಬಹುದಾದ ರೋಬಾಟ್‌ಗೆ ಮಾತ್ರ ಸಾಧ್ಯ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಗಿನ್ನೀಸ್‌ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನೂರ್ ಜಹಾನ್ ತನ್ನ ಸ್ಥಾನವನ್ನು ಪಡೆದುಕೊಂಡಿದ್ದಾಳೆ ಎಂದು ವಿಡಿಯೊಗಳಲ್ಲಿನ ಹೇಳಿಕೆಗಳು ಪ್ರತಿಪಾದಿಸುತ್ತಿವೆ. ಅದರ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲ. “ನಾನು ಗಿನ್ನೀಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಈ ಹೆಸರನ್ನು ಕ್ರಾಸ್-ಚೆಕ್ ಮಾಡಿದ್ದೇನೆ. ಆದರೆ ಅಂತಹ ಹೆಸರು ಕಂಡುಬಂದಿಲ್ಲ” ಎಂದು ಯೂಟ್ಯೂಬ್ ಬಳಕೆದಾರರು ಕಮೆಂಟ್ ಮಾಡಿದ್ದಾರೆ.

ಕಲಾವಿದರು ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸುವ ವಿಡಿಯೊದ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಜನರಿದ್ದಾರೆ. ಹಾಗೆಯೇ ಇದು ನಿಜವೆಂದು ನಂಬುವ ಜನರ ಸಂಖ್ಯೆ ಇನ್ನು ಹೆಚ್ಚಿದೆ ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. “ವಾಹ್ ವಾಟ್ ಎ ಎಡಿಟಿಂಗ್” ಎಂದು ಮತ್ತೊಬ್ಬರು ಕುಟುಕಿದ್ದಾರೆ.

“ಇದು ಪ್ರತಿಭೆ ಅಲ್ಲ. ಇದು ವಂಚನೆ. ಭೌತಿಕವಾಗಿ ಸಾಧ್ಯವಿಲ್ಲದ್ದನ್ನು ಯಾರಿಂದಲೂ ಸಾಧಿಸಲು ಸಾಧ್ಯವಿಲ್ಲ. ಈಗಾಗಲೇ ರಚಿತವಾಗಿರುವ ಅತ್ಯುತ್ತಮವಾದ ಚಿತ್ರಗಳನ್ನು ತಾನೇ ರಚಿಸಿರುವಂತೆ ವಿಡಿಯೊ ಮಾಡಿ ಬಹಿರಂಗಪಡಿಸುತ್ತಿದ್ದಾರೆ” ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ.

ಕನ್ನಡದ ಹಿರಿಯ ಪತ್ರಕರ್ತರು, ಚಿಂತಕರು ಆಗಿರುವ ರಾಜಾರಾಮ್ ತಲ್ಲೂರ್ ಅವರು ವೈರಲ್ ವಿಡಿಯೊ ಬಗ್ಗೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. “ಇಲ್ಲಿ ವಿಡಿಯೊದಲ್ಲಿ ಹುಡುಗಿಯೊಬ್ಬಾಕೆ ಬೆತ್ತದ ಚೌಕಟ್ಟಿಗೆ ಲಂಬವಾಗಿ ಬಾಲ್ ಪಾಯಿಂಟ್ ಪೆನ್‌ಗಳನ್ನು ಕಟ್ಟಿ, ಅದರಲ್ಲಿ ಏಕಕಾಲಕ್ಕೆ ಹದಿನೈದು ವಿಭಿನ್ನ ಚಿತ್ರಗಳನ್ನು ರಚಿಸಿದ್ದಾಳೆ ಎಂದು ಕ್ಲೇಮ್ ಮಾಡಲಾಗಿದೆ, ಜೊತೆಗೆ ಇದಕ್ಕೆ ಅದೇನೋ ಗಿನ್ನೀಸ್ ರೆಕಾರ್ಡ್ ಕೂಡ ಆಗಿದೆ ಅಂತೆ! ಕಿಲೋಮೀಟರ್ ಗಟ್ಟಲೆ ಪೆನ್ನಲ್ಲಿ ಬರೆದಿರುವ ಸುಶಿಕ್ಷಿತರಿಗೆ, ಹೀಗೆ ಪೆನ್ನುಗಳನ್ನು ಕಟ್ಟಿಕೊಂಡಾಗ ಅಬ್ಬಬ್ಬಾ ಎಂದರೆ ಒಂದೇ ಚಿತ್ರವನ್ನು (ಅದೂ ಕೂಡ ಹಗ್ಗದಲ್ಲಿ ಕಟ್ಟಿದರೆ ಅಸಂಭವ!) ಹದಿನೈದು ಪ್ರತಿ ಮಾಡಬಹುದೇ ಹೊರತು ಹದಿನೈದು ಬೇರೆ ಬೇರೆ ಚಿತ್ರಗಳನ್ನಲ್ಲ ಎಂಬುದು ಯಾಕೆ ತಲೆಗೆ ಹೋಗಲಿಲ್ಲ? ಬಾಲ್ ಪಾಯಿಂಟ್ ಪೆನ್ನಿನ ಮೊನೋಟೋನಿನಲ್ಲಿ ಶೇಡ್ ಗಳನ್ನು ರಚಿಸಲು ಸಾಧ್ಯವಿಲ್ಲ ಎಂದು ಯಾಕೆ ಅರ್ಥ ಆಗಲಿಲ್ಲ? ಈಗ ವಿಡಿಯೊ ಎಡಿಟಿಂಗ್‌ಗಳು ಸಾಧ್ಯ ಇರುವಾಗ ಇಂತಹ ಕಣ್ಕಟ್ಟು ಏನು ಬೇಕಾದರೂ ಮಾಡಬಹುದು ಎಂಬ ಸಾಧ್ಯತೆ ಯಾಕೆ ತಲೆಗೆ ಹೊಳೆಯಲಿಲ್ಲ?” ಎಂದು  ವೈರಲ್ ವಿಡಿಯೊ ಕುರಿತಾಗಿ ರಾಜಾರಾಮ್‌ ತಲ್ಲೂರು ಪ್ರಶ್ನೆಯನ್ನು ಎತ್ತಿದ್ದಾರೆ.

