Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌‌ಚೆಕ್: ಆರೆಸ್ಸೆಸ್ಸಿನ ಸ್ವಯಂ ಸೇವಕಿ ಪಾಕಿಸ್ತಾನದ ಕುಸ್ತಿಪಟುವಿಗೆ ಹೊಡೆದ್ದಾರೆಂದು ವೈರಲ್‌ ಆದ ಈ ವಿಡಿಯೊ ಸುಳ್ಳು!

ಫ್ಯಾಕ್ಟ್‌‌ಚೆಕ್: ಆರೆಸ್ಸೆಸ್ಸಿನ ಸ್ವಯಂ ಸೇವಕಿ ಪಾಕಿಸ್ತಾನದ ಕುಸ್ತಿಪಟುವಿಗೆ ಹೊಡೆದ್ದಾರೆಂದು ವೈರಲ್‌ ಆದ ಈ ವಿಡಿಯೊ ಸುಳ್ಳು!

- Advertisement -
- Advertisement -

ಮುಕ್ತ ಶೈಲಿಯ ಕುಸ್ತಿ ಸ್ಪರ್ಧೆಯಲ್ಲಿ ಇಬ್ಬರು ಮಹಿಳೆಯರು ಕುಸ್ತಿಯಾಡುತ್ತಿರುವ ವಿಡಿಯೊವನ್ನು, ‘‘ಪಾಕಿಸ್ತಾನದ ಕುಸ್ತಿ ಪಟು ಭಾರತವನ್ನು ನಿಂದಿಸಿದಾಗ ಆರೆಸ್ಸೆಸ್‌‌ನ ಅಂಗ ಸಂಸ್ಥೆ ದುರ್ಗಾ ವಾಹಿನಿಯ ಸ್ವಯಂ ಸೇವಕಿ ಸಂಧ್ಯಾ ಪಡಕೆ ಬಂದು ಅವರನ್ನು ಹೊಡೆದರು” ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಕೆಲವು ಪೋಸ್ಟ್‌ನಲ್ಲಿ“ ಪಾಕಿಸ್ತಾನಿ ಕುಸ್ತಿ ಪಟು ತನ್ನ ವಿರುದ್ದ ಹೋರಾಡಲು ಸವಾಲು ಹಾಕಿದರು, ಅವರನ್ನು ಆರೆಸ್ಸೆಸ್ಸಿನ ಸ್ವಯಂ ಸೇವಕಿ ಸಂಧ್ಯಾ ಪಡಕೆ ಹೊಡೆದರು” ಎಂದು ಕೂಡಾ ವೈರಲ್ ಆಗಿದೆ.

ಪೋಸ್ಟ್‌ನ ಆರ್ಕೈವ್ ಮಾಡಿದ ಆವೃತ್ತಿಯನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: Fact check: ಪೊಲೀಸ್ ವಿರುದ್ಧ ತಿರುಗಿಬಿದ್ದ ಪೂಜಾರಿ: ಹಿಗ್ಗಾಮುಗ್ಗಾ ಹೊಡೆದಿದ್ದು ನಿಜವಲ್ಲ!

ವಾಸ್ತವದಲ್ಲಿ, ಹರಿಯಾಣದ ಮಾಜಿ ಪೋಲಿಸ್ ಅಧಿಕಾರಿ ಕವಿತಾ ಮತ್ತು ಪವರ್ ಲಿಫ್ಟಿಂಗ್ ಹಾಗೂ ಎಂಎಂಎ ಚಾಂಪಿಯನ್ ಬುಲ್ ಬುಲ್ ಅವರ ನಡುವೆ ನಡೆದ ಕುಸ್ತಿಯಾಗಿದೆ ಈ ವಿಡಿಯೊ. ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್‌ಬುಲ್‌‌, ತನ್ನ ವಿರುದ್ಧ ಸೆಣಸಲು ಪ್ರೇಕ್ಷಕರಿಗೆ ಸವಾಲು ಹಾಕಿದಂತೆ ವೀಡಿಯೊದಲ್ಲಿ ತೋರಿಸಲಾಗುತ್ತದೆ.

