Homeದಿಟನಾಗರಫ್ಯಾಕ್ಟ್‌ಚೆಕ್: ರಾಷ್ಟ್ರೀಯ ಹೆದ್ದಾರಿಗಳು, ವಾಹನಗಳ ಮೇಲೆ ಮುಸ್ಲಿಮರು ನಮಾಜ್ ಮಾಡಿದ್ದು ನಿಜವೇ..?

ಫ್ಯಾಕ್ಟ್‌ಚೆಕ್: ರಾಷ್ಟ್ರೀಯ ಹೆದ್ದಾರಿಗಳು, ವಾಹನಗಳ ಮೇಲೆ ಮುಸ್ಲಿಮರು ನಮಾಜ್ ಮಾಡಿದ್ದು ನಿಜವೇ..?

- Advertisement -
- Advertisement -

ದೆಹಲಿ- ಹರಿಯಾಣದ ಗಡಿಗೆ ಹೊಂದಿಕೊಂಡಿರುವ ಗುರುಗ್ರಾಮ್‌ನಲ್ಲಿ ಮುಸ್ಲಿಂ ಸಮುದಾಯದವರಿಗೆ ತೆರೆದ ಮೈದಾನದಲ್ಲಿ ನಮಾಜ್ ಮಾಡಲು ಕೆಲವು ಹಿಂದುತ್ವಾವಾದಿ ಗುಂಪುಗಳು ಮತ್ತು ನಗರದ ನಿವಾಸಿಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವರದಿಯಾಗುತ್ತಲೇ ಇದೆ. ಇದರ ನಡುವೆಯೇ ರಸ್ತೆ, ವಾಹನಗಳ ಮೇಲೆ ಸಾವಿರಾರು ಮಂದಿ ನಮಾಜ್ ಮಾಡುತ್ತಿರುವ ಚಿತ್ರವೊಂದು ವೈರಲ್ ಆಗಿದ್ದು, ಹಲವು ಮಂದಿ ಇದನ್ನು ಹಂಚಿಕೊಂಡಿದ್ದಾರೆ.

ರಸ್ತೆಯೊಂದರಲ್ಲಿ ಮತ್ತು ವಾಹನಗಳ ಮೇಲೆ ನಮಾಜ್ ಮಾಡುತ್ತಿರುವ ಮುಸ್ಲಿಂ ಸಮುದಾಯದ ದೊಡ್ಡ ಸಂಖ್ಯೆಯನ್ನು ತೋರಿಸುವ ಚಿತ್ರವನ್ನು ಹಂಚಿಕೊಂಡಿರುವ ಜನ, ಇದು ಭಾರತದ ಹೆದ್ದಾರಿಯಲ್ಲಿ ಶುಕ್ರವಾರದ ಪ್ರಾರ್ಥನೆ ನಡೆಯುತ್ತಿರುವ ದೃಶ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ.

ಚಿತ್ರವನ್ನು ಪೋಸ್ಟ್ ಮಾಡಿದ್ದ ತಾರೆಕ್ ಫತಾಹ್ ಎನ್ನುವವರು – ಟ್ವಿಟರ್‌ನಲ್ಲಿ 7.5 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. “ಶುಕ್ರವಾರದ ಪ್ರಾರ್ಥನೆ ಮಾಡಲು ಭಾರತದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಮಾಡಲಾಗಿದೆ. ಇದು ನನಗೆ ಪ್ರಾರ್ಥನೆಯಂತೆ ತೋರುತ್ತಿಲ್ಲ. ಇತರರನ್ನು ಬೆದರಿಸಲು ಮಾಡಿರುವ ಸಂಖ್ಯೆಗಳ ಪ್ರದರ್ಶನವಾಗಿದೆ” ಎಂದು ಆರೋಪಿಸಿದ್ದಾರೆ. ಈಗ ಈ ಟ್ವೀಟ್ ಅಳಿಸಲಾಗಿದೆ. ಆದರೆ ಪೋಸ್ಟ್‌ನ ಆರ್ಕೈವ್ ಇಲ್ಲಿ ನೋಡಬಹುದು.

ಇದನ್ನೂ ಓದಿ: ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಟ್ಯ್ರಾಪ್‌‌ ಮಾಡುತ್ತಿದ್ದಾರೆ ಎಂದು ತಪ್ಪಾಗಿ ವಿಡಿಯೊ ಶೇರ್‌ ಮಾಡಲಾಗುತ್ತಿದೆ

ಈ ಚಿತ್ರವನ್ನು ಗೂಗಲ್(Google) ಇಮೇಜ್ ಹುಡುಕಾಟದಲ್ಲಿ ಮತ್ತು ಬೇರೆ ಬೇರೆ ರೀತಿಯಲ್ಲಿ ಹುಡುಕಾಡಿದಾಗ ಇದು ಭಾರತದಲ್ಲ, ಬಾಂಗ್ಲಾದೇಶದ ಚಿತ್ರ ಎಂಬುದು ತಿಳಿದು ಬಂದಿದೆ.

