Homeದಿಟನಾಗರಫ್ಯಾಕ್ಟ್‌ಚೆಕ್‌: ಪ್ರಧಾನಿ ಮೋದಿ ಟಾಯ್ಲೆಟ್‌‌ಗೆ ಕೂಡಾ ಕ್ಯಾಮರಾಮ್ಯಾನನ್ನು ಕರೆದುಕೊಂಡು ಹೋದರೆ?

ಫ್ಯಾಕ್ಟ್‌ಚೆಕ್‌: ಪ್ರಧಾನಿ ಮೋದಿ ಟಾಯ್ಲೆಟ್‌‌ಗೆ ಕೂಡಾ ಕ್ಯಾಮರಾಮ್ಯಾನನ್ನು ಕರೆದುಕೊಂಡು ಹೋದರೆ?

- Advertisement -
- Advertisement -

ಪ್ರಧಾನಿ ಮೋದಿಯವರು ವಾಷಿಂಗ್ ಬೇಸನ್‌ನಲ್ಲಿ ಕೈತೊಳೆಯುತ್ತಿರುವ ಪೋಟೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, “ಪ್ರಧಾನಿ ಮೋದಿ ಈಗ ತಮ್ಮ ಕ್ಯಾಮರಾಮನ್‌ನನ್ನು ಟಾಯ್ಲೆಟ್‌ಗೂ ಜೊತೆಯಲ್ಲಿ ಕರೆದುಕೊಂಡು ಹೋಗಿ ಫೋಟೋ ತೆಗೆಸಿಕೊಳ್ಳುತ್ತಾರೆ” ಎಂಬ ಹೇಳಿಕೆಯೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ವೈರಲ್ ಫೋಟೋದೊಂದಿಗೆ,“ಪ್ರಧಾನಿ ಮೋದಿಯವರು ಶೌಚಾಲಯದೊಳಗೆ ತಮ್ಮ ಕೈಗಳನ್ನು ಸ್ವಚ್ಛಗೊಳಿಸುತ್ತಿರುವ ದೃಶ್ಯವನ್ನು ಛಾಯಾಗ್ರಾಹಕರು ಸೆರೆಹಿಡಿದಿದ್ದಾರೆ” ಎಂಬ ಸಂದೇಶದೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಈಗ ಶೌಚಾಲಯದವರೆಗೂ ಕ್ಯಾಮರಾ ತಲುಪಿದೆ” ಎಂದು ವೈರಲ್ ಸಂದೇಶ ಹೇಳಿದೆ. ಇದನ್ನು 228 ಜನರು ಈವರೆ ಹಂಚಿಕೊಂಡಿದ್ದಾರೆ. ವಾಸ್ತವದಲ್ಲಿ ಈ ಚಿತ್ರ ಶೌಚಾಲಯದಲ್ಲಿ ಕ್ಲಿಕ್ ಮಾಡಿದ್ದೇ ಎಂಬುದನ್ನು ಪರಿಶೀಲಿಸೋಣ… | ಇದನ್ನೂ ಓದಿ: 2019ರ ಕೊಲ್ಕತ್ತಾ ರ್‍ಯಾಲಿ ವಿಡಿಯೊವನ್ನು ಮಂಗಳೂರಿನ ಕಾರ್ಯಕ್ರಮದೆಂದು ಬಿಂಬಿಸಿದ ಬಿಜೆಪಿ ನಾಯಕರು! |

ಫ್ಯಾಕ್ಟ್‌ಚೆಕ್

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಫೋಟೊವನ್ನು ಬಳಸಿಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಚಿತ್ರವೂ 20 ಡಿಸೆಂಬರ್ 2020 ರಂದು ‘ದಿ ಫ್ರೀ ಪ್ರೆಸ್ ಜರ್ನಲ್‘ ಪ್ರಕಟಿಸಿದ ಲೇಖನದಲ್ಲಿ ಕಂಡು ಬಂದಿದೆ.

ಈ ವರದಿಯ ಪ್ರಕಾರ, ಚಿತ್ರವೂ ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದಾಗ ಸೆರೆಹಿಡಿದಿರುವುದಾಗಿದೆ. ದೆಹಲಿಯ ರಾಕಬ್ ಗಂಜ್ ಸಾಹಿಬ್ ಗುರು ತೇಗ್ ಬಹದ್ದೂರ್ ಅವರ 400 ನೇ ಪ್ರಕಾಶ್ ಪರ್ವ್ ಸಂದರ್ಭದಲ್ಲಿ ಈ ಫೋಟೋಗಳನ್ನು ಕ್ಲಿಕ್ಕಿಸಲಾಗಿದೆ.