ವೈರಲ್‌ ವಿಡಿಯೋ ಬಗ್ಗೆ ಸಂಬಂಧಿತ ಕೀವರ್ಡ್‌ಗಳೊಂದಿಗೆ ಇಂಟರ್‌ನೆಟ್‌ನಲ್ಲಿ ಹುಡುಕಿದಾಗ, ಅದೇ ವೀಡಿಯೊವನ್ನು ಮಾಜಿ WWE ಕುಸ್ತಿಪಟು ಖಲಿ (ದಲೀಪ್ ಸಿಂಗ್) ತನ್ನ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ 2016 ರಲ್ಲಿ ಹಂಚಿಕೊಂಡಿದ್ದರು.

ಈ ಪೋಸ್ಟ್‌ನಲ್ಲಿ ಸವಾಲೆಸೆಯುವ ಮಹಿಳೆಯನ್ನು (ಕಪ್ಪು ಬಣ್ಣದ ಬಟ್ಟೆ ಧರಿಸಿರುವ) ಬುಲ್ ಬುಲ್ ಗುರುತಿಸಲಾಗಿದೆ. ಮತ್ತೊಬ್ಬ ಮಹಿಳೆ (ಕೇಸರಿ ಸಲ್ವಾರ್-ಕಮೀಜ್‌ ಧರಿಸಿರುವ)ಯನ್ನು ಹರಿಯಾಣದ ಮಾಜಿ ಪೊಲೀಸ್ ಅಧಿಕಾರಿ ಮತ್ತು ಪವರ್-ಲಿಫ್ಟಿಂಗ್, ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಚಾಂಪಿಯನ್ ಕವಿತಾ ಎಂದು ಗುರುತಿಸಲಾಗಿದೆ. ವೈರಲ್‌ ಪೋಸ್ಟ್‌ನಲ್ಲಿ ಹೇಳಿರುವಂತೆ ಅವರ ಹೆಸರು ಸಂಧ್ಯಾ ಪಡಕೆ ಅಲ್ಲ.

ಅದೇ ವೀಡಿಯೊ ಬಗ್ಗೆ ವರದಿ ಮಾಡಿದ 2016 ರ ಸುದ್ದಿ ಲೇಖನದಲ್ಲಿ ಮಹಿಳೆಯರಿಬ್ಬರನ್ನು ಭಾರತದ ಮೊದಲ ವೃತ್ತಿಪರ ಮಹಿಳಾ ಕುಸ್ತಿಪಟು ಬುಲ್ ಬುಲ್ ಮತ್ತು ಹರ್ಯಾಣದ ಮಾಜಿ ಪೊಲೀಸ್ ಅಧಿಕಾರಿ ಕವಿತಾ ಮತ್ತು ಪವರ್-ಲಿಫ್ಟಿಂಗ್, ಎಂಎಂಎ (ಮಿಶ್ರ ಮಾರ್ಷಲ್ ಆರ್ಟ್ಸ್) ಚಾಂಪಿಯನ್ ಎಂದು ಗುರುತಿಸಿದೆ.

ಇದನ್ನೂ ಓದಿ: ಫ್ಯಾಕ್ಟ್‌ ಚೆಕ್: ಕೊವೀಡ್ ಲಸಿಕೆ ಪಡೆದ ಮೇಲೆ ಮ್ಯಾಗ್ನೆಟಿಕ್ (ಅಯಸ್ಕಾಂತೀಯ) ಶಕ್ತಿ ದೊರೆಯುತ್ತದೆಯೇ?

ಈ ವೀಡಿಯೊ ಬಗ್ಗೆಯೆ ವರದಿ ಮಾಡಿದ ಇನ್ನೊಂದು ಸದ್ದಿಯಲ್ಲಿ ಮಹಿಳೆಯರ ಗುರುತಿನ ಬಗ್ಗೆಯೂ ಅದೇ ಮಾತನ್ನು ಪುನರುಚ್ಚರಿಸಿದೆ. ಆದಾಗ್ಯೂ, ಈ ಯಾವುದೇ ಸುದ್ದಿ ಲೇಖನಗಳು ಈ ಯಾವುದೇ ಮಹಿಳೆಯರನ್ನು ಪಾಕಿಸ್ತಾನ ಅಥವಾ ಆರ್‌ಎಸ್‌ಎಸ್‌ಗೆ ಸಂಬಧದ ಬಗ್ಗೆ ಉಲ್ಲೇಖಿಸಿಲ್ಲ.

