Homeಮುಖಪುಟರೈತ ಹೋರಾಟ ಗೆದ್ದದ್ದು - ಗೆಲ್ಲಬೇಕಾದ್ದು

ರೈತ ಹೋರಾಟ ಗೆದ್ದದ್ದು – ಗೆಲ್ಲಬೇಕಾದ್ದು

- Advertisement -
- Advertisement -

ರೈತ ಚಳವಳಿ ಒಂದು ವರ್ಷ ತಲುಪುವ ಕೆಲ ವಾರಗಳ ಮುಂಚೆಯೇ ಹೊಸ ರೂಪ ಪಡೆದಿದೆ. ಸರ್ಕಾರ ಈ ರೀತಿ ರೈತರ ಬೇಡಿಕೆಗಳಿಗೆ ಬಾಗುತ್ತದೆ ಎಂದು ಬಹಳ ಜನ ಭಾವಿಸಿರಲಿಲ್ಲ. ಆದರೆ ಸರ್ಕಾರವು ಬಾಗಿದಂತೆ ಮಾಡಿ ರೈತ ಚಳವಳಿಗೆ ಮತ್ತಿಷ್ಟು ಸವಾಲುಗಳನ್ನು ತಂದಿಟ್ಟಿದೆ. ಒಂದು ವರ್ಷ ಹೋರಾಡಿ ಮೊದಲಿದ್ದ ಸ್ಥಿತಿಗೆ ವ್ಯವಸ್ಥೆಯನ್ನು ತರಲಾಗಿದೆ ಅಷ್ಟೆ. ಉಳಿದ ಬೇಡಿಕೆಗಳ ಬಗ್ಗೆ ಸರ್ಕಾರ ಸಕಾರಾತ್ಮಕ ತೀರ್ಮಾನ ತೆಗೆದುಕೊಂಡರಷ್ಟೇ ಅದು ರೈತರ ಪರ ತೀರ್ಮಾನವಾಗುತ್ತಿತ್ತು. ಮೂರು ಮಸೂದೆಗಳನ್ನು ಹಿಂಪಡೆಯುವ ಸರ್ಕಾರದ ನಿರ್ಧಾರ ರೈತರಿಗೆ ಹೊಸ ಲಾಭವನ್ನೇನೂ ತಂದಿಲ್ಲ.

ಸರ್ಕಾರದ ಈ ತೀರ್ಮಾನಕ್ಕೆ ಮುಂದೆ ಇರುವ ಉತ್ತರ ಪ್ರದೇಶ, ಪಂಜಾಬ್ ಚುನಾವಣೆಗಳೇ ಕಾರಣ ಎಂಬುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಇತ್ತೀಚಗಷ್ಟೇ ನಡೆದ ಮರುಚುನಾವಣೆಯ ಅನುಭವ ಕೂಡ ಈ ತೀರ್ಮಾನಕ್ಕೆ ಒತ್ತಡ ತಂದಿದೆ. ಒಂದು ವರ್ಷದ ಕಾಲ ದೆಹಲಿಯ ರಸ್ತೆಗಳಲ್ಲಿ ಉಳಿದ ಲಕ್ಷಾಂತರ ರೈತರ ಒತ್ತಾಯಕ್ಕೆ ಮಣಿದು ಸರ್ಕಾರ ಈ ತೀರ್ಮಾನ ತೆಗೆದುಕೊಂಡಿಲ್ಲ. ತಮ್ಮ ತೀರ್ಮಾನ ರೈತರ ಪರವಾಗಿ ಇರಲಿಲ್ಲವೇನೋ ಎಂದು ಅವರಿಗೆ ಅನಿಸಿಲ್ಲ. ಬದಲಿಗೆ ರೈತರ ಮನವೊಲಿಸಲು ನಾವು ಸೋತಿದ್ದೇವೆ ಎಂದು ಮೋದಿಯವರು ಹೇಳಿದ್ದಾರೆ.

