ಹತ್ರಾಸ್ ದಲಿತ ಯುವತಿಯ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಗೆ 1 ವರ್ಷ - ಸಂಪೂರ್ಣ ವಿವರ | NaanuGauri
PC:NDTV

ಹತ್ರಾಸ್‌‌ನಲ್ಲಿ ಅತ್ಯಾಚಾರಕ್ಕೊಳಗಾಗಿ ಮೃತಪಟ್ಟಿದ್ದ ದಲಿತ ಯುವತಿಯ ಶವವನ್ನು ’ರಾಜ್ಯದಲ್ಲಿ ದೊಡ್ಡ ಪ್ರಮಾಣದ ಹಿಂಸಾಚಾರ ನಡೆಯುವುದನ್ನು ತಪ್ಪಿಸುವುದಕ್ಕಾಗಿ ಬೇಕಾಗಿಯೇ’ ರಾತ್ರೋ ರಾತ್ರಿ ಸುಟ್ಟಿದ್ದೇವೆ ಎಂದು ಗುಪ್ತಚರ ಇಲಾಖೆಯ ಮಾಹಿತಿ ಉಲ್ಲೇಖಿಸಿ ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಪ್ರದೇಶ ಸರ್ಕಾರ ಸಮರ್ಥನೆ ಮಾಡಿಕೊಂಡಿದೆ

ಉತ್ತರ ಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ, “ಬಾಬರಿ ಮಸೀದಿ ತೀರ್ಪು ಬರುತ್ತಿದ್ದರಿಂದ ಜಿಲ್ಲೆಯಲ್ಲಿ ಹೈಅಲರ್ಟ್ ಘೋಷನೆಯಾಗಿತ್ತು. ಹಾಗಾಗಿ ಮುಂಜಾನೆ 2.30 ರಲ್ಲಿ ಅಂತ್ಯಕ್ರಿಯೆ ನಡೆಸಿದ್ದೇವೆ” ಎಂದು ಸಮರ್ಥಿಸಿಕೊಂಡಿದೆ.

ಇದನ್ನೂ ಓದಿ: ಹತ್ರಾಸ್‌: ಸಂತ್ರಸ್ಥೆಯ ಗುಪ್ತಾಂಗದಲ್ಲಿ ಆಳವಾದ ಗಾಯವಿದೆ; ಫೋರೆನ್ಸಿಕ್ ವರದಿ

“ಇಡೀ ಪ್ರಕರಣಕ್ಕೆ ಜಾತಿ/ಕೋಮು ಬಣ್ಣವನ್ನು ನೀಡಲಾಗುತ್ತಿದೆ ಹಾಗೂ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಧರಣಿ ನಡೆಯುತ್ತಿರುವ ಬಗ್ಗೆ ಸೆಪ್ಟೆಂಬರ್ 29 ರ ಬೆಳಿಗ್ಗೆಯಿಂದಲೆ ಹತ್ರಾಸ್‌ನಲ್ಲಿನ ಜಿಲ್ಲಾಡಳಿತವು ಹಲವಾರು ಗುಪ್ತಚರ ಮಾಹಿತಿಯನ್ನು ಪಡೆದಿತ್ತು” ಎಂದು ಉತ್ತರ ಪ್ರದೇಶ ಹೇಳಿದೆ.

ರಾಜಕೀಯ ಪಕ್ಷಗಳ ಬೆಂಬಲಿಗರೊಂದಿಗೆ ಎರಡೂ ಸಮುದಾಯಗಳ/ಜಾತಿಗಳ ಲಕ್ಷಾಂತರ ಪ್ರತಿಭಟನಾಕಾರರು ಹಾಗೂ ಮಾಧ್ಯಮಗಳು ಮರುದಿನ ಬೆಳಿಗ್ಗೆ ಹಳ್ಳಿಯಲ್ಲಿ ಒಟ್ಟುಗೂಡುತ್ತಾರೆ ಎಂಬ ಮಾಹಿತಿ ಸರ್ಕಾರಕ್ಕೆ ಲಭಿಸಿತ್ತು ಮತ್ತು ಇದು ಹಿಂಸಾಚಾರಕ್ಕೆ ಹಾಗೂ ಕಾನೂನು ಸುವ್ಯವಸ್ಥೆಗೆ ದಕ್ಕೆ ತರಬಹುದಾಗಿತ್ತು ಎಂದು ಸರ್ಕಾರ ಹೇಳಿದೆ.

ಅಷ್ಟೇ ಅಲ್ಲದೆ ಬಾಬ್ರಿ ಮಸೀದಿ ತೀರ್ಪು ಮತ್ತು ಕೊರೊನಾ ವೈರಸ್ ಸುರಕ್ಷತಾ ನಿಯಮಗಳಿಂದಾಗಿ ಅಲರ್ಟ್ ಕೂಡಾ ಇತ್ತು ಎಂದು ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ.

“ಇಂತಹ ಅಸಾಮಾನ್ಯ ಮತ್ತು ತೀವ್ರವಾದ ಸನ್ನಿವೇಶದಲ್ಲಿ, ಬೆಳಿಗ್ಗೆ ನಡೆಯುವ ದೊಡ್ಡ ಪ್ರಮಾಣದ ಹಿಂಸಾಚಾರವನ್ನು ತಪ್ಪಿಸಲು ಬೇಕಾಗಿಯೇ, ಯುವತಿ ಮೃತಪಟ್ಟು ಆಕೆಯ ಮರಣೋತ್ತರ ಪರೀಕ್ಷೆಯ 20 ಗಂಟೆಗಳ ನಂತರ ಎಲ್ಲಾ ಧಾರ್ಮಿಕ ವಿಧಿಗಳೊಂದಿಗೆ ಸಂತ್ರಸ್ತ ಕುಟುಂಬದ ಮನವೊಲಿಸಿ ಜಿಲ್ಲಾಡಳಿತವು ನಿರ್ಧಾರ ತೆಗೆದುಕೊಂಡಿತ್ತು” ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ಇದನ್ನೂ ಓದಿ: ಬಹುಜನರಿಗೆ ಬಂದೂಕು ನೀಡಿ: ಹತ್ರಾಸ್‌ಗೆ ಹೊರಟ ಭೀಮ್ ಆರ್ಮಿ ಮುಖ್ಯಸ್ಥ ಆಜಾದ್

“ಕೆಲವು ಪಟ್ಟಭದ್ರ ಹಿತಾಸಕ್ತಿಗಳಿಂದ ಉಂಟಾಗುವ ಯೋಜಿತ ಜಾತಿ ಸಂಘರ್ಷವನ್ನು ತಪ್ಪಿಸಲು ಮಾತ್ರವೆ ಶವಸಂಸ್ಕಾರವನ್ನು ತರಾತುರಿಯಲ್ಲಿ ಮಾಡಲಾಗಿತ್ತೇ ಹೊರತು, ಯಾವುದೇ ಕೆಟ್ಟ ಉದ್ದೇಶವಿಲ್ಲ” ಎಂದು ಅದು ನ್ಯಾಯಾಲಯಕ್ಕೆ ತಿಳಿಸಿದೆ.

ಕಳೆದ ಮಂಗಳವಾರ ಕುಟುಂಬದ ಅನುಪಸ್ಥಿತಿಯಲ್ಲಿ ಪೊಲೀಸರು ದಲಿತ ಯುವತಿಯ ದೇಹವನ್ನು ಸುಟ್ಟಿದ್ದು ದೇಶದಾದ್ಯಂತ ಭಾರಿ ಆಕ್ರೋಶ ವ್ಯಕ್ತವಾಗಿದೆ. ಯುಪಿ ಸರ್ಕಾರ ಸುಪ್ರೀಂನಲ್ಲಿ ಸಲ್ಲಿಸಿರುವ ಅಫಿಡವಿಡ್‌ಗೆ ವಿರುದ್ಧವಾಗಿ ಸಂತ್ರಸ್ತ ಕುಟುಂಬವು ಶವ ನೀಡುವಂತೆ ಗೋಗರೆಯುತ್ತಿರುವ ಮತ್ತು ಹತ್ರಾಸ್ ಜಿಲ್ಲಾಧಿಕಾರಿ ಸಂತ್ರಸ್ತೆಗೆ ತಂದೆಗೆ ಧಮಕಿ ಹಾಕುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು.

ಸೆಪ್ಟೆಂಬರ್ 14 ರಂದು ತನ್ನ ಗ್ರಾಮದ ನಾಲ್ಕು ಮೇಲ್ಜಾತಿಯವರಿಂದ ಹಲ್ಲೆ ಮತ್ತು ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಗಂಭೀರ ಗಾಯಗಳಿಂದಾಗಿ ದಲಿತ ಯುವತಿ ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

ಇದರ ನಂತರ ಯುಪಿ ಪೊಲೀಸರು ಯುವತಿಯ ಶವವನ್ನು ತೆಗೆದುಕೊಂಡು ಹತ್ರಾಸ್‌ಗೆ ಕೊಂಡೊಯ್ದಿದ್ದರು, ಶವವನ್ನು ಮನೆಗೆ ಕೊಂಡೊಯ್ಯಲು ಅನುಮತಿ ನೀಡುವಂತೆ ಆಕೆಯ ಕುಟುಂಬ ಪರಿಪರಿಯಾಗಿ ಬೇಡಿಕೊಂಡರು ಕೂಡಾ ಅದಕ್ಕೆ ಸಮ್ಮತಿಸದ ಪೊಲೀಸರು ಮನೆಯವರನ್ನು ಬಂಧಿಸಿ ಮಧ್ಯರಾತ್ರಿಯೇ ಶವವನ್ನು ಸುಟ್ಟಿದ್ದರು. ಈ ದೃಶ್ಯವನ್ನು ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು.

ಇದನ್ನೂ ಓದಿ: ಹತ್ರಾಸ್‌‌ ಅತ್ಯಾಚಾರ: ಸಂತ್ರಸ್ಥೆಯ ತಂದೆಗೆ ಧಮಕಿ ಹಾಕುತ್ತಿರುವ ಜಿಲ್ಲಾಧಿಕಾರಿ ವಿಡಿಯೋ ವೈರಲ್‌

LEAVE A REPLY

Please enter your comment!
Please enter your name here