ಮತ್ತೊಂದು ವೀಡಿಯೊದಲ್ಲಿ, ಬುಲ್ ಬುಲ್ (ಕಪ್ಪು ಬಣ್ಣದ ಬಟ್ಟೆ ಧರಿಸಿರುವವರು) ಕವಿತಾ ದೇವಿಯ ಮೇಲೆ ಸೇಡು ತೀರಿಸಿಕೊಳ್ಳುವುದನ್ನು ಕಾಣಬಹುದು. ಆದುದರಿಂದ, ಈ ಎಲ್ಲ ಸಾಕ್ಷ್ಯಗಳು ಸೂಚಿಸುತ್ತಿರುವುದು ಏನೆಂದರೆ ಈ ಇಬ್ಬರೂ ಮಹಿಳೆಯರು ಪಾಕಿಸ್ತಾನದೊಂದಿಗೆಯೋ, ಆರೆಸ್ಸೆಸ್‌‌ನೊಂದಿಗೆಯೋ ಸಂಬಂಧ ಹೊಂದಿಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತೀಯ ಮಹಿಳಾ ಕುಸ್ತಿ ಪಂದ್ಯದ ಹಳೆಯ ವಿಡಿಯೋವನ್ನು ಪಾಕಿಸ್ತಾನದ ಕುಸ್ತಿಪಟುವನ್ನು ಆರೆಸ್ಸೆಸ್ ಸದಸ್ಯೆ ಹೊಡೆದರು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ಸೋನಿಯಾ ಗಾಂಧಿಯ ಎಡಿಟೆಡ್‌‌ ಚಿತ್ರವನ್ನು ಹಂಚುತ್ತಿರುವ ಬಿಜೆಪಿ

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಇದು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರವಲ್ಲ – ಬಿಹಾರದ ಹಳೆಯ ರಸ್ತೆಯ ಚಿತ್ರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹುಚ್ಚ ಸೂಳೆ ಮಕ್ಕಳ ಮೆದುಳಲ್ಲಿ ಸೆಗಣಿಯೇ ತುಂಬಿರುವಾಗ ಇಂತಹ fake news ಹಬ್ಬಿಸಿ ಮತೀಯ ದ್ವೇಷ, ಭಾರತ ಪಾಕಿಸ್ತಾನ ಮಧ್ಯೆ ಜನರಲ್ಲಿ ತಪ್ಪು ಕಲ್ಪನೆ ಮೂಡಿಸುವುದರಲ್ಲಿ ಈ ನಾಯಿಗಳು ನಿಸ್ಸೀಮರು.

LEAVE A REPLY

Please enter your comment!
Please enter your name here

- Advertisment -

ಒಳಮೀಸಲಾತಿ ಇಲ್ಲದೆ 56 ಸಾವಿರ ಹುದ್ದೆಗಳ ನೇಮಕಾತಿ ಇಲ್ಲ: ಸಚಿವ ಮುನಿಯಪ್ಪ

“ಒಳಮೀಸಲಾತಿ ಇಲ್ಲದೆ ಒಂದೇ ಒಂದು ಹುದ್ದೆಯನ್ನೂ ನೇಮಕ ಮಾಡಲು ಬಿಡುವುದಿಲ್ಲ, ಮುಖ್ಯಮಂತ್ರಿಗಳು ಈ ಬಗ್ಗೆ ಒಪ್ಪಿಕೊಂಡಿದ್ದಾರೆ. 27ರಂದು ನಡೆಯುವ ಸಚಿವ ಸಂಪುಟ ಸಭೆ ನಮಗೆ ಚಾರಿತ್ರಿಕವಾಗಲಿದೆ. ಮುಖ್ಯಮಂತ್ರಿಗಳ ಮೇಲೆ ವಿಶ್ವಾಸ ಇರಲಿ” ಎಂದು...