ಒಂದು ವರ್ಷದ ಕಾಲ ಲಕ್ಷಾಂತರ ರೈತರು ಹೋರಾಟದಲ್ಲಿ ತೊಡಗಿದ್ದು ಚಾರಿತ್ರಿಕವಾದುದು. ಇಂತಹ ಚಳವಳಿಯೊಂದು ಹಿಂದೆ ಎಂದೂ ನಡೆದಿಲ್ಲ. ಚಳವಳಿಯನ್ನು ಪ್ರಾರಂಭಿಸುವ ಮುಂಚೆ ಪಂಜಾಬಿನ ರೈತ ಸಂಘಟನೆಗಳೆಲ್ಲವೂ ಸಂಯುಕ್ತ ಕಿಸಾನ್ ಮೋರ್ಚ ಹೆಸರಿನಲ್ಲಿ ಒಗ್ಗೂಡಿದವು. ದೇಶದ 40ಕ್ಕೂ ಹೆಚ್ಚು ರೈತ ಸಂಘಟನೆಗಳು ಒಗ್ಗಟ್ಟಾಗಿ ಹೋರಾಟ ನಡೆಸಲು ತೀರ್ಮಾನಿಸಿದ್ದು ಬಹಳ ದೊಡ್ಡ ಶಕ್ತಿಯನ್ನು ಹೋರಾಟಕ್ಕೆ ತಂದುಕೊಟ್ಟಿತು. ಈ ಎಲ್ಲ ರೈತ ಸಂಘಟನೆಗಳನ್ನು ಒಂದೇ ಉದ್ದೇಶಕ್ಕಾಗಿ ಒಟ್ಟಿಗೆ ತಂದು, ಮೇಲು- ಕೀಳು ಎಂಬ ಭಾವನೆ ಇರದಂತೆ ಮಾಡಿದ್ದು ಕಡಿಮೆ ಸಾಧನೆ ಏನಲ್ಲ. ಇಡೀ ಚಳವಳಿಯಲ್ಲಿ ಒಬ್ಬ ನಾಯಕನ ಹೆಸರು ಎಂದೂ ಕೇಳಿಬಂದಿಲ್ಲ. ಬದಲಿಗೆ ಸಾಮೂಹಿಕ ನಾಯಕತ್ವ ಕಂಡುಬರುತ್ತಿರುವುದು ವಿಶೇಷವಾಗಿದೆ. ಸಾಮೂಹಿಕ ನಾಯಕತ್ವ ತಾನೇ ಹಾಕಿಕೊಂಡಿರುವ ನೀತಿನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾ ಬಂದಿರುವುದು ಗಮನಾರ್ಹ. ಲಖಿಂಪುರ ಖೇರಿಯ ಘಟನೆಯ ನಂತರ ಹೋರಾಟದಲ್ಲಿ ಮಂಚೂಣಿಯಲ್ಲಿರುವ ಯೋಗೇಂದ್ರ ಯಾದವ್ ಅವರ ಮೇಲೆ ಶಿಸ್ತಿನ ಕ್ರಮಕೈಗೊಂಡಿದ್ದು, ಕೆಲವು ವಾರಗಳ ಕಾಲ ಅವರು ಚಳವಳಿಯಿಂದ ಹಿಂದೆ ಸರಿದದ್ದು, ಈ ಕ್ರಮವನ್ನು ಸ್ವತಃ ಯೋಗೇಂದ್ರ ಯಾದವ್ ಅವರು ಸಕಾರಾತ್ಮಕವಾಗಿ ಸ್ವೀಕರಿಸಿ ಪಾಲಿಸಿದ್ದು ಬಹಳ ವಿಶೇಷ. ಇಂತಹ ಶಿಸ್ತುಗಳು ಮತ್ತು ಅವುಗಳನ್ನು ಸ್ವಯಂಸ್ಪೂರ್ತಿಯಿಂದ ಪಾಲಿಸುವ ಗುಣ ಇಂದಿನ ಯಾವ ಚಳವಳಿಗಳಲ್ಲೂ ಕಂಡಿರಲಿಲ್ಲ.

