Homeಮುಖಪುಟತಂದೆಯ ಹತ್ಯೆ ನಂತರ ಬಂಧನಕ್ಕೊಳಗಾಗಿದ್ದ ಯುವತಿ ಜಾಮೀನಿನ ಮೇಲೆ ಬಿಡುಗಡೆ

ತಂದೆಯ ಹತ್ಯೆ ನಂತರ ಬಂಧನಕ್ಕೊಳಗಾಗಿದ್ದ ಯುವತಿ ಜಾಮೀನಿನ ಮೇಲೆ ಬಿಡುಗಡೆ

ಆಕೆಯ ವಿರುದ್ಧದ ಪ್ರಕರಣಕ್ಕೆ ಸೆಕ್ಷನ್ 100 (ಆತ್ಮರಕ್ಷಣೆ) ಸೇರಿಸಬಹುದೇ ಎಂದು ಪೊಲೀಸರು ಇನ್ನೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

- Advertisement -
- Advertisement -

ತನ್ನ ತಂದೆಯೊಂದಿಗೆ ಜಗಳವಾಡಿ ಕತ್ತರಿ ಚುಚ್ಚಿದ ನಂತರ ಬಂಧನಕ್ಕೊಳಗಾಗಿದ್ದ 15 ವರ್ಷದ ಬೆಂಗಳೂರು ಬಾಲಕಿಯನ್ನು ಒಂದು ವಾರದ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಆಕೆಯನ್ನು ಬಾಲಾಪರಾಧಿ ಜೈಲಿನಲ್ಲಿ ಇರಿಸಿದ್ದು, ಗುರುವಾರ ಬಾಲಾಪರಾಧಿ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಯಿತು. ಆ ಸಮಯದಲ್ಲಿ ಆಕೆಗೆ ಜಾಮೀನು ನೀಡಲಾಯಿತು.

ಜುಲೈ 23, ಗುರುವಾರ ಬಾಲಕಿಯನ್ನು ವಶಕ್ಕೆ ಪಡೆಯಲಾಯಿತು. ಆಕೆ, ತಂದೆಯ ಮೇಲೆ ಗಲಾಟೆಯ ಸಮಯದಲ್ಲಿ ಕತ್ತರಿಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಳು. ನಂತರ ಆಕೆಯ ತಂದೆ ಸಾವನ್ನಪ್ಪಿದ್ದರು.

ಐಪಿಸಿಯ ಸೆಕ್ಷನ್ 304 ರ ಅಡಿಯಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದು ಕೊಲೆಯ ಉದ್ದೇಶವಲ್ಲದ ನರಹತ್ಯೆಯಾಗಿದೆ ಎನ್ನಲಾಗಿದೆ.

ಜನವರಿಯಲ್ಲಿ ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಪ್ರಕಾರ, ಬಾಲಾಪರಾಧಿಗಳು ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುವ ಅಪರಾಧದ ಆರೋಪಗಳನ್ನು ಹೊತ್ತಿದ್ದರೆ, ಅದನ್ನು ‘ಘೋರ ಅಥವಾ ಗಂಭೀರ’ ಎಂದು ಪರಿಗಣಿಸಲಾಗುತ್ತದೆ.

ಐಪಿಸಿ  ಸೆಕ್ಷನ್ 304 ರ ಪ್ರಕಾರ ಗರಿಷ್ಠ 10 ವರ್ಷ ಶಿಕ್ಷೆ ವಿಧಿಸಲಾಗಿದ್ದರೂ, ಅದು ಕನಿಷ್ಠ ಶಿಕ್ಷೆಯನ್ನು ಸೂಚಿಸುವುದಿಲ್ಲ, ಆದ್ದರಿಂದ ಬಾಲಕಿ ಜಾಮೀನು ಪಡೆಯಲು ಅರ್ಹಳಾಗಿದ್ದಳು.

ಬಾಲಕಿ ಪ್ರಸ್ತುತ ತನ್ನ ಕುಟುಂಬಕ್ಕೆ ಮರಳಿದ್ದಾಳೆ. ಆಕೆಯ ಅಜ್ಜಿ ಮತ್ತು ಚಿಕ್ಕಪ್ಪ ಅವರೊಂದಿಗೆ ಇರಲು ಬೆಂಗಳೂರಿನಲ್ಲಿದ್ದಾಳೆ. ಈ ನಡುವೆ ಆಕೆಯ ವಿರುದ್ಧದ ಪ್ರಕರಣಕ್ಕೆ ಸೆಕ್ಷನ್ 100 (ಆತ್ಮರಕ್ಷಣೆ) ಸೇರಿಸಬಹುದೇ ಎಂದು ಪೊಲೀಸರು ಇನ್ನೂ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ

ಜುಲೈ 22 ರಂದು ರಾತ್ರಿ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಕುಟುಂಬವು ಈ ಹಿಂದೆ ತಿಳಿಸಿತ್ತು. ಬಾಲಕಿಯು ಪ್ರತಿನಿತ್ಯ ಅತಿಯಾಗಿ ಕುಡಿಯುತ್ತಿದ್ದ ತನ್ನ ತಂದೆಗೆ ಬುದ್ಧಿ ಹೇಳಲು ಪ್ರಯತ್ನಿಸಿದ್ದಳು. ತನ್ನ ಅಧ್ಯಯನಕ್ಕೆ ತೊಂದರೆಯಾಗುವಂತೆ ಜೋರಾಗಿ ಪಿಯಾನೋ ನುಡಿಸಬಾರದೆಂದು ಹೇಳಿದ್ದಳು ಎನ್ನಲಾಗಿದೆ.