ಈ ಚಿತ್ರವು ಬಾಂಗ್ಲಾದೇಶದ ಗಾಜಿಪುರದ ಪ್ರಮುಖ ಪಟ್ಟಣವಾದ ಟೋಂಗಿಯಲ್ಲಿ ನಡೆದ ಮುಸ್ಲಿಮರ ವಾರ್ಷಿಕ ಕಾರ್ಯಕ್ರಮ ಬಿಶ್ವಾ ಇಜ್ತೆಮಾದ (Bishwa Ijtema) ಚಿತ್ರವಾಗಿದೆ. ಬಿಶ್ವಾ ಇಜ್ತೆಮಾವನ್ನು ವಿಶ್ವದ ಅತಿದೊಡ್ಡ ಮುಸ್ಲಿಮರ ಸಭೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಈ ವೈರಲ್ ಚಿತ್ರದ ಉತ್ತಮ-ಗುಣಮಟ್ಟದ ಪೋಟೋವನ್ನು ಸರಿಯಾಗಿ ಗಮನಿಸಿದರೆ, ನಾವು ಬಾಂಗ್ಲಾದಲ್ಲಿ ಹಸಿರು ಬೋರ್ಡ್ ಅನ್ನು ನೋಡಬಹುದು. ಅದರ ಮೇಲೆ ಬಾಂಗ್ಲಾ ಭಾಷೆಯಲ್ಲಿ “ಬಿಸ್ವಾ ಇಜ್ತೆಮಾ, 2020” ಎಂದು ಬರೆಯಲಾಗಿದೆ. ಹಸಿರು ಬ್ಯಾನರ್‌ನ ಬಲಭಾಗದಲ್ಲಿ ಕಾಣುವ ಸಣ್ಣ ಕಾವಲು ಗೋಪುರದ ಮೇಲೆ ಬಾಂಗ್ಲಾ ಭಾಷೆಯಲ್ಲಿ “ಗಾಜಿಪುರ ಮೆಟ್ರೋಪಾಲಿಟನ್ ಪೋಲೀಸ್” ಎಂದು ಬರೆದಿರುವುದನ್ನು ಕಾಣಬಹುದು.

ಚಿತ್ರದಲ್ಲಿ ಕಂಡುಬರುವ ಕೆಂಪು ಡಬಲ್ ಡೆಕ್ಕರ್ ಬಸ್‌ನಲ್ಲಿ “BRTC” (ಬಾಂಗ್ಲಾದೇಶ ರಸ್ತೆ ಸಾರಿಗೆ ಸಂಸ್ಥೆ) ಎಂದು ಬರೆಯಲಾಗಿದೆ. ಈ ಬಸ್ಸಿನ ಹಿಂದಿನ ಕೆಂಪು ಬೋರ್ಡ್‌ನಲ್ಲಿ “ಮೋತಿಝೀಲ್-ಫಾರ್ಮ್ ಗೇಟ್, ಸ್ಟೇಷನ್ ರೋಡ್ (ಮಾರ್ಗ)” ಎಂದು ಬಾಂಗ್ಲಾ ಭಾಷೆಯಲ್ಲಿ ಬರೆಯಲಾಗಿದೆ. Google Maps ನಲ್ಲಿ ಈ ಮಾರ್ಗವನ್ನು ಹುಡುಕಾಡಿದರೆ ಅದು ಬಾಂಗ್ಲಾದೇಶದಲ್ಲಿನ ಸ್ಥಳವನ್ನು ತೋರಿಸುತ್ತದೆ.

ಅಲ್ಲದೆ, “ಫೈನ್ ಆರ್ಟ್ ಅಮೆರಿಕಾ” ಸೈಟ್ ಒದಗಿಸಿದ ಮಾಹಿತಿಯ ಪ್ರಕಾರ, ವೈಮಾನಿಕ ಛಾಯಾಗ್ರಹಣಕ್ಕೆ ಹೆಸರುವಾಸಿಯಾದ ಬಾಂಗ್ಲಾದೇಶದ ಛಾಯಾಗ್ರಾಹಕ ಅಜೀಮ್ ಖಾನ್ ರೋನಿ ಅವರು ಚಿತ್ರವನ್ನು ಕ್ಲಿಕ್ ಮಾಡಿದ್ದಾರೆ ಎಂದು ಮಾಹಿತಿ ದೊರೆತಿದೆ. ಅಜೀಮ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ಅನೇಕ ಚಿತ್ರಗಳು ಇದೇ ಚಿತ್ರವನ್ನು ಹೋಲಿವುದನ್ನು ಕಾಣಬಹುದು.

ಹೀಗಾಗಿ ಭಾರತದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟುಮಾಡಿ ನಮಾಜ್ ಮಾಡುತ್ತಿದ್ದಾರೆ ಎಂದಿರುವ ಪ್ರತಿಪಾದನೆ ತಪ್ಪಾಗಿದೆ. ಈ ಚಿತ್ರವು ಬಾಂಗ್ಲಾದೇಶದ ಧಾರ್ಮಿಕ ಸಭೆಯ ಚಿತ್ರ ಎಂಬುದು ಸ್ಪಷ್ಟವಾಗಿದೆ.


ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಆಹಾರದ ಮೇಲೆ ಉಗುಳುವುದು ಹಲಾಲ್‌ನ ಭಾಗವೆಂದು ಮುಸ್ಲಿಮರು ನ್ಯಾಯಾಲಯದಲ್ಲಿ ಒಪ್ಪಿಕೊಂಡಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಕರ್ನಾಟಕದಲ್ಲಿ ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ಮುಸ್ಲಿಮರಿಗೆ ನೀಡಿದ್ದ ಮೀಸಲಾತಿ ರದ್ದುಪಡಿಸಿದ್ದೇವೆ ಎಂಬ...

0
"ಕಾಂಗ್ರೆಸ್ ಸಂವಿಧಾನವನ್ನು ಗೌರವಿಸಲಿಲ್ಲ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಲಿಲ್ಲ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಮೂಲಕ ನಮಗೆ ಅವಕಾಶ ಸಿಕ್ಕಾಗ ನಾವು ಮಾಡಿದ ಮೊದಲ ಕೆಲಸವೆಂದರೆ, ಎಸ್‌ಸಿ, ಎಸ್‌ಟಿಗಳಿಂದ ಕಿತ್ತುಕೊಂಡು ನೀಡಿದ್ದ ಮುಸ್ಲಿಂ...