ಮತ್ತೊಂದು ವಿಶೇಷವೆಂದರೆ ಎಷ್ಟೇ ಕಷ್ಟ ಬಂದರೂ ರೈತರು ತಮ್ಮ ಹೋರಾಟವನ್ನು ಅಹಿಂಸಾತ್ಮಕವಾಗಿ ತೆಗೆದುಕೊಂಡು ಹೋಗುತ್ತಿರುವುದು. ಹೋರಾಟದ ವಿರೋಧಿಗಳು ಹಿಂಸೆಯನ್ನು ಹುಟ್ಟುಹಾಕಲು ಮಾಡಿದ ಪ್ರಯತ್ನವೆಲ್ಲಕ್ಕೂ ಹೋರಾಟಗಾರರು ಅಹಿಂಸಾತ್ಮಕವಾಗಿ ಉತ್ತರಕೊಡುತ್ತಾ ಬಂದದ್ದು ಈ ಹೋರಾಟದ ದೊಡ್ಡ ಶಕ್ತಿ. ಜನವರಿ 26ರಂದು ಅತ್ಯಂತ ಶಿಸ್ತಿನಿಂದ ನಡೆಯುತ್ತಿದ್ದ ರೈತ ಪರೇಡ್‌ನಲ್ಲಿದ್ದ ಒಂದು ಗುಂಪು ಹೋರಾಟವನ್ನು ದಾರಿತಪ್ಪಿಸಲೆಂದೇ ಕೆಂಪುಕೋಟೆಯ ಮೇಲೆ ಸಿಖ್ ಧಾರ್ಮಿಕ ಬಾವುಟ ಹಾರಿಸಿ ಚಳವಳಿಗೆ ಕೆಟ್ಟ ಹೆಸರು ತರಲು ಪ್ರಯತ್ನಿಸಿತು. ಖಲಿಸ್ಥಾನಿಗಳು ಸೇರಿದ್ದಾರೆ ಎಂದು ಗುಲ್ಲೆಬ್ಬಿಸಿ ಚಳವಳಿಯನ್ನು ಮುರಿಯಲು ಮಾಡಿದ ಪ್ರಯತ್ನವೇ ಆಗಲಿ, ಟೂಲ್‌ಕಿಟ್ ಆಪಾದನೆಯಾಗಲೀ, ರೈತ ಹೋರಾಟವು ಅವುಗಳನ್ನು ಎದುರಿಸಿದ ಮತ್ತು ಸ್ಪಂದಿಸಿದ ರೀತಿಯನ್ನು ಮೆಚ್ಚಬೇಕು. ಪ್ರತಿ ನಿಮಿಷವೂ ಚಳವಳಿಯನ್ನು ಮುರಿದುಹಾಕಲು ಹೊರಗಿನಿಂದ ನಡೆಯುತ್ತಿರುವ ಪಿತೂರಿಗಳು ಒಂದು ಕಡೆಯಾದರೆ, ಹಿಂಸೆಯ ಹುನ್ನಾರಕ್ಕೆ ಹಾತೊರೆದು ರೈತರನ್ನೆಲ್ಲಾ ಹೊಡೆದು ಓಡಿಸಲು ತಯಾರಾಗಿ ನಿಂತಿರುವ ಪೊಲೀಸರು ಇನ್ನೊಂದು ಕಡೆ. ಇವರುಗಳ ಮಧ್ಯೆ ಹೋರಾಟಗಾರರು ಯಾವುದೇ ಕಾರಣಕ್ಕ್ಕೂ ಹಿಂಸೆಯನ್ನು ಕೈಗೆ ಎತ್ತಿಕೊಳ್ಳದಂತೆ ಅವರ ಮನವೊಲಿಸಿ ಚಳವಳಿಯನ್ನು ಮುನ್ನಡೆಸುತ್ತಾ ಹೋಗುವುದು ಸಾಮಾನ್ಯವಾದ ಸವಾಲಲ್ಲ.