ಇದರಿಂದ ಕೋಪಗೊಂಡು ಆಕೆಯ ತಂದೆ ಯುವತಿಯನ್ನು ಹೊಡೆದು ಆಕ್ರಮಣ ಮಾಡಲು ಪ್ರಯತ್ನಿಸಿದನು. ನಂತರ ತೀಕ್ಷ್ಣವಾದ ವಸ್ತುವನ್ನು ಎತ್ತಿಕೊಂಡನು. ತನ್ನನ್ನು ರಕ್ಷಿಸಿಕೊಳ್ಳಲು ಹುಡುಗಿ ಕೈಗೆ ಸಿಕ್ಕ ಕತ್ತರಿಗಳನ್ನು ತೆಗೆದುಕೊಂಡು ಚುಚ್ಚಿದ್ದಾಳೆ ಎಂದು ಕುಟುಂಬ ಹೇಳಿದೆ.

ಮತ್ತೊಂದು ಕೋಣೆಯಲ್ಲಿದ್ದ ಹುಡುಗಿಯ ಕಿರಿಯ ಸಹೋದರ ನೆರೆಹೊರೆಯವರನ್ನು ಕರೆತರಲು ಓಡಿಹೋದನು. ನಂತರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

ತಂದೆ ಕುಡಿಯುತ್ತಿದ್ದರು, ಆಗಾಗ್ಗೆ ಹಿಂಸೆ ನಿಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ನಮ್ಮ ತಾಯಿಯ ಮರಣದ ನಂತರ ಹೀಗೆ ಮಾಡುತ್ತಿದ್ದರು ಎಂದು ಕುಟುಂಬವು ತಿಳಿಸಿದೆ.

“ಅವನು ತುಂಬಾ ಓದಿದ್ದ ಮತ್ತು ಬುದ್ಧಿವಂತ. ಐಟಿ ಮೇಜರ್‌ನಲ್ಲಿ 12 ವರ್ಷಗಳ ಕಾಲ ಕೆಲಸ ಮಾಡಿದ ನಂತರ ಕೆಲಸ ಬಿಟ್ಟಿದ್ದ. 2011 ರ ಸುಮಾರಿಗೆ ಅವರ ಪತ್ನಿ ಎರಡನೇ ಮಗುವಿಗೆ ಜನ್ಮ ನಿಡಿದ್ದಳು. ಮಗುವಿಗೆ ಹತ್ತು ದಿನಗಳಿದ್ದಾಗ, ತಾಯಿ ತೀರಿಕೊಂಡಳು. ಇದು ಆತನ ಜೀವನದಲ್ಲಿ ಮಹತ್ವದ ತಿರುವು ಎಂದು ಸಂಬಂಧಿಯೊಬ್ಬರು ಹೇಳಿದ್ದಾರೆ.

ನೆರೆಹೊರೆಯವರು ತಮ್ಮ ಹೇಳಿಕೆಯಲ್ಲಿ ಇಬ್ಬರು ಮಕ್ಕಳು ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಹಾಗಾಗಿ ಸಹಾನುಭೂತಿಯ ದೃಷ್ಟಿಕೋನದಿಂದ ಕ್ರಮ ತೆಗೆದುಕೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ.


ಇದನ್ನೂ ಓದಿ: ವಾಡಿಕೆಯ ಆರೋಗ್ಯ ಪರೀಕ್ಷೆಗಾಗಿ ಸೋನಿಯಾ ಗಾಂಧಿ ಆಸ್ಪತ್ರೆಗೆ ದಾಖಲು

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅದೃಶ್ಯ ಮತದಾರರಿಗೆ ಮೋದಿ ಹೆದರುತ್ತಾರೆ, ಅದಕ್ಕಾಗಿಯೇ ಅವರು ಕಾಂಗ್ರೆಸ್‌ನ್ನು ಟೀಕಿಸುತ್ತಾರೆ: ಮಲ್ಲಿಕಾರ್ಜುನ ಖರ್ಗೆ

0
'ಲೋಕಸಭೆ ಚುನಾವಣೆಯ ಮೊದಲ ಸುತ್ತಿನ ಮತದಾನ ಮುಗಿದಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದೃಶ್ಯ ಮತದಾರರ ಭಯವಿದೆ, ಅದಕ್ಕಾಗಿಯೇ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ' ಎಂದು ಎಐಸಿಸಿ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಬುಧವಾರ...