ಹತ್ರಾಸ್‌: ವೈರಲ್ ಆಗಿದ್ದ ಫೋಟೋದಲ್ಲಿ ಪ್ರಿಯಾಂಕಾ ಗಾಂಧಿ ಅಪ್ಪಿಕೊಂಡಿದ್ದ ಮಹಿಳೆ ಯಾರು?

ದೇಶದಲ್ಲಿ ಸಂಚಲನ ಮೂಡಿಸಿದ ಹತ್ರಾಸ್ ಪ್ರಕರಣದ ಸಂತ್ರಸ್ತ ಕುಟುಂಬಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭೇಟಿ ನಿಡಿ ಸಾಂತ್ವಾನ ಹೇಳಿದ್ದರು. ಅಲ್ಲಿ ತೆಗೆದಿದ್ದ ಸಾಂತ್ವಾನ ಹೇಳುತ್ತಿರುವ ಚಿತ್ರವನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡು, ಈ ಚಿತ್ರದಲ್ಲಿ ಪ್ರಿಯಾಂಕಾ ಗಾಂಧಿ ಅಪ್ಪಿಕೊಂಡಿದ್ದ ಮಹಿಳೆ ಸಂತ್ರಸ್ತೆಯ ಕುಟುಂಬದವರಲ್ಲ, ಬದಲಿಗೆ ಅಕೆ ಒಬ್ಬ ನಕ್ಸಲೈಟ್ ಎಂದು ಪ್ರತಿಪಾದಿಸಿದ್ದಾರೆ.

ಆಂಧ್ರಪ್ರದೇಶದ ಬಿಜೆಪಿಯ ಮಾಜಿ ಸಂಸದರಾದ ಗೀತಾ ಕೊತ್ತಪಲ್ಲಿ ಎಂಬುವವರು ಈ ಚಿತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಈ ಮಹಿಳೆ ಯಾರು? ಈಕೆ ಸಂತ್ರಸ್ತೆಯ ತಾಯಿಯಲ್ಲ, ಸಂತ್ರಸ್ತೆಯ ಮನೆಗೆ ಹೇಗೆ ಬಂದರು? ಪ್ರಿಯಾಂಕಾ ಅವರನ್ನು ಅಪ್ಪಿಕೊಳ್ಳಲು ಹೇಗೆ ಅವಕಾಶ ನೀಡಿದರು? ಇದೇ ಮಹಿಳೆಯನ್ನು ಬರ್ಖಾ ದತ್ (ವಾಷಿಂಗ್‌ಟನ್ ಪೋಸ್ಟ್‌ನ ಪತ್ರಕರ್ತರು) ಕೂಡಾ ಸಂದರ್ಶಿಸಿದ್ದಾರೆ… ಇದು ಯೋಜಿತ ಪಿತೂರಿಯಂತೆ ಕಾಣುತ್ತದೆ. ನಿಮ್ಮ ಅಭಿಪ್ರಾಯವೇನು? #FakeNaxalBhabhi” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌‌ಚೆಕ್‌‌: ಪಂಜಾಬ್‌‌ನ ಈ ಮಹಿಳಾ ಅಧಿಕಾರಿ ಮೃತಪಟ್ಟಿದ್ದು ಅತ್ಯಾಚಾರದಿಂದಲ್ಲ, ರಸ್ತೆ ಅಫಘಾತದಿಂದ

ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ರಾಷ್ಟ್ರೀಯ ಮೇಲ್ವಿಚಾರಕಿ ಪ್ರೀತಿ ಗಾಂಧಿ ಟ್ವೀಟ್ ಮಾಡಿ, “ಸಂತ್ರಸ್ತೆಯ ಭಾಭಿ ಎಂದು ಬಿಂಬಿಸಿಕೊಂಡಿರುವವರನ್ನು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅಪ್ಪಿಕೊಂಡು ಸಮಾಧಾನಪಡಿಸುತ್ತಿರುವುದು ನಕ್ಸಲ್ ಆಪರೇಟೀವ್‌ನ ಭಾಗ. ಸೆಪ್ಟಂಬರ್ 16 ರಿಂದ 22ರವರೆಗೆ ಸಂತ್ರಸ್ತೆಯ ಮನೆಯಲ್ಲಿಯೇ ಇದ್ದು, ಈಗ ನಿಗೂಢವಾಗಿ ಕಣ್ಮರೆಯಾಗಿದ್ದಾರೆ!! ಈ ಪಿತೂರಿಯ ಮಟ್ಟ ಭಯಾನಕವಾಗಿದೆ. #HthrasCase” ಎಂದು ಬರೆದುಕೊಂಡಿದ್ದಾರೆ. ಇವರು ಟ್ವಿಟ್ಟರ್‌ನಲ್ಲಿ ಸುಮಾರು 4.59 ಲಕ್ಷ ಅನುಯಾಯಿಗಳನ್ನು ಹೊಂದಿದ್ದಾರೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: 13 ವರ್ಷದ ಬಾಲಕಿಯನ್ನು ಮುಸ್ಲಿಂ ವ್ಯಕ್ತಿ ಅತ್ಯಾಚಾರ ಮಾಡಿ ಸುಟ್ಟಿದ್ದು ಸುಳ್ಳು!

ಕಳೆದ ಕೆಲವು ದಿನಗಳಿಂದ ಸಂತ್ರಸ್ತೆಯ ಕುಟುಂಬದವರು ಎಂದು ಹೇಳಿಕೊಂಡು ನಕ್ಸಲೈಟ್‌ ಒಬ್ಬರು ಕುಟುಂಬವನ್ನು ಸೇರಿಕೊಂಡಿದ್ದಾರೆ ಎಂದು ಆರೋಪಿಸಲಾಗಿದ್ದು, ಆ ನಕ್ಸಲೈಟ್‌ಗೆ ಸಾಂತ್ವಾನ ಹೇಳಲು ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಹತ್ರಾಸ್‌ಗೆ ಭೇಟಿ ನೀಡಿದ್ದರು ಎಂಬ ವದಂತಿಗಳು ಹರಿದಾಡುತ್ತಿವೆ ಎಂದು ಆಲ್ಟ್‌ ನ್ಯೂಸ್ ವರದಿ ಮಾಡಿದೆ.

ಫೇಸ್‌ಬುಕ್‌ನಲ್ಲಿ, ಸೋಶಿಯಲ್ ತಮಾಶಾ ಎಂಬ ಪುಟವು ಈ ಚಿತ್ರವನ್ನು ಹಂಚಿಕೊಂಡಿದ್ದು, “ನಕಲಿ ಅತ್ತಿಗೆಯೊಂದಿಗೆ ನಕಲಿ ಗಾಂಧಿ” ಎಂದು ಬರೆದಿದೆ. ಫೇಸ್‌ಬುಕ್‌ನ ಈ ಪುಟವು ಈ ಹಿಂದೆಯೂ ಅನೇಕ ಬಾರಿ ಸುಳ್ಳು ಮಾಹಿತಿಯನ್ನು ಹರಡಿದೆ.

ಇದನ್ನೂ ಓದಿ: ನರೇಂದ್ರ ಮೋದಿ ಗುಜರಾತ್‌ನಲ್ಲಿ ಕ್ರೂಸ್ ಹಡಗು ಸೇವೆಯನ್ನು ಪ್ರಾರಂಭಿಸಿದ್ದಾರೆಯೇ? ಇಲ್ಲಿದೆ ವಿವರ

ಹೀಗೆ ಸಾಮಾಜಿಕ ಮಾಧ್ಯಮಗಳು ಸೇರಿದಂತೆ, ಪರ್ಫಾರ್ಮ್ ಇಂಡಿಯಾ, ವಿಕೆ ನ್ಯೂಸ್, ಬೆಸ್ಟ್ ಹಿಂದಿ ನ್ಯೂಸ್ ಮತ್ತು ಹರಿಯಾಣ ಅಬ್ಟಾಕ್ ಸೇರಿದಂತೆ ಕೆಲವು ವೆಬ್‌ಸೈಟ್‌ಗಳೂ ಸಹ ಪ್ರಿಯಾಂಕಾ ಅಪ್ಪಿಕೊಂಡಿದ್ದ ಮಹಿಳೆ ಸಂತ್ರಸ್ತೆಯ ಸಂಬಂಧಿಯಲ್ಲ ಎಂಬ ಪ್ರತಿಪಾದನೆಯೊಂದಿಗೆ ವರದಿಗಳನ್ನು ಮಾಡಿವೆ.

ಫ್ಯಾಕ್ಟ್-ಚೆಕ್:

ಅಕ್ಟೋಬರ್ 3 ರಂದು ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾದರು. ಹಲವಾರು ಮಾಧ್ಯಮ ಸಂಸ್ಥೆಗಳು ಈ ಸಭೆಯ ಚಿತ್ರಗಳನ್ನು ಮತ್ತು ವಿಡಿಯೋ ತುಣುಕನ್ನು ಅಪ್‌ಲೋಡ್ ಮಾಡಿವೆ. ಅದೇ ದಿನ ನಡೆದ ಇಂಡಿಯಾ ಟುಡೆ ವರದಿಯ ಪ್ರಕಾರ ಪ್ರಿಯಾಂಕಾ ಗಾಂಧಿ ಹತ್ರಾಸ್ ಸಂತ್ರಸ್ತೆಯ ತಾಯಿಯನ್ನು ತಬ್ಬಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಂಗನಾಗೆ ಬೆಂಬಲ ನೀಡಲು ಮುಂಬೈಗೆ ಆಗಮಿಸಿತೆ ಕರ್ಣಿಸೇನಾ!: ಸತ್ಯಾಸತ್ಯತೆ ಏನು..?