ಲಖಿಂಪುರ್ ಖೇರಿಯಲ್ಲಿ ನಡೆದ ದಾರುಣ ಘಟನೆಯು ಸರ್ಕಾರಕ್ಕೆ ನೈತಿಕತೆ ಇಲ್ಲ ಎಂಬುದಕ್ಕೆ ಉದಾಹರಣೆ. ಅಕ್ಟೋಬರ್ 3ರಂದು ಕೇಂದ್ರ ಸಚಿವ ಅಜಯ್ ಮಿಶ್ರಾ ಅವರ ಸಾರ್ವಜನಿಕ ಸಭೆಯಲ್ಲಿ ರೈತರು ಕಪ್ಪು ಬಾವುಟ ತೋರಿಸಿ ಹಿಂದಿರುಗುತ್ತಿದ್ದಾಗ ಸಚಿವರ ಆರೋಪಿತ ಪುತ್ರ ರೈತರ ಮೇಲೆ ತನ್ನ ಐಶಾರಾಮಿ ಕಾರನ್ನು ಹಾರಿಸಿ ನಾಲ್ಕಾರು ರೈತರನ್ನು ಬೇಕೆಂದೇ ಕೊಂದು ತನ್ನ ದುರಹಂಕಾರ ಮೆರೆದದ್ದು ಖಂಡನೀಯ. ಆನಂತರ ಪೋಲೀಸರು ಆತನನ್ನು ಬಂಧಿಸಲು ಮೀನಾಮೇಷ ಎಣಿಸಿದ್ದು, ತನ್ನ ಮಗನದೇ ತಪ್ಪು ಎಂದು ದೊಡ್ಡಮಟ್ಟದಲ್ಲಿ ಆರೋಪ ಕೇಳಿಬಂದ ನಂತರವೂ ನೈತಿಕ ಹೊಣೆ ಹೊತ್ತು ರಾಜಿನಾಮೆ ನೀಡದ ಅಜಯ್ ಮಿಶ್ರಾ, ಆತನ ಜೊತೆ ವೇದಿಕೆಯಲ್ಲಿ ಕೂತ ಗೃಹ ಸಚಿವ ಇವರೆಲ್ಲರೂ ನೈತಿಕ ಪ್ರಜ್ಞೆಯನ್ನು ಕಳೆದುಕೊಂಡಿರುವುದಕ್ಕೆ ಸಾಕ್ಷಿ. ಎಷ್ಟೋ ಜನ ಸತ್ತಾಗ ಸಂದೇಶ ನೀಡುವ ನಮ್ಮ ಪ್ರಧಾನ ಮಂತ್ರಿಗಳು ಈ ವಿಷಯದಲ್ಲಿ ತುಟಿಪಿಟಕ್ಕೆನ್ನದೆ ಇದ್ದದ್ದು, ಅಜಯ್ ಮಿಶ್ರಾನನ್ನು ಸಚಿವಸಂಪುಟದಿಂದ ಹೊರಗೆ ಹಾಕದೇ ಇದ್ದದ್ದು ಅವರ ನೈತಿಕತೆ ಮತ್ತು ಕಳೆದುಕೊಂಡಿರುವ ಮಾನವೀಯತೆಯನ್ನು ಜಗಜ್ಜಾಹೀರುಗೊಳಿಸಿವೆ. ಹಾಗೆಯೇ ಸುಪ್ರೀಂಕೋರ್ಟ ಹಾಕಿದ ಛೀಮಾರಿಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಒಂದು ವರ್ಷದ ಹೋರಾಟದ ನಂತರ ಸರ್ಕಾರ ಮೂರು ಕಾನೂನುಗಳನ್ನು ಹಿಂತೆಗೆದುಕೊಂಡು ಈಗ ಹೊಸ ಸವಾಲನ್ನು ತಂದಿಟ್ಟಿದೆ. ನಮ್ಮ ಬೇಡಿಕೆ ಇಷ್ಟೇ ಅಲ್ಲ. ಕನಿಷ್ಟ ಬೆಂಬಲ ಬೆಲೆಗೆ ಕಾನೂನಾತ್ಮಕ ಮನ್ನಣೆ ನಮ್ಮ ಪ್ರಮುಖ ಬೇಡಿಕೆಯಾಗಿತ್ತು ಎಂಬುದನ್ನು ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ರೈತ ಹೋರಾಟ ಮನದಟ್ಟು ಮಾಡಿಕೊಡಬೇಕಿದೆ. ಸರ್ಕಾರದ ಪರವಾಗಿರುವ ಮಂದಿಗೆ ಇದು ಅರ್ಥ ಆಗುವುದು ಕಷ್ಟ. ಮೋದಿಯವರು ಮೂರು ಕಾನೂನುಗಳನ್ನು ಹಿಂಪಡೆದು ರೈತರಿಗೆ ಮಹದುಪಕಾರ ಮಾಡಿದ್ದಾರೆ ಎಂದು ಅವರು ಭಾವಿಸಿದ್ದಾರೆ. ರೈತರ ಹಠ ಜಾಸ್ತಿ ಆಯಿತು ಎಂದುಕೊಂಡಿರುವ ಅವರಿಗೆ ಮುಂದುವರೆದ ರೈತ ಚಳವಳಿ ಅರ್ಥ ಆಗುವುದಿಲ್ಲ. ಇದು ಮೋದಿ ಸರ್ಕಾರದ ವಿರುದ್ಧ ನಡೆದಿರುವ ಷಢ್ಯಂತರ, ವಿರೋಧ ಪಕ್ಷಗಳು, ದೇಶ ವಿರೋಧಿ ಜನರು, ನಕ್ಸಲೈಟರು ಹೀಗೆ ಯಾರ್‍ಯಾರೋ ರಾಷ್ಟ್ರದ ಮುನ್ನಡೆಯನ್ನು ಸಹಿಸದ ಮಂದಿ ರೈತರ ದಿಕ್ಕು ತಪ್ಪಿಸುತ್ತಿದ್ದಾರೆ ಎಂದುಕೊಂಡಿದ್ದಾರೆ, ಅಂದರೆ ಅಂತಹ ಭಾವನೆಯನ್ನು ಜನರಲ್ಲಿ ಮೂಡಿಸಲು ಇನ್ನಷ್ಟು ಕಾರ್ಯೋನ್ಮುಖರಾಗುತ್ತಾರೆ. ಸರ್ಕಾರಕ್ಕೆ ಈ ಚಳವಳಿ ಬಸವಳಿದು ಮುಗಿದುಹೋಗಬೇಕಿದೆ. ಹಾಗಾಗಿ ಅವರು ಕಾಲವನ್ನೇ ನಂಬಿ ಕೂತಿದ್ದಾರೆ. ಇದು ಒಂದು ರೀತಿಯಲ್ಲಿ ಹೋರಾಟಕ್ಕೆ ಅನುಕೂಲವಾಗಿದ್ದರೆ, ಇನ್ನೊಂದು ರೀತಿಯಲ್ಲಿ ಅನಾನುಕೂಲವೂ ಆಗಿದೆ. ಈಗ ಈ ಚಳವಳಿ ರಾಷ್ಟ್ರವ್ಯಾಪಿ ಭುಗಿಲೆದ್ದರೆ ರೈತರಿಗೆ ಲಾಭ. ಸರ್ಕಾರ ಒಂದು ವರ್ಷದ ಕಾಲ ಈ ಹೋರಾಟದೊಂದಿಗೆ ನಡೆದುಕೊಂಡ ರೀತಿಯನ್ನು ನೋಡಿದರೆ ಈ ಚಳವಳಿಯನ್ನು ಇನ್ನು ಎಷ್ಟು ಸಮಯ ಮುಂದುವರೆಸಬೇಕಾಗುತ್ತದೋ ಹೇಳಲಾಗದು. ಹಾಗಾಗಿ ಈ ದೀರ್ಘಕಾಲದ ಹೋರಾಟದಲ್ಲಿ ಹೋರಾಟದ ಕಿಚ್ಚನ್ನು ಉಳಿಸಿಕೊಂಡು ಹೋಗುವುದು ದೊಡ್ಡ ಸವಾಲೇ ಸರಿ.