ಚಿತ್ರದಲ್ಲಿ, ಪ್ರಧಾನಿ ಮೋದಿ ತಮ್ಮ ಕೈಗಳನ್ನು ಸ್ವಚ್ಛಗೊಳಿಸುವ ವಾಷಿಂಗ್ ಬೇಸಿನ್ ಪಕ್ಕದಲ್ಲಿ ಮೆಟ್ಟಿಲುಗಳು ಕೂಡಾ ಕಾಣಿಸುತ್ತದೆ.

ಮೆಟ್ಟಿಲುಗಳ ಹಿನ್ನಲೆಯಲ್ಲಿ ಇದನ್ನು ಪರಿಶೀಲಿಸಿದಾಗ 2020 ರ ಡಿಸೆಂಬರ್‌ನಲ್ಲಿ ದೆಹಲಿಯ ಗುರುದ್ವಾರ ರಕಬ್ ಗಂಜ್ ಸಾಹಿಬ್‌ನ ಪ್ರವೇಶದ್ವಾರದಲ್ಲಿ ಪ್ರಧಾನಿ ಮೋದಿ ಕೈ ತೊಳೆಯುತ್ತಿದ್ದಾಗ ಈ ಚಿತ್ರವನ್ನು ಕ್ಲಿಕ್ ಮಾಡಲಾಗಿದೆ. | ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌: ನಟ ಅಮಿತಾಬ್ ಬಚ್ಚನ್‌ ದಾವೂದ್ ಇಬ್ರಾಹಿಂನನ್ನು ಭೇಟಿ ಆಗಿದ್ದು ನಿಜವೆ? |

ಪ್ರಧಾನಿ ಕೈ ತೊಳೆಯುತ್ತಿರುವ ಜಾಗವೂ ಗುರುದ್ವಾರದಲ್ಲಿ ಸಾರ್ವಜನಿಕವಾಗಿ ಕೈ ತೊಳೆಯುವ ಪ್ರದೇಶವಾಗಿದೆ. ಸಂಪ್ರದಾಯದಂತೆ ಗುರುದ್ವಾರಕ್ಕೆ ಪ್ರವೇಶಿಸುವ ಮೊದಲು ಭಕ್ತರು ಕೈಕಾಲು ತೊಳೆದು ನಂತರ ಪ್ರವೇಶಿಸುತ್ತಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರು ಗುರುದ್ವಾರದ ಪ್ರವೇಶದ್ವಾರದಲ್ಲಿ ಕೈ ತೊಳೆಯುತ್ತಿರುವ ಚಿತ್ರವನ್ನು, “ಪ್ರಧಾನಿಯ ಕ್ಯಾಮರಾ ಶೌಚಾಲಯದ ವರೆಗೆ ತಲುಪಿದೆ” ಎಂದು ಪ್ರಧಾನಿ ತಮ್ಮ ಕ್ಯಾಮರಾ ಮೆನ್‌ ಅನ್ನು ಶೌಚಾಲಯದ ಒಳಗೆ ಕೂಡಾ ಕರೆದುಕೊಂಡು ಹೋಗಿದ್ದಾರೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವದಲ್ಲಿ ಇದು ಗುರುದ್ವಾರ ಪ್ರವೇಶಕ್ಕೆ ಮುನ್ನ ಕೈತೊಳೆಯುತ್ತಿರುವ ವೇಳೆ ಕ್ಲಿಕ್ ಮಾಡಿರುವ ಚಿತ್ರವಾಗಿದೆ.
ಕೃಪೆ: ಫ್ಯಾಕ್ಟ್‌ಲಿ
ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: 1948 ರ ಒಲಂಪಿಕ್ಸ್‌ನಲ್ಲಿ ಭಾರತ ತಂಡ ಬರಿಗಾಲಿನಲ್ಲಿ ಫುಟ್‌ಬಾಲ್ ಆಡಿದ್ದು ಹಣದ ಕೊರತೆಯಿಂದಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಸಿದ್ದರಾಮಯ್ಯ ಸರ್ಕಾರ ಮುಸ್ಲಿಮರನ್ನು ಒಬಿಸಿ ಪಟ್ಟಿಗೆ ಸೇರಿಸಿದ್ದು ನಿಜಾನಾ?

0
ಕರ್ನಾಟಕದಲ್ಲಿ ಮುಸ್ಲಿಮರನ್ನು ಹಿಂದುಳಿದ ವರ್ಗಕ್ಕೆ ಸೇರಿಸುವ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದುಳಿದ ವರ್ಗಗಳ 36 ಜಾತಿಗಳಿಗೆ ಅನ್ಯಾಯ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ. ಸಿದ್ದರಾಮಯ್ಯ ಸರ್ಕಾರ ಹಿಂದುಳಿದ ವರ್ಗಗಳಿಗೆ...