ಸುದ್ದಿ ಸಂಸ್ಥೆ ಎಎನ್‌ಐ ಮತ್ತು ಪತ್ರಕರ್ತೆ ಮರಿಯಾ ಶಕಿಲ್ ಅವರು ಅಕ್ಟೋಬರ್ 3 ರಂದು, ಪ್ರಿಯಾಂಕಾ ಗಾಂಧಿ ಇಬ್ಬರು ಮಹಿಳೆಯರನ್ನು ಅಪ್ಪಿಕೊಂಡಿದ್ದ ವೀಡಿಯೊವನ್ನು ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಸಂತ್ರಸ್ತೆಯ ತಾಯಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು.

ಪ್ರಿಯಾಂಕಾ ಗಾಂಧಿ ವಾದ್ರಾ ನಿಜಕ್ಕೂ ಸಂತ್ರಸ್ತೆಯ ತಾಯಿಯನ್ನು ತಬ್ಬಿಕೊಳ್ಳುತ್ತಿದ್ದಾರೆ ಎಂಬುದನ್ನು ಸಂತ್ರಸ್ತೆಯ ತಾಯಿ ಧರಿಸಿರುವ ಸೀರೆಯ ಗುರುತಿನಿಂದ ಪತ್ತೆಮಾಡಬಹುದಾಗಿದೆ. ಚಿತ್ರದಲ್ಲಿ ಮಹಿಳೆಯ ಮುಖವನ್ನು ತೋರಿಸದ ಕಾರಣ, ಇತರ ಮಾಧ್ಯಮ ಸಂಸ್ಥೆಗಳು ಮತ್ತು ಅವರೊಂದಿಗೆ ಮಾತನಾಡಿದ ಪತ್ರಕರ್ತರು ಪಡೆದ ದೃಶ್ಯಗಳನ್ನು ಬಳಸಿದೆ.

ಅಕ್ಟೋಬರ್ 3 ರಂದು, ಬರ್ಖಾ ದತ್ ಸಂತ್ರಸ್ತೆಯ ತಾಯಿಯೊಂದಿಗಿರುವ ಚಿತ್ರವನ್ನು ಟ್ವೀಟ್ ಮಾಡಿದ್ದಾರೆ. ಇಲ್ಲಿ, ಪ್ರಿಯಾಂಕಾರನ್ನು ತಬ್ಬಿಕೊಳ್ಳುವಾಗ ಆಕೆ ಧರಿಸಿದ್ದ ಅದೇ ಸೀರೆಯಲ್ಲಿಯೇ ಕಾಣಿಸಿಕೊಂಡಿದ್ದಾರೆ. ಇಂಡಿಯಾ ಟುಡೆ ಸಹ ಅದೇ ದಿನ ಸಂತ್ರಸ್ತೆಯ ತಾಯಿ ಮತ್ತು ಸಹೋದರನೊಂದಿಗೆ ಮಾತನಾಡಿದೆ. ಈ ವೀಡಿಯೊದಲ್ಲೂ ಸಂತ್ರಸ್ತೆಯ ತಾಯಿ ಅದೇ ಸೀರೆ ಧರಿಸಿರುವುದು ಕಂಡುಬರುತ್ತದೆ.

ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

ಇದಲ್ಲದೆ, ಸಂತ್ರಸ್ತೆಯ ತಾಯಿಯನ್ನು ಸೆಪ್ಟೆಂಬರ್ 30 ರಂದು ಟೈಮ್ಸ್ ನೌ ಮಾಧ್ಯಮದವರು ಸಂದರ್ಶಿಸಿದರು. ಅಲ್ಲಿ ಅವರನ್ನು ಮತ್ತೆ ಅದೇ ಸೀರೆಯಲ್ಲಿ ಕಾಣಬಹುದು.

ಆದ್ದರಿಂದ, ವೈರಲ್ ಆಗುತ್ತಿರುವ ಫೋಟೋದಲ್ಲಿ ಪ್ರಿಯಾಂಕಾ ಗಾಂಧಿ ವಾದ್ರಾ ತಬ್ಬಿಕೊಳ್ಳುತ್ತಿರುವುದು ಸಂತ್ರಸ್ತೆಯ ತಾಯಿ ಎಂದು ಖಚಿತವಾಗಿ ಹೇಳಬಹುದು.

ಹತ್ರಾಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳ್ಳು ಸುದ್ದಿಗಳು ಹರಿದಾಡುತ್ತಿದ್ದು, ಅವುಗಳ ಸಾಲಿಗೆ ಈಗ ಮತ್ತೊಂದು ಸೇರ್ಪಡೆಯೇ ಈ ನಕ್ಸಲ್ ಸುದ್ದಿ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?

Donate

ಈ ಲೇಖನ, ಈ ವೆಬ್‌ಸೈಟ್ ನಿಮಗೆ ಇಷ್ಟವಾಯಿತೇ? ನಿಮ್ಮ ಬೆಂಬಲ ಇದಕ್ಕೆ ಅಗತ್ಯ.

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

+ posts

LEAVE A REPLY

Please enter your comment!
Please enter your name here