ವೈರಲ್ ವಿಡಿಯೊದ ಕೊನೆಯಲ್ಲಿ ಮೊಬೈಲ್ ಸಂಖ್ಯೆಯೊಂದನ್ನು ನೀಡಲಾಗಿದ್ದು, ‘ಏನ್‌ಸುದ್ದಿ.ಕಾಂ’ ಈ ಸಂಖ್ಯೆಗೆ ಸಂಪರ್ಕಿಸಿದೆ. ಕರೆಯನ್ನು ಸ್ವೀಕರಿಸಿದ ಮಹಿಳೆ, “ನಾನು ಆಕೆಯ ಸಹೋದರಿ. ನೂರ್‌ಜಹಾನ್ ಸಂಪರ್ಕಿಸಲು ಸಂಜೆಗೆ ಕರೆ ಮಾಡಿ” ಎಂದು ತಿಳಿಸಿದ್ದರು. ಪುನಃ 27 ಅಕ್ಟೋಬರ್ 2022ರ ಸಂಜೆ ಮತ್ತೆ ಸಂಪರ್ಕಿಸಿ ವಿಡಿಯೊ ವೈರಲ್ ಆಗುತ್ತಿರುವ ಬಗ್ಗೆ ವಿಚಾರಿಸಿ ಮಾಹಿತಿ ಕೇಳಿದಾಗ, “ನೂರ್‌ಜಹಾನ್ ವಿಡಿಯೊ ನಿಜ”ವೆಂದು ತಿಳಿಸಿದ್ದಾರೆ.

“ಆದರೆ ಹಲವರು ಈ ವಿಡಿಯೊ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ, ಒಮ್ಮೆಲೇ 15 ಬೇರೆ ಬೇರೆ ಚಿತ್ರಗಳನ್ನು ಬಿಡಿಸಲು ಹೇಗೆ ಸಾಧ್ಯ?” ಎಂದು ಪ್ರಶ್ನಿಸಿದಾಗ, “ನಿರಂತರ ಅಭ್ಯಾಸದಿಂದ ಈ ರೀತಿ ಚಿತ್ರ ಬಿಡಿಸಲು ಸಾಧ್ಯವಾಗಿದೆ. ಈ ವಿಡಿಯೊ ಫೇಕ್ ಅಲ್ಲ” ಎಂದು ಸಮರ್ಥಿಸಿಕೊಂಡಿದ್ದಾರೆ. ಮುಂದುವರಿದು, “ಒಂದು ಲೈವ್ ಮೂಲಕ ಇದೇ ಚಿತ್ರವನ್ನು ರಚಿಸಲು ಸಾಧ್ಯವೇ?” ಎಂದು ಕೋರಿದಾಗ ನೂರ್‌ಜಹಾನ್, “ಲೈವ್ ವಿಡಿಯೊ ಮಾಡಲು ಸಾಕಷ್ಟು ಸಮಯ ಬೇಕಾಗುತ್ತದೆ” ಎಂದು ತಿಳಿಸಿದ್ದಾರೆ. ಹಾಗಾಗಿ ಈ ವಿಡಿಯೊದ ದೃಶ್ಯಾವಳಿಗಳು ನಂಬಲು ವಿಶ್ವಾಸಾರ್ಹವಲ್ಲ.

