ಸಾಮಾಜಿಕ ಮಾಧ್ಯಮಗಳಲ್ಲಿ ಫ್ಯಾಕ್ಟ್‌ಚೆಕ್ ಘಟಕ ಸ್ಥಾಪಿಸುವ ಕೇಂದ್ರ ಸರ್ಕಾರದ ಪ್ರಯತ್ನವನ್ನು ಬಾಂಬೆ ಹೈಕೋರ್ಟ್ ತಳ್ಳಿಹಾಕಿದೆ. ಸ್ಟಾಂಡಪ್ ಕಾಮೆಡಿಯನ್ ಕುನಾಲ್ ಕಮ್ರಾ ಅವರು ಕೇಂದ್ರ ಸರ್ಕಾರದ ಈ ಕ್ರಮದ ವಿರುದ್ಧ ಅರ್ಜಿ ಸಲ್ಲಿಸಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಆನ್‌ಲೈನ್‌ನಲ್ಲಿ ನಕಲಿ ಸುದ್ದಿಗಳನ್ನು ಗುರುತಿಸಲು ಫ್ಯಾಕ್ಟ್‌ಚೆಕ್ ಘಟಕ (ಎಫ್‌ಸಿಯು) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವ ‘ಮಾಹಿತಿ ತಂತ್ರಜ್ಞಾನ ತಿದ್ದುಪಡಿ ನಿಯಮಗಳು- 2023’ ಕಾಯ್ದೆಯು, ಸಂವಿಧಾನದ 14 ಮತ್ತು 19 ನೇ ವಿಧಿಗಳಿಗೆ ವಿರುದ್ಧವಾಗಿದೆ ಎಂದು ನ್ಯಾಯಮೂರ್ತಿ ಎಎಸ್ ಚಂದೂರ್ಕರ್ ಹೇಳಿದ್ದಾರೆ.
ಇದನ್ನೂಓದಿ:‘ಲಡ್ಡು ತಯಾರಿಕೆಗೆ ಪ್ರಾಣಿಗಳ ಕೊಬ್ಬು ಬಳಸಿಲ್ಲ..’; ನಾಯ್ಡು ಆರೋಪ ನಿರಾಕರಿಸಿದ ಟಿಟಿಡಿ
“ನಾನು ವಿಷಯವನ್ನು ವ್ಯಾಪಕವಾಗಿ ಪರಿಗಣಿಸಿದ್ದೇನೆ. ಭಾರತ ಸಂವಿಧಾನದ 14 (ಸಮಾನತೆಯ ಹಕ್ಕು), 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಮತ್ತು 19 (1) (ಜಿ) (ಸ್ವಾತಂತ್ರ್ಯ ಮತ್ತು ವೃತ್ತಿಯ ಹಕ್ಕು) ಉಲ್ಲಂಘನೆಯ ನಿಯಮಗಳು ಇದರಲ್ಲಿ ಉಲ್ಲಂಘನೆಯಾಗಿದೆ” ಎಂದು ನ್ಯಾಯಮೂರ್ತಿ ಚಂದೂರ್ಕರ್ ಹೇಳಿದ್ದು, ಉದ್ದೇಶಿತ ಐಟಿ ತಿದ್ದುಪಡಿಗಳನ್ನು ತಳ್ಳಿಹಾಕಿದ್ದಾರೆ. ತಿದ್ದುಪಡಿಗಳು ಆರ್ಟಿಕಲ್ 21 ಅನ್ನು ಉಲ್ಲಂಘಿಸುತ್ತವೆ ಮತ್ತು “ಪ್ರಮಾಣೀಯತೆಯ ಪರೀಕ್ಷೆಯನ್ನು” ತೃಪ್ತಿಪಡಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
ಜನವರಿಯಲ್ಲಿ ಬಾಂಬೆ ಹೈಕೋರ್ಟ್‌ನ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ವಿಭಜನೆಯ ತೀರ್ಪು ನೀಡಿತ್ತು. ಆದ್ದರಿಂದ ಪ್ರಕರಣವು ಮೂರನೇ ನ್ಯಾಯಾಧೀಶರ ಬಳಿಗೆ ಹೋಗಿತ್ತು. ಆಗಸ್ಟ್‌ನಲ್ಲಿ ವಿಚಾರಣೆ ನಡೆಸಿದ್ದ ಬಾಂಬೆ ಹೈಕೋರ್ಟ್ ಈ ವಿಚಾರದಲ್ಲಿ ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
ನ್ಯಾಯಮೂರ್ತಿಗಳಾದ ಗೌತಮ್ ಪಟೇಲ್ ಮತ್ತು ನೀಲಾ ಗೋಖಲೆ ಅವರ ವಿಭಾಗೀಯ ಪೀಠವು ಜನವರಿಯಲ್ಲಿ ವಿಭಜನೆಯ ತೀರ್ಪು ನೀಡಿತು. ನ್ಯಾಯಮೂರ್ತಿ ಪಟೇಲ್ ಅವರು ನಿಯಮಗಳನ್ನು ರದ್ದುಗೊಳಿಸಿದರೆ, ನ್ಯಾಯಮೂರ್ತಿ ಗೋಖಲೆ ಅವುಗಳನ್ನು ಎತ್ತಿಹಿಡಿದರು. ನಿಯಮಗಳು ಸೆನ್ಸಾರ್‌ಶಿಪ್‌ಗೆ ಸಮಾನವೆಂದು ನ್ಯಾಯಮೂರ್ತಿ ಪಟೇಲ್ ಹೇಳಿದ್ದು, ನ್ಯಾಯಮೂರ್ತಿ ಗೋಖಲೆ ಅವರು, ಇದು ವಾಕ್ ಸ್ವಾತಂತ್ರ್ಯದ ಮೇಲೆ ಯಾವುದೇ “ಗಂಭೀರ ಪರಿಣಾಮ” ಬೀರುವುದಿಲ್ಲ ಎಂದು ಹೇಳಿದ್ದರು.