ಪಶ್ಚಿಮ ಏಷ್ಯಾ ಸಂಘರ್ಷ| ‘ಈ ಯುದ್ಧವನ್ನು ಕೊನೆಗೊಳಿಸಲು ಒಂದೇ ಮಾರ್ಗ…’: ಮೂರು ಷರತ್ತುಗಳನ್ನು ಮುಂದಿಟ್ಟ ಇರಾನ್

ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರು ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ನಡೆಯುತ್ತಿರುವ ಸಂಘರ್ಷವನ್ನು ಕೊನೆಗೊಳಿಸಲು ಮೂರು ಷರತ್ತುಗಳನ್ನು ನಿಗದಿಪಡಿಸಿದ್ದಾರೆ. ಇದರಲ್ಲಿ ದೇಶವು ಭವಿಷ್ಯದ ದಾಳಿಗಳನ್ನು ಎದುರಿಸುವುದಿಲ್ಲ ಎಂಬ ಖಾತರಿಗಳು ಸೇರಿವೆ. ಬುಧವಾರ ತಮ್ಮ...

ಖಾಸಗಿ ಜಾಗದ ನಮಾಝ್‌ಗೆ ಅಧಿಕಾರಿಗಳಿಂದ ಅಡ್ಡಿ : ಮುಸ್ಲಿಂ ವ್ಯಕ್ತಿಗೆ ಭದ್ರತೆ ಒದಗಿಸಲು ಕೋರ್ಟ್ ಆದೇಶ

ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಮುಸ್ಲಿಂ ವ್ಯಕ್ತಿಯೊಬ್ಬರು ತಮ್ಮ ಖಾಸಗಿ ಜಾಗದಲ್ಲಿ ಇತರರೊಂದಿಗೆ ನಮಾಝ್ ಮಾಡುವುದಕ್ಕೆ ಅಡ್ಡಿಪಡಿಸಲಾಗಿದೆ ಎಂದು ಆರೋಪಿಸಿದ ಹಿನ್ನೆಲೆ, ಅವರಿಗೆ ದಿನದ 24 ಗಂಟೆಯೂ ರಕ್ಷಣೆ ನೀಡಲು ಇಬ್ಬರು ಭದ್ರತಾ...

‘ಒಳಮೀಸಲಾತಿ ಜಾರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬಿಡುತ್ತಿಲ್ಲ’: ಮಂದಕೃಷ್ಣ ಮಾದಿಗ ಆರೋಪ

‘ಒಳಮೀಸಲಾತಿ ಜಾರಿಗೆ ತರುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಒಳಮೀಸಲಾತಿ ಅನುಷ್ಠಾನದಲ್ಲಿ ಮೀನಾಮೇಷ ಎಣಿಸುತ್ತಿದೆ. ಕಾಂಗ್ರೆಸ್ ನ ಹೈಕಮಾಂಡ್ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ. ಈ ಮೂವರನ್ನು ನಿಯಂತ್ರಿಸುವವರು ಕಾಂಗ್ರೆಸ್...

ಸಾವರ್ಕರ್ ಕುರಿತು ಹೇಳಿಕೆ : ರಾಹುಲ್ ಗಾಂಧಿ ವಿರುದ್ಧದ ಮಾನನಷ್ಟ ಮೊಕದ್ದಮೆ ರದ್ದು

ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ (2022ರಲ್ಲಿ) ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಕುರಿತು ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿದ್ದ ಮಾನನಷ್ಟ ಮೊಕದ್ದಮೆಯನ್ನು...

‘ಒಳಮೀಸಲಾತಿ ಜಾರಿಯಲ್ಲಿ ಸರ್ಕಾರ ನಿರ್ಲಕ್ಷ್ಯ ಧೋರಣೆ ತೋರಿದರೆ ಹೋರಾಟ ವಿಧಾನಸೌಧಕ್ಕೆ ಸ್ಥಳಾಂತರವಾಗುತ್ತದೆ’: ಮಾದರ ಚೆನ್ನಯ್ಯ ಸ್ವಾಮೀಜಿ

ಕಳೆದ 35 ವರ್ಷಗಳಿಂದ ಹಲವಾರು ಹೋರಾಟಗಾರರು ತಮ್ಮ ಜೀವ-ಜೀವನವನ್ನು ಅರ್ಪಿಸಿ, ಮನೆ-ಮಠವನ್ನು ಬಿಟ್ಟು ಒಳಮೀಸಲಾತಿ ಹೋರಾಟವನ್ನು ಅಂತಿಮ ಘಟ್ಟಕ್ಕೆ ತಂದಿದ್ದಾರೆ. ಅನೇಕರು ಬದುಕನ್ನು ಮಾತ್ರವಲ್ಲ, ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಇದು 2ನೇ ಸ್ವಾತಂತ್ರ್ಯ ಹೋರಾಟವಾಗಿದೆ....