ನೂರ್‌ಜಹಾನ್ ಅವರ ಹೆಸರಿನಲ್ಲಿ ಯಾವುದೇ ಗಿನ್ನೀಸ್‌ ದಾಖಲೆ ಇಲ್ಲ. ವೈರಲ್ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಜಯ್ ಮೀನಾ ಎಂಬ ಯೂಟ್ಯೂಬರ್‌‌ ಇದು ಸಾಧ್ಯ ಎಂದಿದ್ದಾರೆ. ಈ ಹೆಸರಲ್ಲಿ ಯಾವುದೇ ಗಿನ್ನೀಸ್‌ ವಿಶ್ವ ದಾಖಲೆ ಇಲ್ಲ ಎಂದು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌ FACTLY  ಸ್ಪಷ್ಟಪಡಿಸಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್‌: ಪ್ರಧಾನಿ ಮೋದಿ ಟಾಯ್ಲೆಟ್‌‌ಗೆ ಕೂಡಾ ಕ್ಯಾಮರಾಮ್ಯಾನನ್ನು ಕರೆದುಕೊಂಡು ಹೋದರೆ?

ಆದರೆ ನೂರ್‌ಜಹಾನ್ ನಿಜವಾಗಿಯೂ ಒಂದೇ ಕೈಯಿಂದ 15 ಭಾವಚಿತ್ರಗಳನ್ನು ಏಕಕಾಲದಲ್ಲಿ ಚಿತ್ರಿಸಿದ್ದಾರೆ ಎಂದು ಹೇಳುವ ಅಜಯ್ ಮೀನಾ, ಇದು ಒಂದು ದಿನದಲ್ಲಿ ರಚಿಸಿದ ಚಿತ್ರವಲ್ಲ ಎಂದಿದ್ದಾರೆ. ಆದರೆ ನೂರ್ ಜಹಾನ್ ಪ್ರತಿನಿತ್ಯ ಕೆಲವು ಗಂಟೆಗಳ ಕಾಲ ಚಿತ್ರ ರಚನೆ ಮಾಡುವ ಮೂಲಕ ಒಂದು ತಿಂಗಳ ಅವಧಿಯಲ್ಲಿ ಭಾವಚಿತ್ರಗಳನ್ನು ಬಿಡಿಸಿದ್ದಾರೆ ಎಂದಿದ್ದಾರೆ.

ಆದರೆ, ಇಂತಹ ಸಾಧನೆಯ ಸಾಧ್ಯತೆಯ ಬಗ್ಗೆ ಅನುಮಾನಗಳಿವೆ ಮತ್ತು ವಾಸ್ತವವಾಗಿ ವಿಡಿಯೊದ ದೃಢೀಕರಣವನ್ನು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆಕೆಯ ಹೆಸರಿನಲ್ಲಿ ಯಾವುದೇ ಗಿನ್ನೀಸ್‌ ವಿಶ್ವ ದಾಖಲೆ ಇಲ್ಲದ ಕಾರಣ, ಪೋಸ್ಟ್‌ನಲ್ಲಿ ಮಾಡಿದ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಫ್ಯಾಕ್ಟ್‌ಲಿ ವರದಿ ಸ್ಪಷ್ಟಪಡಿಸಿದೆ.

ಇದು ಹಂತಹಂತವಾಗಿ ಬಿಡಿಸಿದ ಚಿತ್ರವನ್ನು ಎಡಿಟ್ ಮಾಡಿ ಹರಿಯಬಿಡಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಲ್ಲದೆ ಫೇಸ್‌ಬುಕ್ ಲೈವ್ ಮೂಲಕ ವಿಡಿಯೊ ಮಾಡಲು ನೂರ್ ಜಹಾನ್ ನಿರಾಕರಿಸಿದ್ದಾರೆ. ಹಾಗಾಗಿ ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸಿರುವುದಕ್ಕೆ ದಾಖಲೆಗಳಿಲ್ಲ ಎಂದು ಹೇಳಬಹುದಾಗಿದೆ.

ವರದಿ ಕೃಪೆ: ಏನ್‌ಸುದ್ದಿ.ಕಾಂ (ಕನ್ನಡದ ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್‌)

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...