ಇದನ್ನೂಓದಿ: ವರ್ಷಕ್ಕೆ 6 ಮುಟ್ಟಿನ ರಜೆ ಜಾರಿ ಮಾಡಲಿರುವ ರಾಜ್ಯ ಸರ್ಕಾರ: ವರದಿ
ಮಾರ್ಚ್‌ನಲ್ಲಿ, ಸುಪ್ರೀಂ ಕೋರ್ಟ್ ತನ್ನ ಅಧಿಕೃತ ಫ್ಯಾಕ್ಟ್‌ಚೆಕ್ ಘಟಕದ (ಎಫ್‌ಸಿಯು) ಕಾರ್ಯಾಚರಣೆಯ ಸ್ಥಿತಿಯನ್ನು ಘೋಷಿಸುವ ಕೇಂದ್ರದ ಅಧಿಸೂಚನೆಗೆ ತಡೆ ನೀಡಿತ್ತು. ಈ ವಿಷಯದ ಸಾಂವಿಧಾನಿಕತೆಯ ಬಗ್ಗೆ ಬಾಂಬೆ ಹೈಕೋರ್ಟ್ ನಿರ್ಧರಿಸುವವರೆಗೆ ಕೇಂದ್ರ ಸರ್ಕಾರವು ಮುಂದುವರಿಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು.
ಕುನಾಲ್ ಕಮ್ರಾ ಮತ್ತು ಇತರ ಅರ್ಜಿದಾರರು ತಿದ್ದುಪಡಿಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಅಸಮಂಜಸವಾದ ನಿರ್ಬಂಧಗಳನ್ನು ಹಾಕುತ್ತವೆ ಎಂದು ಹೇಳಿ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. “ಕೇಂದ್ರ ಸರ್ಕಾರದ ಈ ನಿಬಂಧನೆಯು ಆನ್‌ಲೈನ್‌ನಲ್ಲಿ ಸರ್ಕಾರದ ನೇತೃತ್ವದ ಸೆನ್ಸಾರ್‌ಶಿಪ್‌ಗೆ ಕಾರಣವಾಗುತ್ತದೆ” ಎಂದು ಅರ್ಜಿದಾರರು ಆರೋಪಿಸಿದ್ದರು.
ತಿದ್ದುಪಡಿಗಳನ್ನು ಪ್ರಶ್ನಿಸಿ ಹಾಸ್ಯನಟ ಕುನಾಲ್ ಕಮ್ರಾ, ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ, ಅಸೋಸಿಯೇಷನ್ ಆಫ್ ಇಂಡಿಯನ್ ಮ್ಯಾಗಜೀನ್‌ಗಳು ಮತ್ತು ನ್ಯೂಸ್ ಬ್ರಾಡ್‌ಕಾಸ್ಟ್ ಮತ್ತು ಡಿಜಿಟಲ್ ಅಸೋಸಿಯೇಷನ್‌ಗಳು ಅರ್ಜಿಗಳನ್ನು ಸಲ್ಲಿಸಿದ್ದವು.
ವಿಡಿಯೊ ನೋಡಿ: ಸಿದ್ದರಾಮಯ್ಯ ವರ್ಸಸ್ ಸೋಮಣ್ಣ: ವರುಣಾ ಕ್ಷೇತ್ರದ ಮತದಾರರ ಮನದ ಮಾತು.


