ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಹಿಂದೂ ಧರ್ಮದ ಮೇಲೆ ಆಕ್ರಮಣ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಬಳಕೆದಾರರು ಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಫೇಸ್‌ಬುಕ್‌ನ ಬಳಕೆದಾರರೊಬ್ಬರು,”ಬಾಂಗ್ಲಾದಲ್ಲಿ ಮತ್ತೆ, ದೀದಿಯ ಪೊಲೀಸರು ಹಿಂದೂ ಧರ್ಮದ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸುತ್ತೇನೆ” ಎಂದು ಹೇಳಿಕೊಂಡಿದ್ದಾರೆ.

ಈ ಪೋಸ್ಟ್‌ನ ಆರ್ಕೈವ್ ಆವೃತ್ತಿಯನ್ನು ಇಲ್ಲಿ ನೋಡಬಹುದು. ಇದೇ ಹೇಳಿಕೆಯೊಡನೆ ಅನೇಕರು ಇದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್:
ಈ ಚಿತ್ರಗಳು ಬಿಹಾರದ ಮುಂಗೆರ್‌ನಲ್ಲಿ ನಡೆದ ಘಟನೆಯದ್ದಾಗಿದೆ. ಅಕ್ಟೋಬರ್ 26, ಸೋಮವಾರ ಬಿಹಾರದ ಮುಂಗೆರ್‌ನಲ್ಲಿ ದುರ್ಗಾ ಪೂಜಾ ಮೆರವಣಿಗೆಯ ವೇಳೆ ನಡೆದ ಘರ್ಷಣೆಯ ನಡುವೆ ಪೊಲೀಸರು ಗುಂಡು ಹಾರಿಸಿದ ನಂತರ ಅನುರಾಗ್ ಪೋದ್ದಾರ್ (25) ಸಾವನ್ನಪ್ಪಿದ್ದರು ಎಂದು ಕ್ವಿಂಟ್ ವರದಿ ಮಾಡಿದ್ದ ವೈರಲ್ ವೀಡಿಯೊದಲ್ಲಿ ಈ ಚಿತ್ರಗಳು ಕಂಡುಬಂದಿವೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹತ್ರಾಸ್ ಭೇಟಿಯ ಫೋಟೋದಲ್ಲಿ ಪ್ರಿಯಾಂಕಾ ಗಾಂಧಿ ಅಪ್ಪಿಕೊಂಡಿದ್ದ ಮಹಿಳೆ ಯಾರು?
ಜನಸಮೂಹವನ್ನು ಚದುರಿಸುವ ಪ್ರಯತ್ನದಲ್ಲಿ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ. ಜನಸಮೂಹವು ತನ್ನ ಕಡೆಯಿಂದ ಪ್ರತಿದಾಳಿ ನಡೆಸಿತು ಎಂದು ಪೊಲೀಸರು ಆರೋಪಿಸಿದ್ದಾರೆ.
ಪಂಡಲ್ ಸಂಘಟಕರು ಮತ್ತು ಪೊಲೀಸರ ನಡುವಿನ ಘರ್ಷಣೆಯಲ್ಲಿ ಸುಮಾರು 30 ಜನರು ಗಾಯಗೊಂಡಿದ್ದರು.
ಘಟನೆಯ ಅದೇ ದೃಶ್ಯಗಳನ್ನು ಹೊತ್ತ ಟೈಮ್ಸ್ ಆಫ್ ಇಂಡಿಯಾ ವರದಿಯು ಮುಂಗೆರ್ ಎಸ್‌ಪಿ ಲಿಪಿ ಸಿಂಗ್ ಅವರ ಹೇಳಿಕೆಯನ್ನು ಉಲ್ಲೇಖಿಸಿ, “ಘಟನೆಯ ಸಮಯದಲ್ಲಿ ಭದ್ರತಾ ಸಿಬ್ಬಂದಿಯ ಕಡೆಯಿಂದ ಯಾವುದೇ ಗುಂಡಿನ ದಾಳಿ ನಡೆದಿಲ್ಲ. ಹಿಂಸಾತ್ಮಕ ಪ್ರಚೋದನೆ ನೀಡುತ್ತಿದ್ದ ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ನಡೆಯಿತು. ಪೊಲೀಸರು ಗರಿಷ್ಠ ಸಂಯಮವನ್ನು ಕಾಯ್ದುಕೊಂಡಿದ್ದಾರೆ” ಎಂದು ವರದಿ ಮಾಡಿದೆ.
ಹಾಗಾಗಿ, ಈ ಘಟನೆ ನಡೆದದ್ದು ಪಶ್ಚಿಮ ಬಂಗಾಳದಲ್ಲಿ ಅಲ್ಲ. ಬದಲಿಗೆ ಬಿಹಾರದ ಮುಂಗೆರ್‌ನಲ್ಲಿ. ವರದಿಗಳ ಪ್ರಕಾರ ಒಬ್ಬ ವ್ಯಕ್ತಿಯನ್ನು ಮಾತ್ರ ಮೃತಪಟ್ಟನೆಂದು ಘೋಷಿಸಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ವಿಶ್ವದ ಏಳನೇ ಹೆಚ್ಚು ವಿದ್ಯಾವಂತ ನಾಯಕ ಎಂಬುದು ನಿಜವೇ?


