ಅರ್ಧ ಸುಟ್ಟು ಕರಕಲಾದ ಮಹಿಳೆಯ ದೇಹವೊಂದು ಪತ್ತೆಯಾಗಿದ್ದು, ರಾಜಸ್ಥಾನ ಮೂಲದ ನೆವಾಯ್ ಹಳ್ಳಿಯ 13 ವರ್ಷದ ಬಾಲಕಿಯನ್ನು ಅದೇ ಹಳ್ಳಿಯ ರಿಜ್ವಾನ್ ಎಂಬ ಮುಸ್ಲಿಂ ವ್ಯಕ್ತಿ ಅತ್ಯಾಚಾರ ಮಾಡಿ ಸುಟ್ಟುಹಾಕಿದ್ದಾನೆ ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಪಶ್ಚಿಮ ಬಂಗಾಳದಲ್ಲಿ ಮುಸ್ಲಿಮರು ಕಾಳಿ ದೇವಿಯ ಮೂರ್ತಿ ಸುಟ್ಟರೆ?
ಮುಸ್ಲಿಂ ವ್ಯಕ್ತಿ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಂದಿದ್ದಾನೆ ಎಂದು ಹಲವರು ಹಂಚಿಕೊಂಡಿರುವ ಈ ಪೋಸ್ಟ್ ಅನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಮುಸ್ಲಿಂ ಮದುವೆಯಲ್ಲಿ ಪಾಲ್ಗೊಂಡಿದ್ದಕ್ಕೆ ಕೇರಳದ RSS ಕಾರ್ಯಕರ್ತನ ಮೇಲೆ ಹಲ್ಲೆ ಮಾಡಲಾಯಿತೇ?
ಈ ಹೇಳಿಕೆಯೊಂದಿಗೆ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ಗಳಲ್ಲಿ ಹಲವಾರು ಬಳಕೆದಾರರು ಈ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಫ್ಯಾಕ್ಟ್‌ಚೆಕ್:
ಈ ಚಿತ್ರವನ್ನು ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಮಧ್ಯಪ್ರದೇಶದ ಸುದ್ಧಿ ಚಾನೆಲ್‌ಗಳಲ್ಲಿ ಇದೇ ಚಿತ್ರಗಳೊಂದಿಗೆ ವರದಿಯಾಗಿರುವ ಸುದ್ಧಿಗಳು ಕಂಡುಬಂದಿವೆ. ಇದನ್ನು ಮತ್ತಷ್ಟು ಪರಿಶೀಲಿಸಿದಾಗ, ಈ ಘಟನೆಯು ಮಧ್ಯಪ್ರದೇಶದ ಧಾರ್‌ನಲ್ಲಿರುವ ಗಾಂಧ್ವಾನಿ ಪ್ರದೇಶದಲ್ಲಿ ನಡೆದಿದ್ದೆಂದು ತಿಳಿದುಬಂದಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್ ವಿವರ
ಇದರ ಕುರಿತು ಹೆಚ್ಚಿನ ಮಾಹಿತಿ ತಿಳಿಯುವ ಸಲುವಾಗಿ ಎಸ್.ಪಿ ಆದಿತ್ಯ ಪ್ರತಾಪ್ ಸಿಂಗ್ ಅವರನ್ನು ಸಂಪರ್ಕಿಸಿದಾಗ, “ಈ ಘಟನೆಯು ಸೆ. 29 ರಂದು ನಡೆದಿದ್ದು, ಇದಕ್ಕೆ ಯಾವುದೇ ಕೋಮು ದೃಷ್ಟಿಕೋನಗಳಿಲ್ಲ. ಈಕೆಯನ್ನು ಕೊಲೆ ಮಾಡಿದ ನಂತರ ಸುಡಲಾಗಿದ್ದು, ಇಬ್ಬರು ಆರೋಪಿಗಳಲ್ಲಿ ಸೋಹನ್ ಲಾಲ್ ಎಂಬಾತನನ್ನು ಬಂಧಿಸಲಾಗಿದ್ದು, ಗೋವಿಂದ್ ಎಂಬಾತ ಪರಾರಿಯಾಗಿದ್ದಾನೆ” ಎಂದು ಹೇಳಿದರು.
ಮೃತ ಮಹಿಳೆ ಮತ್ತು ಆರೋಪಿಯ ನಡುವೆ ಹಣಕಾಸಿನ ವಿಚಾರಕ್ಕಾಗಿ ವಿವಾದ ಉಂಟಾಗಿದ್ದು, ಆರೋಪಿ ಬೇರೆ ಯುವತಿಯನ್ನು ವಿವಾಹವಾಗಿದ್ದ ಎಂದು ಎಸ್.ಪಿ ಹೇಳಿದರು.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಯುವತಿಯನ್ನು ಅಮಾನುಷವಾಗಿ ಕೊಲ್ಲುತ್ತಿರುವ ಈ ವಿಡಿಯೋ ಭಾರತದ್ದಲ್ಲ
ಇದಕ್ಕೆ ಸಂಬಂಧಿಸಿದಂತೆ ಸೆ.30 ರಂದು ಇಂಧೋರ್ ಸಮಾಚಾರ್ ಪತ್ರಿಕೆಯಲ್ಲಿ ಇದೇ ಚಿತ್ರದೊಂದಿಗೆ ಸುದ್ಧಿಯೊದು ಪ್ರಕಟವಾಗಿತ್ತು. ಅದೇ ವಿವರಗಳನ್ನು ಉಲ್ಲೇಖಿಸಿರುವ ಘಟನೆಯ ವೀಡಿಯೊ ವರದಿಯನ್ನು ಸಹ ಪತ್ತೆಯಾಗಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕೇಂದ್ರ ಸರ್ಕಾರ ಪ್ರತಿ ಹೆಣ್ಣು ಮಕ್ಕಳಿಗೆ ಮಾಸಿಕ ತಲಾ 2000 ರೂ. ನೀಡುತ್ತಿರುವುದು…
ಹಲವಾರು ಸುದ್ದಿ ವರದಿಗಳ ಪ್ರಕಾರ, ಪೊಲೀಸರು ಕೊಲೆ ಪ್ರಕರಣವನ್ನು ದಾಖಲಿಸಿ ತಮ್ಮ ತನಿಖೆಯನ್ನು ಪ್ರಾರಂಭಿಸಿದರು ಎಂದು ತಿಳಿದುಬಂದಿದೆ. ಪ್ರಕರಣದ ಇತರ ಸುದ್ದಿ ವರದಿಗಳು ಮಹಿಳೆಯನ್ನು ನರ್ಮದಾ ನಗರದ 30 ವರ್ಷದ ಕೇಸರ್ಬಾಯಿ ಎಂದು ಗುರುತಿಸಿವೆ.
ಹಾಗಾಗಿ ಇದರಿಂದ ಸ್ಪಷ್ಟವಾಗಿ ತಿಳಿದುಬರುವುದೇನೆಂದರೆ, ಮಧ್ಯಪ್ರದೇಶ ಮೂಲದ ಮಹಿಳೆಯ ಸುಟ್ಟ ಶವವನ್ನು ದಾರಿತಪ್ಪಿಸುವ ಮತ್ತು ಕೋಮು ದ್ವೇಷ ಹರಡುವ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಕಂಗನಾ ರಾಣಾವತ್ ಚುನಾವಣೆಯಲ್ಲಿ ಬಲವಂತವಾಗಿ ಶಿವಸೇನೆಗೆ ಮತ ಚಲಾಯಿಸಿದರೆ?