ಈ ಚಳವಳಿಯಿಂದ ರಾಜ್ಯ ಮಟ್ಟದ ರೈತ ಚಳವಳಿಗಳು ಕಲಿಯಬೇಕಾದ ಪಾಠ ದೊಡ್ಡದಿದೆ. ಒಗ್ಗಟ್ಟೇ ಶಕ್ತಿ ಎಂಬುದು ರಾಜ್ಯ ರೈತ ಸಂಘಟನೆಗಳಿಗೆ ಅರ್ಥವಾಗಬೇಕಿದೆ. ನಮ್ಮ ಪರಸ್ಪರ ಭಿನ್ನಮತಗಳನ್ನು ಬದಿಗಿಟ್ಟು, ನಾವೇ ಮಂಚೂಣಿಯಲ್ಲಿರಬೇಕು ಎಂಬುದನ್ನು ಬಿಟ್ಟು ಪರಸ್ಪರ ಕೈಹಿಡಿದು ಮನ್ನಡೆಯುವುದೇ ಯಶಸ್ಸಿಗೆ ದಾರಿ ಎಂಬುದು ಅರಿವಾಗಬೇಕಿದೆ. ರೈತ ಚಳವಳಿಗೆ ಕರ್ನಾಟಕದ ರೈತ ಸ್ಪಂದನೆ ನಿರೀಕ್ಷೆಯ ಮಟ್ಟಕ್ಕೆ ಬೆಳೆಯದಿದ್ದುದ್ದು ಹೊಂದಾಣಿಕೆಯ ಕೊರತೆ ಮುಖ್ಯ ಕಾರಣ. ಈ ಚಳವಳಿ ಇನ್ನು ಬಹಳ ದೀರ್ಘ ಅವಧಿಯವರೆಗೆ ನಡೆಯಬೇಕಿರುವುದರಿಂದ ನಮ್ಮ ವಿವಿಧ ರೈತ ಬಣಗಳು ಒಗ್ಗಟ್ಟಾಗಿ ತೀರ್ಮಾನಗಳನ್ನು ತೆಗೆದುಕೊಂಡು ರಾಷ್ಟ್ರಮಟ್ಟದ ಚಳವಳಿಗೆ ಸ್ಪಂದಿಸದಿದ್ದರೆ ಅದಕ್ಕೂ ನಿರೀಕ್ಷಿತ ಮಟ್ಟದ ಬೆಂಬಲ ಸಿಗದೆ ಹೋಗುವುದಲ್ಲದೆ, ಕರ್ನಾಟಕದ ರೈತ ಚಳವಳಿಗೂ ನಷ್ಟ.