ಎಸ್‌ಎನ್‌ಡಿಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವೆಳ್ಳಾಪ್ಪಳ್ಳಿ ನಟೇಶನ್ ಅನರ್ಹ

ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ ಯೋಗಂ) ನ ಪ್ರಧಾನ ಕಾರ್ಯದರ್ಶಿ ಮತ್ತು ಮತ್ತು ಎಸ್‌ಎನ್ ಟ್ರಸ್ಟ್‌ನ ಕಾರ್ಯದರ್ಶಿ ಸ್ಥಾನದಿಂದ ವೆಳ್ಳಾಪ್ಪಳ್ಳಿ ನಟೇಶನ್ ಅವರನ್ನು ಕೇರಳ ಹೈಕೋರ್ಟ್ ಗುರುವಾರ (ಮಾ.12) ಅನರ್ಹಗೊಳಿಸಿದ್ದು,...

‘ಫಾರೂಕ್ ಅಬ್ದುಲ್ಲಾರನ್ನು ಕೊಲ್ಲುವುದು ಸರ್ಕಾರದ ಉದ್ದೇಶವೇ?’..ರಾಜ್ಯ ಸಭೆಯಲ್ಲಿ ಖರ್ಗೆ ಪ್ರಶ್ನೆ

ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಪಕ್ಷದ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಅವರ ಹತ್ಯೆ ಯತ್ನ ವಿಚಾರವನ್ನು ವಿಪಕ್ಷ ಸದಸ್ಯರು ಗುರುವಾರ (ಮಾ.12) ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಘಟನೆ ಬಗ್ಗೆ...

56 ಸಾವಿರ ಹುದ್ದೆಗಳ ನೇಮಕಾತಿಯಲ್ಲಿ ಒಳಮೀಸಲಾತಿ ಅನ್ವಯಕ್ಕೆ ಆಗ್ರಹಿಸಿ ಎಡಗೈ ಸಮುದಾಯದಿಂದ ಬೃಹತ್ ಪ್ರತಿಭಟನೆ 

ಸರ್ಕಾರವು ಒಳ ಮೀಸಲಾತಿಯನ್ನು ತಪ್ಪಿಸುವ ಹುನ್ನಾರದಿಂದ ತರಾತುರಿಯಲ್ಲಿ 56,432 ಹುದ್ದೆಗಳ ನೇಮಕಾತಿಗೆ ಆದೇಶ ಹೊರಡಿಸಿದೆ. ನೇಮಕಾತಿಯಲ್ಲಿ ಒಳಮೀಸಲಾತಿ ಅಳವಡಿಸದೆ, ಎಡಗೈ ಸಮುದಾಯಗಳಿಗೆ ಸರ್ಕಾರ ಮತ್ತೆ ವಂಚಿಸುತ್ತಿದೆ ಎಂದು ‘ಒಳಮೀಸಲಾತಿ ಹೋರಾಟ ಸಮಿತಿ’ ಆರೋಪಿಸಿದೆ....

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧದ ಅವಿಶ್ವಾಸ ನಿರ್ಣಯಕ್ಕೆ ಸೋಲು

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ವಿರುದ್ಧ ವಿರೋಧ ಪಕ್ಷಗಳು ಮಂಡಿಸಿದ್ದ ಅವಿಶ್ವಾಸ ನಿರ್ಣಯವು ಬುಧವಾರ (ಮಾ.11) ಧ್ವನಿ ಮತದ ಮೂಲಕ ತಿರಸ್ಕಾರಗೊಂಡಿದೆ. ಸದನದಲ್ಲಿ ವಿರೋಧ ಪಕ್ಷಗಳ ತೀವ್ರ ಗದ್ದಲ ಮತ್ತು ಘೋಷಣೆಗಳ ನಡುವೆಯೇ ಸ್ಪೀಕರ್...