ಮುಸಲ್ಮಾನರೊಂದಿಗೆ ವಾಗ್ವದ ಮಾಡಿದ್ದಕ್ಕಾಗಿ ಉತ್ತರ ಪ್ರದೇಶದ ಸುಲ್ತಾನಪುರದ ಅರ್ಚಕನನ್ನು ಕೊಲ್ಲಲಾಗಿದೆ ಎಂಬ ಸಂದೇಶದೊಂದಿಗೆ ಮರಕ್ಕೆ ನೇಣು ಹಾಕಿದ್ದ ವ್ಯಕ್ತಿಯ ಮೃತ ದೇಹದ ಚಿತ್ರವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಬಗ್ಗೆ ಸುಲ್ತಾನಪುರ ಜಿಲ್ಲೆಯ ಚಂದಾದ ಎಸ್‌ಎಚ್‌ಒ “ಇದು ಆತ್ಮಹತ್ಯೆ ಪ್ರಕರಣವಾಗಿದ್ದು, ಘಟನೆಗೆ ಯಾವುದೇ ಕೋಮು ಆಯಾಮವಿಲ್ಲ. ಮರಣೋತ್ತರ ವರದಿ ಕೂಡಾ ನೇಣು ಹಾಕಿ ಸಾವು ಉಂಟಾಗಿದೆ ಎನ್ನುತ್ತದೆ” ಎಂದು ತಿಳಿಸಿದ್ದಾರೆ.

ಚಿತ್ರದಲ್ಲಿ ವ್ಯಕ್ತಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿದ್ದು, ಚಿತ್ರದೊಂದಿಗೆ “ಸಾವನ್ ಪೂಜೆಗಾಗಿ ಮುಸ್ಲಿಮರೊಂದಿಗೆ ವಾಗ್ವಾದ ನಡೆಸಿದ ನಂತರ ಅವರ ದೇಹವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ’’ ಎಂಬ ಉಲ್ಲೇಖ ಮಾಡಲಾಗಿದೆ. ಇದನ್ನು ಹಲವಾರು ಜನರು ಹಾಗೆಯೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ.

ಇನ್ನು ಹಲವಾರು ಟ್ವಿಟ್ಟರ್ ಹಾಗೂ ಫೇಸ್‌ಬುಕ್ ಬಳಕೆದಾರರು ಅರ್ಚಕನನ್ನು ಕೊಲ್ಲಲಾಗಿದೆ ಎಂದು ಶಿರ್ಷಿಕೆ ನೀಡಿ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಮಾಸ್ಕ್ ಧರಿಸದ ಮೇಕೆ ಬಂಧಿಸಿದ ಕಾನ್ಪುರ ಪೊಲೀಸರು?- ತಪ್ಪು ವರದಿ ಮಾಡಿದ ಮಾಧ್ಯಮಗಳು
ಫ್ಯಾಕ್ಟ್‌ಚೆಕ್
ಸುಲ್ತಾನಪುರದ ಚಂದಾದ ಛಟೌನಾದಲ್ಲಿ ಈ ಘಟನೆ ನಡೆದಿದೆ ಎಂದು ಸುಲ್ತಾನಪುರ ಪೊಲೀಸರು ಈ ಘಟನೆಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಇದರಲ್ಲಿ ಅರ್ಚಕ ಸತ್ಯೇಂದ್ರ ನಂದ ಸರಸ್ವತಿ ಜಿ ಮಹಾರಾಜ್ ಅವರ ದೇಹವು ಮರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರು ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಟ್ವೀಟ್‌ನಲ್ಲಿ ತಿಳಿಸಲಾಗಿದೆ.
SHO चांदा द्वारा अवगत कराया गया कि ग्राम- छतौना में एक पत्ता बाबा मंदिर पर सतेन्द्रा नन्द सरस्वती जी महाराज उम्र-25वर्ष लगभग ने पेड़ की डाल में अंगौछा से फांसी लगाकर आत्महत्या कर ली ।पुलिस द्वारा पंचायतनामा की कार्यवाही कर शव को पोस्टमार्टम हेतु भेजा गया है।
— Sultanpur Police (@PROCell19) July 23, 2020
ಜುಲೈ 23 ರಂದು ನವಭಾರತ್ ಟೈಮ್ಸ್ ನಲ್ಲಿ ಪ್ರಕಟವಾದ ಲೇಖನದಲ್ಲಿ ಇದು ಆತ್ಮಹತ್ಯೆಯ ಪ್ರಕರಣವೋ ಅಥವಾ ಅರ್ಚಕ ಕೊಲೆಯಾಗಿದ್ದಾರೋ ಎಂದು ಸ್ಥಳೀಯರು ಚರ್ಚಿಸುತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಘಟನೆಯ ಬಗ್ಗೆ ಮಾತನಾಡಿದ ಚಂದಾದ ಪೊಲೀಸ್ ಠಾಣೆಯ ಎಸ್‌ಎಚ್‌ಒ, ಈ ಘಟನೆಗೆ ಯಾವುದೇ ಕೋಮು ಆಯಾಮವನ್ನು ನಿರಾಕರಿಸಿದ್ದಾರೆ ಮತ್ತು ಮರಣೋತ್ತರ ವರದಿಯು ಇದು ನೇಣು ಹಾಕುವ ಮೂಲಕ ಸಾವಾಗಿದೆ ಎಂದಿದೆ.
“ಇವು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ನಕಲಿ ನಿರೂಪಣೆಗಳು. ಇದು ಆತ್ಮಹತ್ಯೆಯ ಪ್ರಕರಣ. ಮರಣೋತ್ತರ ವರದಿಯಲ್ಲಿ ಅದು ನೇಣು ಬಿಗಿದು ಸಾವನ್ನಪ್ಪಿದ್ದಾರೆ ಎಂದು ಹೇಳುತ್ತದೆ. ಅವರ ಕುಟುಂಬ ಸದಸ್ಯರು ಕೂಡ ಬಂದಿದ್ದು, ಅವರು ತನಿಖೆಗೆ ಸಹಕರಿಸಿದ್ದಾರೆ. ಕುಟುಂಬ ಸದಸ್ಯರು ಕೂಡ ಈ ವಿಷಯದಲ್ಲಿ ಯಾರ ಮೇಲೂ ಆರೋಪ ಮಾಡಿಲ್ಲ. ವೈಯಕ್ತಿಕ ದ್ವೇಷದ ಕೋನವೂ ಇರಲಿಲ್ಲ,” ಎಂದು ಅವರು ಹೇಳಿದ್ದಾರೆ.
ಈ ವಿಷಯವು ಎರಡು ಸಮುದಾಯಗಳ ನಡುವೆ ನಡೆದದಲ್ಲ ಇದು ಆತ್ಮಹತ್ಯೆಯ ಪ್ರಕರಣವಾಗಿದೆ ಎಂದು ಸ್ಥಳೀಯ ವರದಿಗಳು ದೃಡಪಡಿಸಿದ್ದಾರೆ ಎಂದು ದಿ ಕ್ವಿಂಟ್ ಹೇಳಿದೆ.
ಓದಿ:
ಫ್ಯಾಕ್ಟ್‌ಚೆಕ್: ಈ ಫೋಟೋ ಅಂಗಾಂಗ ಕಳ್ಳಸಾಗಣೆ ದಂಧೆ ನಡೆಸುವವರದ್ದೇ?