ಈ ಚಳವಳಿಯು ಒಂದು ತಾರ್ಕಿಕ ಅಂತ್ಯ ಪಡೆಯುವುದರೊಳಗೆ ರೈತರು ತಮ್ಮ ಭವಿಷ್ಯದ ಕೃಷಿ ಪದ್ಧತಿಯ ಬಗ್ಗೆ ಸರಿಯಾದ ತೀರ್ಮಾನಗಳನ್ನು ತೆಗೆದುಕೊಳ್ಳುವುದು ಕೂಡ ಮುಖ್ಯವಾಗಿದೆ. ಈ ಮಾರುಕಟ್ಟೆ ಆಧಾರಿತ ಕೃಷಿ ಪದ್ಧತಿಯಿಂದ ಹೊರಬರದಿದ್ದರೆ ಬಿಡುಗಡೆ ಇಲ್ಲ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವ್ಯಾಪಾರಿ ಬೆಳೆಗಳನ್ನು ನಾವು ಬೆಳೆದಿದ್ದಕ್ಕಲ್ಲವೇ ವ್ಯಾಪಾರಿಗಳು ಬಂದದ್ದು? ಅವರ ಹಿಂದೆ ಬಹು ರಾಷ್ಟ್ರೀಯ ಕಂಪನಿಗಳು ಬಂದದ್ದು? ಈಗಾಗಲೇ ’ಬಿಳಿ ವಿಷ’ ಎಂದು ದೃಢಪಟ್ಟಿರುವ ಸಕ್ಕರೆ ಮಾಡಲು ನಾವು ಇಷ್ಟೊಂದು ಪ್ರಮಾಣದಲ್ಲಿ ಕಬ್ಬು ಬೆಳೆಯಬೇಕೆ? ಅದನ್ನು ಬೆಳೆದು ನಾವೇ ಕಂಪನಿಗಳ ಶೋಷಣೆಗೆ ಸಿಕ್ಕಿಹಾಕಿಕೊಳ್ಳುತ್ತಿಲ್ಲವೇ?

ಈ ಚಾರಿತ್ರಕ ಹೋರಾಟ ಸ್ವತಂತ್ರ ಚಳವಳಿಯ ಸಂದರ್ಭದ ಅಸಹಕಾರ ಚಳವಳಿಯ ರೂಪ ಪಡೆದು ರೈತರು ತಮ್ಮೆಲ್ಲ ಹಂಗಿನಿಂದ ಹೊರಬರುವಂತೆ ಅವರನ್ನು ಪ್ರೇರೇಪಿಸುವುದು ಜಾಗತೀಕರಣ, ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರದಿಂದ ಹೊರಬರಲು ಇರುವ ಏಕೈಕ ಮಾರ್ಗ.

ಸಂತೋಷ ಕೌಲಗಿ

ಸಂತೋಷ ಕೌಲಗಿ
ಮೇಲುಕೋಟೆಯವರಾದ ಸಂತೋಷ ಗಾಂಧಿವಾದಿಗಳು, ಲೇಖಕರು ಮತ್ತು ಸಾವಯವ ಕೃಷಿಕರು. ಜಾನಪದ ಸೇವಾ ಟ್ರಸ್ಟ್ ಮೂಲಕ ಗ್ರಾಮೋದ್ಯೋಗ, ಖಾದಿ ಬಳಕೆ ಉತ್ತೇಜನ, ಆನಾಥ ಮಕ್ಕಳ ಪಾಲನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಫುಕುವೊಕರವರ ’ಒಂದು ಹುಲ್ಲಿನ ಕ್ರಾಂತಿ’ ಕನ್ನಡಕ್ಕೆ ಅನುವಾದಿಸಿದ್ದಾರೆ.


ಇದನ್ನೂ ಓದಿ: ರೈತರಿಗೆ ಸಾಲ ನೀಡಲು SBI ಜೊತೆ ಕೈಜೋಡಿಸಿದ ಅದಾನಿ ಕ್ಯಾಪಿಟಲ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...